Sunday, November 5, 2017

ಝಿಯಾರತ್ತ್ ಕೇಂದ್ರ
   👉👉👉26
〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰

*ಸಯ್ಯಿದ್ ಖುತುಬ್ ಅಬ್ದುರಹ್ಮಾನ್ ಅಲ್ ಹೈದ್ರೂಸ್ ರ. ಪೊನ್ನಾನಿ.*
➖➖➖➖➖➖➖
🕌 ನಬಿ ﷺ ಸ.ಅ ರವರ ಕುಟುಂಬದಲ್ಲಿ ಒಳಗೊಂಡ ಹೈದ್ರೂಸ್ ವಂಶದಿಂದ ಪ್ರಥಮವಾಗಿ ಕೇರಳಕ್ಕೆ ಆಗಮಿಸಿದ ಮಹಾನರಾಗಿದ್ದಾರೆ ಸಯ್ಯಿದ್ ಖುತುಬ್ ಅಬ್ದುರಹ್ಮಾನ್ ಅಲ್ ಹೈದ್ರೂಸ್ ರ. ರವರು.
ಯಮನಿನ ಹಳರ್ ಮೌತಿನ ತರಿಮಿ ಎಂಬ ಸ್ಥಳದಲ್ಲಿ ಹಿಜರಿ ವರ್ಷ 1099 ರಲ್ಲಿ ಜನ್ಮ ಗೊಂಡದರು. ಬಾಲ್ಯದಲ್ಲೇ ವಿವಿಧ ಕ್ಷೇತ್ರದಲ್ಲಿ ಉತ್ತಮ ಜ್ಙಾನವನ್ನು ಕರಗತಗೊಳಿಸಿದರು...

ಧರ್ಮಪ್ರಭೋದನೆ ನಿಮಿತ್ತ ಹಿಜರಿ 1115ರಲ್ಲಿ ಕಲ್ಲಿಕೋಟೆಗೆ ಆಗಮಿಸಿದ ಮಹಾನರು
ನಂತರ ಕೊಯಿಲಾಂಡಿಗೂ, ಅಲ್ಲಿಂದ ಪೊನ್ನಾನಿಗೂ ತಲುಪಿದರು.

ಪೊನ್ನಾನಿ ಎಂಬ ಸ್ಥಳವನ್ನು ತನ್ನ ದೀನೀ ಬೋಧನೆಗಾಗಿ ಆಯ್ಕೆ ಮಾಡಿಕೊಂಡರು.
ಸಮೂಹದ ಎಲ್ಲಾ ವಿಭಾಗದ ಜನರ ಪ್ರಶ್ನೆ ಪರಿಹಾರಕ್ಕೆ ಮಹಾನರನ್ನು ಅಲ್ಲಿನ ಜನ ಸಮೀಪಿಸುತ್ತಿದ್ದರು.
ಪಂಡಿತರು, ಜನಸಾಮಾನ್ಯರು, ಸರಕಾರಿ ಉದ್ಯೋಗಸ್ಥರು, ಮಹಾನರ ಆತ್ಮೀಯ ಮಜ್ಲಿಸ್ ನಲ್ಲಿ ಪಾಲ್ಗೊಳುತ್ತಿದ್ದರು.

ವಿವಿಧ ತ್ವರೀಕತ್ತ್ ಗಳಾದ ಖಾದಿರಿಯ್ಯ, ಬಾಅಲವಿಯ್ಯ, ಹೈದ್ರೂಸಿಯ್ಯ, ಹಾಗೂ ತಸವ್ವೂಫಿನಲ್ಲೂ ಆತ್ಮೀಯತೆಯಲ್ಲೂ ಬಹಳ ಉನ್ನತ ನೆಲೆಯಲ್ಲಿ ತಲುಪಿದರೂ ಮಹಾನರುಗಳು ಸ್ವಲ್ಪವೂ ಪ್ರಶಸ್ತಿ ಅಥವಾ ಹಿರಿಮೆ ಆಗ್ರಹಿಸಿರಲಿಲ್ಲ.
ಪೊನ್ನಾನಿಯ ಮಖ್ಡೂಮ್ ಕುಟುಂಬದಿಂದಾಗಿದೆ ತಂಗಳರು ವಿವಾಹವಾಗಿರುವುದು.

ಎಲ್ಲಾ ರೀತಿಯಲ್ಲೂ ಶೋಭಿಸಿದ ಸಯ್ಯಿದವರು ಹಿಜರಿ 1164 ರಲ್ಲಿ ಈ ನಶ್ವರ ಲೋಕದಿಂದ ಶಾಶ್ವತ ಲೋಕಕ್ಕೆ ಯಾತ್ರೆಯಾದರು.

ಪೊನ್ನಾನಿಯ *ವಲಿಯ ಜಾರಂ* ಮಖಾಮಿನಲ್ಲಾಗಿದೆ ಮಹಾನರು ಅಂತ್ಯ ವಿಶ್ರಮಗೊಳ್ಳುತ್ತಿರುವುದು.

ತಂಗಳರುಗಳ ಮಕ್ಕಳಲ್ಲಿ ಸಯ್ಯಿದ್ ಅಲಿಯ್ಯುಲ್ ಹೈದ್ರೂಸ್ ರ., ಸಯ್ಯಿದ್ ಮುಹಮ್ಮದ್ ಹೈದ್ರೂಸ್ ರ., ರವರು ಪೊನ್ನಾಣಿಯಲ್ಲೂ,
ಸಯ್ಯಿದ್ ಅಲವಿ ಹೈದರೂಸ್ ರ., ಮತ್ತು ಅವರ ಹಿಂಬಾಲಕರೂ ಅನೇಕ ಕರಾಮತ್ತುಗಳ ಒಡೆಯರಾದ ಕಿರಿಯ ಮಗನಾದ ಸಯ್ಯಿದ್ ಅಬೂಬಕ್ಕರ್ ಬಾಂಬ್ ರ. ರವರು ಕೊಚ್ಚಿಯ ತ್ಯಕಾವಿನಲ್ಲೂ ಅಂತ್ಯ ವಿಶ್ರಮ ಗೊಳ್ಳುತ್ತಾರೆ.

ಮಹಾತ್ಮರುಗಳ ಮಖ್ಬರ ಝಿಯಾರತ್ ಮಾಡಲು ಅಲ್ಲಾಹು ತೌಫೀಖ್ ನೀಡಲಿ ಆಮೀನ್...

✍ಗಫೂರ್ ಬಾಯಾರ್.
🌸🌸🌸🌸🌸🌸🌸




No comments:

Post a Comment