🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
*ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 0⃣7⃣
➖➖➖➖➖➖➖➖➖
ಬಗ್ದಾದಿಗೆ ಯಾತ್ರೆ ಮುಂದುವರಿಸಿದರು..⤵
*ಮಸೂದ್* ಸ್ನೇಹಿತರೊಂದಿಗೆ ಹಾಡುತ್ತಾ, ನೃತ್ಯ ಮಾಡಿ ಕುಣಿಯುತ್ತಾ ಬಗ್ದಾದಿಗೆ ಯಾತ್ರೆ ಹೋಗುವಾಗ, ಇತ್ತ ಉಮಾರದ ದಿಜಿಲದಲ್ಲಿ *ಮಲಿಹ* ಎಂಬ ಆ ಮುಗ್ಧ ಯುವತಿ ಪತಿಯವರಾದ *ಮಸೂದ್*
ಇಂದು ಬರುವರು.. ನಾಳೆ ಬರುವರು.. ಇಲ್ಲದಿದ್ದರೆ ನಾಳಿದ್ದು ಬರುವರು.. ಎಂಬ ದೃಢ ವಿಶ್ವಾಸದಿಂದ ಖಂಡಿತವಾಗಿಯೂ ಬರುವರೆಂಬ ನಿರೀಕ್ಷೆಯಿಂದ ಕಾಯುತ್ತಾ ಇರುತ್ತಾಳೆ...
ಆದರೆ ನಿರೀಕ್ಷೆ ಎಲ್ಲವೂ ಹುಸಿಯಾಗಿತ್ತು, ಮಸೂದ್ ತಿರುಗಿ ಬರಲಿಲ್ಲ..!!
ದಿಜಿಲ ನದಿಯ ತೀರದಲ್ಲಿ ಹೋಗುವ ವ್ಯಾಪಾರ ತಂಡಗಳೊಂದಿಗೆ ಮಲಿಹ, *ಮಸೂದ್*ನ ಬಗ್ಗೆ ವಿಚಾರಿಸಿದಳು..
ಆದರೆ ಕೆಲವರು ಅವನ ಕುರಿತು ಯಾವ ವಿವರಣೆಯು ಇಲ್ಲವೆಂದು ಉತ್ತರಿಸುತ್ತಾರೆ..
*ಮಸೂದ್* ಬರುವನೆಂಬ ಆಕಾಂಕ್ಷೆಯಿಂದ ದಿವಸಗಳು ಮುಂದೂಡುತ್ತಿದ್ದಂತೆ ಅವಳಿಗೊಂದು ಸತ್ಯ ಮನದಟ್ಟಾಗುತ್ತದೆ..
*ಮಸೂದ್* ಹಾಗೂ *ಮಲಿಹ* ಜೊತೆಗಿದ್ದ ದಾಂಪತ್ಯದಲ್ಲಿ ನಡೆದ ದೈಹಿಕ ಸಮ್ಮಿಲನದ ಕಾಣಿಕೆಯಾಗಿ *ಮಲಿಹ* ಒಂದು ಮಗುವಿನ ತಾಯಿಯಾಗಲು ಹೋಗುತ್ತಿರುವವಳೆಂಬ ಸತ್ಯವಾಗಿತ್ತು ಅದು!
ದಿವಸಗಳು, ವಾರಗಳು, ತಿಂಗಳುಗಳು ದಾಟುತ್ತಾ ಮುಂದೆ ಸಾಗುತಿತ್ತು.. *ಮಸೂದ್* ಮರಳಿ ಬಾರದ ನೋವಿನಿಂದ ಮಾನಸಿಕವಾಗಿ ಅವಳು ದಿನದಿಂದ ದಿನಕ್ಕೆ ತುಂಬಾ ಕ್ಷೀಣಿಸುತ್ತಾ ಹೋದಳು. ಮನೆಯಲ್ಲಿ ತಿನ್ನಲು ಒಳ್ಳೆಯ ಆಹಾರವು ಇಲ್ಲದ ಕಾರಣ ದೈಹಿಕವಾಗಿಯೂ ಭಲಹೀನಳಾದಳು..
ಕೆಲವು ರಾತ್ರಿಗಳಲ್ಲಿ ಯಾರೋ ಬಂದು ಕದ ತಟ್ಟುವ ಹಾಗೆ ತೋಚಿದಾಗ, ಅದು ತನ್ನ ಪತಿಯಾಗಿರಬಹುದೆಂದು ಭಾವಿಸುತ್ತಾ ಅವಳು ಓಡಿ ಹೋಗಿ ಬಾಗಿಲು ತೆರೆದಿದ್ದೂ ಉಂಟು.. ಆದರೆ ಎದುರಿನಲ್ಲಿ ಯಾರನ್ನೂ ಕಾಣದೆ ಶೂನ್ಯವಾದ ಅಂಗಳವನ್ನು ಕಾಣುವಾಗ ಬತ್ತಿ ಹೋದ ಕಣ್ಣುಗಳೊಂದಿಗೆ ಅವಳು ಮರಳಿ ಹೋಗಿ ಕಣ್ಣೀರು ಸುರಿಸುತ್ತಾ ಮಲಗುತ್ತಿದ್ದಳು.!
ಎಲ್ಲಾ ದಿನವೂ ಚಾಚೂ ತಪ್ಪದೆ ದಿಜಿಲದ ತೀರದಲ್ಲಿ ತನ್ನ ಗಂಡನ ಬರುವಿಕೆಯನ್ನು ಕಾದು ಕುಳಿತಳು. ಆದರೆ ತಾನು ಅತಿಯಾಗಿ ನಿರೀಕ್ಷೆಯಿರಿಸಿದ ಕನಸುಗಳು ಹುಸಿಯಾದಾಗ ಅವಳು ಮನೆಯಲ್ಲೇ ನಿಶ್ಯಬ್ದವಾಗಿ ಕುಳಿತಳು..
ಹೀಗೆ ತಿಂಗಳುಗಳು ಉರುಳುತ್ತಾ ಹೋಯಿತು, *ಮಲಿಹ* ಒಂದು ಮುದ್ದಾದ *ಗಂಡು ಮಗುವಿಗೆ* ಜನ್ಮವಿತ್ತಳು!!
ಆದರೆ ಆ ಸಂತೋಷವನ್ನು ಆನಂದಿಸಲೋ ಮೈತುಂಬಿಕೊಳ್ಳಲೋ *ಮಸೂದ್* ಬರಲೇ ಇಲ್ಲ..
ದಿನಗಳು ಉರುಳುತ್ತಾ ಸಾಗುತ್ತಿದ್ದಂತೆ ಮಗುವಿಗೆ ಆರು ತಿಂಗಳಾಯಿತು, ಆ ಕಂದನನ್ನು ತನ್ನ ಎದೆಗೆ ಅಪ್ಪಿ ಹಿಡಿದು ಮಲಿಹ ಗದ್ಗಲಿತಳಾಗಿ ಕೇಳಿದಳು.. *ಕಂದಾ.. ನಿನ್ನ ಅಪ್ಪ ನಮ್ಮನ್ನು ಬಿಟ್ಟು ಎಲ್ಲಿಗೆ ಹೋಗಿರಬಹುದು? ಅವರು ಬಂದು ನಮ್ಮನ್ನು ಪುನಃ ಸೇರಬಹುದಲ್ಲವೇ?!*
ಏನು ತಿಳಿಯದ
ಆ ಚಿನ್ನ ಕಂದಮ್ಮ ತಾಯಿಯ ಮುಖವನ್ನು ನೋಡಿ ಮಂದಹಾಸ ಬೀರಿದನು..
ಆ ಮುಗುಳ್ನಗೆಯು *ಮಲಿಹ*'ಳ ಮನದೊಳಗಿದ್ದ ತನ್ನ ಪ್ರಿಯತಮನ ವೇದನೆಯನ್ನು ತಾತ್ಕಾಲಿಕವಾಗಿ ಮರೆಸುವಂತಿತ್ತು...
ಆ ಕಂದನಿಗೆ *ಆಬಿದ್* ಎಂದು ನಾಮಕರಣ ಮಾಡಲಾಯಿತು.
ಬೆಳಕಿನ ಕಿರಣಗಳು ಭೂಮಿಗೆ ತಾಗುವಷ್ಟು ವೇಗದಲ್ಲಿ ದಿನಗಳು ಕಳೆಯುತ್ತಿದ್ದಂತೆ
*ಆಬಿದ್* ಬೆಳೆಯುತ್ತಾ ಮೆಲ್ಲ ಮೆಲ್ಲನೆ ಅಂಬೆಗಾಲಿಡಲು ಶುರುಮಾಡಿದನು.
ಪಾಪುವಿಗಾದರೆ ಎದೆ ಹಾಲು ಅಲ್ಲದೆ ಕೊಡಲು ಆ ಮನೆಯಲ್ಲಿ ಬೇರೇನೂ ಇರಲಿಲ್ಲ.
ಎದೆಹಾಲು ಕೊಡಬೇಕಾದರೆ
*ಮಲಿಹ* ಆಹಾರ ತಿನ್ನಬೇಕು.
ಹಸಿವಿನಿಂದ ಅಳುತ್ತಿರುವ *ಆಬಿದ್*'ನಿಗೆ ಆ ಮನೆಯಲ್ಲಿ ಯಾವ ಆಹಾರವು ಕೊಡುವುದಕ್ಕೆ ಅವಳಿಂದ ಅಸಾಧ್ಯವೆಂದು ತಿಳಿದಾಗ *ಮಲಿಹ*, ವಯಸ್ಸಾಗಿ ಮಲಗಿರುವ ತನ್ನ ಪ್ರಿಯ ತಂದೆ *ಅದ್ನಾನ್* ರೊಂದಿಗೆ "ಅಪ್ಪ ನನ್ನ ಮುದ್ದು ಕಂದ ಹಸಿವಿನಿಂದ ಮಲಗಿ ಬೆಳೆಯಬೇಕಾದವನಲ್ಲ. ಇವನಿಗೆ ಹಾಲು ಮಾತ್ರವಾಗಿದೆ ಆಹಾರ.. ನನಗೆ ಅನ್ನ ತಿನ್ನಲು ಇಲ್ಲದಿದ್ದರಿಂದ ದೈಹಿಕವಾಗಿ ಕ್ಷೀಣಿಸುತ್ತಾ ಹೋಗುತ್ತಿದ್ದೇನೆ.. ಆದ್ದರಿಂದ ಆಹಾರವೇನನ್ನೂ ತಿನ್ನದೆ ಮಗುವಿಗೆ ಎದೆಹಾಲು ಕೊಡವುದು ಕಷ್ಟಕರವಾದ ಪರಿಸ್ಥಿತಿಯಾಗಿದೆ" ಎಂದು ಬಹಳ ಬೇಸರದಿಂದ ನುಡಿದಳು...
ಅದರಿಂದ ನನ್ನ ಪ್ರೀತಿಯ ಅಪ್ಪ⤵
ಮುಂದುವರಿಯುವುದು
✍ *ಗಫೂರ್ ಬಾಯಾರ್*
+974 6669 3010
*ಸಹಾಯ: ಅಕ್ಬರ್ ಪಿ.ಎ.*
🛡🛡🛡🛡🛡🛡🛡
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment