Wednesday, November 8, 2017

*ಮಂಚಕಲ್‌ನಲ್ಲಿ ದಫನವಾದ ವಹ್ಹಾಬೀ ತೌಹೀದ್*
*ಮರ್ಮಕ್ಕೆ ಬಿದ್ದ ಏಟಿನಿಂದ ನರಳಾಡುತ್ತಿರುವ ವಹಾಬೀ ಪಾಳಯ*

ಸಮುದಾಯದಲ್ಲಿ ನವೋಥ್ಥಾನದ ಹೆಸರು ಹೇಳಿ ಮುಸ್ಲಿಂ ಯುವಕರನ್ನು ವಂಚನೆಯ ಖೆಡ್ಡಾಗೆ ಬೀಳಿಸುತ್ತಿದ್ದ ವಹ್ಹಾಬಿಗಳಿಗೆ ಮೊನ್ನೆ ಮಂಚಕಲ್‌ನಲ್ಲಿ ಬಿದ್ದ ಪೆಟ್ಟು ವಹ್ಹಾಬೀ ಪಾಳಯವನ್ನೇ ಕಂಪನಗೊಳಿಸಿತ್ತು. ಮೊನ್ನೆಯ ಮುಖಾಮುಖಿಯಂತೂ ವಹ್ಹಾಬೀ ತಲೆಯಾಳುಗಳ ಜನ್ಮವನ್ನೇ ಜಾಲಾಡಿತ್ತು. ಸಲಫೀ ಮುಖಂಡನಿಂದಲೇ ತಾವು ಐಸಿಸ್‌ನ ಏಜೆಂಟರೆಂದು  ಬಹಿರಂಗವಾಗಿ ಕರೆಸಿಕೊಂಡು ಪ್ರಜ್ಞಾವಂತ ಮುಸ್ಲಿಮರಿಂದ ಚಪ್ಪಲಿಯೇಟು ತಿಂದಿದ್ದ ವಹ್ಹಾಬೀ ಮುಖಂಡರಿಗೆ ಈ ಮುಖಾಮುಖವು ಮತ್ತೊಂದು ಆಘಾತವನ್ನು ನೀಡಿ ಅವರ ತೌಹೀದ್ ತಲೆಯೊಳಗೆಯೇ ಹೆಪ್ಪುಗಟ್ಟುವಂತೆ ಮಾಡಿರುವುದಂತೂ ಸುಳ್ಳಲ್ಲ..

ಪವಿತ್ರವಾದ ಇಸ್ಲಾಮಿನ ಸುಂದರ ಸಂದೇಶಗಳನ್ನು ವಿಕೃತಗೊಳಿಸಿ, ಆ ವಿಕೃತತೆಯನ್ನೇ ಅಧಿಕೃತಗೊಳಿಸಿ , ಸಮುದಾಯ ಹಾದಿ ತಪ್ಪಿಸುತ್ತಿದ್ದ ವಹ್ಹಾಬಿಗಳ ನಿಜ ಮುಖವು ಮೊನ್ನೆ ಕಳಚಿ ಬಿದ್ದಿತ್ತು. ಪ್ರವಾದಿಯವರನ್ನು ಸಾಮಾನ್ಯ ಮನುಷ್ಯನೆಂದು ಹೇಳಿ ಸಾರ್ವತ್ರಿಕ ಮುಸ್ಲಿಮರಿಂದ ಉಗಿಸಿಕೊಂಡಿದ್ದ ಎಂ.ಎಂ ಅಕ್ಬರ್‌ನ ಹಿಂಬಾಲಕ ತಾನೆಂಬುದನ್ನು ಮತ್ತೊಬ್ಬ ಸಲಫೀ ಫುಡಾರಿಯೊಬ್ಬ ಪ್ರೂವ್ ಮಾಡಿದ್ದ. ತನ್ನ ವಿಕಲ ಪ್ರಶ್ನೆಯನ್ನು ತಿರುಗಿಸಿ ಮರುಗಿಸಿ ಕೇಳಿ ಮುಖಾಮುಖದ ದಿಕ್ಕುತಪ್ಪಿಸಲು ಬಂದಾತನ ನಿಜ ಮುಖವನ್ನು ತೋಕೆ ಉಸ್ತಾದರು ಬಹಿರಂಗಗೊಳಿಸಿದಾಗ ಆತ ತನ್ನ ಗ್ಯಾಂಗ್‌ನೊಂದಿಗೆ ಕಾಲ್ಕಿತ್ತಿದ್ದ. ಅಲ್ಲದೆ ಆತ ಓಡುವ ವೇಳೆ ನಾಚಿಕೆಯಿಂದ ತನ್ನ ಕೈಯ್ಯಲ್ಲಿದ್ದ ಪೇಪರಿನಿಂದ ಮುಖ ಮುಚ್ಚಿಕೊಂಡದ್ದು ಸ್ಪಷ್ಟವಾಗಿ ಕಾಣಬಹುದು.

ಪ್ರವಾದಿಯವರಿಗೆ ಅಬೂಜಹಲ್, ಉತ್ಬತ್‌ನಷ್ಟೂ ಜ್ಞಾನವಿಲ್ಲವೆಂದವರ ಗತಿಯೇನು ಎಂಬುದನ್ನು ಸಲಫೀ ತಲೆಯಾಳು ಲಬ್ಬಾ ದಾರಿಮಿಯೇ ಸ್ಪಷ್ಟಪಡಿಸುತ್ತಾರೆ. *ಹಾಗೆ ಹೇಳುವವರು ಯಾವತ್ತೂ ಮುಸ್ಲಿಮನಾಗಲು ಸಾಧ್ಯವಿಲ್ಲ. ಮುಸ್ಲಿಮರು ಯಾವತ್ತೂ ಹಾಗೆ ಹೇಳಲಾರರು* ಎಂದ ಲಬ್ಬ ದಾರಿಮಿಯಿಂದಲೇ ತಸ್ಲೀಂ ಸಲಫಿಯ ತೌಹೀದಿನ ಪಲಿತಾಂಶ ಬಂದಿದೆ.

ತಮ್ಮ ದುರ್ವ್ಯಾಖ್ಯಾನದ ಮೂಲಕ ಅಸ್ತಿತ್ವವನ್ನು ಪಡೆದ ವಹ್ಹಾಬಿಗಳಿಗೆ ಸುನ್ನೀ ಉಲಮಾಗಳು ಪೂರ್ವಿಕ ವಿದ್ವಾಂಸರ ಕಿತಾಬ್‌ಗಳ ಮೂಲಕ ನೈಜ್ಯತೆಯನ್ನು ತೆರೆದಿಡುವಾಗ ನರಳಾಟ ಶುರುವಾಗುತ್ತದೆ. ಶಿರ್ವದಲ್ಲಿ ಮರ್ಮಕ್ಕೆ ಬಿದ್ದ ಗಾಯವನ್ನು ಅಳಿಸಿ ಈಗ ವಾಟ್ಸಪ್ ಮೂಲಕ ಸುನ್ನೀ ವಿದ್ವಾಂಸರ ಮಾಂಸ ತಿನ್ನುವ ಕೆಲಸಕ್ಕೆ ಇಳಿದಿದ್ದಾರೆ.

ಲಕ್ಷಾಂತರ ಮುಸ್ಲಿಮರ ರಕ್ತವನ್ನು ಹರಿಸಿದ ವಹ್ಹಾಬಿಗಳು ಜಗತ್ತಿನ ಮೊತ್ತ ಮೊದಲ ಭಯೋತ್ಪಾದಕರು ಎಂಬುದರಲ್ಲಿ ಯಾರಿಗೂ ತರ್ಕವಿಲ್ಲ. ಇದನ್ನೇ ಮೊನ್ನೆ  ಶಿರ್ವದಲ್ಲಿ ತೋಕೆ ಉಸ್ತಾದ್ ಹೇಳಿದ್ದರು. ನಾವು ಸುನ್ನೀಗಳನ್ನು ಸೋಲಿಸುತ್ತೇವೆಂದು ಕಚ್ಚೆ ಕಟ್ಟಿ ಬಂದಿದ್ದ ಸಲಫೀ ನಾಯಕನ ತಲೆಗೆ ಮುಖಾಮುಖಿಯ ಮೊದಲ ಭಾಷಣವೇ ಸಿಡಿಲಿನಂತೆ ಬಿದ್ದಿತ್ತು. ಆ ಆಘಾತವನ್ನು ಮರೆಮಾಚಲು ಮೈಕ್ ಹಿಡಿದು ಭಾಷಣ ನಡೆಸಿ ಸಾಚಾಗಳಾಗಲು ಪ್ರಯತ್ನಿಸಿದಾಗ ಅದೂ  ವಿಫಲವಾಯಿತು. ಕೊನೆಗೆ ತೋಕೆ ಉಸ್ತಾದ್ ಓದಿದ ಒಂದು ಆಯತ್ತನ್ನು ಈತ *ದುಆಇ, ದುಆಇ* ಅಂತಲೇ ಆವರ್ತಿಸುತ್ತಿದ್ದ. ನಿಜಾರ್ಥದಲ್ಲಿ ಅದು ದುಆಅ ಅಂತಾಗಬೇಕಿತ್ತು. ಖುರ್‌ಆನ್ ಓದಲೂ ಕೂಡಾ ಗೊತ್ತಿಲ್ಲದವ ಅರಬಿ ಹೇಗೆ ಓದಿಯಾನು.‌? ಈತನನ್ನು ನಾಯಕನಾಗಿ ಅಂಗೀಕರಿಸುವವರು ಇದನ್ನೆಲ್ಲಾ ಚಿಂತಿಸುತ್ತಿಲ್ಲ ಯಾಕೆ..?

ಇನ್ನಾದರೂ ಚಿಂತಿಸೋಣ. ಪ್ರವಾದಿಯವರನ್ನು ಅಬೂಜಹಲ್, ಉತ್ಬತ್‌ಗೂ ಕಡೆಯಾಗಿ ಕಂಡ ಈ ಸಲಫೀ ವ್ಯಘ್ರ ನಾಯಕರ ವಿರುದ್ದ ನಾವೇಕೆ ಒಗ್ಗಟ್ಟಾಗಬಾರದು.? ಈ ಸಲಫಿಸಂ‌ನಿಂದ ಮುಸ್ಲಿಂ ಸಮುದಾಯಕ್ಕೆ ಉಪಕಾರವಾದರೂ ಏನು.? ಯುವ ಜನತೆ ಇನ್ನಾದರೂ ಚಿಂತಿಸಬೇಕಾಗಿದೆ. ಸಲಫಿ, ವಹ್ಹಾಬಿಗಳ ಬಲೆಯಲ್ಲಿ ಬಿದ್ದು ಈಮಾನ್ ಕಳೆದುಕೊಂಡವರಿಗೆ ಒಳಿತು ನೀಡಲಿ. ಹಾಗೂ ಸತ್ಯವನ್ನು ಚಿಂತಿಸುವ ಬುದ್ದಿ ನೀಡಲಿ...

*✍🏼ಆದಿಲ್ ಜಾನ್*
💦💦💦💦💦💦💦💦💦

No comments:

Post a Comment