*ಝಿಯಾರತ್ತ್ ಕೇಂದ್ರ*
👉👉👉30
ಭಾಗ-01
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
*ನೂರುಲ್ ಉಲಮಾ ಎಂ. ಎ. ಉಸ್ತಾದ್ ಮಖಾಂ. ದೇಳಿ, ಕಾಲ್ನಾಡ್. ಕಾಸರಗೋಡು.*
➖➖➖➖➖➖➖ ಕಾಸರಗೋಡು ಜಿಲ್ಲೆಯ ತೃಕರಿಪ್ಪುರ್ ಪಂಚಾಯತ್ತಿನ ಉಡುಬುಂತಳ ಎಂಬ ಸ್ಥಳದಲ್ಲಿ ಕುರಿಯ ಅಬ್ದುಲ್ಲ ಹಾಜಿ, ಹಾಗೂ ನಲೂರಪ್ಪಾಡ್ ಮರ್ಯಂ ದಂಪತಿಗಳ ಮಗನಾಗಿ ಈ ಶತಮಾನಕ್ಕೆ ದೀನೀ ಜ್ಞಾನದ ಸೂರ್ಯ ಪ್ರಭೆ ಪಸರಿಸಿದ ಸಮಸ್ತದ ಸಾತ್ವಿಕರಾದ ಪಂಡಿತ ಶಿರೋಮಣಿ ಎಂ.ಎ. ಅಬ್ದುಲ್ ಖಾದಿರ್ ಉಸ್ತಾದ್ ನ:ಮ. ರವರು 1924 ಜುಲೈ 01ಕ್ಕೆ ( 1342 ರಜಬ್ 29 ) ಜನಿಸಿದರು.
ಅಬ್ದುಲ್ ಖಾದಿರ್ ಹಾಜಿ (ಅಜ್ಜ) ಅಹ್ಮದ್ ಮುಸ್ಲಿಯಾರ್ (ಮಾವ), ತೃಕರಿಪ್ಪುರ್ ಹಾಫಿಲ್ ಶಾಹುಲ್ ಹಮೀದ್ ತಂಗಳ್, ನಾದಾಪುರಂ ಶಿರಾಸಿ ಮುಸ್ಲಿಯಾರ್, ಕೊಯಪ್ಪ ಮುಹಮ್ಮದ್ ಕುಟ್ಟಿ ಮುಸ್ಲಿಯಾರ್, ಎನ್.ಸಿ. ಅಬ್ದುಲ್ ಖಾದಿರ್ ಮುಸ್ಲಿಯಾರ್, ಮೊದಲಾದ ಪಂಡಿತರಿಂದ ಮಹಾನವರು ವಿದ್ಯೆ ಕಲಿತರು.
ಎಝುಮಲ ಹಾಮಿದ್ ಕೋಯಮ್ಮ ತಂಗಳ್ ನ:ಮ, ಕೊಟ್ಟಾಯಂ ಶೈಖ್ ಅಬೂಬಕ್ಕರ್ ಮುಸ್ಲಿಯಾರ್ ನ:ಮ, ಚಾಪ್ಪನಂಗಾಡಿ ಬಾಪ್ಪು ಮುಸ್ಲಿಯಾರ್ ನ:ಮ, ಕಕ್ಕಡಿಪುರಂ ಅಬೂಬಕ್ಕರ್ ಮುಸ್ಲಿಯಾರ್ ನ:ಮ, ಪಾನಾಯಿಕುಳಂ ಅಬ್ದುರಹ್ಮಾನ್ ಮುಸ್ಲಿಯಾರ್ ನ:ಮ, ಚಾವಕ್ಕಾಡ್ ಮುಹಮ್ಮದ್ ಕುಂಞಿ ತಂಗಳ್ ನ:ಮ, ಈಸಾ ಚೆರುಕುಂಞಿ ಕೋಯ ತಂಗಳ್ ನ:ಮ, ಮುಂತಾದವರಿಂದ ತನ್ನ ದೀನೀ ಜ್ಞಾನ ಹಾಗು ಆತ್ಮೀಯ ಲೋಕವನ್ನು ವಿಕಾಸಗೊಳಿಸಿದರು.
ನಂತರ ತೃಕರಿಪ್ಪುರ್ ಮೆಟ್ಟಮ್ಮಲ್ ( 1949-73 ), ತಳಿಪ್ಪರಂಬ್ ಖುವ್ವತ್ತುಲ್ ಇಸ್ಲಾಂ ( 1973-78 ), ಉದಿನೂರ್ ( 78-79 ), ಜಾಮಿಅ ಸಅದಿಯ್ಯ ( 1979ರಿಂದ ತನ್ನ ವಫಾತಿನ ವರೆಗೆ) ದರ್ಸ್ ರಂಗದಲ್ಲಿ ಸೇವನೆಗೈದರು.
1946ರಲ್ಲಿ ಸಮಸ್ತ ಎಂಬ ಸಂಘಟನೆಯ ಸದಸ್ಯರಾದ ಅವರು1960 ರಲ್ಲಿ ಮುಶಾವರ ಸದಸ್ಯರು ಆದರು.
1989 ರಿಂದ ಸಮಸ್ತ ಉಪಾಧ್ಯಕ್ಷರು, 2014ರಲ್ಲಿ ಸಮಸ್ತದ 8ನೇ ಅಧ್ಯಕ್ಷರು ಆದರು.
ಸಮಸ್ತ ಕೇರಳ ಇಸ್ಲಾಮಿಕ ವಿದ್ಯಾಭ್ಯಾಸ ಬೋರ್ಡ್ ( 1951 ), 1997 ಎಜುಕೇಶನ್ ಬೋರ್ಡ್ ಓಫ್ ಇಂಡಿಯಾದ ಅಧ್ಯಕ್ಷರು, 2002ರಲ್ಲಿ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷರು, ಸುನ್ನೀ ಯುವ ಜನಸಂಘ ( 1954 ), ಜಂಇಯ್ಯುತ್ತುಲ್ ಮುಅಲ್ಲಿಮೀನ್ ( 1958 ), ಎಂಬಿತ್ಯಾದಿಗಳ ಸ್ಥಾಪಕ ಸದಸ್ಯರಾಗಿದ್ದರು.
ನಂತರ ವಿದ್ಯಾಭ್ಯಾಸ ಬೋರ್ಡ್ ಸೆಕ್ರೆಟರಿ, ಸುನ್ನೀ ಯುವಜನ ಸಂಘ ಕೇರಳ ರಾಜ್ಯ ಅಧ್ಯಕ್ಷರು. (1983-95 ) ಜಂಇಯ್ಯತ್ತುಲ್ ಮುಅಲ್ಲಿಮೀನ್ ಕೇಂದ್ರ ಕೌಂಸಿಲ್ ಅಧ್ಯಕ್ಷರು ( 1965 ), ಕೇಂದ್ರ ಕೌಂಸಿಲ್ ಸೆಕ್ರೇಟರಿ ( 1976-89 )
ಎಂಬಿತ್ಯಾದಿ ಸ್ಥಾನಗಳನ್ನು ಅಲಂಕರಿಸಿ ತನ್ನ ವ್ಯಕ್ತಿ ಮುದ್ರೆ ಒತ್ತಿದರು.
ಮುಂದುವರಿಯುವುದು.
✍ ಗಫೂರ್ ಬಾಯಾರ್
☘☘☘☘☘☘☘


No comments:
Post a Comment