🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
*ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 1⃣5⃣
➖➖➖➖➖➖➖➖➖
ಮರಣ ಹೊಂದಿ⤵
ನಿಶ್ಚಲವಾಗಿ ಮಲಗಿರುವ *ಮಲಿಹ'*ಳ ಎದೆಯ ಮೇಲೆ ಯಾವುದರ ಪರಿವೆಯೇ ಇಲ್ಲದ *ಆಬಿದ್* ಹತ್ತಿ ಕುಳಿತು ಹಸಿವು ನೀಗಿಸಲು ಹಾಲು ಕುಡಿಯುವ ಹೃದಯ ವಿದ್ರಾವಕ ದೃಶ್ಯವನ್ನು ಕಂಡ *ಫರ್ಹನಾಝ್'*ನ ಮನಸ್ಸು ಮೇಣ ಕರಗಿದಂತಾಯಿತು..
*ಫರ್ಹನಾಝ್* ಓಡಿ ಹೋಗಿ *ಆಬಿದ್'*ನನ್ನು ಎತ್ತಿಕೊಂಡು ಬಿಕ್ಕಳಿಸಿ ಅಳುತ್ತಾ ಹೇಳಿದಳು *"ಕಂದಾ.. ನಿನ್ನ ತಾಯಿ ನಿನ್ನನ್ನು ಬಿಟ್ಟು ಹೋದರು.."*
ಅವಳು ಹೊರಗೆ ಓಡಿ ಹೋಗಿ ಮಲಿಹ ಮೃತ್ಯುವಾದ ವಿಷಯವನ್ನು ಎಲ್ಲರಿಗೂ ತಿಳಿಸಿದಳು. ನೆರೆಕರೆಯವರು ಓಡಿ ಬಂದು ಕೆಲವೇ ಸಮಯದೊಳಗೆ *ಮಲಿಹ'*ಳ ಮೃತ ದೇಹವನ್ನು ವಿಧಿ ವಿಧಾನದ ಅಡಿಸ್ತಾನದಡಿಯಲ್ಲಿ ದಫನ ಮಾಡಿದರು.
*ಮಲಿಹ'*ಳ ನಿಷ್ಚಲವಾದ ಶರೀರವನ್ನು ದಫನ ಮಾಡುವಾಗ *ಆಬಿದ್* ಫರ್ಹನಾಸ್'ನ ತೋಳಲ್ಲಿ ಮಲಗಿ ನಿದ್ರಿಸುತ್ತಿದ್ದನು.
ತಬ್ಬಲಿಯಾದ ಈ ಮಗುವನ್ನು ನೀನು ಏನು ಮಾಡುತ್ತೀಯಾ?
ಎಂಬ ಊರವರ ಪ್ರಶ್ನೆಗಳ ಸುರಿಮಳೆಗೆ ಫರ್ಹನಾಝ್ *ಇಂದಿನಿಂದ ಈ ಮಗುವಿನ ತಾಯಿ ನಾನಾಗಿದ್ದೇನೆ.!!* ಎಂದು ಖಡಕ್ಕಾದ ಉತ್ತರವನ್ನು ಹೇಳಿದಾಗ ಊರವರು ಅಲ್ಲಿಂದ ಕಾಲ್ಕಿತ್ತರು..
ಅಬೂ ಇಯಾಝ್ ಮಗಳನ್ನು ಹತ್ತಿರಕ್ಕೆ ಕರೆದು *" ಮಗಳೇ ನೀನು ಒಬ್ಬಳು ಮದುವೆ ಪ್ರಾಯವಾದ ಹೆಣ್ಣಾಗಿದ್ದಿಯ..! ಇನ್ನೊಬ್ಬರ ಮನೆಗೆ ಮದುಮಗಳಾಗಿ ಹೋಗಬೇಕಾದ ಹೆಣ್ಣಾಗಿದ್ದೀಯ..! ಈ ಮಗು ನಿನಗೆ ಕಂಟಕವಾಗಬಹುದು. ಹಾಗಾಗಿ ಮಗಳೇ ನಾವು ಉಮಾರದವರೆಗೆ ಹೋಗಿ ಅಲ್ಲಿ ಮಲಿಹ'ಳ ತಂದೆಯ ಕೈಗೆ ಈ ಮಗನನ್ನು ಮರಳಿಸೋಣ.."* ಎಂದರು..
*ಫರ್ಹಾನಾಝ್:* ಬೇಡ, *ಮಲಿಹ* ಕೊನೆಯುಸಿರೆಳೆಯುವ ಮೊದಲು ಹೇಳಿದ ಮಾತನ್ನು ನಾನು ಪಾಲಿಸದಿದ್ದರೆ ನಾನು ವಿಶ್ವಾಸಕ್ಕೆ ದ್ರೋಹ ಬಗೆದಂತೆ,
ಅದರಿಂದ್ದ ನನಗೆ ಕೊಟ್ಟ ಮಾತನ್ನು ಪಾಲಿಸಬೇಕು..
*ಅಬೂ ಇಯಾಝ್:* ಏನು.. ಆ.. ಮಾತು? ಅದೇನು?
*ಫರ್ಹನಾಝ್:* ಯಮಾಮದಲ್ಲಿ *ಮಸೂದ್'*ನ ತಂದೆ ಮುಸೈಲಿಮನ ಮನೆಗೆ ಹೋಗಬೇಕು.
ಅವರು ಯಾರೂ *ಮಲಿಹ'*ಳನ್ನು ನೋಡದವರಾದ್ದರಿಂದ ನನ್ನನ್ನು ಗುರುತಿಸಲಿಕ್ಕಿಲ್ಲ. *ಮಲಿಹ* ಎಂಬ ನಕಲಿ ಹೆಸರಿನೊಂದಿಗೆ ನನಗೆ ಅಲ್ಲಿಗೆ ಹೋಗಬೇಕು. *ಆಬೀದ್*ನಿಗೆ ಲಭಿಸಬೇಕಾದ ಸವಲತ್ತುಗಳನ್ನು ಸಂಪೂರ್ಣವಾಗಿ ತೆಗೆದು ಕೊಡಬೇಕೆಂದು ನಿರ್ದೇಶಿಸಿ ಮಲಿಹ ಮರಣ ಹೊಂದಿರುವುದು..!!
ಆಗ ಅಬೂ ಇಯಾಝ್ ನಗು ಮುಖದಿಂದಲೇ *"ನನ್ನ ಪ್ರೀತಿಯ ಮಗಳೇ, ನೀನು ಹೋಗಲಿರುವ ಮನೆಯವರಾದ ಮುಸೈಲಿಮತು ಸಮಾಮ ಯಾರೆಂದು ನಿನಗೆ ಗೊತ್ತಾ.?"*
*ಫರ್ಹನಾಝ್:* ಮಸೂದ್'ನ ಪಿತರಾಗಿದ್ದಾರೆ.
*ಅಬೂ ಇಯಾಝ್:* ಅದು ಹೌದು, ಇದಲ್ಲದೆ ಇನ್ನೊಂದು ವಿಷಯವಿದೆ. ಆ ಕಥೆಯನ್ನು ಹೇಳುತ್ತೇನೆ ಕೇಳು.." 👇
*ಮುಸೈಲಿಮ* ಅಲ್ಲಾಹನ ಪ್ರವಾದಿ ಮುತ್ತು ರಸೂಲ್ ﷺ ರವರು ಜೀವಿಸುತ್ತಿದ್ದ ಕಾಲದಲ್ಲಿ ನಬಿ ﷺ ಅವರಿಗೆ ಒಂದು ಪತ್ರ ಬರೆದಿದ್ದಾನೆ.
ಆ ಪತ್ರದಲ್ಲಿ ಹೀಗಿತ್ತು
👇👇
{ *..ಮುಹಮ್ಮದ್ (ﷺ) ಈ ಲೋಕವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಈ ಲೋಕವನ್ನು ಸೃಷ್ಟಿಸಿದವನು ಎರಡಾಗಿದ್ದಾನೆ. ಒಂದು ಲೋಕದ ಪ್ರತಿನಿಧಿ ಮತ್ತು ಪ್ರವಾದಿ ತಾವಾಗಿದ್ದೀರಿ. ಇನ್ನೊಂದು ಭಾಗದ ಪ್ರತಿನಿಧಿ ಹಾಗು ಪ್ರವಾದಿ ನಾನಾಗಿರುತ್ತೇನೆ. ಮಕ್ಕದಲ್ಲಿ ಜನಿಸಿ, ಮದೀನದಲ್ಲಿ ಜೀವಿಸುತ್ತಿರುವ ಮುಹಮ್ಮದ್ (ﷺ) ನೀವು ಅಲ್ಲಿಯ ಪ್ರವಾದಿಯಾಗಿದ್ದೀರಿ. ಯಮಾಮದ ಪ್ರವಾದಿ ನಾನಾಗಿದ್ದೇನೆ.!ಯಮಾಮಕ್ಕೆ ಒಬ್ಬ ದೂತನನ್ನೂ ಕಳುಹಿಸಬೇಡ. ಓರ್ವ ಪ್ರಬೋದನೆಗಾರನ್ನು ಇಲ್ಲಿಗೆ ರವಾನಿಸಬೇಡ.!ಯಮಾಮದ ಪ್ರವಾದಿಯಾಗಿ ಸೃಷ್ಟಿಕರ್ತ ನಿಯೋಜಿಸಿರುವುದು ನನ್ನನ್ನಾಗಿದೆ..}*
ನಬಿ (ﷺ) ರವರ ಕಾಲದಲ್ಲಿಯೇ ಕಳ್ಳ ಪ್ರವಾದಿಯಾಗಿ ರಂಗ ಪ್ರವೇಶಗೈದವನಾಗಿದ್ದಾನೆ *ಮುಸೈಲಿಮ*
ಈ ಓಲೆಯನ್ನು ನೆಬಿ (ﷺ) ರವರು ಓದಿ ತನ್ನ ಸಭೆಯಲ್ಲಿರುವ ಪತ್ರ ಬರೆಯುವವರನ್ನು ಕರೆದು ಉತ್ತರ ಬರೆಯಲು ಹೇಳಿದ್ದರು.
ಬಿಸ್ಮಿಯಿಂದ ಆರಂಭಿಸುವ ಪತ್ರದ ವಿಷಯವನ್ನು ನೆಬಿ (ﷺ)ಅವರು ಹೇಳಿ ಕೊಟ್ಟರು.
ಮುಸೈಲಿಮಗೆ.. ⤵
ಮುಂದುವರಿಯುವುದು..
✍ ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment