ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Thursday, September 28, 2017
ರೌಳಾ ಹೊತ್ತೊಯ್ಯಲು ಬಂದ ಶತ್ರುಗಳು
ನಬಿ ಸಲ್ಲಲ್ಲಾಹು ಅಲೈವಸಲ್ಲಂ ರವರ ಪವಿತ್ರ ಶರೀರವನ್ನು ಖಬರ್ ಶರೀಫ್ ತೊರೆದು ಕೊಂಡು ಹೋಗಲು ಬಂದ ಸ್ಪೇನ್ ಗಾರರಾದ ನೀಚರನ್ನು ಸೆರೆ ಹಿಡಿದ ಚರಿತ್ರೆ😭😭.
✍ ಗಫೂರ್ ಬಾಯಾರ್.
ಓದಲೇ ಬೇಕಾದ ಚರಿತ್ರೆ....
💙💚💛❤💓💗💖💕
"ಯಾರಲ್ಲಿ❗
ಆದಷ್ಟು ಬೇಗ ಅವರಿಬ್ಬರನ್ನು ನನ್ನ ಮುಂದೆ ಹಾಜರು ಪಡಿಸಿ❗
ಅಷ್ಟು ದೊಡ್ಡ ಮಹಾತ್ಮರು ಆಗಿದ್ದರೆ ಅವರನ್ನು ನನಗೊಮ್ಮೆ ನೋಡಬೇಕಾಗಿದೆ.
ಹೂಂ❗
ಬೇಗವಾಗಲಿ!....
ಸುಲ್ತಾನರ ಆಜ್ಞೆಯನ್ನು ನಿಮಿಷದೊಳಗೆ ಜಾರಿ ಗೊಳಿಸಲಾಯಿತ್ತು. ಅವರಿಬ್ಬರನ್ನು ಸುಲ್ತಾನರ ಮುಂದೆ ಹಾಜರುಪಡಿಸಲಾಯಿತ್ತು.
ಒಂದು ನಿಮಿಷ!....
ಅವರಿಬ್ಬರನ್ನು ಕಂಡೊಡನೆ ಸುಲ್ತಾನರು ದಿಘ್ಬ್ರಮೆಗೊಂಡರು.
ಏನಧ್ಭುತ!!.... 😳😳
"ಇವರಿಂದ ನನ್ನನ್ನು ಸಂರಕ್ಷಿಸಿರಿ" ಎಂದು ಪವಿತ್ರ ನಬಿ ﷺ ತಂಙಳರು ಕನಸಿನಲ್ಲಿ ಬಂದು ಮುನ್ಸೂಚನೆ ನೀಡಿದ ಅದೇ ವ್ಯಕ್ತಿಗಳು!!!!....
ಸುಲ್ತಾನರ ಹೃದಯ ಬಡಿತ ಇನ್ನಷ್ಟು ಜೋರಾಯಿತು.!!
ದೊಡ್ಡ ಭಕ್ತಿ, ಗೌರವಗಳು ನಟಿಸಿ ತನ್ನ ಮುಂದೆ ನಿಂತಿರುವ ಆ ಎರಡು ವ್ಯಕ್ತಿಗಳನ್ನು ಸುಲ್ತಾನರು ಸ್ವಲ್ಪ ಸಮಯ ದಿಟ್ಟಿಸಿ ನೋಡಿದರು.
ನಂತರ ವಿಚಾರಣೆ ಶುರುವಾಯಿತ್ತು.
"ನೀವು ಇಬ್ಬರು ಎಲ್ಲಿಂದ ಬಂದವರು❓"
" ನಾವು ಮೊರಾಕೊ (ಸ್ಪೇನ್) ರಾಜ್ಯದವರಾಗಿದ್ದೇವೆ"
"ಯಾತಕ್ಕಾಗಿ ನೀವು ಇಲ್ಲಿಗೆ ಬಂದಿರುವುದು❓"
"ಹಜ್ಜ್ ನಿರ್ವಹಿಸಲು ಬಂದಿರುವುದು.
ಅಲ್ಲಾಹುವಿನ ಅನುಗ್ರಹದಿಂದ ಹಜ್ಜ್ ಕರ್ಮ ಮುಗಿಯಿತು.
ಇನ್ನು ಝಿಯಾರತ್'ಗಳು ಮಾಡಿ ಹಿಂದುರಗಬೇಕೆಂದು ಉದ್ದೇಶದಿಂದ ಇಲ್ಲಿಗೆ ತಲುಪಿರುವುದು.
ನಬಿ ﷺ ತಂಙಳವರ ಸಮೀಪದಲ್ಲಿಯೇ ತಂಗಬೇಕೆಂಬ ಆಗ್ರಹದ ಕಾರಣ ಸ್ವಲ್ಪ ಕಾಲ ಇಲ್ಲಿಯೇ ವಾಸ ಮಾಡಬೇಕೆಂಬ ಯೋಚನೆಯಲ್ಲಿ ಇರುವುದು"
"ಸತ್ಯ ಹೇಳು❗
ಅಸತ್ಯಕ್ಕೆ ನೆಲೆ ಇಲ್ಲವೆಂದು ಯೋಚಿಸಬೇಕು"❗
"ನಾವು ಸತ್ಯವಾಗಿದೆ ಹೇಲುತ್ತಿರುವುದು. ನಾವು ಒಮ್ಮೆಯೂ ಅಸತ್ಯ ಹೇಳಲ್ಲಿಲ್ಲ.
ಹೇಳಲಿಕ್ಕೂ ಇಲ್ಲ."
ಸುಲ್ತಾನರು ಹಲವು ಸಲ ಪ್ರಸ್ತುತ ಪ್ರಶ್ನೆಯನ್ನೇ ಹಲವು ಬಾರಿ ಕೇಳಿದಾಗಲೂ ಅವರು ಮೊದಲಿನ ಉತ್ತರವನ್ನೇ ನೀಡುತ್ತಿದ್ದರು.
ನಂತರ ಸುಲ್ತಾನರು ಜನರ ಕಡೆಗೆ ಮುಖ ಮಾಡಿ ಕೇಳಿದರು....
"ಹೇಳಿರಿ!! ಇವರೆಲ್ಲಿ ವಾಸವಿರುವುದು? "
ಮದೀನಾ ನಿವಾಸಿಗಳು ಹೇಳಿದರು,
"ಪವಿತ್ರ ನಬಿ ﷺ ತಂಙಳರವರ ರೌಳಾ ಶರೀಫಿನ ಪಕ್ಕದಲ್ಲೇ ಒಂದು ಗುಡಿಸಲಿನಲ್ಲಾಗಿದೆ. ಒಂದು ಧ್ಯಾನ ಕೇಂದ್ರ ಮಾಡಿ ಅಲ್ಲಿಯೇ ಅವರು ವಾಸವಾಗಿರುವುದು.
ಸುಲ್ತಾನರು ಆಜ್ಞೆ ಹೊರಡಿಸಿದರು!!
"ಯಾರಲ್ಲಿ?!....
ಇವರಿಬ್ಬರಿಗೂ ಕೈ ಕೋಳ ತೊಡಿಸಿ!!....
ಇವರ ವಾಸ ಸ್ಥಳ ನಮಗೊಮ್ಮೆ ನೋಡಬೇಕು"
ಸುಲ್ತಾನರು ಊರಿನವರ ಜೊತೆ ಅವರಿಬ್ಬರ ವಾಸ ಸ್ಥಳ ಸಂದರ್ಶಿಸಿದರು..
ವಾಸ ಸ್ಥಳವನ್ನು, ಪರಿಸರವೆನ್ನೆಲ್ಲ ಮೊತ್ತವಾಗಿ ಹುಡುಕಾಟ ನಡೆಸಿದರು. ಆದರೆ ಯಾವುದೇ ಫಲ ಕಾಣಲಿಲ್ಲ..
ಇಬ್ಬರಲ್ಲಿಯೂ ಕುರ್'ಆನ್ ಪ್ರತಿಗಳು, ಕೆಲವು ಕಿತಾಬುಗಳು, ಸ್ವಲ್ಪ ನಿತ್ಯೋಪಯೋಗಿ ವಸ್ತ್ರಗಳಲ್ಲದೆ ಬೇರೇನೂ ಅವರ ಗುಡಿಸಲಿನಲ್ಲಿ ಕಾಣಲು ಸಾಧ್ಯವಾಗಲಿಲ್ಲ.!!!!....
ಸುಲ್ತಾನರು
ದುಖಿಃತರಾದರು....
ಇಷ್ಟೆಲ್ಲಾ ನಡೆಯುತ್ತಿರುವಾಗಲೂ ಮದೀನ ನಿವಾಸಿಗಳು ಆ ಇಬ್ಬರನ್ನು ತುಂಬಾ ಪ್ರಕೀರ್ತಿಸುತ್ತಿದರು.
ಕೆಲವರು ಅವರಿಗಾಗಿ ಸುಲ್ತಾನರ ಹತ್ತಿರ ಶಿಫಾರಸ್ಸು ಕೂಡ ಮಾಡಲು ತಯಾರಾಗಿದ್ದರು.
"ಸುಲ್ತಾನರೇ!!....
ಇವರು ತುಂಬಾ ಒಳ್ಳೆಯವರಾಗಿದ್ದಾರೆ. ಧಾನ ಧರ್ಮಗಳು ನೀಡುವವರಾಗಿದ್ದಾರೆ. ದಿನಾಲು ಇವರು ವೃತಾಚರಿಸುವವರಾಗಿದ್ದಾರೆ. ಎಡೆ ಬಿಟ್ಟು ರೌಳಾ ಶರೀಫ್ ಝಿಯಾರತ್ ಮಾಡುತ್ತಾರೆ. ಯಾವಾಗಲೂ ಸ್ವಲಾತ್ತ್ ಹೇಳಿ ಕೊಂಡಿರುವರು. ಪ್ರತಿ ದಿನ ರಾತ್ರಿ "ಜನ್ನಾತ್ತುಲ್ ಬಖಿಯಿಲ್"ಗೆ ಹೋಗಿ ದೀರ್ಘ ಸಮಯ ಪ್ರಾರ್ಥಿಸಿಯೇ ಹಿಂದಿರುಗುತ್ತಿದ್ದರು. ಅವರಲ್ಲಿ ಯಾರೂ ಸಹಾಯ ಯಾಚಿಸಿದರೂ ಅವರು ಕೊಡುತ್ತಿದ್ದರು. ಒಮ್ಮೆಯೂ ಇಲ್ಲವೆಂದು ಹೇಳುತ್ತಿರಲಿಲ್ಲ. ಕಳೆದ ಕ್ಷಾಮ ಕಾಲದಲ್ಲಿ ಇವರು ದಾನ ನೀಡಿದ ಕಾರಣ ಮದೀನಾ ವಾಸಿಗಳಾದ ನಮಗೆಲ್ಲರಿಗೂ ಇವರ ಕುರಿತು ಬಹಳ ಸಂಪ್ರಪ್ತಿಯಾಗಿದೆ.
ಇಂಥವರಿಂದ ಏನಾದರೂ ತಪ್ಪು ಸಂಭವಿಸಲು ಸಾಧ್ಯತೆ
ಇಲ್ಲ. ಆದರಿಂದ್ದ ಅವರನ್ನು ಹಾಗೆ ಸುಮ್ಮನೆ ಸಂಶಯಿಸುವುದು ಸರಿಯಲ್ಲ."
ಅಭಿಪ್ರಾಯಗಳು ತುಂಬಾನೆ ಬರುತ್ತಲಿತ್ತು.
ಇವನ್ನೆಲ್ಲಾ ಸುಲ್ತಾನರು ಕ್ಷೆಮೆಯಿಂದ ಕೇಳುತ್ತಾ ನಿಲ್ಲಬೇಕಾಯಿತು.
ಅಲ್ಲಿ ಹಠಾತನೆ ಏನೋ ಸಂಭವಿಸುತ್ತದೆ.
ಏನೋ ಒಂದು ಪುರುಷ ಶಬ್ದ ಕಿವಿಗೆ ಅಪ್ಪಳಿಸುತ್ತದೆ. ಅದರ ಪ್ರೇರಣೆ ಎಂದೇ ಹೇಳಬೇಕು.
ತಟ್ಟನೆ ಸುಲ್ತಾನರು ಅವರಿಬ್ಬರ ವಾಸ ಸ್ಥಳಕ್ಕೆ ಧಾವಿಸಿದರು. ಕೂಡಲೇ ಅತ್ತಿತ್ತ ತಪಾಸಣೆ ನಡೆಸಲು ಶುರು ಮಾಡಿದರು.
ಇದರೆಡೆಯಲ್ಲಿ ಹೇಗೂ ಅಲ್ಲಿ ಹಾಸಿ ಇಟ್ಟ "ಮುಸ್ವಲ್ಲ" ಒಂದನ್ನು ಎತ್ತಿ ನೋಡಿದರು.
ಒಂದು ನಿಮಿಷ❗❗
ಸುಲ್ತಾನರಿಗೆ ತನ್ನ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ😳😠
ಹಾಸಿದಂತಹ ಮುಸಲ್ಲದ ತಳಭಾಗದಲ್ಲಿ ಏನೋ ಬಹಳ ರಹಸ್ಯವಾಗಿ ಒಂದು ಸುರಂಗ ನಿರ್ಮಿಸಲ್ಪಟ್ಟಿರುತ್ತದೆ.
ಆ ಸುರಂಗಕ್ಕೆ ವಾಯು ಭಾಗದಲ್ಲಿ ಬೇಗನೆ ತಿಳಿಯದಿರುವ ವಿಧದಲ್ಲಿ ಬಹು ದೊಡ್ಡ ಕಲ್ಲು ಮುಚ್ಚಿಡಲಾಗಿತ್ತು.
ಸುಲ್ತಾನರು ಮೆಲ್ಲನೆ ಕಲ್ಲು ಎತ್ತಿ ನೋಡಿದರು.
ಸುಬುಹಾನಲ್ಲಾಹ್❗❗
ಮಣ್ಣು ಕೊರೆದು ಅತೀ ಸಮರ್ಥವಾಗಿ ತಯಾರಿಸಿದ ಸುರಂಗ ಪೂರ್ಣವಾಗಿ ಸುಲ್ತಾನರ ದೃಷ್ಟಿಗೆ ಸಿಕ್ಕಿತ್ತು. ಅದು ತಲುಪಿ ಕೊನೆಗೊಳ್ಳುವುದು ಪವಿತ್ರ ನಬಿ ﷺ ರವರ ರೌಳಾ ಶರೀಫಿನೊಳಗೆ ಆಗಿದೆ ☹
ಪವಿತ್ರವಾದ ಕಬರ್ ಶರೀಫ್ ಇರುವ ಹತ್ತಿರದವರೆಗೆ ತಳುಪಿರುತ್ತದೆ.
ಆ ಸುರಂಗ....
ಸುಲ್ತಾನರಿಗೆ ವಿಷಯದ ಗೌರವ ತಿಳಿಯಿತು.
ಸುಲ್ತಾನರು ಮದೀನ ನಿವಾಸಿಗಳೆಲ್ಲರನ್ನೂ ಕರೆದು ಸಭೆ ನಡೆಸಿ, ನಡೆದ ಎಲ್ಲಾ ವಿಷಯಗಳನ್ನು ವಿವರಿಸಿ ಎಲ್ಲವನ್ನೂ ತೋರಿಸಿಕೊಟ್ಟರು.
ಜೊತೆಗೆ ಕನಸಿನ ದೃಷ್ಟಾಂತವನ್ನು ಹೇಳಿದರು.
ಜನರು ದೀಘ್ಭ್ರಮೆಗೊಂಡರು.
ಹಲವರಿಗೆ ಕೋಪವನ್ನು ತಡೆಯಲಾಗಲಿಲ್ಲ .........
ಸುಲ್ತಾನರು,...
ನೀಚರಾದ ಆ ಇಬ್ಬರು ಸ್ಪೇನ್'ಗಾರರನ್ನು ಸೇರಿದ ಜನತೆಯ ಮುಂದೆ ಹಾಜರುಪಡಿಸಿದರು.
ಜನರ ಗುಂಪು ತುಂಬಿ ತುಳುಕುತ್ತಿತ್ತು.
ಅವರನ್ನು ಶಾಂತರಾಗಿಸಲು ಸುಲ್ತಾನರು, ಮಂತ್ರಿಗಳು ಕಷ್ಟಪಡುತ್ತಿದ್ದರು..
ಸುಲ್ತಾನರು ಇಬ್ಬರು ಸ್ಪೇನ್ ಗಾರರನ್ನು ಬದಲಿ ಬದಲಿಯಾಗಿ ನೋಡಿದರು. ಅವರಿಬ್ಬರ ತಲೆ ಭೂಮಿಯ ಕಡೆ ವಾಗಿತ್ತು....
ಕಣ್ಣುಗಳಲ್ಲಿ ನಿಂದ್ಯತೆಗಳು ಇಲ್ಲವಾಗಿತ್ತು.
ಸುಲ್ತಾನರು ಅವರಲ್ಲಿ ಆಕ್ರೋಶ ಭರಿತ ದ್ವನಿಯಲ್ಲಿ ಹೇಳಿದರು.
"ಹೇ ವಂಚಕರೇ❓😭
ಇಂತಹಯೊಂದು ನೀಚ ವೃತ್ತಿಗೆ ನಿಮ್ಮನ್ನು ಪ್ರೇರಿಪಿಸಿದ್ದು ಏನು❓
ಎಲ್ಲವು ಮುಕ್ತವಾಗಿ ಹೇಳಿ...
ಹೂಂ....
ಬಾಯಿ ಬಿಡಿ ನೀಚರೇ....
ನಾವೆಲ್ಲರೂ ಕೇಳಲಿ....❗
ಬೇಗವಾಗಲಿ.
ಯಾವ ಪ್ರಶ್ನೆಗೂ ಉತ್ತರ ನೀಡದೆ ಮೌನವಾಗಿ ತಲೆ ತಗ್ಗಿಸಿಕೊಂಡು ನಿಂತರು.
ಕೋಪ ಸಹಿಸಲಾಗದ ಸುಲ್ತಾನರು ಆಜ್ಞೆ ಹೊರಡಿಸಿದರು....
"ಯಾರಲ್ಲಿ❓
ದ್ರೋಹಿಗಳಾದ ಈ ವಂಚಕರರನ್ನು ಚಾಟಿಯಿಂದ ಹೊಡೆಯಿರಿ.
ಯಾವುದೇ ದಾಕ್ಷೀಣ್ಯೆಯೂ ಬೇಡ!
ಇವರಿಂದ ಸತ್ಯವು ಹೊರಬೀಳುತ್ತಾ? ಎಂದು ನಾವು ಪರೀಕ್ಷಿಸಿ ನೋಡೋಣ!!....
ಸುಲ್ತಾನರ ಕಲ್ಪನೆ ಸಿಕ್ಕಿದ ಕೂಡಲೇ ಸೈನಿಕರು ಇಬ್ಬರನ್ನು ನಿರಂತರ ಜಾಟಿಯಿಂದ ಹೊಡೆಯಲು ಶುರುಮಾಡಿದರು. ರೋಷಗೊಂಡ ಊರಿನವರಲ್ಲಿ ಕೆಲವರು ಅದರಲ್ಲಿ ಭಾಗಿಯಾದರು.
ಕೊನೆಗೆ ಅವರು ಸತ್ಯ ಹೇಳಲು ಸಮ್ಮತಿ ಸೂಚಿಸಿದರು..
ಕಂಪಿಸುವ ಸ್ವರದಲ್ಲಿ ಮೆಲ್ಲನೆ ಸತ್ಯ ಹೇಳಲು ಶುರುಮಾಡಿದರು.
"ಸುಲ್ತಾನರೇ....
ನಾವಿಬ್ಬರು ಮುಸ್ಲಿಮರಲ್ಲ❗❗
ಕ್ರಿಶ್ಚ್ಯನ್ ಗಳಾಗಿದ್ದೇವೆ❗
ಪಾಶ್ಚಾತ್ಯ ದೇಶಗಳಲ್ಲಿನ ಕ್ರೈಸ್ತರಾದ ರಾಜರು
ನಮ್ಮನ್ನು ಮುಸ್ಲಿಮರ ವೇಷ ಕಟ್ಟಿಸಿ ಇಲ್ಲಿಗೆ ಕಳುಹಿಸಿರುವುದು....
ಧಾರಾಳ ಹಣ, ಸಂಪತ್ತುಗಳು ನಮಗೆ ಕೊಟ್ಟು ಹೇಳಿದರು....
'ಈ ಸಂಪತ್ತನ್ನು ನೀವು ಮುಸ್ಲಿಮರಿಗೆ ದಾನ ನೀಡಿ, ಅವರ ತೃಪ್ತಿ ಸಂಪಾದಿಸಿ, ಹೇಗದಾರೂ ಒಳ್ಳೆಯ ಭಕ್ತಿವುಳ್ಳರಾಗಿ ನಟಿಸಿ ರೌಳಾ ಶರೀಫಿನ ಹತ್ತಿರ ವಾಸ ಸರಿಪಡಿಸಬೇಕು. ಜೊತಗೆ ಯಾರಿಗೂ ಸಂಶಯ ತೋರದ ರೀತಿಯಲ್ಲಿ ಯಾರೊಬ್ಬರೂ ತಿಳಿಯದೆ, ಪರಿಶುದ್ದ ಕಬರ್ ಕೊರೆದು ನಬಿ ﷺ ರವರ ಪವಿತ್ರ ಶರೀರವನ್ನು ಇಲ್ಲಿಗೆ ತೆಗೆದುಕೊಂಡು ಬರಬೇಕು.'
ಇದಾಗಿತ್ತು ಅವರು ನಮಗೆ ಕೊಟ್ಟಿರುವ ದೌತ್ಯ.
ಇದಕ್ಕೆ ಅವರು ಧಾರಾಳ ಸಂಪತ್ತುಗಳನ್ನು, ಸ್ಥಾನಮಾನಗಳನ್ನು ಕೊಡುತ್ತೇವೆ ಎಂದು ನಮಗೆ ಪ್ರಾಸ್ತಾವ ನೀಡಿದ್ದಾರೆ.
ಕ್ರಿಶ್ಚನ್ ರಾಜರುಗಳ ದೊಡ್ಡ ದೊಡ್ಡ ವಾಗ್ದಾನಗಳಲ್ಲಿ ಮನ ಸೋತು ನಾವು ಝಿಯಾರತ್ತ್'ಗೆ ಎಂಬ ನೆಪವೊಡ್ಡಿ ಮದೀನ ತಲುಪಿರುವುದು.
ರೌಳಾ ಶರೀಫಿಗೆ ತುಂಬಾ ಹತ್ತಿರ ಸ್ಥಿತಿ ಮಾಡಿರುವ ಈ ಛತ್ರದಲ್ಲಿ ವಾಸವಾದೆವು....
ಯಾವುದೇ ಸಂಶಯಗಳು ಮದೀನದವರಿಗೆ ಬಾರದಿರಲು ನಾವು ಮುಸ್ಲಿಂ ಸೂಫಿಗಳಾಗಿ ನಟಿಸಿ
ದಾನ, ಧರ್ಮ ಎಂಬ ನೆಲೆಯಲ್ಲಿ ತುಂಬಾ ಹಣ ವಿತರಿಸಿದೆವು. ಒಂದು ಚಿಕ್ಕ ಸಂಶಯಕೂ ಎಡೆ ಮಾಡಿ ಕೊಡದ ರೀತಿಯಲ್ಲಿ ಒಳ್ಳೆಯ ರೂಪದಲ್ಲಿ ಊರಿನ ಜನತೆಯ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾದೆವು.
ಸುಲ್ತಾನರಿಗೆ ಕೋಪ ನೆತ್ತಿಗೇರಿತ್ತು.
ಸುಲ್ತಾನರು ತನ್ನ ಇನ್ನಷ್ಟು ರೋಷಭಾವದಿಂದ, ಎಲ್ಲಾ ಕುತಂತ್ರಗಳನ್ನು ತಿಳಿಯಲು ಪ್ರಶ್ನೆಗಳನ್ನು ಮುಂದುವರಿಸಿದರು...
ಹೋ ನೀಚರೇ....!!
ಯಾವ ರೀತಿಯಲ್ಲಾಗಿದೆ ನೀವು ಇಷ್ಟು ಸಮರ್ಥವಾಗಿ ಯಾರೂ ತಿಳಿಯದೆ ಸುರಂಗ ನಿರ್ಮಿಸಿದ್ದು❓
ಇಷ್ಟು ಮಣ್ಣು ಎಲ್ಲಿಯಾಗಿದೆ ಶೇಖರಿಸಿಟ್ಟದ್ದು ? ಎಲ್ಲವೂ ಸಂಪೂರ್ಣವಾಗಿ ಹೇಳಿರಿ....?
ಎಲ್ಲರೂ ಕೇಳಲಿ"!!
ಇದು ಕೇಳುವಾಗ ಸುಲ್ತಾನರ ಮುಖ ಕೋಪದಿಂದ ಕೆಂಪಾಗಿತ್ತು.
ಅವರು ಎಲ್ಲವನ್ನೂ ಹೇಳಲು ತೊಡಗಿದರು....
"ರಾತ್ರಿ ಎಲ್ಲರೂ ನಿದ್ರೆ ಮಾಡಿದರೆಂದು ಖಚಿತಪಡಿಸಿಕೊಂಡ ನಂತರ ನಾವು ವಾಸವಿರುವ ಈ ಗುಡಿಸಲಿನ ಒಳಗಿನಿಂದ ಸುರಂಗ ತೋಡಿ ನಂತರ ಯಾರು ಕಾಣದ ರಿತಿಯಲ್ಲಿ ಮಣ್ಣನ್ನು ಕೈಯಲ್ಲಿ ಇರುವ ಚರ್ಮ ಚೀಲದಲ್ಲಿ ತುಂಬಿಸಿ ಇಡುತ್ತಿದ್ದೆವು.
ಆಮೇಲೆ ರಾತ್ರಿ, "ಜನ್ನತ್ತುಲ್ ಬಖೀಅ್" ಕಬರ್ ಸ್ಥಾನದಲ್ಲಿ ಝಿಯಾರತ್ತಿಗೆ ಎಂಬ ನೆಪವೊಡ್ಡಿ ಅಲ್ಲಿಗೆ ಹೋಗಿ ಆ ಮಣ್ಣು ಅಲ್ಲಿರುವ ಹೊಸ ಕಬರಿನ ಮೇಲೆ ಹರಡಿ ಯಾರಿಗೂ ಯಾವುದೇ ರೀತಿಯ ಸಂಶಯ ತೋರದ ರೂಪದಲ್ಲಿ ಅನೇಕ ದಿವಸಗಳಿoದ ಬಹಳ ತಂತ್ರಪೂರ್ವಕವಾಗಿ ನಾವು ಈ ನಿಗೂಢ ಪದ್ಧತಿ ಜಾರಿ ಮಾಡಿರುವುದು.
ಹಲವು ದಿವಸಗಳ ಈ ಶ್ರಮದ ಫಲವಾಗಿ ನಿನ್ನೆ ನಾವು ವಿಶುದ್ದ ಕಬರ್ ಶರೀಫಿನ ಬಹಳ ಸಮೀಪ ತಲುಪಿರುವುದು....
ಆಗ ಹಠಾತನೆ ಆಕಾಶದಿಂದ ಸಿಡಿಲು ಅಪ್ಪಳಿಸಿತು. ಜೊತೆಗೆ ಮಿಂಚುಗಳು ಕೂಡ. ಭೂಮಿ ಕಂಪನ ಉಂಟಾಗಿ ಆಕಾಶ ಕಳಚಿ ನಮ್ಮ ಮೇಲೆ ಬೀಳಬಹುದೆಂದು ಭಾಸವಾಯಿತು. ಹೆದರಿಕೆಯಾದ ನಾವು ತಾತ್ಕಾಲಿಕ ಕೆಲಸಕ್ಕೆ ವಿರಾಮ ನೀಡಿ ನಾಳೆ ಪುನ: ಶುರುಮಾಡಬೇಕೆಂಬ ದೃಢ ನಿಶ್ಚಯ ಮಾಡಿ ನಾವು ಹೋಗಿ ವಿಶ್ರಮಿಸಿದೆವು....
ನಮಿಬ್ಬರ ಲಕ್ಷ್ಯ ಹತ್ತಿರದಲ್ಲಿಯೇ ಸಫಲವಾಗುವುದೆಂದು ನಾವು ಕನಸು ಕಂಡೆವು. ನಮಗೆ ಸಿಗಲಿರುವಂತಹ ಸನ್ಮಾನಗಳನ್ನು ನೆನದು ನಮ್ಮ ಹೃದಯ ಮಿಡಿಯುತ್ತಿತು.
ಆದರೆ ಇಂದು ಬೆಳಗಾಗುತ್ತಲೇ ಸುಲ್ತಾನರಾದ ತಾವು ಊರಿಗೆ ತಲುಪಿದ ವಾರ್ತೆಯಾಗಿದೆ ನಮಗೆ ಕೇಳಲು ಸಾಧ್ಯವಾದದ್ದು. ಈವಾಗ ನೋಡಿ ನಾವು ಸೆರೆ ಹಿಡಿಯಲ್ಪಟ್ಟಿದ್ದೇವೆ." 😰😰
ನಿರ್ಭಂದಿತವಾಗಿಯಾದರೂ ಆ ಇಬ್ಬರು ಯುವಕರ ಸತ್ಯ ನಿಷ್ಟವಾದ ವಿವರಣೆ ಕೇಳಿ ಸುಲ್ತಾನರು ಒಂದು ನಿಮಿಷ ಅತ್ತರು....❗
"ಮಹತ್ವವಾದ ಈ ಒಂದು ಪುಣ್ಯ ಕಾರ್ಯಕ್ಕೆ ಸಾಧುವಾದ ನನ್ನನ್ನಲ್ಲವೇ ಅಲ್ಲಾಹ್, ನಿನ್ನ ರಸೂಲರು ﷺ ನೇಮಿಸಿರುವುದು". ಎಂದು
ನೆನದು ಬಿಕ್ಕಿ ಬಿಕ್ಕಿ ಅತ್ತರು....
ತದನಂತರ
ಅಲ್ಲಾಹನಿಗೆ ಧನ್ಯವಾದ ಹೇಳಿ, 2 ರಕಹತ್ತ್ ಸುನ್ನತ್ತ್ ನಮಾಝ್ ನಿರ್ವಹಿಸಿದರು..
ವಂಚಕರಾದ ಇಬ್ಬರು ಸ್ಪೇನ್ ಗಾರರಿಗೆ ಸುಲ್ತಾನರು ಗಲ್ಲು ಶಿಕ್ಷೆ ವಿಧಿಸಿದರು....
ತಡಮಾಡದೆ ಗಲ್ಲು ಶಿಕ್ಷೆಯನ್ನು ಬಹಿರಂಗವಾಗಿಯೇ ಜಾರಿಗೊಳಿಸಲಾಯಿತು. ಅವರಿಬ್ಬರ ಶವ ಶರೀರಗಳು ಮದೀನದ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿತ್ತು. ಅಕ್ರಮಿಗಳಿಗೂ, ದ್ರೋಹಿಗಳಿಗೂ, ವಂಚಕರಿಗೂ, ಈ ಶಿಕ್ಷೆ ಮರೆಯಲಾಗದ ಪಾಠ ಮುದ್ರೆಯಾಗಿತ್ತು.
ನಂತರ....
ಸುಲ್ತಾನರು ವಿಶುದ್ದ ರೌಳಾ ಶರೀಫಿನ ಸುತ್ತಲೂ, ನೀರು ಕಾಣುವವರೆಗೆ ನಾಲ್ಕು ಭಾಗದಲ್ಲೂ, ಕಣಿವೆ ಮಾಡಲು ಆಜ್ಞೆ ಹೊರಡಿಸಿದರು.
ಆಮೇಲೆ ಅದರಲ್ಲಿ ಕಾದ ಸೀಸೆ ಸುರಿದು ಬೇಲಿ ಮಾಡಿಸಿ
ಮುಚ್ಚಿಸಿದರು.
ಯಾರಿಂದಲೂ ಇನ್ನೊಮ್ಮೆಯೂ ಪರಿಶುದ್ಧ ಕಬರ್ ನ ಹತ್ತಿರ ತಲುಪಲು ಸಾಧ್ಯವಾಗದ ರೀತಿಯಲ್ಲಿ ಭೂಮಿಯ ಅಡಿಯಲ್ಲಿ ಬಹಳ ಆಳವಾಗಿ ಕಾದ ಸೀಸೆ ಸುರಿದು
ಕೊಂಡಿರುವ ಬೇಲಿ ನಿರ್ಮಿಸಿದರು.
ದೌತ್ಯ ಪುರ್ತಿಗೊಳಿಸಿದ ಸಂತೋಷದಿಂದ ಮುತ್ತು ನಬಿ (ಸಅ) ರವರ ಕನಸುಗಳು, ದಾರಿ ಮದ್ಯೆ ಸಿಕ್ಕಿದ ನಿರ್ದೇಷಗಳನ್ನು ಪೂರ್ತಿಗೊಳಿಸಲು ಸಾಧಿಸಿದ ಅನುಭೂತಿ, ನೆಮ್ಮದಿಯೊಂದಿಗೆ, ಸುಲ್ತಾನರಾದ (ರಾಜ) "ನೂರುದ್ದೀನ್ ಝ0ಗಿ (ರ) ಈಜಿಪ್ಟ್ ಗೆ ಮರಳಿದರು."
⚫ಹಿಜ್ರಾ, 555ರಲ್ಲಿ ನಡೆದ ಈ ಘಟನೆಗಳು,
ಜೀವನ ಕಾಲದ ಹಾಗೆ ವಫಾತ್ತಿನ ನಂತರವೂ,
"ಶತ್ರುಗಳಿಂದ ಅಲ್ಲಾಹು, ಮುತ್ತು ನಬಿ ﷺ ತಂಙಳರನ್ನು ಸಂರಕ್ಷಿಸುವೆನೆಂದು" ಖುರಾನ್ ವಚನದ ವಾಸ್ತವದ ಸಾಕ್ಷಿಯಾಗಿ ಇದನ್ನು ಚರಿತ್ರೆಗಾರರು ಉಲ್ಲೇಖಿಸಿದ್ದಾರೆ...
❤💛💚💙💜💖💓💕
ಸಲ್ಲಲ್ಲಾಹು ಅಲಾ ಮುಹಮ್ಮದ್
ಸಲ್ಲಲ್ಲಾಹು ಅಲೈಹಿವಸಲ್ಲಂ..
💚💜💙💗❤💖💓💕
✍ಗಫೂರ್ ಬಾಯಾರ್
Labels:
ಇಷ್ಕೇ ಮದೀನ
Subscribe to:
Post Comments (Atom)
No comments:
Post a Comment