ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Tuesday, September 26, 2017
💪 ಸಮುದಾಯ ಪರ ಗುಡುಗು💪
✍ಗಫೂರ್ ಬಾಯಾರ್
〰〰〰〰〰〰〰〰〰
💪ಮುಸ್ಲಿಂ ಕಟ್ಟಾ ವಿರೋಧಿ ತೊಗಾಡಿಯಾ ವಿರುದ್ದವಾಗಿ ಜಾತ್ಯಾತೀತ ಶಬ್ದದಿಂದ ಗುಡುಗಿದ್ದು ಕಾಂತಪುರಂ ಉಸ್ತಾದ್ ಆಗಿದ್ದರು..
💪 ಏಕ ಸಿವಿಲ್ ಕೋಡ್ ವಿರೋಧವಾಗಿ ಮಾತೆತ್ತಿರುವುದು ಕಾಂತಪುರಂ ಉಸ್ತಾದರ ಶಬ್ದವಾಗಿತ್ತು.
💪ಶರಿಯತ್ತ್ ವಿವಾದದಲ್ಲಿ ಮಾತೆತ್ತಿರುವುದು ಕಾಂತಪುರಂ ಉಸ್ತಾದರ ಶಬ್ದವಾಗಿತ್ತು.
💪ಸ್ತ್ರೀ ಸಮಾನತೆ ವಿಷಯದಲ್ಲಿ ಮಾತೆತ್ತಿರುವುದು ಕಾಂತಪುರಂ ಉಸ್ತಾದರ ಶಬ್ದವಾಗಿತ್ತು.
💪ಫಿರಂಗಿಯ ಶಬ್ದವನ್ನು ಕೇಳಿ ನಡುಗಿದ ಕಾಶ್ಮೀರಿನ ಅನಾಥ ಮಕ್ಕಳಿಗೆ ಆಶ್ರಯ ನೀಡಿ ಮಾತಾಪಿತರ ಸ್ಥಾನದಲ್ಲಿ ನಿಂತು ಬೆಳೆಸಿದ್ದು
ಕಾಂತಪುರಂ ಉಸ್ತಾದ್ ಮಾತ್ರವಾಗಿತ್ತು.
💪ಗುಜರಾತ್ ನಲ್ಲಿ ಮೋದಿಯ ಮೂಗಿನ ಕೆಳಗೆ ಭಾರತ ರಾಷ್ಟ್ರ ಎಲ್ಲಾ ಭಾರತೀಯರದ್ದು ಎಂದು ಧೈರ್ಯದಿಂದ ಸಾರ್ವಜನಿಕವಾಗಿ ಹೇಳಿದ್ದು ಕಾಂತಪುರಂ ಉಸ್ತಾದರು ಆಗಿತ್ತು.
💪ಒರಿಸ್ಸಾದಲ್ಲೂ, ಗುಜರಾತಿನಲ್ಲೂ, ಅಸ್ಸಮಿನಲ್ಲೂ, ಮತೀಯ ಗಲಭೆಯಿಂದ ತತ್ತರಿಸಿದಂತಹ, ಒಡೆದ ಮನಸ್ಸುಗಳಿಗೆ ಸಾಂತ್ವನ ಹೇಳಿ, ಕೈ ಹಿಡಿದು ಮೇಲೆತ್ತಲು
ಈ ಇಳಿ ವಯಸಿನಲ್ಲಿ ಓಡಿ ನಡೆದು, ಅಲ್ಲಿಯ ಜನತೆಯ ಮನಸ್ಸಲ್ಲಿ "ಶೈಖ್ ಸಾಬ್" ಎಂಬ ಗೌರವ ನಾಮದಲ್ಲಿ ಕರೆಯುತ್ತಿರುವುದು ಕಾಂತಪುರಂ ಉಸ್ತಾದರನ್ನು ಮಾತ್ರ..
💪ಜಾತ್ಯಾತೀತ ಸಮೂಹದಲ್ಲಿ ಅಸ್ಥಿರತೆ ಉಂಟಾದ ಸಮಯದಲ್ಲಿ ಎಲ್ಲಾ ಧರ್ಮ ವಿಭಾಗದವರನ್ನು ಒಟ್ಟು ಗೂಡಿಸಿ "ಮನಕುಲವನ್ನು ಗೌರವಿಸಿ" ಎಂಬ ಧೈತ್ಯ ಸಂದೇಶದೊಂದಿಗೆ ಕೇರಳ, ಕರ್ನಾಟಕದಲ್ಲಿ ಜನ ಮನಸ್ಸುಗಳನ್ನು ರೋಮಾಂಚಕಗೊಳಿಸಿದ ಯಾತ್ರೆಗಳು ನಡೆಸಿದ್ದು ಕಾಂತಪುರಂ ಉಸ್ತಾದರಾಗಿದ್ದರು.
💪ಮೋದಿಯವರನ್ನು ಮುಖಃತ ಭೇಟಿ ಮಾಡಿ ಮುಸ್ಲಿಮರ ಅವಕಾಶಗಳಿಗಾಗಿ ಮಾತನಾಡಿದವರು ಕಾಂತಪುರಂ ಉಸ್ತಾದರಾಗಿದ್ದರು.
💪ಭಾರತದಲ್ಲಿ 3000 ಕ್ಕಿಂತಲೂ ಹೆಚ್ಚು ಮಸೀದಿಗಳನ್ನು ನಿರ್ಮಿಸಿ, ಸಾವಿರಕ್ಕೂ ಅಧಿಕ ಸ್ಥಾಪನೆಗಳಲ್ಲಿ 10,000 ಕ್ಕೂ ಮಿಕ್ಕ ಶಿಷ್ಯರನ್ನು ಸಮುದಾಯಕ್ಕೆ ಅರ್ಪಿಸಿ ಲಕ್ಷಾಂತರ ವಿಧ್ಯಾರ್ಥಿಗಳನ್ನು, ಕಾರ್ಯಕರ್ತರನ್ನೊಳಗೊಂಡ ಸಂಘಟನೆಯನ್ನು ನಿರ್ಮಿಸಿ ಮುಸ್ಲಿಂ ಸಮೂಹವನ್ನು, ಕೋಮುವಾದ, ಭಯೋತ್ಪಾದನೆಯ ಪಟ್ಟವನ್ನು ಮುಸ್ಲಿಮರ ಮೇಲಿನಿಂದ ಇಲ್ಲದಾಗಿಸಿ ನೈಜ ಮುಸ್ಲಿಮನಾಗಿ "ಅಹ್ಲುಸುನ್ನತ್ತಿನ ಹಾದಿಯಲ್ಲಿ" ಗಟ್ಟಿಯಾಗಿ ನಿಲ್ಲುವಂತೆ ಮಾಡಿದ ಕಾಂತಪುರಂ ಉಸ್ತಾದ್.
ಈ ಇಳಿ ವಯಸ್ಸಿನಲ್ಲೂ ಸಮುದಾಯಕ್ಕೆ ಬೇಕಾಗಿ ಆಹೋರಾತ್ರಿ ವಿಶ್ರಮವಿಲ್ಲದೆ ಪರಿಶ್ರಮಿಸುವಾಗಲೂ, ಕಣ್ಣಿದ್ದೂ ಕುರುಡರಂತೆ ನಟಿಸುವ ಕೆಲವರು ಮನೆಯಲ್ಲಿ ಕುಳಿತು ಸಾಮಾಜಿಕ ತಾಣಗಳಲ್ಲಿ ಮುಸ್ಲಿಮರನ್ನು ನೆನದು ರಕ್ತ ಕುದಿಸಿ ಮೊಸಲೆ ಕಣ್ಣೀರಿಟ್ಟು ಸಂದೇಶಗಳನ್ನು ಹರಿಯ ಬಿಡುತ್ತಾರೆ.
ಅದರ ಜೊತೆಗೆ ಕಾಂತಪುರಂ ಉಸ್ತಾದರ ಮೇಲೆ ಪರದೊಷಣೆಗಳು, ಕೆಟ್ಟ ಪದಗಳಿಂದ ಹಿಯಾಳಿಸುವುದು ಕಾಣಬಹುದು.
ಇವರ ಈ ಮೊಸಳೆ ಕಣ್ಣಿರು ಮುಸ್ಲಿಂ ಸಮೂಹಕ್ಕೆ ಅಲ್ಲ. ಬದಲಾಗಿ AP ಉಸ್ತಾದರ ಮೇಲಿರುವಂತಹ ಅಸೂಯೆಗಳಾಗಿವೆ.
ಅಲ್ಲಾಹು ಇವರ ಈ ಶರ್ರ್ ನಿಂದ ಸಮುದಾಯವನ್ನು ಕಾಪಾಡಿ ಉಸ್ತಾದರಿಗೆ ಆಯುರಾರೋಗ್ಯ, ಆಫಿಯತ್ತ್,
ಧೀರ್ಘಾಯುಷ್ಯ ಕರುಣಿಸಲಿ..
ಆಮೀನ್...
✍🏻 ಗಫೂರ್ ಬಾಯಾರ್
🌱🌱🌱🌱🌱🌱🌱🌱
Labels:
ನಮ್ಮ ನಾಯಕರು
Subscribe to:
Post Comments (Atom)
No comments:
Post a Comment