*ಝಿಯಾರತ್ತ್ ಕೇಂದ್ರ*
👉👉👉27
〰〰〰〰〰〰〰
#ಶೈಖುಲ್ #ಹದೀಸ್_
_ನೆಲ್ಲಿಕುತ್ತ್ ಇಸ್ಮಾಈಲ್ ಉಸ್ತಾದ್ ನೆಲ್ಲಿಕುತ್ತ್, ಮಂಜೇರಿ, ಮಲಪ್ಪುರಂ_
〰〰〰〰〰〰〰
✍ ಗಫೂರ್ ಬಾಯಾರು
〰〰〰〰〰〰〰
🕎 ಮುಸ್ಲಿಯಾರಗತ್ತ್ ಮುಹಮ್ಮದ್ ಮುಸ್ಲಿಯಾರ್ ಮತ್ತು ಮರಿಯಂ ದಂಪತಿಗಳ ಏಕೈಕ ಸುಪುತ್ರನಾಗಿ 1939ರಲ್ಲಿ ಪೊನ್ನಾನಿ ಮಖ್ಡೂಮ್ ಕುಟುಂಬದ ಒಂದು ಶಾಖೆಯಾಗಿದ್ದ 'ಮುಸ್ಲಿಯಾರಗತ್ತ್' ಕುಟುಂಬದಲ್ಲಿ ಜನಿಸಿದರು.
ನೆಲ್ಲಿಕುತ್ತ್ ಕುಂಞಿ ಹಸನ್ ಹಾಜಿ (ಪತ್ನಿಯ ತಂದೆ), ಮಂಜೇರಿ ಮುಹಮ್ಮದ್ ಮುಸ್ಲಿಯಾರು, ಅಬ್ದು ರಹ್ಮಾನ್ ಫಳ್'ಫರಿ (ಕುಟ್ಟಿ) ಮುಸ್ಲಿಯಾರು, ಮೊದಲಾದವರು ಮಹಾನವರ ಪ್ರಧಾನ ಗುರುಗಳಾಗಿದ್ದರು.
ಆಲತ್ತೂರ್ ಪಡಿ, ಕಾವನೂರ್, ಅರಿಂಬ್ರ, ಪುಲ್ಲಾರ, ಎಂಬಿ ಸ್ಥಳಗಳಲ್ಲಿ ಮುದರಿಸರಾಗಿದ್ದರು.
ತದನಂತರ ನಂದಿ ದಾರುಸ್ಸಲಾಮ್ ಕಾಲೇಜಿನಲ್ಲಿ ವೈಸ್ ಪ್ರಿನ್ಸಿಪಾಲ್ ಆದರು.
ನಂತರ
1986ರಿಂದ ವಫಾತಿನ ವರೆಗೆ *ಕಾರಂದೂರ್ ಮರ್ಕಝ್ ಶರೀಅತ್ತ್ ಕಾಲೇಜಿನಲ್ಲಿ ಖುರ್ಆನ್, ಹದೀಸ್, ಫಿಖ್ಹ್ ಮೊದಲಾದ ವಿಷಯಗಳಲ್ಲಿ ಪ್ರಮುಖ ಮುದರಿಸರಾಗಿದ್ದ ಅವರು ಅಪ್ರತಿಮ ಪಾಂಡಿತ್ಯದ ತೇಜಸ್ಸು ಕೂಡ ಆಗಿದ್ದರು.*
ಶೈಖುಲ್ ಹದೀಸ್ ಎಂಬ ಗೌರವ ನಾಮವು ಅವರ ಹದೀಸ್ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ವಹಾಬಿಗಳ ಅತೌಹೀದ್ ಎಂಬ ಪುಸ್ತಕಕ್ಕೆ *'ತೌಹೀದ್ ಸಮಗ್ರಪಡನಂ* ಎಂಬ ಮಲಯಾಳ ಖಂಡನಾ ಗ್ರಂಥವನ್ನು ಬರೆದರು.
*ಮತಞಲಿಲೂಡೆ ಒರು ಪಡಣ ಪರ್ಯಡನಂ, ಜುಮುಆ ಒರು ಪಡಣಂ, ತೌಹೀದ್ ಒರು ಸಮಗ್ರ ಪಡಣಂ, ತ್ಶರೀಖತ್, ಫತ್ವಾಗಳ ಸಮಾರವಾದ 3 ಗ್ರಂಥಗಳು* ಅಲ್ಲದೆ ಇನ್ನೂ ಹಲವಾರು ಗ್ರಂಥಗಳನ್ನು ರಚಿಸಿದರು.
*'ಮಿಶ್ಕಾತ್ತಿಗೆ ಬರೆದ ಚರಿತ್ರೆ ಪ್ರಸಿದ್ದವಾದ ಮಿರ್ಆತ್ತು ಫಿಕ್ಹುಸ್ಸುನ್ನ ಹಾಗೂ ಅಖಾಈದುಸುನ್ನ* ಮತ್ತು ಪ್ರಾಮಾಣಿಕ ದರ್ಸ್ ಕಿತ್ತಾಬುಗಳಿಗಿರುವ ವ್ಯಾಖ್ಯಾನಗಳು, ಬರಹಗಳು ಮತಪಂಡಿತರ ಲೋಕಕ್ಕೆ ಅಮೂಲ್ಯನಿಧಿಯಾಗಿದೆ.
ಶೈಖುನಾ ಉಸ್ತಾದವರು (1432 ರಬೀಉಲ್ ಆಖಿರ್ 30) 2011 ಎಪ್ರಿಲ್ 3 ಆದಿತ್ಯವಾರ ವಫಾತ್ತಾದರು.
ತನ್ನ ಮನೆಯ ಸಮೀಪವಿರುವ ನೆಲ್ಲಿಕೂತ್ತ್ ಮಸೀದಿಯಲ್ಲಾಗಿದೆ ಮಹಾನರ ಮಖಾಂ ಇರುವುದು.
ಮಕ್ಬರಕ್ಕೆ ಮಂಜೇರಿ-ಪಾಂಡಿಕಾಡ್
ದಾರಿಯಲ್ಲಿ 9 ಕಿ.ಮೀ. ಇದೆ.
ಮಹಾನವರ ದರಜವನ್ನು ಅಲ್ಲಾಹು ಉನ್ನತಿಗೇರಿಸಲಿ..
ಅವರೊಂದಿಗೆ ನಮ್ಮನ್ನು ಅಲ್ಲಾಹು ಸ್ವರ್ಗಲೋಕದಲ್ಲಿ ಒಂದುಗೂಡಿಸಲಿ ಆಮೀನ್.
✍ _ಗಫೂರ್ ಬಾಯಾರು_
🕎🕎🕎🕎🕎🕎🕎

No comments:
Post a Comment