🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
*ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣3⃣
➖➖➖➖➖➖➖➖➖
ಆಬಿದ್ ಎಂಬ ಆ ಮುದ್ದು⤵
ಮಗು ಬಿಸಿಲಿನ ತಾಪದ ಕಠಿಣತೆಯಿಂದ ಒದ್ದಾಡುತ್ತಾ ಆ ಮರುಭೂಮಿಯಲ್ಲಿ ಏನು ಮಾಡಬೇಕೆಂದು ತಿಳಿಯದೆ ಇರುವ.. ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಇಬ್ಬರಾದ ತಂದೆ ಮತ್ತು ಮಗಳು ನಡೆದುಕೊಂಡು ಬರುತ್ತಾರೆ.
*ಅಬೂ ಇಯಾಝ್* ಎಂದು ತಂದೆಯವರ ಹೆಸರಾದರೆ,
ಮಗಳ ಹೆಸರು *ಫರ್ಹನಾಝ್* ಎಂದಾಗಿತ್ತು. ಅವರು *ತ್ವಹೀಫ್'*ನಿಂದ ವಲಸೆ ಬಂದು ವಾಸಿಸುವರಾಗಿದ್ದರು.
ಇವರಿಬ್ಬರು ನಡೆದುಕೊಂಡು ಬರುತ್ತಿರುವಾಗ ಮರಳುಗಾಡಿನಲ್ಲಿ ಮಲಗಿ ಅಳುತ್ತಾ ಒದ್ದಾಡುತ್ತಿರುವ ಆ ಮಗುವನ್ನು ಕಂಡರು.!
*ಫರ್ಹನಾಝ್* ಅಪ್ಪನನ್ನು ಕರೆದು "ಅಪ್ಪಾ ಅಲ್ಲಿ ನೋಡಿ.. ಒಂದು ಮಗು ಅಳುತ್ತಿದೆ" ಎನ್ನುತ್ತಾ ಬೇಗನೆ ಓಡಿ ಬಂದು *ಆಬಿದ್'*ನನ್ನು ಎತ್ತಿಕೊಂಡಳು.. ಕುತೂಹಲದಿಂದ ಅವಳು ಕೇಳಿದಳು *ಮಗನೇ ನಿನ್ನ ತಂದೆ ತಾಯಿ ಯಾರು? ನೀನು ಹೇಗೆ ಇಲ್ಲಿಗೆ ತಲುಪಿರುವುದು?*
ಆದರೆ ಮೊದಲು ಎಲ್ಲಿಯೂ ನೋಡಿ ಪರಿಚಯವಿಲ್ಲದ ಆಬಿದಿನಿಗೆ *ಫರ್ಹನಾಝ್* ಮೇಲೆತ್ತಿದಾಗ ಅವನು ಜೋರಾಗಿ ಅಳಲು ಶುರು ಮಾಡಿದನು.. ಅವಳು ಮಗುವಿನ ಹತ್ತಿರ "ನೀನು ಯಾರು? ನಿನಗೆ ನಿನ್ನವರೆನ್ನಲು ಯಾರು ಇಲ್ಲವೇ? ನೀನು ಮರುಭೂಮಿಗೆ ಒಬ್ಬನೇ ಬಂದಿರುವುದು ಹೇಗೆ?" ಎಂದು ಒಂದರ ಹಿಂದೆ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಳು..
ಆದರೂ *ಆಬೀದ್* ಒಂದೇ ಸಮನೆ ಅಳುತ್ತಾ ಕೊನೆಗೆ ಒಂದು ಭಾಗಕ್ಕೆ ಕೈಸನ್ನೆ ತೋರಿಸಿದಾಗ..
ಫರ್ಹನಾಝ್ ಮತ್ತು ಅವಳ ತಂದೆಯು ಆ ಕಡೆ ನೋಡಿದಾಗ ಬಹಳ ದೂರದಲ್ಲಿ ಒಂದು ಪಾಳುಬಿದ್ದ ಕಟ್ಟಡವನ್ನು ಕಂಡರು.
*ಫರ್ಹನಾಝ್* "ಅಪ್ಪ ಆ ಕಟ್ಟಡದಲ್ಲಿ ಯಾರೋ ಇದ್ದಾರೆ. ನಾವು ಅಲ್ಲಿಗೆ ಹೋಗಿ ನೋಡುವ". ಎಂದು ಹೇಳಿ ಇಬ್ಬರು ಅಲ್ಲಿಗೆ ಮುಖ ಮಾಡಿ ನಡೆದರು.
ಪಾಳು ಬಿದ್ದ ಕಟ್ಟಡದ ಹತ್ತಿರ ತಲುಪಿದಾಗ *ಮಲಿಹ* ಪ್ರಜ್ಞಾಹೀನಳಾಗಿ ಮಲಗಿದ್ದಳು.
*ಆಬಿದ್* ತಾಯಿಯನ್ನು ನೋಡಿದ ತಕ್ಷಣವೇ *ಫರ್ಹನಾಝ್'*ನ ಕೈಯಿಂದ ಸರ್ರನೆ ಕೆಳಗಿಳಿದು ಮಲಿಹ'ಳ ಹತ್ತಿರಕ್ಕೆ ಓಡಿದನು..
ಆಗ ಅವರಿಗೆ ಆಬಿದ್ ಅವಳ ಮಗನೆಂದು ಮನವರಿಕೆಯಾಯಿತು.. ಫರ್ಹನಾಝ್ ಮಲಿಹಳನ್ನು ಮುಟ್ಟಿ ಎಬ್ಬಿಸಿ ಕೇಳಿದಳು..
*ನೀನು ಒಂದು ಹೆಣ್ಣಲ್ಲವೇ! ಮಗುವನ್ನು ಹೀಗೆ ಒಂಟಿಯಾಗಿ ಸುಡು ಬಿಸಿಲಿನ ಮರುಭೂಮಿಯಲ್ಲಿ ಆಡಲು ಬಿಟ್ಟು ನೀನಿಲ್ಲಿ ಮಲಗಿ ನಿದ್ರಿಸುತ್ತಿರುವೆಯಾ??*
ಆಯಾಸದಿಂದ ಕ್ಷೀಣಿಸಿದ ಕಣ್ಣೆದುರಿಗೆ ಮತ್ತೊಂದು ಹೆಣ್ಣನ್ನು ನೋಡಿದಾಗ ಮಲಿಹ'ಳಿಗೆ ಸ್ವಲ್ಪ ಜೀವ ಮರಳಿ ಬಂದಂತಾಯಿತು.
*ಮಲಿಹ:* ನನ್ನ ಮಗನು ನಡೆದುಕೊಂಡು ಹೋಗುವುದನ್ನು ನಾನು ನೋಡಿದ್ದೇನೆ.. ಆದರೆ ನಾನು ಒಂಟೆಯ ಮೇಲಿನಿಂದ ಬಿದ್ದು ನನ್ನ ಕಾಲು ಮುರಿದಿದೆ.
ಅವನನ್ನು ಒಮ್ಮೆ ಹಿಡಿಯಲು, ಕರೆಯಲೂ ಸಾಧ್ಯವಾಗಿಲ್ಲ.
ಕಾಲಿನ ನೋವಿನಿಂದ ಜ್ವರ ಬಂದು ಆಯಾಸದಿಂದ ಎದ್ದೇಳಲು ಸಾಧ್ಯವಾಗದೆ ನಾನು ಮಲಗಿದ್ದೆ.
ಫರ್ಹನಾಝ್ ಮಲಿಹ'ಳನ್ನು ಮುಟ್ಟಿ ನೋಡಿದಾಗ.. ಮಲಿಹ'ಳ ದೇಹವೆಲ್ಲಾ ತಾಪದಿಂದ ಕೂಡಿದ ಜ್ವರವಾಗಿತ್ತು.. ಮಾತಿನ ಮಧ್ಯೆ ಮಲಿಹ ಪುನಃ ಮತಿ ತಪ್ಪಿದಳು.
ಆಗ ಫರ್ಹನಾಝ್ ಮಲಿಹ'ಳನ್ನು ಎಬ್ಬಿಸಿ ನಿನಗೆ ಎಲ್ಲಿಗೆ ಹೋಗಬೇಕಾಗಿದೆ?
*ಮಲಿಹ:* ನಾನು ಯಮಾಮಕ್ಕೆ ನನ್ನ ಗಂಡನನ್ನು ಹುಡುಕುತ್ತಾ ಹೋಗುತ್ತಿರುವುದು. ಆದರೆ ಅಲ್ಲಿಗೆ ಹೋಗಿ ಏನು ಪ್ರಯೋಜನವಿಲ್ಲ. ಕಾರಣ
ನನ್ನ ಪತಿ ಮರಣ ಹೊಂದಿದ ವಿವರ ನಾನು ಇಲ್ಲಿಯೇ ಕೇಳಿ ತಿಳಿದೆನು.!!
ಎಲ್ಲಾ ವಿಷಯಗಳನ್ನು ಮಲಿಹ ಫರ್ಹನಾಝ್'ನೊಂದಿಗೆ ಹಂಚಿದಾಗ..
*ಮುಸ್ಲಿಂ* ಹುಡುಗಿಯಾದ ಫರ್ಹನಾಝ್ ಅಪ್ಪನ ಹತ್ತಿರ ಹೇಳಿದಳು. *"ಅಪ್ಪ ಆರೋಗ್ಯ ಹದಗೆಟ್ಟ ಸ್ಥಿತಿಯಲ್ಲಿರುವ ಈ ಹೆಣ್ಣನ್ನು ಇಲ್ಲಿ ಬಿಟ್ಟು ನಾವು ಹೇಗೆ ಮರಳಿ ಹೋಗುವುದು?"*
*ಅಲ್ಲಾಹನ ಹಬೀಬರಾದ ಮುಹಮ್ಮದ್ ಮುಸ್ತಫಾ ﷺ ರವರು ರೋಗಿಗಳನ್ನು ಶುಸ್ರೋಷಿಸಬೇಕು ಎಂದು ಹೇಳಿದ್ದಾರಲ್ವವೇ? ನಾವು ಇವಳನ್ನು ಹೀಗೆ ಇಲ್ಲಿ ಬಿಟ್ಟು ಹೋದರೆ ಅದು ನಬಿ ﷺ ರವರ ಮಾತಿಗೆ ವಿರುದ್ಧವಲ್ಲವೇ..?*
( _ಈ ಘಟನೆಗಳೆಲ್ಲ ನಡೆಯುವುದು ಮುತ್ತು ನಬಿ ﷺ ರವರ ವಫಾತ್ತಿನ ನಂತರ ಅಬೂಬಕ್ಕರ್ ಸಿದ್ದೀಖ್ ರ. ರವರ ಆಡಳಿತ ಕಾಲದಲ್ಲಾಗಿತ್ತು_ )
*ಫರ್ಹನಾಝ್:* ಅಪ್ಪ ಇವಳನ್ನು ನಾವು ನಮ್ಮ ಮನೆಗೆ ಕರೆದುಕೊಂಡು ಹೋಗಬೇಕು..
ಅವಳ ರೋಗ ಶಮನವಾದ ನಂತರ ಯಮಾಮಕ್ಕೆ ಕಳಿಹಿಸುವ.
ಆಗ ತಂದೆ ಅಭಿಮಾನದಿಂದ *"ಮಗಳೇ ನಾನು ಕೂಡ ಇದನ್ನೇ ಚಿಂತಿಸುತ್ತಿದ್ದೆ, ಬಾ.. ನೀ ಅವಳನ್ನು ಹಿಡಿದುಕೋ"* ಎಂದು ಹೇಳುತ್ತಾ ಇಬ್ಬರು ಸೇರಿ ಮಲಿಹ'ಳನ್ನು ಎತ್ತಿಕೊಂಡು ಹೋಗಿ ಒಂಟೆಯ ಮೇಲಿದ್ದ ಮಂಚಕ್ಕೆ ಹತ್ತಿಸಿ ಒರಗಿಸಿ ಮಲಗಿಸಿದರು.
ಆಮೇಲೆ ಅಬೂ ಇಯಾಝ್⤵
ಮುಂದುವರಿಯುವುದು..
✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment