Wednesday, November 8, 2017

💫💫💫💫💫💫💫💫💫💫
*ಉಮ್ಮಿಯ್ಯ್ ಗೆ ಅರ್ಥ ನೀಡಿದ ಅನ್ಪಡ್ ಮೌಲವಿ!!*
_*ಪೈಗಂಬರರು ಅನಕ್ಷರಸ್ತರೇ?*_
*•••••••••••••••••••••••••••••••••••••••••••*
ಭಾಗ--1

📝 *ಮುನೀರ್ ಸಖಾಫಿ,ಸಾಲೆತ್ತೂರು*

*ತಸ್ಲೀಮ್* ಚೊಂಬುಗುಡ್ಡೆ (ಕುಂಬುಮಂಡೆ)ಯಾನೆ ಅನ್ಪಡ್  ಮೌಲವಿ ಪ್ರವಾದೀ ﷺರು ಅಬೂಜಹ್ಲ್ , ಉತ್'ಬತ್,ಶೈಬತ್ ಎಂಬರಿಗಿಂತಲೂ ಜ್ಞಾನ ಕಡಿಮೆಯಿದ್ದವಾರಾಗಿದ್ದರೆಂದು ಹೇಳಿದ ಒಂದು ಆಡಿಯೋ ಕೇಳಲು ಸಾಧ್ಯವಾಯಿತು.ಅದೇ ಮೌಲವಿ ಬೇರೊಂದು ಆಡಿಯೋದಲ್ಲಿ ಅಬೂಜಹ್ಲ್ ಗಿಂತಲೂ ಹೆಚ್ಚು ಜ್ಞಾನ ನನಗಿದೆಯೆಂದೂ ಹೇಳುತ್ತಾನೆ.
ಈ ಎರಡು ವಾಯ್ಸ್ ನಿಂದ ತಸ್ಲೀಮ್ ಎಂಬ ಅಜ್ಞಾನಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗಿಂತ ಹೆಚ್ಚು ಜ್ಞಾನವಿರುವವನೆಂದು ಹೇಳಿದಂತಾಯಿತು.
معاذ الله

ಪ್ರವಾದೀ ಪೈಗಂಬರರಿಗೆ ಜ್ಞಾನವಿರಲಿಲ್ಲ ಎಂಬ ವಿಷಯ ಆತ ಖುರ್'ಆನ್  ನಲ್ಲಿದೆ ಎಂದು ಹೇಳಿದ್ದಾನೆ.ಅದಕ್ಕಾಗಿ ಖುರ್'ಆನ್ ನಲ್ಲಿರುವುದೇನು ಎಂದು ವಿವರಿಸಲು ಈ ಲೇಖನವನ್ನು ಬರೆಯುತ್ತಿದ್ದೇನೆ.
ربنا تقبل منا انك انت السميع العليم
---------------------------------------------------------
ಪವಿತ್ರ ಖುರ್'ಆನಿನ ಅಂಕಬೂತ್ ಅಧ್ಯಾಯದ 48 ನೇ ಸೂಕ್ತ

 وَمَا كُنتَ تَتْلُو مِن قَبْلِهِ مِن كِتَابٍ وَلَا تَخُطُّهُ بِيَمِينِكَ ۖ إِذًا لَّارْتَابَ الْمُبْطِلُونَ
ತಾವು ಮುಂಚೆ ಗ್ರಂಥವನ್ನು ಓದಿದವರು ಅಲ್ಲ.ಬಲ ಕೈಯಿಂದ ಬರೆದವರೂ ಅಲ್ಲ.
ಒಂದು ವೇಳೆ ಓದು-ಬರಹ ತಿಳಿದವರಾಗುತ್ತಿದ್ದರೆ ಈ ಖುರ್'ಆನ್ ಗ್ರಂಥವು ತಾವು ಅದರಿಂದ ಓದಿ ತಯಾರು ಮಾಡಿದವೆಂದು  ಸತ್ಯ ನಿಷೇಧಿಗಳು ಹೇಳುತ್ತಿದ್ದರು.(ಅಂಕಬೂತ್ 48)
ಈ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮ್ ಖುರ್ತುಬೀ (ರ) ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಓದು- ಬರಹ ತಿಳಿದಿದ್ದರು ಎಂಬುವುದಕ್ಕೆ ಹಲವಾರು ಹದೀಸ್ ಗಳು ವರದಿ ಮಾಡಿ ನಂತರ  ಹೇಳುತ್ತಾರೆ,

قلت : وقع في صحيح مسلم من حديث البراء في صلح الحديبية أن النبي صلى الله عليه وسلم قال لعلي : اكتب الشرط بيننا : بسم الله الرحمن الرحيم هذا ما قاضى عليه محمد رسول الله . فقال له المشركون : لو نعلم أنك رسول الله تابعناك - وفي رواية : بايعناك - ولكن اكتب محمد بن عبد الله فأمر عليا أن يمحاها ، فقال علي : والله لا أمحاها . فقال رسول الله صلى الله عليه وسلم : أرني مكانها فأراه فمحاها ، وكتب : ابن عبد الله [ . . . . الحديث ] قال علماؤنا رضي الله عنهم : وظاهر هذا أنه عليه السلام محا تلك الكلمة التي هي رسول الله - صلى الله عليه وسلم - بيده وكتب مكانها : ابن عبد الله . وقد رواه البخاري بأظهر من هذا فقال : فأخذ رسول الله صلى الله عليه وسلم الكتاب فكتب . وزاد في طريق أخرى : ولا يحسن أن يكتب ، فقال جماعة بجواز هذا الظاهر عليه وأنه كتب بيده ، منهم السمناني وأبو ذر والباجي ، ورأوا أن ذلك غير قادح في كونه أميا ، ولا معارض بقوله : وما كنت تتلو من قبله من كتاب ولا تخطه بيمينك ولا بقوله : إنا أمة أمية لا نكتب ولا نحسب بل رأوه زيادة في معجزاته واستظهارا على صدقه وصحة رسالته ; وذلك أنه كتب من غير تعلم لكتابة ولا تعاط لأسبابها ، وإنما أجرى الله تعالى على يده وقلمه حركات كانت عنها خطوط مفهومها : ابن عبد الله لمن قرأها ، فكان ذلك خارقا للعادة ; كما أنه عليه السلام علم علم الأولين والآخرين من غير تعلم ولا اكتساب فكان ذلك أبلغ في معجزاته وأعظم في فضائله ولا يزول عنه اسم الأمي بذلك
(قرطبي 13/352)
ಈ ಹೇಳಿದ್ದು   ಅವರು ಉಮ್ಮಿಯ್ಯ್ ಆಗಿದ್ದರೆಂದು ಹೇಳಿದ್ದಕ್ಕೆ ವಿರೋಧವಲ್ಲ.
ಕಾರಣ ಅವರು ಬರೆದದ್ದು ಅವರ ಮುಅಜಿಝ್'ತ್ ನಿಂದಾಗಿತ್ತು.
ಅವರು ಒಬ್ಬರು ಗುರುವಿನ ಬಳಿ ಕಲಿಯದೆ , ಬರಹದ ಯಾವುದೇ ಮಾಧ್ಯಮವನ್ನು ಸ್ವೀಕರಿಸದೆ  ಅವರು ಬರೆದರು.ಅದು ಅಲ್ಲಾಹನು ಅವರಿಗೆ ಪವಾಡವಾಗಿ ನೀಡಿದ ಶಕ್ತಿಯಾಗಿತ್ತು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಯದೇ ಪೂರ್ವೀಕರ ಮತ್ತು ನಂತರದವರ ಎಲ್ಲಾ ಜ್ಞಾನಗಳನ್ನೂ ಕರಗತ ಮಾಡಿದವರಾಗಿದ್ದಾರೆ.ಅದು ಅವರ ಮಹತ್ವ ಮತ್ತು ಮುಅಜಿಝತ್ ಆಗಿದೆ.
(ಖುರ್ತುಬಿ 13/352)
--------------------------------------------------------
ನೂತನವಾದಿಗಳ ಅಂಗೀಕೃತ ನಾಯಕ ಆಲೂಸೀ ಬರೆಯುವುದು ನೋಡಿ,

ويشهد للكتابة أحاديث,
في صحيح البخاري وغيره كما ورد في صلح الحديبية فأخذ رسول الله صلى الله تعالى عليه وسلم الكتاب وليس يحسن يكتب فكتب هذا ما قاضى عليه محمد بن عبد الله الحديث
، وممن ذهب إلى ذلك أبو ذر عبد بن أحمد الهروي، وأبو الفتح النيسابوري، وأبو الوليد الباجي من المغاربة، وحكاه عن السمناني، وصنف فيه كتابا، وسبقه إليه ابن منية، ولما قال أبو الوليد ذلك طعن فيه ورمي بالزندقة وسب على المنابر ثم عقد له مجلس فأقام الحجة على مدعاة وكتب به إلى علماء الأطراف فأجابوا بما يوافقه، ومعرفة الكتابة بعد أميته صلّى الله عليه وسلم لا تنافي المعجزة بل هي معجزة أخرى لكونها من غير تعليم،
(روح المعاني )

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಬರೆದಿದ್ದರು ಎಂಬುವುದಕ್ಕೆ ಹುದೈಬಿಯ್ಯ ಒಪ್ಪಂದದ ವೇಳೆ  "ಹಾಝಾ ಮಾ ಖಾಳ ಅಲೈಹಿ ಮುಹಮ್ಮದ್ ಇಬ್ನ್ ಅಬ್ದಿಲ್ಲ " ಎಂದು ಪ್ರವಾದೀ  ﷺ
ಬರೆದರು  ಎಂಬ ಇಮಾಮ್ ಬುಖಾರಿ ಮತ್ತು ಇತರರು ವರದಿ ಮಾಡಿದ ಹದೀಸ್ ಆಧಾರವಾಗಿದೆ.
ಈ ಅಭಿಪ್ರಾಯವನ್ನು ಅಬೂದ್ಸರ್ರ್ ಅಬ್ದುರ್ರಹ್ಮಾನ್ ಬಿನ್ ಅಹ್'ಮದ್ ಅಲ್ ಹರ್ವೀ,ಅಬುಲ್ ಫತ್'ಹ್ ಅನ್ನೈಸಾಬೂರೀ,ಅಬುಲ್ ವಲೀದ್ ಅಲ್ ಬಾಜೀ ಮುಂತಾದ ಗಣ್ಯರು ಹೇಳಿದ್ದಾರೆ.ಅಬುಲ್ ವಲೀದ್ ಅಲ್ ಬಾಜಿ ಯವರು ಈ ವಿಷಯವನ್ನು ಪ್ರಸ್ತಾಪಿಸಿದಾಗ ಅವರ ವಿರುದ್ಧ ಆಕ್ಷೇಪಗಳು ಬಂದವು.ಅವರನ್ನು ಅಂದಿನ ಅಮೀರ್ ಕರೆಯಿಸಿ ಇದರ ಬಗ್ಗೆ ಕೇಳಿದಾಗ ಅದಕ್ಕೆ (ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಬರೆದಿದ್ದರು ಎಂಬುವುದಕ್ಕೆ )ಹಲವಾರು ಆಧಾರಗಳನ್ನು ನೀಡಿದರು.ನಂತರ ಆ ಕಾಲದಲ್ಲಿದ್ದ ವಿದ್ವಾಂಸರೊಂದಿಗೆ ಇದನ್ನು ಚರ್ಚಿಸಿದಾಗ ಅವರೆಲ್ಲರೂ ಒಕ್ಕೂರಲಿನಿಂದ ಇದನ್ನು ಅಂಗೀಕರಿಸಿದರು.
ಅವರು ಉಮ್ಮಿಯ್ಯ್ ಎಂದು ಹೇಳಿರುವುದರಿಂದ 'ಬರೆದರು' ಎಂದು ಹೇಳುವುದು ಒಮ್ಮೆಯೂ ವೈರುಧ್ಯವಲ್ಲ.ಕಾರಣ ಅವರ ಬರಹವು  ಕಲಿಕೆಯಿಂದ ಲಭಿಸಿದ್ದಲ್ಲ.ಹೊರತು ಮುಅಜಿಝತ್ ನಿಂದಾಗಿದೆ.
(ರೂಹುಲ್ ಮಆನಿ )
----------------------------------------------------------

ಇಮಾಮ್ ಇಬ್ನ್ ಅಜೀಬ ಹೇಳುತ್ತಾರೆ;

 وكونه صلى الله عليه وسلم أُمياً كَمَالٌ في حقه صلى الله عليه وسلم، مع كونه أمياً أحاط بعلوم الأولين والآخرين، وأخبر بقصص القرون الخالية والأمم الماضية، من غير مدارسة ولا مطالعة، وهو، مع ذلك، يُخبر بما مضى، وبما يأتي إلى قيام الساعة، وسرد علم الأولين والآخرين مما لا يعلم القصة الواحدة منها إلا الفاذ من أحبارهم، الذي يقطع عمره في مدارسته وتعلمه،..........
فكانت أميته صلى الله عليه وسلم وَصْفَ كمال في حقه، ومعجزةً دالة على نبوته لأنه صلى الله عليه وسلم، مع كونه أُمياً، ظهر عليه من العلوم اللدنية، والأسرار الربانية.
 (البحر المديد 5/484)

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಮ್ಮಿಯ್ಯ್ ಎಂಬುವುದು ಅವರ ಪರಿಪೂರ್ಣತೆಯಾಗಿದೆ.(ಕೊರತೆಯಲ್ಲ).ಕಾರಣ ಉಮ್ಮಿಯ್ಯ್ ಆಗಿದ್ದು ಕೊಂಡು ಪೂರ್ವೀಕರ ಮತ್ತು ನಂತರದವರ ಎಲ್ಲಾ ಜ್ಞಾನ ಅವರಲ್ಲಿತ್ತು.ಅವರು ಒಮ್ಮೆಯೂ ಕಲಿತು ಈ ಜ್ಞಾನ ಲಭಿಸಿದ್ದಲ್ಲ.ಹೊರತು ಮುಅಜಿಝತ್ ಮೂಲಕ ಲಭಿಸಿದವು ಆಗಿದೆ.
(ಅಲ್ ಬಹ್ರುಲ್ ಮದೀದ್ 5/484)
---------------------------------------------------------
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಮ್ಮಿಯ್ಯ್ ಎಂದು ಹೇಳಿದರೆ ಅನಕ್ಷರಸ್ಥರು ಎಂಬ ಅರ್ಥದಿಂದ ಹೇಳಿದ್ದಲ್ಲ.
ಅವರು ಒಬ್ಬರು ಗುರುವಿನ ಬಳಿ ತೆರಳಿ ಓದು -ಬರಹ ಕಲಿತವರಲ್ಲ ಎಂಬ ಉದ್ದೇಶದಿಂದ  ಉಮ್ಮಿಯ್ಯ್ ಎಂಬ ಪ್ರಯೋಗ ನಡೆಸಲಾಗಿದೆ.ಕಾರಣ ಮೊದಲೇ ಓದು-ಬರಹ ತಿಳಿದವರಾಗಿದ್ದಲ್ಲಿ ಖುರ್'ಆನ್ ಅವರು ಸ್ವತಃ ನಿರ್ಮಿಸಿದ ಗ್ರಂಥವೆಂದು  ಹೇಳುವ ಪುಟ್ಟ ಅವಕಾಶ ಸತ್ಯ ನಿಷೇಧಿಗಳಿಗೆ ಇರುತ್ತಿತ್ತು.ಆದುದರಿಂದಲೇ ಅಲ್ಲಾಹನ ಪ್ರವಾದಿ ವರ್ಯರು ಯಾರ ಬಳಿ ತೆರಳಿ ಕಲಿಯುವುದು ಅವರು ನೋಡಿಲ್ಲ.ಮುಅಜಿಝತ್ ಮೂಲಕ ತಿಳಿದದ್ದು ಅವರಿಗೆ ಗೊತ್ತೂ ಇಲ್ಲ.ಆದುದರಿಂದಲೇ ಖುರ್'ಆನ್ ನೀನು ನಿರ್ಮಿಸಿದ ಗ್ರಂಥ ಎಂದು ಹೇಳುವ ಅವಕಾಶವನ್ನು ಅಲ್ಲಾಹನು ಇಲ್ಲಿ ಇಲ್ಲವಾಗಿಸಿದ್ದಾನೆ.

(ಭಾಗ --2 ನೋಡಿರಿ)

📝 ಮುನೀರ್ ಸಖಾಫಿ ,ಸಾಲೆತ್ತೂರು.

No comments:

Post a Comment