🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
*ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 0⃣9⃣
➖➖➖➖➖➖➖➖➖
*ಅದ್ನಾನ್ ಬಿನ್ ಹುಕ್'ಬ ಏಕಾಂಗಿ ನೋಡುತ್ತಾ ನಿಂತರು*⤵
ತನ್ನ ಪ್ರಿಯತಮನನ್ನು ಕಂಡು ಎಲ್ಲಾ ವೇದನೆಗಳನ್ನು ಹೇಳಬೇಕೆಂಬ ಆಗ್ರಹದೊಂದಿಗೆ *ಮಲಿಹ* ಮಗನನ್ನು ಎದೆಗಪ್ಪಿಕೊಂಡು ಯಮಾಮದ ಗುರಿಯೊಂದಿಗೆ ಯಾತ್ರೆ ಹೊರಟಳು..
ಬಹಳ ದೂರ ಸಾಗಬೇಕಾದ ಯಾತ್ರೆಯಾದ್ದರಿಂದ
ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಯಾತ್ರೆ ಮುಂದುವರಿಸಿದಳು.
ಕತ್ತಲಾದರೆ ಒಂಟೆಯನ್ನು ಎಲ್ಲಿಯಾದರೂ ಕಟ್ಟಿಹಾಕಿದ
ನಂತರ ಆ ಮರುಭೂಮಿಯಲ್ಲಿ ವಿಶ್ರಮಿಸಿ, ಪುನಃ ಬೆಳಿಗ್ಗೆ ಯಾತ್ರೆ ಮುಂದುವರಿಸಿದಳು..
ಅಪ್ಪ ಕೊಟ್ಟ ಆಹಾರದಿಂದ ಅಲ್ಪ ಸ್ವಲ್ಪ ತಿಂದು, ಮಗುವಿಗೆ ಎದೆಹಾಲು ಕೊಡುತ್ತಾ ಮಲಿಹ ಯಾತ್ರೆ ಮುಂದುವರಿಸಿಕೊಂಡು ಸಾಗುತ್ತಾ ಮೂರು ದಿನಗಳು ಕಳೆದಿತ್ತು..!!
ನಾಲ್ಕನೇಯ ದಿನದಂದು ಸಂಚಾರ ಮುಂದುವರಿಸಲಿಕ್ಕಾಗಿ ಆ ಮುಗ್ದ ಹೆಣ್ಣು ಒಂಟೆಯನ್ನು ನಿಲ್ಲಿಸಿದ ಜಾಗಕ್ಕೆ ಹೋಗಿ ತನ್ನ ಮಗ ಆಬಿದ್'ನನ್ನು ಒಂಟೆ ತೊಟ್ಟಿಲಲ್ಲಿ ಕುಳ್ಳಿರಿಸಿ ಈ ಮುದಿ ಒಂಟೆಯ ಮಂಡಿಕಾಲಿಗೆ ಮೆಟ್ಟಿಕೊಂಡು ಮಲಿಹ ಹತ್ತಲು ಶ್ರಮಿಸುವಾಗ.. ಇದ್ದಕ್ಕಿದ್ದಂತೆ ಒಂಟೆ ಕೆಳಗೆ ಬಾಗಿತು..
ಒಂಟೆ ಬಗ್ಗಿದಾಗ ಆಬಿದ್ ಕೆಳಗೆ ಬಿದ್ದನು.!!
ತನ್ನ ಕರುಳಕುಡಿ ಬೀಳುವುದನ್ನು ಕಂಡ ಮಲಿಹ ಹಿಡಿಯಲು ಹೌಹಾರಿದಳು..
ಆಬಿದ್ ಬಿದ್ದಿರುವುದು ಮರಳಿನ ಮೇಲೆಯಾದ್ದರಿಂದ ಅವನಿಗೇನು ಸಂಭವಿಸಿರಲಿಲ್ಲ.
ಆದರೆ *ಮಲಿಹ* ಬಿದ್ದಿರುವುದು ಮರುಭೂಮಿಯಲ್ಲಿ ಇರುವ ಒಂದು ವಿಧದ *ಬಿಳುಪಾದ ಹರಿತವಿರುವ ಬಂಡೆಕಲ್ಲಿನ ಮೇಲೆಯಾಗಿತ್ತು.!!*
ಮಲಿಹ'ಳ ಶರೀರವೆಲ್ಲ ಪರಚಿದ ಗಾಯವಾದರೆ, ಬಲಭಾಗದ ಮಂಡಿಕಾಲಿಗೆ ಆಳವಾದ ಗಾಯವಾಗಿತ್ತು..
ಇದರಿಂದ ಕಿಂಚಿತ್ತೂ ಧೃತಿಗೆಡದೆ ವಿಚಲಿತಳಾಗದೆ ಓಡಿ ಬಂದು ಮಗನನ್ನು ಮೇಲೆತ್ತಿಕೊಂಡು
ಅವನಿಗೆ ಏನು ಆಗಲಿಲ್ಲವೆಂದು ಖಚಿತ ಪಡಿಸಿಕೊಂಡು ಪುನಃ ಒಂಟೆಯ ಮೇಲೇರಿಸಿದಳು....
ನಂತರ ಅವಳು ಒಂಟೆಯ ಮೇಲೆ ಹಾರಿ ಹತ್ತಲು ಪ್ರಯತ್ನಿಸುತ್ತಿರುವಾಗ ತಾನು ಬಂದ ದಾರಿಯಲ್ಲೆಲ್ಲಾ ರಕ್ತದ ಕಲೆಗಳು ಗೋಚರಿಸುತ್ತಿತ್ತು..
ರಕ್ತದ ಕಲೆಗಳು ತನ್ನ ದೃಷ್ಟಿಯಲ್ಲಿ ಸೆರೆಯಾಗಿ *ಮಲಿಹ* ತನ್ನ ಕಾಲನ್ನು ಸೂಕ್ಷ್ಮವಾಗಿ ನೋಡಿದಾಗ ಬಲಕಾಲು ಆಳದಲ್ಲಿ ಮುರಿದಿರುತ್ತದೆ..!!
ತನ್ನ ಕೈಯಲ್ಲಿರುವ ಶಾಲಿನಿಂದ ಅವಳು ಕಾಲ ಮಂಡಿಯನ್ನು ಗಟ್ಟಿಯಾಗಿ ಸುತ್ತಿ ಕಟ್ಟಿದ ಮೇಲೆ ಒಂಟೆಯ ಮೇಲೇರಿದಳು.
ಒಂಟೆಯ ಮೂಗಿನ ಬಳ್ಳಿಯನ್ನು ಹಿಡಿದು ಮೆಲ್ಲನೆ
ಮರುಭೂಮಿಯಲ್ಲಿ ಸಾಗುತ್ತಾ ಯಮಾಮಕ್ಕೆ ಅವಳು ಪ್ರಯಾಣ ಬೆಳೆಸಿದಳು.
ವಿರುದ್ಧ ದಿಕ್ಕಿನಲ್ಲಿ ವಿಶಾಲವಾದ ಮರುಭೂಮಿಯೊಂದು ಅವಳ ಕಣ್ಣಿಗೆ ದರ್ಶನವಾಗುತ್ತಿತ್ತು ಹಾಗೂ ಇದೆಲ್ಲವನ್ನು ಬಹಳಷ್ಟು ದೂರ ಪ್ರಯಾಣಿಸಿ ಮುಗಿಸಬೇಕು!!
ಅಬ್ಬಬ್ಬಾ ಕಣ್ಣಿಗೆ ಕಾಣದಷ್ಟು ದೂರ ಸಾಗಬೇಕು!!
ಸುಮಾರು ಮದ್ಯಾಹ್ನದ ಹೊತ್ತಿಗೆ *ಮಲಿಹ'*ಳ ಕಾಲಿನಲ್ಲಿ ನೋವು ಅಧಿಕವಾಗ ತೊಡಗಿತು..
ಅತಿಯಾದ ವೇದನೆಯಿಂದ *ಮಲಿಹ*'ಳಿಗೆ ಸಹಿಸಲು ಅಸಾಧ್ಯವಾಯಿತು.
ಮರುಭೂಮಿಯ ಸುಡುವ ಬಿಸಿಲಿನ ಗಾಳಿ, ಅವಳನ್ನು ತುಂಬಾನೇ ಆಯಾಸಗೊಳಿಸಿತು.. ಜೊತೆಗೆ
ಜೋರಾಗಿ ಜ್ವರ ಬರುವ ಹಾಗೆ ಅವಳಿಗೆ ಭಾಸವಾಗಲು ಶುರುವಾಯಿತು.
ಒಂಟೆಯ ಮೇಲೆ ಇರುವ ಮಂಚಕ್ಕೆ ಅವಳು ಒರಗಿ ಮಲಗಿದಳು.. ಮೈಯೆಲ್ಲಾ ಬೆವರುತ್ತಾ ಜ್ವರ ಬಂದು ನಡುಕ ಆರಂಭವಾಯಿತು.
ಮರಳುಗಾಡು ಕೊನೆಗೊಳ್ಳುದಿಲ್ಲ. ಇನ್ನು ಬಹಳಷ್ಟು ದೂರ ಕ್ರಮಿಸಲಿಕ್ಕಿದೆ ಅವಳಿಗೆ.!!
ಜ್ವರ ಜಾಸ್ತಿಯಾಗಿ ಅವಳು ಪ್ರಜ್ಞಾಹೀನಳಾದಳು.
ಆದರೆ ಒಂಟೆ ಚಲಿಸುತ್ತಾ ತುಂಬಾ ದೂರ ತಲುಪಿದೆ.!!
ಆದರೂ ತನ್ನ ಯಜಮಾನಿ ವಿಶ್ರಮಿಸಲು ಹೇಳುತ್ತಿಲ್ಲ ಎಂದು ತಿಳಿದಾಗ.., ಕೊನೆಗೆ ಪಾಳು ಬಿದ್ದ ಒಂದು ಕಟ್ಟಡದ ಹತ್ತಿರ ಬಂದು ಆ ಸಾಧುವಾದ ಜೀವಿ ಸ್ವತಃ ಮಂಡಿಯೂರಿತ್ತು.
ಆದರು ಮಲಿಹ ಎದ್ದೇಳುತ್ತಿಲ್ಲ! ಎಂದು ತೋಚಿದಾಗ ಒಳ್ಳೆಯ ಸದ್ಬುದ್ಧಿ ಇರುವ ಆ ಒಂಟೆ ಒಮ್ಮೆ ತನ್ನ ದೇಹವನ್ನು ಅಲುಗಾಡಿಸಿತು.
ಈ ಅಲುಗಾಟದಿಂದ ಮೆಲ್ಲನೆ ಮಲಿಹ ಕಣ್ಣು ತೆರೆದು ನೋಡಿದಾಗ ಸೂರ್ಯನು ಪಶ್ಚಿಮ ದಿಕ್ಕಿನಲ್ಲಿ ಅಸ್ತಮಿಸಿಯಾಗಿತ್ತು....
ಅವಳು ಮೆಲ್ಲನೆ..⤵
ಮುಂದುವರಿಯುವುದು
✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment