Tuesday, September 26, 2017

☪ಸೌದಿಯಲ್ಲೊಂದು ಭಾರತೀಯರ ಮಸ್ಜಿದ್☪



ಸೌದಿ ಆರಬಿಯಾದ ತ್ವಾಯಿಫ್ ನಲ್ಲಿ ನೆಲೆಗೊಳ್ಳುವ "ಮಸ್ಜಿದುಲ್ ಹುನೂದ್" ಭಾರತೀಯರ ಮಸ್ಜಿದಾಗಿದೆ. ಈ ಮಸೀದಿಯ ಹತ್ತಿರದಲ್ಲಿ ಹೋದರೆ ಅಲ್ಲಿ ಕಾಣಸಿಗುವ ಸ್ವದೇಶಿಗಳು ಕೇಳುವರು ನೀವು ಭಾರತಿಯರಾ..?
ನಾವು ಹೌದು ಎಂದರೆ  ಅವರು ಮಸೀದಿಯನ್ನು ತೋರಿಸುತ್ತಾ ನಮ್ಮಲ್ಲಿ ಹೇಳುವರು ಅದು ನಿಮ್ಮ
ದೇಶದವರ ಮಸ್ಜಿದಾಗಿದೆ ಎಂದು..!!

ಅದೇ ಕೇರಳದ ಮಲಬಾರಿನ ಮಕ್ಕಾ ಎಂದೇ ಪ್ರಸಿದ್ಧಿ ಹೊಂದಿದ ಪೊನ್ನಾನಿಯ ಸಮೀಪದ ಪ್ರದೇಶವಾದ ವೇಳಿಯಂಕೋಡ್'ನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ  ವಲಿಯುಲ್ಲಾಹಿ ಉಮ್ಮರ್ ಖಾಝಿ (ರ.ಅ) ರವರಾಗಿದ್ದಾರೆ
ಈ ಮಸ್ಜಿದನ್ನು  ನಿರ್ಮಿಸಿದವರು.

ಇದರ ಕುರಿತು ಓದಿ ತಿಳಿದ ನನಗೆ ಇದರ ಕುರಿತು ಬರೆಯಬೇಕೆಂಬ ಆಗ್ರಹ ಮನದಲ್ಲಿ ಮೂಡಿತು.

 ಸೌದಿಯ ಜಿದ್ದಾದಿಂದ ಸುಮಾರು 180 ಕಿ.ಮೀ ದೂರವಿರುವ ಸ್ಥಳವಾಗಿದೆ ತ್ವಾಯಿಫ್.
ನಾನು ಓದಿ ತಿಳಿದ ಇದರ ನಿರ್ಮಾಣ ಚರಿತ್ರೆ ಕೆಲವರಿಗೆ ನಂಬಲಸಾಧ್ಯವಾಗಬಹುದು.!!!!
ಆದರೆ ನನಗೆ ದೃಢ ವಿಶ್ವಾಸ ಮನಸ್ಸಲ್ಲಿ ಅಚಲವಾಗಿರುವುದರಿಂದ ಈ ಚರಿತ್ರೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ..

🕌 ಖುತುಬುಝ್ಝಮಾನ್ ಮಂಬುರಮ್ ತಂಙಳ್  (ರ.ಅ)ರವರ ಶಿಷ್ಯರಾಗಿದ್ದಾರೆ ಉಮ್ಮರ್ ಖಾಝಿ (ರ.ಅ) ಮತ್ತು ಬೈತ್ತಾರ್ ಮುಸ್ಲಿಯಾರ್ (ರ.ಅ) ಒಂದು ಸಂದರ್ಭದಲ್ಲಿ ಉಮ್ಮರ್ ಖಾಝಿ (ರ.ಅ)ರವರು  ಒಂದು ಮಸ್ಜಿದ್ ನಿರ್ಮಿಸುವಂತಹ ಆಗ್ರಹ ವ್ಯಕ್ತಪಡಿಸಿ ಅದಕ್ಕೆ ಬೇಕಾಗಿ ಜನರಿಂದ ಹಣ ಸಂಗ್ರಹ ಮಾಡಿದರು. ಆದರೆ ತನ್ನ ಸಮೀಪದ ಯಾವುದೇ ಪ್ರದೇಶದಲ್ಲಿಯೂ ಒಂದು ಮಸೀದಿಯ ನಿರ್ಮಾಣವಾಗುತ್ತಿರುವುದನ್ನು ಕಾಣಲು ಸಾಧ್ಯವಾಗಲಿಲ್ಲ.. ಬೈತ್ತಾರ್ ಮುಸ್ಲಿಯಾರ್ (ರ.ಅ) ಈ ವಿಷಯವನ್ನು ಮಂಬುರಮ್ ತಂಙಳ್ ರವರ (ರ.ಅ) ಹತ್ತಿರ ಸೂಚನೆಯಾಗಿ ಹೇಳಿದ್ದರು. ಉತ್ತರವಾಗಿ ತಂಙಳ್ ರವರು (ರ.ಅ) ಮುಸ್ಲಿಯಾರ ಹತ್ತಿರ ಆ ವರ್ಷದ ಹಜ್ಜ್ ಕರ್ಮ  ನಿರ್ವಹಿಸಲು ಹೋಗಿ ಎಂದು ನಿರ್ದೇಶಿಸಿದರು. ಗುರು ಆಜ್ಞೆ ಅನುಸರಿಸಿ ಮರು ಮಾತನಾಡದೆ ಮುಸ್ಲಿಯಾರರು ಆ ವರ್ಷವೇ ಹಜ್ಜಿಗೆ ಹೊರಟರು. ಯಾತ್ರೆ ಮಧ್ಯೆ ಸಂಘದಿಂದ ಬೇರ್ಪಟ್ಟು ಒಂಟಿಯಾದ ಮುಸ್ಲಿಯಾರರು ಅಲೆದು ಕೊನೆಗೆ ತ್ವಾಯಿಫಿಗೆ ತಲುಪಿದರು. ಅಲ್ಲೊಂದು ಮಸೀದಿ ನಿರ್ಮಾಣವಾಗುವುದು ನೋಡಿದ ಬೈತ್ತಾರ್ ಮುಸ್ಲಿಯರರು (ರ.ಅ) ಅಲ್ಲಿಗೆ ಹೋಗಿ ವಿಚಾರಿಸಿದಾಗ ಮುಸ್ಲಿಯಾರರ ಹತ್ತಿರ ಅಲ್ಲಿರುವ ಕೆಲಸದವರು "ಇದು ಭಾರತಿಯರಾದ ಉಮ್ಮರ್ (ರ.ಅ) ಎಂಬ ಒರ್ವರಾಗಿದ್ದಾರೆ ಕೆಲಸ ಮಾಡಿಸುವುದೆಂದು..,
ಎಲ್ಲಾ ವಾರದಲ್ಲಿಯೂ, ಕೆಲಸದ ಕೂಲಿ ನೀಡಲು ಅವರು ಇಲ್ಲಿಗೆ ಬರುತ್ತಾರೆಂದು ಹೇಳಿದರು." ಆವಾಗ ಬೈತ್ತಾರ್ ಮುಸ್ಲಿಯಾರರಿಗೆ (ರ.ಅ) ಅರಿವಾಯಿತು ಇದು ಉಮ್ಮರ್ ಖಾಝಿಯವರು (ರ.ಅ) ಹಣ ಸಂಗ್ರಹಿಸಿರುವುದು ಹಾಗೂ ಮಂಬುರಮ್ ತಂಙಳ್ ರವರು (ರ.ಅ) ನನ್ನನ್ನು ಹಜ್ಜ್'ಗೆ ಹೋಗಲು ಹೇಳಿದ ರಹಸ್ಯ.

🔴NB..
ಈ ಚರಿತ್ರೆ ಬಾಯಿ ಮಾತಾಗಿ ಕಾಲ ಕ್ರೆಮೇಣ ಬಂದಿರುವುದಾಗಿದೆ!!
ಎಂದು ಲೇಖಕರು ಬರೆದಿಟ್ಟಿದರು. ಆದರಿಂದ್ದ ಇದರ ಸನದು ಕೇಳಿ ಯಾರು ಸಮೀಪಿಸಬಾರದು.
(ಈ ಚರಿತ್ರೆಯನ್ನು ನಮ್ಮ ಉಸ್ತಾದರು ಪ್ರಭಾಷಣಗಳಲ್ಲಿ ಕೂಡ ಹೇಳಿರುತ್ತಾರೆ), ವಿಶ್ವಾಸ ಇಲ್ಲದವರು ನಂಬುವುದು ಬೇಡ. ಅದು ನಿಮಗೆ ಬಿಟ್ಟ ವಿಷಯ!! ನಾನಂತೂ ಇದು ನಿಜ ಎಂದು ಸಂಪೂರ್ಣವಾಗಿ ನಂಬಿದ್ದೇನೆ..

 ವಿಶ್ವಾಸವು ಇದೆ.. ಕಾರಣ ಅಲ್ಲಾಹುವಿನ ಇಷ್ಟ ದಾಸರಾದ ಮಹಾನರ ಪಟ್ಟಿಯಲ್ಲಿದ್ದವರಾಗಿದ್ದರು ಉಮ್ಮರ್ ಖಾಝಿಯವರು (ರ.ಅ). ಮಾತ್ರವಲ್ಲ,
☄ಸ್ವಲ್ಲಲ್ ಇಲಾಹು☄ ಎಂಬ ಪ್ರಸಿದ್ದ ಪ್ರವಾದಿ ಪ್ರೇಮ ಕಾವ್ಯ ಆಲಾಪಿಸಿ ಪರಿಶುದ್ದ ರೌಳಾ ಶರೀಫಿನ ಪ್ರೆವೇಶ ದ್ವಾರವನ್ನು ತೆರೆಹಿಸಲು, ಅವರಿಗೆ ಅಷ್ಟು ಶ್ರೇಷ್ಠತೆ ಕೊಟ್ಟು ಅಲ್ಲಾಹು ಅನುಗ್ರಹಿಸಿದರಾಗಿದ್ದಾರೆ ಆಶಿಕ್ ರಸೂಲ್ (ﷺ) ಉಮ್ಮರ್ ಖಾಝಿಯವರು (ರ.ಅ). ಅಲ್ಲಾಹು ಉದ್ದೇಶಿಸಿದರೆ ಅವನ ಅಡಿಯಾಳನ್ನು ಅವನು ಉದ್ದೇಶಿಸುವ ಸ್ಥಳಕ್ಕೆ ತಲುಪಿಸಲು ಅವನಿಗೆ ಯಾವುದೇ ಪ್ರಯಾಸವಿಲ್ಲವೆಂದು ಬಲವಾಗಿ ವಿಶ್ವಾಸ ಹೊಂದಿರುವ ವಿಶ್ವಾಸಿಗೆ ಮೇಲಿನ ಚರಿತ್ರೆಯಲ್ಲಿ ಏನು ಅದ್ಬುತವಾಗಿ ಕಾಣಲ್ಲ...!!!

ಏನಾದರೂ ಒಂದೊಂದು ಭಾರತೀಯರಿಗೂ, ಆದರಿಂದ್ದ ಹೆಚ್ಚಾಗಿ ಒಂದೊಂದು ಉಮ್ಮರ್ ಖಾಝಿಯವರ (ರ.ಅ) ಅನುಯಾಯಿಗಳಿಗೂ ಅಭಿಮಾನವಾಗಿದೆ ತ್ವಾಹಿಫಿನ ಮಸ್ಜಿದುಲ್ ಹುನೂದ್.!!!

NB..
ಉಮ್ಮರ್ ಖಾಝಿಯವರ (ರ.ಅ) ಹೆಸರಿನಲ್ಲಿ ಮಕ್ಕಾದಲ್ಲಿ  ಈಗಲೂ ಕೂಡಾ ಒಂದು ರಸ್ತೆ ಇದೆ. ಮಕ್ಕಾದಿಂದ ತ್ವಾಯಿಫ್'ಗೆ ಹೋಗುವ ಮಾರ್ಗದಲ್ಲಿ ಸುಮಾರು 12 ಕಿ.ಮೀ ಕ್ರಮಿಸಿದಾಗ ಬಲಬದಿಯಲ್ಲಿ ದೊಡ್ಡದಾಗಿ ಬೋರ್ಡ್ ಕಾಣ ಸಿಗುತ್ತದೆ, "ಉಮರ್ ಗಾಝಿ
(ಉಮರ್ ಖಾಝಿ)  ಸ್ಟ್ರೀಟ್".
 ಮಕ್ಕಾಕ್ಕೆ ಹೋದರೆ ನಿಮಗೂ ನೋಡಬಹದು 😊

✍ಗಫೂರ್ ಬಾಯಾರ್

No comments:

Post a Comment