*ಝಿಯಾರತ್ತ್ ಕೇಂದ್ರ*
👉23
〰〰〰〰〰〰〰
*'ರಾಮಂತಳಿ ಶುಹದಾಗಳ್'*
ಮಕ್ಬರ. ರಾಮಂತಳಿ, ಕಣ್ಣೂರು
〰〰〰〰〰〰〰
ಕೇರಳದ ಚರಿತ್ರೆ ಪ್ರಸಿದ್ಧ ಏಳ್ಮಲೆ ಎಂಬ ಸ್ಥಳದ ಉತ್ತರ ಭಾಗದಲ್ಲಿ ಪೋರ್ಚುಗೀಸರು ಮುಸ್ಲಿಮರ ಮೇಲೆ ದಾಳಿ ಮಾಡುತ್ತಿದ್ದರು. ಅವರ ಆರಾಧಾನಾಲಯಗಳ ಮೇಲೆಯೂ ಆಕ್ರಮಣ ನಡೆದಿತ್ತು. ಆ ಸಂದರ್ಭದಲ್ಲಿ ದಾಳಿಕೋರರ ವಿರುದ್ಧ ಹೋರಾಡಿ ಹುತಾತ್ಮರಾದವರಲ್ಲಿ 20 ಮಂದಿ *ರಾಮಂತಳಿ ಶುಹದಾಗಳ್'* ಎಂದು ಚರಿತ್ರೆ ಪ್ರಸಿದ್ಧರಾದರು.
ತಮ್ಮ ಕುಟುಂಬ, ಧಾರ್ಮಿಕ ಸ್ಥಳಗಳ ಮೇಲೆ ಗುರಿಯಿಟ್ಟು ಪೋರ್ಚುಗೀಸರು ನಿಷ್ಕರುಣೆಯಿಂದ ದಾಳಿ ಮಾಡುತ್ತಿದ್ದರು. ಮುಸ್ಲಿಂ ಯುವಕರು ಸಂಘಟಿತರಾಗಿ 'ಧರ್ಮಯುದ್ಧ' ಕ್ಕೆ ಅಣಿಯಾದರು. ಆದರೆ ಬಲಶಾಲಿಯಾದ ಆಯುಧಬಲ, ಸೇನಾಬಲ ಇದ್ದ ಶತ್ರುಗಳ ಮುಂದೆ ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದ ಮುಸ್ಲಿಂ ಸಂಘದ 20 ಜನರಿಗೆ 'ಹುತಾತ್ಮ ಭಾಗ್ಯ' ಅನಿವಾರ್ಯವಾಯಿತು!
ಪೋರ್ಚುಗನ್ ರಾಜನ ನಿರ್ದೇಶನ ಪ್ರಕಾರ A.D. 1498 (ಹಿಜರಿ ವರ್ಷ 904) ಲ್ಲಾಗಿತು ಪೋರ್ಚುಗೀಸ್ ನಾವಿಕಸೇನಾ ಪ್ರಮುಖನಾದ *ವಾಸ್ಕೊ ಡ ಗಾಮ* ಮತ್ತು ಸಂಗಡಿಗರು ಕಲ್ಲಿಕೋಟೆಯ ಸಮೀಪದ *ಕಾಪ್ಪಾಡ್* ಎಂಬ ಸ್ಥಳದಲ್ಲಿ ಹಡಗಿನಿಂದ ಇಳಿದಿರುವುದು. ವ್ಯಾಪಾರ, ಅಧಿಕಾರವಾಗಿತ್ತು ಅವರ ಗುರಿ.
ಕಲ್ಲಿಕೋಟೆ ಹಾಗೂ ಇತರೆಡೆಗಳ *ಅರಬಿ* ವ್ಯಾಪಾರಿಗಳನ್ನು ಓಡಿಸಿ ವಾಣಿಜ್ಯಪ್ರದೇಶಗಳನ್ನು ಹಂತಹಂತವಾಗಿ ಪೋರ್ಚಿಗೀಸರು ತಮ್ಮದಾಗಿಸಿಕೊಂಡರು. ಕೆಲವೆಡೆ ಅದು ಪೋರ್ಚುಗೀಸ್- ಮುಸ್ಲಿಂ ಹೋರಾಟವಾಗಿಯೂ ಮಾರ್ಪಾಡಾಯಿತು.
ಆ ಕಡೆಯಲ್ಲೆಲ್ಲಾ
ಅವರು ಮುಸ್ಲಿಮರನ್ನು ನಿಷ್ಕರುಣೆಯಿಂದ ಕಗ್ಗೊಲೆ ಮಾಡಿದರು. ಮಸೀದಿಗಳನ್ನು ಕೂಡ ಹೊಡೆದುರಳಿಸಿದರು. ಕಲ್ಲಿಕೋಟೆ ಒಂದರಲ್ಲಿಯೇ 4000 ಮುಸ್ಲಿಮರು ಅವರಿಂದ ಹತರಾಗಿದ್ದಾರೆಂದು ಇತಿಯಾಸದಲ್ಲಿ ದಾಖಲಾಗಿದೆ.
ಪ್ರಮುಖ ಮುಸ್ಲಿಂ ಕೇಂದ್ರಗಳಾದ ಪೊನ್ನಾನಿ, ಕೊಚ್ಚಿ, ಚಾಲಿಯಂ, ಕಲ್ಲಿಕೋಟೆ, ಕಣ್ಣೂರು ಮುಂತಾದ ಸ್ಥಳಗಳು ಪೋರ್ಚುಗೀಸರಿಂದ ಆಕ್ರಮಣಗಳನ್ನು ಬಲವಾಗಿ ಎದುರಿಸಬೇಕಾಯಿತು.
ಕಲ್ಲಿಕೋಟೆಯ ಸಾಮೂತಿರಿ ರಾಜನು ಪೋರ್ಚುಗೀಸರೊಂದಿಗೆ ಮೊದಮೊದಲು ಸೌಹಾರ್ದದಲ್ಲಿ ಇದ್ದರೂ, ಅವರ ವಂಚನೆ ತಿಳಿದ ಮೇಲೆ ಅವರ ವಿರುದ್ಧ ತಿರುಗಿ ಬೀಳುತ್ತಾನೆ. ಯುದ್ಧಗಳನ್ನೂ ಮಾಡುತ್ತಾನೆ. ಆದರೆ ಕೆಲವು ಸಂದರ್ಭಗಳಲ್ಲಿ ಅವರೊಂದಿಗೆ ರಾಜನು ಒಪ್ಪಂದಗಳನ್ನು ಮಾಡುತ್ತಾನೆ.
ಏಳ್ಮಲೆಯ ರಾಮಂತಳಿ ಎಂಬ ಸ್ಥಳದ ಹೋರಾಟದಲ್ಲಿ 20 ಮುಸ್ಲಿಮರೂ ಶಹೀದಾದರು. ಅದರಲ್ಲಿ 3 ಶಹೀದುಗಳ ಮಯ್ಯಿತುಗಳು ಕಾಣ ಸಿಕ್ಕದಿರುದರಿಂದ ಇಲ್ಲಿ ಇರುವ ಮಕ್ಬರದಲ್ಲಿ ದಫನ್ ಮಾಡಲಿಲ್ಲ. 17 ಹುತ್ಮಾತರುಗಳನ್ನು ಒಂದೇ ಖಬರಿನಲ್ಲಿ ದಫನ್ ಮಾಡಲಾಗಿದೆ. ಅವರೇ ರಾಮಂತಳಿ ಶುಹದಾಗಳು!
ಇಲ್ಲಿಗೆ ಜನರು ಝಿಯಾರತ್ತಿಗೆ ನಿತ್ಯವೂ ಬರುತ್ತಾರೆ. ಪಯ್ಯನೂರ್- ಏಳ್ಮಲೆ ದಾರಿಯಾಲ್ಲಿ 7 ಕಿ.ಮಿ ದೂರವಾಗಿದೆ ರಾಮಂತಳಿ ಮಖಾಮ್.
✍ಗಫೂರ್ ಬಾಯಾರು
🎯🎯🎯🎯🎯🎯🎯


No comments:
Post a Comment