Sunday, November 5, 2017

ಝಿಯಾರತ್ತ್ ಕೇಂದ್ರ
    👉👉25
〰〰〰〰〰〰〰
✍ಗಫೂರ್ ಬಾಯಾರು
〰〰〰〰〰〰〰
ಸೂಫೀ ಶಹೀದ್ (ರ)
ಎಮ್ಮೆಮಾಡು, ಕೊಡಗು ಜಿಲ್ಲೆ
〰〰〰〰〰〰〰

🕌ವಿಶಾಲವಾದ ಭತ್ತದ ಗದ್ದೆಗಳು, ಎತ್ತರಕ್ಕೆ ಬೆಳೆದು ನಿಂತ ಬೆಟ್ಟ ಪ್ರದೇಶಗಳು, ಕಾಡುಗಳ ಮಧ್ಯವಿರುವ ದಾರಿಗಳು, ಕಾಫಿ, ಏಲಕ್ಕಿ, ಕಾಳುಮೆಣಸು, ಶುಂಠಿ, ಹಾಗೂ ಸಿಲ್ವರ್ ಎಂಬ ಹೆಸರಿನ ಮರಗಳಿಂದ ಸಮೃದ್ದವಾಗಿದೆ ಎಮ್ಮೆಮಾಡು ಹಾಗು ಕೊಡಗು ಜಿಲ್ಲೆ.

ಜಾತಿಮತ ಬೇಧಭಾವವಿಲ್ಲದೆ ಸರ್ವರಿಗೂ ಒಳಿತಿನ ಬೋಧಕರಾಗಿ ಬಂದ ಮಹಾತ್ಮರಾಗಿದ್ದಾರೆ ಸೂಫೀ ಶಹೀದ್ (ರ) ಎಂಬವರು.

ಮಹಾನರು ಈಜಿಪ್ಟ್ ನಿಂದ ರೌಳಾ ಶರೀಫ್ ಸಂದರ್ಶಿಸಿದ ನಂತರ ಹಿಜರಿ 11ನೇ ಶತಮಾನದಲ್ಲಿ ಎಮ್ಮೆಮಾಡಿಗೆ ಯಾತ್ರೆ ಬಂದವರಾಗಿದ್ದಾರೆ. ಮೊದಲು ಕೊಡಗಿನ ಕುತ್ತುನಾಡು ಎಂಬ ಸ್ಥಳದಲ್ಲಾಗಿದೆ ದೀನ್ ಬೋಧನೆಯ ಪ್ರಾರಂಭ.

ವನ್ಯಮೃಗಳಿಗಿರುವ ಘೋರ ವನ ಪ್ರದೇಶವಾಗಿದ್ದ ಇಲ್ಲಿ ಮಹಾನರು ದಿಕ್ರ್ ಮತ್ತು ದೀನೀ ಬೋಧನೆಯಲ್ಲಿ ನಿರತರಾಗಿದ್ದರು. ಮಾತ್ರವಲ್ಲದೆ ವನ್ಯಮೃಗಗಳು ಕೂಡಾ ಮಹಾನರ ಸೇವೆ ಮಾಡುತಿತ್ತು. ತದನಂತರ  ಕುತ್ತುನಾಡು ಬಿಟ್ಟು ಕಾವೇರಿ ಕ್ಷೇತ್ರಕ್ಕೆ ಹತ್ತಿರದ ತಾವೂರಿಗೆ ವಲಸೆ ಹೋದರು. ಸುದೀರ್ಘ ಕಾಲ ಮಹಾನರು ತಾವೂರು ಎಂಬ ಪ್ರದೇಶದಲ್ಲಿ ವಾಸವಾಗಿದ್ದರು.
ಮಹಾನರು ವಾಸವಾಗಿದ್ದ  ಮನೆ ಹಾಗೂ ಪರಿಸರವನ್ನು ಸತ್ಯವಿಶ್ವಾಸಿಗಳು ಈಗಲೂ ಪಾವನವಾಗಿ ಸಂರಕ್ಷಿಸಿ ಇಟ್ಟಿರುತ್ತಾರೆ.

ತದನಂತರವಾಗಿದೆ ಮಹಾನರು ಎಮ್ಮೆಮಾಡು ಎಂಬ ಪ್ರದೇಶಕ್ಕೆ ತನ್ನ ಪ್ರಭೋಧನೆಯನ್ನು ಸ್ಥಳಾಂತರಿಸುವುದು. ಇಲ್ಲಿ ಮಹಾನರ ಮುಖಾಂತರ ಹಲವರು ಇಸ್ಲಾಂ ಸ್ವೀಕರಿಸಿದರು. ಮಹಾನರನ್ನು ಕಾಣಲು  ದೂರ ದೂರನಿಂದ ಜನರು ಬರುತ್ತಿದ್ದರು ಹಾಗೂ ದಿನೇ ದಿನೇ ಮಹಾನರ ಮಹತ್ವಗಳು ವರ್ದಿಸುತ್ತಿತು. ಇದರಿಂದ ಶತ್ರುಗಳ ಸಂಖ್ಯೆ ಕೂಡಾ ಹೆಚ್ಚಾಗತೊಡಗಿತು. ಅವರು ನಾನಾ ವಿಧದ ಉಪಟಳಗಳನ್ನು ನೀಡಲು ಶ್ರಮಿಸಿದರು. ಇದರಿಂದ ಪ್ರಯೋಜನವಿಲ್ಲ ಎಂದು ತಿಳಿದ ವಿರೋಧಿಗಳು
ಮಹಾನರನ್ನು ಕೊಲ್ಲಲು ತನ್ನ ತಂಗಿಯನ್ನೇ ತಮ್ಮ ಸ್ವಾಧೀನಗೊಳಿಸಿ ತಂಗಿಯನ್ನು ಉಪಯೋಗಿಸಲು ಮುಂದಾದರು.!

ಮಹಾನರು ಹಾದು ಹೋಗುವ ದಾರಿಯಲ್ಲಿ ಶತ್ರುಗಳು ಅವಿತು ಕುಳಿತು ಆಕ್ರಮಿಸಿದರು. ಮಹಾನರ ಎದೆಗೆ ಗುಂಡಿಕ್ಕಿದರು.
ಮಹಾನರು ನರಳಾಡಿಕೊಂಡು ನೆಲಕ್ಕೆ ಬಿದ್ದರು. ರಕ್ತ ಹೆಪ್ಪುಗಟ್ಟಲು ಪ್ರಾರಂಭವಾಯಿತು. ಈ ಮನಕುಲುಕುವ ದೃಶ್ಯವನ್ನು ಕಂಡ ಮೂಖಪ್ರಾಣಿಯಾದ ಪಶು ಓಡಿ ಬಂದು ತನ್ನ ಮೊಲೆಯಿಂದ  ಹಾಲುಣಿಸಿ  ಮಹಾನರನ್ನು ರಕ್ಷಿಸಲು ಶ್ರಮಿಸಿತು.
ಮರುದಿನವು ಇದೇ ರೀತಿ ಬಂದು ಹಾಲು ಕೊಟ್ಟಿತು.
ಆ ಹಸುವಿನ ಒಡೆಯನಾದ ಆಮುಸ್ಲಿಂ ಮೂರನೇ ದಿನ ತನ್ನ ಹಸುವಿನ ಮೊಲೆಯಲ್ಲಿ ಹಾಲು ಕಡಿಮೆ ಇರುವುದನ್ನು ಗಮನಿಸಿ ಸಂಶಯಾತೀತನಾದನು. ಅಂದು ರಾತ್ರಿ ಪಶು ತೋಡಿನಲ್ಲಿ ತನ್ನ ಮೊಲೆಯನ್ನು ತೊಳೆದು ಮಹಾನರಿಗೆ ಹಾಲುಣಿಸುದನ್ನು ಕಂಡರು.
ತನ್ನ ಪಶು ಸಹಾಯ ಮಾಡುತ್ತಿರುವ ಆ ವ್ಯಕ್ತಿಯವರ ಮಹತ್ವವನ್ನು ಅರಿತುಕೊಂಡು ಅವರಿಗೆ ನೀರು ಸೇದಿ ಕೊಡಲು ಮುಂದಾದಾಗ ಮಹಾನವರು ಇಹಲೋಕ ತ್ಯಜಿಸಿದ್ದರು. ಈ ಚರಿತ್ರೆ ಸತ್ಯವನ್ನು ಸಮರ್ಥಿಸುವ ದೃಶ್ಯಗಳು ಮಖಾಮಿನ ಹತ್ತಿರದಲ್ಲಿ ಇರುವ ಬಯಲಿನ ಕಲ್ಲಿನಲ್ಲಿ ಈಗಲೂ ಕಾಣಬಹುದು.
ಹಿಜರಿ: 1054 ಶಹ್ ಬಾನಿನ ಒಂದು ಶುಕ್ರವಾರ ಮಹಾನರು ಪರಲೋಕ ವಾಸವಾದರು.

ಮಹಾನರನ್ನು ವಧಿಸಲು ಶತ್ರುಗಳಿಗೆ ಸಹಾಯ ಮಾಡಿದ ತನ್ನ ಸಹೋದರಿಯ ಮೇಲಿನ ಕೋಪದಿಂದ ಸ್ತ್ರೀಯರನ್ನು ಮಖಾಮಿನ ಸಮೀಪಕ್ಕೆ ಹೋಗಲು ಮಹಾನರ ಅನುಮತಿ ಇರುವುದಿಲ್ಲ.

ನಿಯಂತ್ರಣವನ್ನು ಉಲ್ಲಂಘಿಸಿ ಬಂದವರಿಗೆ ಜೇನುನೊಣಗಳ ಶಕ್ತವಾದ ಆಕ್ರಮಣಕ್ಕೆ ಒಳಗಾಗುತ್ತಾರೆ..

ಈ ಸ್ವಯಂಚಾಲಿತ
ನಿಯಮವನ್ನು ಉಲ್ಲಂಘಿಸದವರಿಗೆ ಅದರ ತಕ್ಕದಾದ ಫಲ ಅನುಭವಿಸಬೇಕಾಗುತ್ತದೆ ಎಂದು ಇಲ್ಲಿಯ ಖಾದಿಮುಗಳು ಶಾಕ್ಷಿ ನುಡಿಯುತ್ತಾರೆ.

ಅದೇ ಸಮಯ, ಅಂತ್ಯಸನ್ನರಾದ ಮಹಾನವರನ್ನು ಸಹಾಯ ಮಾಡಿದ ಮೂಕ ಪ್ರಾಣಿಗಳಾದ ದನ ವರ್ಗದ ರೋಗಗಳಿಗೆ ಇಲ್ಲಿ ಬೇಗನೆ ಫಲ ಲಭಿಸುತ್ತದೆ.

ಉರೂಸ್, ರತ್ತೀಬ್, ಮುಂತಾದ ಸಭೆಗಳಲ್ಲಿ ಸೀರಣಿಯ ಅನ್ನಕ್ಕಾಗಿ ಪಶು, ಕೋಣ, ಎಮ್ಮೆ, ಎಂಬಿತ್ಯಾದಿ ಮೃಗಗಳನ್ನು ಉಪಯೋಗಿಸುವುದಿಲ್ಲ. ಅದಕ್ಕೆ ಬದಲಾಗಿ ಹಾಗೂ ಆ ಪ್ರಾಣಿಗಳ ಮೇಲಿನ ಗೌರವದಿಂದಾಗಿ ಆಡು, ಕೋಳಿ, ಎಂಬಿತ್ಯಾದಿಗಳನ್ನು ಸೀರಣಿಗೆ  ಉಪಯೋಗಿಸಲಾಗುತ್ತದೆ.

ಸೂಫೀ ಶಹೀದ್ ರ. ರವರ ಮಕ್ಬರದ ಸ್ವಲ್ಪ ಮೇಲೆ ಇರುವ ಮಖಾಂ, ಮಹಾನವರ ಜೀವಿತ ಕಾಲದ ಸಂತಾನ ಸಹಚಾರಿಯಾಗಿದ್ದ *ಸಯ್ಯಿದ್ ಹಸನ್ ಸಖಾಫ್ ಅಲ್ ಹಳ್ರಮಿ ರ.* ಎಂಬವರದ್ದಾಗಿದೆ. ಯಮನಿನ ಹಳರ್ ಮೌತ್ತಿನಿಂದ ಕೇರಳದ ಕಾಸರಗೋಡು ಜಿಲ್ಲೆಯ ಆದೂರಿನಲ್ಲಿ ವಾಸವಾಗಿದ್ದರು.
ಅವರ ಉಳಿದ ಕುಟುಂಬದವರು ಎಲ್ಲರೂ ಆದೂರಿನಲ್ಲಿ ವಾಸವಾಗಿದ್ದಾರೆ. ಮಜ್ಲಿಸ್ ಮಙಂಪಾರ ಆದೂರು ಹಾಗು
ಮುಡಿಪು ಎಜುಪಾರ್ಕ್ ಸಾರಥಿ ಸಯ್ಯಿದ್ ಅಶ್ರಫ್ ಸಖಾಫ್ ತಂಙಳ್'ರವರು ಇದೇ ಪರಂಪರೆಯ ಕೊಂಡಿಯಾಗಿದ್ದಾರೆ.

ಎಲ್ಲಾ ವರ್ಷವೂ ಇಲ್ಲಿ ಭಕ್ತಿಯುತವಾದ ಉರೂಸ್  ನಡೆಯುತ್ತದೆ.

✍ಗಫೂರ್ ಬಾಯಾರು
〰〰〰〰〰〰〰〰
ಈ ವರ್ಷದ್ ಉರೂಸ್ ಸಮಾರಂಭವು ಮಾರ್ಚ್
03 ರಿಂದ 10ರ ವರೆಗೆ ನಡೆಯಲಿದೆ.








No comments:

Post a Comment