🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
*ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 0⃣8⃣
➖➖➖➖➖➖➖➖➖
ಆದ್ದರಿಂದ ನನ್ನ ಪ್ರೀತಿಯ ಅಪ್ಪ⤵
"ಇವನ ತಂದೆ ವಿಶಾಲವಾದ *ಹದಿಕತ್ತುರಹುಮಾನ್ ಎಂಬ ಹೂದೋಟದ ಮದ್ಯದಲ್ಲಿ ಹತ್ತರಷ್ಟು ಬಂಗ್ಲೆಗಳಿರುವ ಮುಸೈಲಿಮ ಎಂಬವರ ಮಗನಾಗಿದ್ದಾರೆ*"
( *ಹದಿಕತ್ತುರಹುಮಾನ್* ನಂತರದ ಕಾಲದಲ್ಲಿ ಹದಿಕತ್ತುಲ್'ಮೌತ್ ಅಥವಾ ಮರಣದ ತೋಟ ಎಂಬ ನಾಮದಿಂದ ಹೆಸರುವಾಸಿಯಾಗಿದೆ)
ಆ ಬಂಗಲೆಯಲ್ಲಾಗಿದೆ ನನ್ನ ಮಗು ಬೆಳೆಯ ಬೇಕಾಗಿರುವುದು. ಆದರೆ ಈ ಗುಡಿಸಿಲಿನಲ್ಲಿ ಹಸಿವಿನಿಂದ ಬಳಲುತ್ತಲೇ ಬೆಳೆಯುತ್ತಿದ್ದಾನೆ ನನ್ನ ಮುದ್ದು ಕಂದ..!!
ಇಂತಹ ಹೀನಾಯ ಪರಿಸ್ಥಿತಿಯನ್ನು ಮನಗಂಡು ನಾನು ನನ್ನ ಮಗನೊಂದಿಗೆ *ಯಮಾಮ*ಕ್ಕೆ ಹೋಗಲು ತೀರ್ಮಾನಿಸಿರುವೆನು. ಅಪ್ಪ ನನಗೆ ಸಮ್ಮತಿ ನೀಡಬೇಕು ಎಂದು ಹೇಳಿದಳು.
ಆಗ ಅಸಹಾಯಕ ಸ್ಥಿತಿಯಲ್ಲಿದ್ದ *ಹುಕ್'ಬ* ಹೇಳಿದರು "ಮಗಳೇ.. ನಿನ್ನನ್ನು ಇಲ್ಲಿ ಹಿಡಿದು ನಿಲ್ಲಿಸಿದರೆ ನಿನಗೆ ಆಹಾರ ನಾನು ತರಬೇಕಾದೀತು. ನನ್ನ ಇಂದಿನ ಪರಿಸ್ಥಿತಿಯಲ್ಲಿ ನನಗೆ ಒಂದು ಹೊತ್ತಿನ ಊಟಕ್ಕೆ ಸಂಪಾದಿಸಲು ನನ್ನಿಂದ ಸಾಧ್ಯವಿಲ್ಲ. ಹೀಗಿರುವಾಗ ನೀನು ಹೋಗಬಹುದು. ಆದರೆ ಒಂದು ಒಂಟೆಯು ಕೂಡ ಇಲ್ಲದೆ ನೀನು ಅಷ್ಟು ದೂರ ಹೋಗುದಾದರೂ ಹೇಗೆ??
( *ಯಮಾಮ* ಎಂಬ ಸ್ಥಳ ಇಂದಿನ *ರಿಯಾದ್*'ನ ಭಾಗವಾಗಿದೆ. )
ಇರಾಕಿನಿಂದ ಅಷ್ಟು ದೂರ ನಡೆದು ಹೋಗಲು ಸಾಧ್ಯವಿಲ್ಲವಲ್ಲವೇ?.
ನಾನು ಯಾರಿಂದಾದರೂ ಒಂದು ಒಂಟೆಯನ್ನು ಸಾಲ ಕೇಳುತ್ತೇನೆ ಎಂದು ಹೇಳಿ *ಹುಕ್'ಬ* ನೆರೆಮನೆಯವರ ಹತ್ತಿರ ಹೋಗಿ, ನನ್ನ ಮಗಳಿಗೆ ಯಮಾಮಕ್ಕೆ ಹೋಗಿ ಮರಳಿ ಬರಲು ಒಂದು ಒಂಟೆಯನ್ನು ಕೊಡಬಹುದೇ ಎಂದು ಕೇಳಿದರೂ
ಯಾರು ಕೂಡ ಒಂಟೆಯನ್ನು ಕೊಡುವ ಮನಸ್ಥಿತಿಯಲ್ಲಿರಲಿಲ್ಲ.
ಕೊನೆಗೆ *ಹುಕ್'ಬ* ತನ್ನ ಒಬ್ಬ ವಯಸ್ಸಾದ ಸ್ನೇಹಿತನ ಹತ್ತಿರ ಒಂಟೆಗಾಗಿ ಮನವಿ ಮಾಡಿದಾಗ, ಅವರು ಒಂಟೆಯನ್ನು ಕೊಡುತ್ತೇನೆಂದು ಸಮ್ಮತಿಸಿದರು.
ಸ್ನೇಹಿತನ ಬಳಿ ಇದ್ದ ಒಂಟೆ ಅವರ ಹಾಗೆಯೇ ಪ್ರಾಯವಾಗಿ ಕ್ಷೀಣಿಸಿದ ಮೃಗವಾಗಿತ್ತು..!!
*ಹುಕ್'ಬ* ಆ ಒಂಟೆಯನ್ನು ಮನೆಯ ಮುಂದೆ ತಂದು ನಿಲ್ಲಿಸಿ ಅದರ ಮೇಲೆ ಖರ್ಜೂರ ಮರದ ಗರಿಗಳನ್ನು ಸೇರಿಸಿ ಒಂದು ಮಂಚದಂತೆ ನಿರ್ಮಿಸಿದರು.
ಮರುದಿನ ಬೆಳಿಗ್ಗೆ *ಮಲಿಹ* ಯಾತ್ರೆಗೆ ತಯಾರಾದಳು..!
*ಹುಕ್'ಬ* ಸ್ವಲ್ಪ ಆಹಾರವನ್ನು ಶೇಖರಿಸಿ ಮಗಳ ಕೈಗಿಡುತ್ತಾ, *"ಮಗಳೇ ದಾಹವಾದರೂ, ಹಸಿವಾದರೂ ತಿನ್ನಲು ಕುಡಿಯಲು ಇದು ಮಾತ್ರವಾಗಿದೆ ನಿನ್ನ ಕೈಯಲ್ಲಿರುವುದು.ಹಾಗಾಗಿ ಈ ಅಸಹಾಯಕನಾದ ಅಪ್ಪನನ್ನು ಶಪಿಸಬಾರದು* ಎಂದು ಹೇಳುತ್ತಾ ಹುಕ್'ಬ *ಮಲಿಹ*'ಳನ್ನು ಯಾತ್ರೆ ಕಳುಹಿಸಿದರು.
*ಮಲಿಹ'*ಳ ತಾಯಿ ಮರಣ ಹೊಂದಿದ ನಂತರ ಅಪ್ಪ-ಅಮ್ಮನ ಸ್ಥಾನವನ್ನು ಅಲಂಕರಿಸಿ ತಾನು ಮುದ್ದಾಡಿ ಪ್ರೀತಿಸಿ, ವಾತ್ಸಲ್ಯದಿಂದ ಸಾಕಿದ ತನ್ನ ಏಕೈಕ ಮಗಳು ಅಪ್ಪನನ್ನು ಬಿಟ್ಟು ಹೋಗುವುದನ್ನು ಬಹುದೂರದವರೆಗೆ ಬಾಷ್ಪ ತುಂಬಿದ ಕಣ್ಣುಗಳಿಂದ *ಅದ್ನಾನ್ ಬಿನ್ ಹುಕ್'ಬ* ಏಕಾಂಗಿಯಾಗಿ ನೋಡುತ್ತಾ ನಿಂತರು....⤵
ಮುಂದುವರಿಯುವುದು..
✍ *ಗಫೂರ್ ಬಾಯಾರ್*
+974 6669 3010
*ಸಹಾಯ: ಅಕ್ಬರ್ ಪಿ.ಎ.*
🛡🛡🛡🛡🛡🛡🛡
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment