*ಝಿಯಾರತ್ತ್ ಕೇಂದ್ರ*
👉👉👉24
〰〰〰〰〰〰
ಅಸ್ಸಯ್ಯದ್ ಇಸ್ಮಾಯಿಲ್ ಬುಖಾರಿ ವಲಿಯುಲ್ಲಾಹಿ (ಖ.ಸಿ.) ಮಂಜನಾಡಿ, ಮಂಗಳೂರು.
〰〰〰〰〰〰〰
🕌ಔಲಿಯಾಗಳು ಒಂದೊಂದು ಊರುಗಳಲ್ಲೂ ಪ್ರಖ್ಯಾತಿ ಹೊಂದಿದವರಾಗಿದ್ದಾರೆ. ಅವರಿಂದ ಆ ನಾಡನ್ನು ಜನರು ಗುರುತಿಸುತ್ತಾರೆ.
ಅದೇ ರೀತಿಯಲ್ಲಿ ಮಂಜನಾಡಿಯನ್ನು ಗುರುತಿಸಲು ಹೇತುವಾದವರು ಅಸ್ಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿ (ಖ.ಸಿ)ರವರಾಗಿದ್ದಾರೆ. ಅವರ ಆಗಮನವಾಗಿಲ್ಲದಿದ್ದರೆ ಮಂಜನಾಡಿ ಊರು ಸಾಮಾನ್ಯ ಊರಾಗಬಹುದಿತ್ತು. ಆದರೆ ಇಂದು ಇದು ಜಾಗತಿಕ ಮಟ್ಟದಲ್ಲೇ ಹೆಸರು ಪಡೆದಿದೆ.
ಇದಕ್ಕಿಂತ ಮಿಗಿಲಾಗಿ ಈ ಊರನ್ನು ಪರಿಶುದ್ಧವಾದ ಧರ್ಮದಡೆಗೆ ಸಾಗಿಸಿದ್ದು ಈ ಮಹಾನುಭಾವರ ದುಡಿಮೆಯಿಂದಲೇ ಆಗಿದೆ. ಯಾರ ಮುಂದೆಯೂ ತಲೆ ತಗ್ಗಿಸದೆ, ಯಾರ ಭಯ ಬೀತಿಗೂ ಅಸ್ಪದ ಕೊಡದೆ, ಉತ್ತಮ ಜೀವನ ನಡೆಸಲು ಸಾದ್ಯವಾದದ್ದು ಇವರಿಂದಲೇ.
ಆಧ್ಯಾತ್ಮಿಕ ಬೆಳಕನ್ನು ಹೊತ್ತಿಸಿ ಮಂಜನಾಡಿ ಊರನ್ನು ಇಷ್ಟರ ಮಟ್ಟಿಗೆ ಬೆಳೆಸಿದ ಖ್ಯಾತಿ ಮಹಾನು ಭಾವರಾದ ಅಸ್ಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿ (ಖ.ಸಿ)ರವರಿಗೆ ಸಲ್ಲುತ್ತದೆ.
ಇವರ ಸಾತ್ವಿಕ ಜೀವನ, ಸರಳತೆ, ಸದ್ಗುಣ, ಆಕರ್ಷಿಸಿ ಇವರನ್ನು ಜನರು ಅನುಸರಿಸುತಿದ್ದರು. ಇವರ ಜೀವನವನ್ನು ತಿಳಿದ ಹಿರಿಯರು ಹೇಳಿಕೊಟ್ಟ ವಿಚಾರಗಳಾಗಿದೆ ಮಂಜನಾಡಿಯ ಜನತೆಗೆ ಈ ಮಹಾನುಭಾವರ ಕುರಿತು ನಮಗೆ ತಿಳಿಸಿ ಕೊಟ್ಟದ್ದು. ಅದಾಗಿದೆ ಬಹು ದೊಡ್ಡ ಪುರಾವೆ.
ಮಹಾನರು ಮಂಜನಾಡಿಗೆ ಸುಮಾರು 200 ವರ್ಷಗಳ ಹಿಂದೆ ಆಗಮಿಸಿದ್ದು. ಪ್ರವಾದಿ (ಸ) ಕುಟುಂಬ ಪರಂಪರೆಯ ಪ್ರಸಿದ್ಧ ಮನೆತನದಲ್ಲಿ ಒಂದಾದ ಬುಖಾರಿ ವಂಶದವರಾಗಿದ್ದಾರೆ. ಹಿಜರಿ ವರ್ಷ 800 ರಲ್ಲಿ ಪರ್ಶಿಯಾದಿಂದ (ಇರಾನ್) ಕುಟುಂಬ ಸಮೇತ ಬಂದು ಕೇರಳದ ಕಣ್ಣೂರು ಜಿಲ್ಲೆಯ ವಳಪಟ್ಟಣಂ ಎಂಬ ಸ್ಥಳದಲ್ಲಿ ನೆಲೆಸಿ ಧರ್ಮ ಭೋದನೆಗೆ ನೇತ್ರತ್ವ ವಹಿಸುತ್ತಿದ್ದ ಸಯ್ಯಿದ್ ಜಲಾಲುದ್ದೀನ್ ಬುಖಾರಿ(ರ) ರವರ ಸಂತಾನ ಪರಂಪರೆಗೆ ಸೇರಿದವರಾಗಿದ್ದಾರೆ.
ಇಸ್ಲಾಮಿನ ಪ್ರಚಾರಕರಾಗಿ ಅಂದಿನ ಕಾಲದಲ್ಲಿ ವಿವಿಧ ಪ್ರದೇಶಕ್ಕೆ ತೆರಳಿ ಮಹಾನವರ ಕುಟುಂಬದವರು ಧಾರ್ಮಿಕ ಭೋದನೆ ನೀಡುತಿದ್ದರು. ಅದರ ನಿಮಿತ್ತ ಈ ಭಾಗಕ್ಕೆ ಆಗಮಿಸಿದ ಅಸ್ಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿ (ಖ.ಸಿ) ರವರು ಈ ಪ್ರದೇಶವನ್ನು ತಮ್ಮ ಕಾರ್ಯ ಕ್ಷೇತ್ರವಾಗಿ ಆರಿಸಿಕೊಂಡು ಪ್ರಚೋದನೆ ನಡೆಸುತಿದ್ದರು. ಆದ್ಯಾತ್ಮಕತೆಯಲ್ಲಿ ಮುಳುಗಿ ಅರಾಧನೆಯಲ್ಲಿ ಮಗ್ನರಾಗಿದ್ದ ಮಹಾನರು ಜನರಿಗೆ ಆಶಾ ಕೇಂದ್ರವಾಗಿದ್ದರು. ಎಲ್ಲಾ ಸಮಸ್ಯೆ ಸಂಕಷ್ಟಗಳಿಗೆ ಸ್ಪಂದಿಸುತ್ತಾ ದೈವಿಕ ಮಾರ್ಗದಲ್ಲಿ ಪರಿಹಾರವನ್ನು ಒದಗಿಸುತ್ತಿದರು. ಈಗಲೂ ಅದನ್ನು ಮುಂದುವರಿಸುತಿದ್ದಾರೆ.
ಮಹಾನುಭಾವರ ಕಷ್ಫ್ ಕರಾಮತಿನಂದ ಪರಿಹಸಲ್ಪಡುವ ಕಾರ್ಯಗಳು ಧಾರಾಳವಾಗಿದೆ. ಆದೆಷ್ಟೋ ಚಿಕಿತ್ಸೆ ನಡೆಸಿ ಪರಿಹಾರವಾಗದಂತಹಾ ರೋಗಿಗಳು ಇಲ್ಲಿ ಬಂದು ಪರಿಹಾರವನ್ನು ಪಡೆಯುವುದು ಸಾಮಾನ್ಯವಾಗಿದೆ. ಪರ ಊರಿನ ಆದೆಷ್ಟೋ ಜನರು ತಮ್ಮ ಸಮಸ್ಯೆಗಳನ್ನು ಈಡೇರಿಸಿಕೊಳ್ಳಲಾಗದೆ ಸಂಕಷ್ಟ ಪಡುವಾಗ ಈ ಮಾಹಾನುಭಾವರ ಸ್ವಪ್ನ ದರ್ಶನದಿಂದ ಮಂಜನಾಡಿಗೆ ಆಗಮಿಸಿ ಪರಿಹಾರ ಕಂಡುಕೊಳ್ಳುವುದು ಅಲ್ಲಿರುವವರು ಸಾಕ್ಷಿಯಾದಂತಹ ವಿಷಯವಾಗಿದೆ.
ಅಂದಿನ ಕಾಲದಲ್ಲಿ ಸರಳತೆ, ಸಹಿಸ್ಣುತೆಯು ಎಲ್ಲರ ಪ್ರೀತಿಗೆ ಪಾತ್ರರಾದ ಅಸ್ಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿ (ಖ.ಸಿ) ರವರು ಮಸೀದಿಯಲ್ಲೇ ಇದ್ದು ಇಬಾದತ್ ಮಾಡುತಿದ್ದರು.
ತಮ್ಮ ವಫಾತಿನ ಕೆಲವು ದಿನಗಳ ಮುಂಚೆ ಮಸೀದಿಗೆ ತಾಗಿಕೊಂಡಿದ್ದ ಜಾಗದಲ್ಲಿ ಕುಳಿತುಕೊಂಡು ಅಲ್ಲಾಹನ ಆಲೋಚನೆಯಲ್ಲಿ ಮಗ್ನರಾದ ಮಹಾನುಭಾವರೊಂದಿಗೆ ಒಬ್ಬರು ಕೇಳಿದರಂತೆ "ಇಲ್ಲೇನು ಇಂದು?" ಇದಕ್ಕೆ ಉತ್ತರವಾಗಿ "ಇದು ನನ್ನ ಕಬ್ ರಿನ ಜಾಗ" ಎಂದರಂತೆ. ಈ ಘಟನೆಯನ್ನು ಅಸ್ಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿ (ಖ.ಸಿ) ರವರ ಕುರಿತು ಶೈಖುನಾ ಅಬ್ಬಾಸ್ ಉಸ್ತಾದರು ರಚಿಸಿದ ಫೈಳುಲ್ ಬಾರಿಯಲ್ಲಿ ಕಾಣಬಹುದು.
*ಕರಾಮತ್ತುಗಳು:*
ಅಸ್ಸಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿ (ಖ.ಸಿ) ರವರಿಂದ ಚಿಕ್ಕ ಪ್ರಾಯದಲ್ಲೇ ಅದ್ಬುತ ಸಿದ್ಧಿಗಳನ್ನು ಜನರು ದರ್ಶಿಸಿದ್ದು ಉಲ್ಲೇಖಿಸಲ್ಪಟ್ಟಿದೆ.
ಕುಟುಂಬಸ್ತರೊಂದಿಗೆ ಒಮ್ಮೆ ಮಂಜನಾಡಿಗೆ ಆಗಮಿಸಿದ 12 ವಯಸ್ಸಿನ ಬಾಲಕರಾಗಿದ್ದ ಇಸ್ಮಾಯೀಲ್ ಬುಖಾರೀ(ರ) ರವರು ಮರದ ಮೇಲಿದ್ದ ಗಿಳಿಗಳನ್ನು ಹಿಡಿದು ಕೊಡಲು ಹೇಳಿದ್ದರು. ಆದರೆ ಅದನ್ನು ಹಿಡಿದು ಕೊಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆದರೆ ಹಠ ಹಿಡಿದ ಅವರು ಗಿಳಿಗಳನ್ನು ಕರದದ್ದೇ ತಡ, ಅವುಗಳು ತಾವಾಗಿಯೇ ಇಳಿದು ಬಂದು ಬಾಲಕನ ಮಡಿಲಲ್ಲಿ ಕುಳಿತುಕೊಂಡಿತಂತೆ!
ಕತ್ತಲಲ್ಲಿ ದೀಪ ಹೋತ್ತಿಸಲು ಎಣ್ಣೆಯಿಲ್ಲದಾಗ ಬರೀ ನೀರಿನಲ್ಲೇ ದೀಪ ಉರಿಸಿದ್ದು, ಉದ್ದದ ತೆಂಗಿನ ಮರದಲ್ಲಿದ್ದ ಸಿಯಾಳದ ಗೋನೆಗೆ ತಾಗುವಂತೆ ತಮ್ಮ ಕರವಸ್ತ್ರವನ್ನು ಎಸೆದ ಮಾತ್ರಕ್ಕೆ ಸಿಯಾಳುಗಳು ಉದುರಿ ಬಿದ್ದದ್ದು, ಊರಿಡೀ ಕಾಲಾರ ರೋಗ ವ್ಯಾಪಿಸಿ ಬಹಳ ಜನ ಬಲಿಯಾಗುತಿದ್ದ ಸಂದರ್ಭದಲ್ಲಿ ರೋಗಿಗಳಿಗೆಲ್ಲಾ ಹರಳು ಉಪ್ಪನ್ನು ಮಂತ್ರಿಸಿ ಕೊಟ್ಟು ರೋಗ ಗುಣಪಡಿಸುತಿದ್ದರು.
ಶೈಖುನಾ ಮಂಜನಾಡಿ ಉಸ್ತಾದ್ ರವರು ಮಹಾನುಭಾವರಲ್ಲಿ ಬಹಳ ಸಾಮಿಪ್ಯವನ್ನು ಪಡೆದಿದ್ದರು. ತಹಜ್ಜುದಿಗಾಗಿ ಬಹು ಮಂಜನಾಡಿ ಉಸ್ತಾದ್ ರವರು ಏಳದಿದ್ದಾಗ ಮಹಾನುಭಾವರು ಬಂದು ಕರೆದದ್ದಾಗಿ ಉಸ್ತಾದರು ಹೇಳುತಿದ್ದರು.
1977 ರಿಂದ ಮಂಜನಾಡಿಗೆ ಉಸ್ತಾದರ ಸಲಹೆಯಂತೆ ಉರೂಸ್ ಆಚರಿಸಲು ತೀರ್ಮಾನಿಸಲಾಗಿದ್ದು ಎರಡು ವರ್ಷಕ್ಕೊಮ್ಮೆ ಬಹಳ ವಿಜ್ರಂಭನೆಯಿಂದ ಆಚರಿಸಲ್ಪಡುತ್ತದೆ. ಅದರ ನೇತ್ರತ್ವವು ಮೊದಲಿನಂತೆ ಕಳೆದ ಉರೂಸ್ ತನಕ ತಾಜುಲ್ ಉಲಮರಾಗಿದ್ದರು. ಆದರೆ ಈ ವರ್ಷದ ಉರೂಸಿಗೆ ನಮ್ಮಿಂದ ತಾಜುಲ್ ಉಲಮಾ ಖ.ಸಿ. ಅಗಲಿದರೂ ಆಂತರಿಕವಾಗಿ ಅವರೇ ಅದನ್ನು ವಹಿಸುತ್ತಾರೆ.
ಈ ವರ್ಷದ ಉರೂಸನ್ನು ಮಂಜನಾಡಿ ಜಮಾಹತ್ ಗೌರವಾಧ್ಯಕ್ಷರಾದ ತಾಜುಲ್ ಉಲಮಾರ ಅಳಿಯರೂ ಆದ ಬಹು: ಕೆ.ಎಸ್ ಆಟಕೋಯ ತಂಙಲ್ ಕುಂಬೋಲ್ ವಹಿಸುತ್ತಾರೆ. ಬಹು ಕೂರತ್ ತಂಙಲ್, ಸುಲ್ತಾನಲ್ ಉಲಮಾ ಎ.ಪಿ. ಉಸ್ತಾದ್, ಬಹು ಪೇರೋಡ್ ಉಸ್ತಾದ್, ಬಹು ಬೇಕಲ್ ಉಸ್ತಾದ್ ಹಾಗೂ ಇನ್ನಿತರ ಉಲಮಾಗಳು ಧರ್ಮೋಪದೇಶ ನೀಡಲಿದ್ದಾರೆ.
ಸಂ.. & ✍
_ಗಫೂರ್ ಬಾಯಾರು_
*ಈ ವರ್ಷದ ಉರೂಸ್ ಸಮಾರಂಭವು ಇದೇ ತಿಂಗಳ 9-2-2017 ರಿಂದ 18-02-2017 ರವರೆಗೆ ನಡೆಯಲಿದೆ...*
🕌🕌🕌🕌🕌🕌🕌



No comments:
Post a Comment