Thursday, September 28, 2017

ಪರಿಶುದ್ಧ ಕಅಬಾಲಯ

ಪರಿಶುದ್ಧ ಕಅಬಾಲಯ
🕋🕋🕋🕋🕋🕋🕋🕋

✍ ಗಫೂರ್ ಬಾಯಾರ್

 ಭೂಮಿಯಲ್ಲಿ ಮೊದಲನೇಯಾಗಿ ಅಲ್ಲಾಹು ಆರಾಧಿಸಲು ನಿರ್ಮಿಸಿದ ಭವನವಾಗಿದೆ ಕಅಬಾಲಯ.

ಮನುಷ್ಯರು ಭೂಮಿಗೆ  ಆಗಮಿಸುವ ಮೊದಲೇ ಕಅಬಾಲಯ ನಿರ್ಮಿಸಲ್ಪಡಲಾಗಿತ್ತು,
 ತ್ವವಾಫ್ ಮಾಡಿರುವುದು ಹಾಗೂ ಪರಿಪಾಲನೆ ಮಾಡಿರುವುದು ಅಲ್ಲಾಹುವಿನ ಮಲಕುಗಳಾಗಿತ್ತು.

🕋ಆದಂ ನಬಿ ಅಲೈಸ್ಸಲಾಂ ರವರ ಆಗಮನದೊಂದಿಗೆ ವಿಶುದ್ಧ  ಕಅಬದ  ಮೇಲ್ನೋಟವು, ಪರಿಪಾಲಾನೆಯೂ, ಮನುಷ್ಯರಿಗೂ ತಲುಪಿತು.


🕋 ತದನಂತರ ವ್ಯತ್ಯಸ್ತ ಕಾಲಘಟಗಳಲ್ಲಿ ಬಂದ ಅಲ್ಲಾಹುವಿನ ಪ್ರವಾದಿಯರು ವಿಶುದ್ಧ ಕಅಬವನ್ನು ಪರಿಪಾಲಿಸಿದರು. ಸಯ್ಯದುನ ನೂಹ್ ನಬಿ ಅಲೈಸ್ಸಲಾಂ ರವರ ಕಾಲಘಟದಲ್ಲಿ ಸಂಭವಿಸಿದ ಮಹಾ ಪ್ರಳಯದಲ್ಲಿ ವಿಶುದ್ಧ ಕಅಬದ ಅಡಿಪಾಯ ಹೊರತು ಉಳಿದ ಭಾಗಗಳೆಲ್ಲವು ಕೊಚ್ಚಿ ಹೋಗಲಾಯಿತ್ತು. ನಂತರ ಸಯ್ಯದುನಾ ಇಬ್ರಾಹಿಂ ನಬಿ ಅಲೈಸ್ಸಲಾಂ ಮತ್ತು ಮಗನಾದ ಇಸ್ಮಾಹಿಲ್ ನಬಿ ಅಲೈಸ್ಸಲಾಂ ರವರು ಅಲ್ಲಾಹುವಿನ ಆಜ್ಞೆಯ ಪ್ರಕಾರ ಕಅಬಾಲಯವನ್ನು ಪುನರ್ನಿರ್ಮಿಸಿದರು

🕋 ಸ್ವರ್ಗದಿಂದ  ತಂದ ಹಜರುಲ್ ಅಸ್ವದ್ ಎಂಬ ಕಲ್ಲನ್ನು  ಇಬ್ರಾಹಿಂ ಅಲೈಸಲಮ್ ಕಅಬಾಲಯದ ಒಂದು ಭಾಗದಲ್ಲಿ ಸ್ಥಾಪಿಸಿದರು. ಆ ವಿಶುದ್ಧ ಕಲ್ಲನ್ನು ಒಂದು ಸುತ್ತಿನ ಪ್ರದಕ್ಷಿಣೆ (ತವಾಫ್ ನ) ಆರಂಭವಾಗಿ ಗುರಿತಿಸಲ್ಪಡುತ್ತದೆ.
 ಕಅಬಾಲಯದ ಎತ್ತರವು 9 ಮೊಳವಾಗಿತ್ತು.

 🕋ಯೆಮೆನಿನ ರಾಜರುಗಳು ಕಅಬಾಲಯಕ್ಕೆ ಕವಾಡವನ್ನು ನಿರ್ಮಿಸುದರೊಂದಿಗೆ ಕಿಲ್ಲೆಯು ಹೊದಿಸಿದರು.

🕋ವರ್ಷಾನುವರ್ಷಗಳ  ನಂತರ ಕಅಬಾಲಯದಲ್ಲಿ ಕಾಣಿಸಿದ ಬಿರುಕುಗಳನ್ನು ಆಮಾಲಿಖ ಸಮೂಹದವರು ದುರಸ್ಥಿಪಡಿಸಿದರು.

🕋ಮತ್ತೆ ನೂರಾರು ವರ್ಷಗಳ ನಂತರ  ಜುರ್ಹೂಂ ಗೋತ್ರದವರು
 ಕಅಬಾಲಯವನ್ನು ದುರಸ್ಥಿಪಡಿಸಿದರು.

 🕋ವಿಶುದ್ಧ ಇಸ್ಲಾಮಿನ ಶತ್ರುವಾಗಿದ್ದ ಯೆಮೆನಿನ ಅಬ್ರಹತ್ ಎಂಬ ರಾಜನ ಸೈನ್ಯವು ವಿಶುದ್ಧ ಕಅಬವನ್ನು ಹೊಡೆದು ಉರಳಿಸಲು ಶ್ರಮಿಸಿದಾಗ ಅಲ್ಲಾಹು ಹಬಾಬಿಲ್ ಎಂಬ ಪಕ್ಷಿಯ ಮೂಲಕ ಪರಾಭವಗೊಳಿಸಿದನು. ಈ ಘಟನೆಯನ್ನು ವಿಶುದ್ಧ ಖುರ್ಆನಿನಲ್ಲಿ ವಿವರಿಸಲಾಗಿದೆ.

🕋ಇಬ್ರಾಹಿಂ ನಬಿ ಅಲೈಸಲಾಂ ರವರು ನಿರ್ಮಿಸಿದ ಮೇಲೆ ಸುಮಾರು 2775 ವರ್ಷಗಳ ನಂತರವಾಗಿತ್ತು ಇದರ ನಿರ್ಮಾಣ ಪೂರ್ಣಗೊಂಡಿರುವುದು.

🕋ವಿಶುದ್ಧ ಮಕ್ಕದಲ್ಲಿ ಸಂಭವಿಸಿದ  ಮಹಾ ಪ್ರಳಯದಿಂದ ಉಂಟಾದ ನಾಶನಷ್ಟಗಳ ನಂತರ
 ಖುರೈಷಿಗಳು ಕಅಬಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಿದರು. ಆ   ಸಂದರ್ಭದಲ್ಲಿ ವಿಶುದ್ಧ ಹಜರುಲ್ ಅಸ್ವದನ್ನು ಯಾರು ಸ್ಥಾಪಿವುವವರು ಎಂಬುದರ ಬಗ್ಗೆ ಒಂದು ಚರ್ಚಾ ಕೂಟ ನಡೆಯಿತು. ಇದು ಅರಬ್ ಗೋತ್ರ ಪ್ರಮುಖರ ಎಡೆಯಲ್ಲಿ ಒಂದು ದೊಡ್ಡ ಪೈಪೂಟಿಯೇ ನಡೆಯಿತು. ಕೊನೆಯಲ್ಲಿ ಅವರು ಒಂದು ತೀರ್ಮಾನಕ್ಕೆ ಬಂದರು.  ಮೊದಲನೆಯದಾಗಿ ಯಾರು  ಆಗಮಿಸುತ್ತಾರೋ ಅವರಾಗಿರಲಿ ಇದನ್ನು ಸ್ಥಾಪಿಸುವವರು ಎಂದು ತೀರ್ಮಾನವಾಯಿತು. ನಬಿ ﷺ ರವರಾಗಿದ್ದರು ಮೊದಲನೆಯವರಾಗಿ ಬಂದವರು. ವಿಚಾರವೆನೆನ್ನೆಲ್ಲ ತಿಳಿದ ಪ್ರವಾದಿ ವರ್ಯರು( ﷺ) ಒಂದು ಸೌಹಾರ್ದಯುತವಾದ ಅಭಿಪ್ರಾಯವನ್ನು ಖುರೈಷಿ ಪ್ರಮುಖರ ಮುಂದೆ ಮಂಡಿಸಿದರು. ಹಜರುಲ್ ಆಸ್ವದನ್ನು ಒಂದು ವಿಶಾಲವಾದ ಶಾಲಿನ ಮದ್ಯೆ ಇಟ್ಟು, ಎಲ್ಲಾ ಗೋತ್ರ ಪ್ರಮುಖರು ಸೇರಿ ಶಾಲಿನ ಒಂದೊಂದು ಭಾಗವನ್ನು ಹಿಡಿದು ಎತ್ತುವುದರ ಮೂಲಕ ಕಲ್ಲನ್ನು ಸ್ಥಾಪಿಸಬೇಕೆಂದು ನಬಿ ﷺ ರವರು ನಿರ್ದೇಶಿಸಿದರು. ಪ್ರಸ್ತುತ ನಿರ್ದೇಶವನ್ನು ಒಮ್ಮತದಿಂದ ಸ್ವೀಕರಿಸಿ ಹಜರುಲ್ ಅಸ್ವದನ್ನು ಸ್ಥಾಪಿಸಲಾಯಿತು.

🕋ಚರಿತ್ರೆಯ ಅಂದಿನಿಂದ ತಲತಲಾಂತರ ಮಾನವ ಕುಲಕ್ಕೆ ಮೂಖಸಾಕ್ಷಿಯಾಗಿದೆ ಆ  ಪವಿತ್ರವಾದ ಹಜರುಲ್ ಅಸ್ವದೆಂಬ ಕಲ್ಲು. ಭೂಮಿಯ ಮದ್ಯ ಭಾಗದಲ್ಲಿ ನೆಲೆಗೊಳ್ಳುತಿರುವ ಕಅಬಾಲಯವು ವಿಶ್ವ ಮುಸಲ್ಮಾನರ ಕಿಬ್ಲಯಾಗಿದೆ.

🕋ಲೋಕದ ನಾನಾ ದಿಕ್ಕುಗಳಿಂದ ವಿಶ್ವಾಸಿಗಳು ಆ ಕಅಬಾಲಯವನ್ನು ಒಮ್ಮೆ ನೋಡಲು ಹಾಗು ವಿಶುದ್ಧವಾದ ಹಜ್ಜ್ ಮತ್ತು ಉಮ್ರವನ್ನು ನಿರ್ವಹಿಸಲು ಅತಿಯಾಗಿ ಆಗ್ರಹಿಸುತ್ತಾರೆ.ಅದರಂತೆ ಲಕ್ಷೋಪಲಕ್ಷ ವಿಶ್ವಾಸಿಗಳು ಅಲ್ಲಾಹುವಿನ  ಅನುಗ್ರಹದೊಂದಿಗೆ ವಿಶುದ್ಧ ಹಜ್ಜ್ , ಉಮ್ರ ನಿರ್ವಹಿಸುತ್ತಾರೆ. ಇದು ಲೋಕಾಂತ್ಯದ ವರೆಗೂ ಮುಂದುವರಿಯುತ್ತಾ ಇರುತ್ತದೆ.

 🕋ಪ್ರವಾದಿ ಮುತ್ತು ನಬಿ ﷺ ರವರ ಬಾಲ್ಯವು ಮತ್ತು ಯೌವ್ವನವು ಕಅಬಾಲಯದ ನೆರಳಿನಲ್ಲಾಗಿದೆ ಕಳೆದಿರುವುದು.

🕋ಜೀವನದಲ್ಲಿ ಒಮ್ಮೆಯಾದರೂ ಆ ಪುಣ್ಯ ಕಅಬಾಲಯವನ್ನು  ನೋಡಲು ಅಲ್ಲಾಹು ನಮ್ಮನ್ನು ಅನುಗ್ರಹಿಸಲಿ
ಆಮೀನ್..

✍ ಗಫೂರ್ ಬಾಯಾರ್
🌷🌷🌷🌷🌷🌷🌷

No comments:

Post a Comment