Saturday, November 11, 2017

*ಇದು ವ್ಯಭಿಚಾರ ಕ್ಕಿಂತಲೂ ದೊಡ್ಡ ಪಾಪ!!!*

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದು ನೋಡಿ,

- " الغيبة أشد من الزنا ، إن الرجل يتوب فيتوب الله عليه ، و إن صاحب الغيبة لا
يغفر له حتى يغفر له صاحبه " .

*ಗೀಬತ್  ವ್ಯಭಿಚಾರಕ್ಕಿಂತಲೂ  ಭೀಕರವಾದ ತಪ್ಪಾಗಿದೆ.*

 ತಪ್ಪು ಮಾಡಿದವನು ತೌಬ ಮಾಡಿದರೆ ಅವನ ತೌಬ ಸ್ವೀಕರಿಸಲ್ಪಡುವುದು.

*ಆದರೆ ಒಬ್ಬ ಮಾಡಿದ ತಪ್ಪನ್ನು ಹೇಳಿ ನಡೆದವನ, ಪ್ರಚಾರ ಪಡಿಸಿದವನ ತೌಬಾ ಸ್ವೀಕರಿಸ ಬೇಕಾದರೆ ಯಾರ ಬಗ್ಗೆ ಹೇಳಲಾಗಿದೆಯೋ ಅವರು ಮಾಫ್ ನೀಡದೆ ಅಲ್ಲಾಹನು ಮಾಫ್ ನೀಡಲಾರ. (ಹದೀಸ್)*

👉 ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿತ್ತಾರೆ
روى معاذ رضي الله عنه أن النبي صلى الله عليه وسلم قال : " من عيَّر أخاه بذنب لم يمت حتى يعمله ". رواه الترمذي .

*"ತಪ್ಪು ಮಾಡಿದವನನ್ನು ಅಪಮಾನಿಸಿದರೆ ಅದೇ ತಪ್ಪು ಅಪಮಾನಿಸಿದವನಿಂದ ಸಂಭವಿಸದೆ ಆತ ಮೃತಪಡಲಾರ."*

👉 ಯಾರಾಗಿದ್ದಾರೆ ಮುಫ್ಲಿಸ್ ??

ನಮಾಝ್, ಉಪವಾಸ,ಹಜ್,ಝಕಾತ್ ನೊಂದಿಗೆ ಪರಲೋಕ ದಲ್ಲಿ  ಸ್ವರ್ಗ ಕ್ಕೆ ಅರ್ಹತೆ ಪಡೆದು ಖುಷಿಯಿಂದ ಇದ್ದಾಗ ಓರ್ವ ವ್ಯಕ್ತಿ ಬಂದು ಅಲ್ಲಾಹನೊಂದಿಗೆ ಹೇಳುತ್ತಾನೆ; *ನಾನು ವ್ಯಭಿಚಾರ ಮಾಡಿದ್ದೆ, ಮದ್ಯಪಾನ ಮಾಡಿದ್ದೆ, ಕಳ್ಳತನ ಮಾಡಿದ್ದೆ, ವಂಚನೆ ಮಾಡಿದ್ದೆ ಅದನ್ನು ಈತ ಊರಿಡಿ ಹೇಳಿ ನನ್ನ ಮಾನ ವನ್ನು ಹರಾಜು ಮಾಡಿದ್ದಾನೆ. ನನ್ನ ಅಭಿಮಾನವನ್ನು ಬೀದಿಪಾಲು ಮಾಡಿದ್ದಾನೆ ಎನ್ನುತ್ತಾನೆ.*

ಪಾಪ! ನಮಾಝ್, ಉಪವಾಸ , ಹಜ್ ಎಲ್ಲವೂ ದೋ಼ಷಿಗೆ ನೀಡಲ್ಪಟ್ಟು ಈ ಇಬಾದತ್ ಗಾರ ನರಕಕ್ಕೆ ಹೋಗುತ್ತಾನೆ.

ಇವನಾಗಿದ್ದಾನೆ ಪಾಪರ್ ಅಥವಾ ಬರ್ಬಾದ್ ಆದವನೆಂದು ಕಿತಾಬ್ ಗಳಲ್ಲಿ ಕಾಣಲು ಸಾಧ್ಯವಿದೆ.

*ಉಪದೇಶ; ತಪ್ಪು ಯಾರೇ ಮಾಡಲಿ. ಸಾಧ್ಯ ವಾದರೆ ಅವರಿಗೆ ಬುದ್ದಿ ಹೇಳಿ.ಅವರನ್ನು ತಿದ್ದಿ.ಅವರು ತಪ್ಪು ಮಾಡಿದ್ದರ ಬಗ್ಗೆ ಪಶ್ಚಾತ್ತಾಪ ಪಡುವಂತೆ ಮಾಡಿ. ನಿಮಗೂ ಅದರಲ್ಲಿ ಒಳಿತಿದೆ. ಅವರಿಗೂ ಇದೆ.*

ಅದು ಬಿಟ್ಟು ವಾಟ್ಸಪ್ ಮೂಲಕ ವಿಡಿಯೋ ಮಾಡಿ ಪ್ರಚಾರ ಪಡಿಸಿದರೆ ನೀವೇ ನಿಮ್ಮ ಕೈ ಯಾರೆ ನಿಮ್ಮ ಪರಲೋಕ ಕತ್ತಲು ಮಾಡುತ್ತೀರಷ್ಟೇ.

 ( *ತಪ್ಪು ಮಾಡಿದವನ ವಿಡಿಯೊ ಮಾಡುವಾಗ ಒಂದು ವಿಚಾರ ಗಮನಿಸಿ. ಆತ ಒಬ್ಬ ಮನುಷ್ಯ. ಅಲ್ಲಾಹನ ವಿಧಿಪ್ರಕಾರ ಮನುಷ್ಯ ನಲ್ಲಿ ತಪ್ಪು ಘಟಿಸುವುದು ಸಹಜ. ಮುಂದೆ ಆ ತಪ್ಪು ನಿಮ್ಮಲ್ಲೂ ಸಂಭವಿಸಬಹುದು. ಆತ ಒಂದು ತಾಯಿಯ ಮಗ, ಅಥವಾ ಒಂದು ಮಗನ ತಂದೆ,ಅಥವಾ ಒಂದು ಮಗಳ ಗಂಡನಾಗಿರಬಹುದು. ಅವರ ಮನಸ್ಥಿತಿ ಹೇಗಾಗಬೇಡ ಚಿಂತಿಸಿ. ತಪ್ಪು ಮಾಡಿದ್ದು ಹೇಗೆ ಒಪ್ಪಲು ಸಾಧ್ಯವಿಲ್ಲ ವೋ ಅದೇ ರೀತಿ ತಪ್ಪು ಮಾಡಿದವನ ತಪ್ಪನ್ನು ಡಂಗುರ ಸಾರಿ ಪ್ರಚಾರ ಪಡಿಸಿ ಕುಟುಂಬದ ವರ ಮಾನವನ್ನೂ ಬೀದಿ ಪಾಲು ಮಾಡುವುದು ಅಷ್ಟೇ ಕ್ರೂರ ಮತ್ತು ಕ್ರೌರ್ಯ ವಾಗಿದೆ.* )

✍ *ದಾವೂದ್ ಹಕೀಂ ಪಡ್ಪು*

No comments:

Post a Comment