ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Sunday, October 1, 2017
ರೋಹಿಂಗ್ಯನ್ ನಿರಾಶ್ರಿತರಿಗೆ ಸಾಂತ್ವನ ಹಸ್ತದೊಂದಿಗೆ ಮರ್ಕಝ್
ಹರಿಯಾಣ: ಹಲವು ದಶಕಗಳಿಂದ ಮ್ಯಾನ್ಮಾರ್ ಸರ್ಕಾರದ ಚಿತ್ರಹಿಂಸೆಗೆ ಒಳಗಾಗಿ, ನರಕ ಯಾತನೆ ಅನುಭವಿಸಿ ಭಾರತಕ್ಕೆ ಆಗಮಿಸಿ ವಾಸಿಸುತ್ತಿರುವ ರೋಹಿಂಗ್ಯಾ ವಂಶಜರಿಗೆ ಮರ್ಕಝ್'ನ ಸಹಾಯ ಹಸ್ತ.
ಮೂರು ವರ್ಷಗಳ ಹಿಂದೆ ಅವರು ತಮ್ಮ ಮನೆ ಪರಿವಾರಗಳು ಮತ್ತು ತನ್ನ ಒಡಹುಟ್ಟಿದವರನ್ನು ನಷ್ಟಹೊಂದಿ ದುರಂತಗಳನ್ನು ಅನುಭವಿಸಿ ಹರಿಯಾಣದ ಮೆಹ್ವಾಟ್ಟಿ'ಯ ನಿರಾಶ್ರಿತರ ಶಿಬಿರದಲ್ಲಿರುವ ರೋಹಿಂಗೀಯರಿಗೆ ಮರ್ಕಝ್ ರಿಲೀಫ್ ಅಂಡ್ ಚಾರಿಟೇಬಲ್ ಫೌಂಡೇಶನ್ ಆಫ್ ಇಂಡಿಯಾ (RCFI) ದ ಸಹಾಯ ಹಸ್ತದೊಂದಿಗೆ ತಲುಪಿದರು.
ಕಳೆದ ವಾರ ಹರಿಯಾಣದಲ್ಲಿ ಬಲವಾಗಿ ಬೀಸಿದ ಗಾಳಿಯಿಂದ ಮನೆಯ ಛಾವಣಿ ಕುಸಿದ 50 ಮನೆಗಳಿಗೆ RCFI ನೆಲದ ಛಾವಣಿಯ ಹಾಳೆಗಳನ್ನು ವಿತರಿಸಿದರು. ಜೊತೆಗೆ 100 ಕುಟುಂಬಗಳಿಗೆ ವಸ್ತ್ರಗಳು ಮತ್ತು ಪಾದರಕ್ಷೆಗಳನ್ನು ಕೂಡಾ ವಿತರಿಸಲಾಯಿತು.
ಜಮ್ಮು ಮತ್ತು ಕಾಶ್ಮೀರ (3000), ದೆಹಲಿ (1000) ಮತ್ತು ಹರಿಯಾಣ (500) ಎಂಬ ರಾಜ್ಯಗಳಲ್ಲಿ ನೂರಾರು ನಿರಾಶ್ರಿತರ ಶಿಬಿರಗಳು ಇವೆ. ಇಲ್ಲಿ ನೂರಕ್ಕೂ ಹೆಚ್ಚು ಅನಾಥ ಮಕ್ಕಳನ್ನು ಒಳಗೊಂಡ ಶಿಬಿರವಿದೆ. ತಮ್ಮ ಮಕ್ಕಳೊಂದಿಗೆ ಮತ್ತು ಅವರ ವಿಧವೆಯರೊಂದಿಗೆ ಇರಲು ಹೆಣಗಾಡುತ್ತಿರುವ ರೋಹಿಂಗ್ಯಾನ್ಸ್ ಬಾಡಿಗೆ ಹಣ ನೀಡಲು ಸಹ ಹೆಣಗಾಡುತ್ತಿದ್ದಾರೆ. ನಿರಾಶ್ರಿತ ಶಿಬಿರಗಳಲ್ಲಿ ವಾಸಿಸಲು ಮಾಲೀಕರಿಗೆ ವರ್ಷಕ್ಕೆ 25,000 ರೂ. ಒಂದೊಂದು ಕುಟುಂಬದವರು ನೀಡಬೇಕಾಗಿದೆ.
ಭಾರತದಲ್ಲಿ ವಾಸಿಸುತ್ತಿರುವ ರೋಹಿಂಗ್ಯ ವಂಶರಾದ ನಾವು ಮರ್ಕಝ್ ಸಂಸ್ಥೆಯಿಂದ ಹೆಚ್ಚಿನ ಬೆಂಬಲವನ್ನು, ಸಹಾಯವನ್ನು ಆಗ್ರಹಿಸುತ್ತೇವೆ ಎಂದು ರೋಹಿಂಗನ್ ಯೂತ್ ಯೂನಿಯನ್ ಆಫ್ ಇಂಡಿಯಾ ಕಾರ್ಯದರ್ಶಿ ಸಲೀಂ ಮೊಹಮ್ಮದ್ ಹೇಳಿದ್ದರು.
ಕಳೆದ 2 ವರ್ಷದಿಂದ ಎ.ಪಿ. ಉಸ್ತಾದರ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ ಇಫ್ತಾರ್ ಮತ್ತು ಈದ್ ರಿಲೀಫ್ ಕಾರ್ಯವು ಈ ಶಿಬಿರಗಳಲ್ಲಿ ನಡೆಯುತ್ತಿದೆ.
ಹರಿಯಾಣದ ನಿರಾಶ್ರಿತರ ಶಿಬಿರಗಳಲ್ಲಿ ನಡೆಯುತ್ತಿರುವ ಕಾರ್ಯಚಟುವಟಕೆಗಳಿಗೆ RCFI ದೆಹಲಿ ಝೋನ್ ಮ್ಯಾನೇಜರ್ ಸಿದ್ದೀಖ್ ಕಣ್ಣೂರು ಹಾಗೂ ದೆಹಲಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಾದ ಮುಹಮ್ಮದ್ ರಿಫಾಈ, ಮುಹಮ್ಮದ್ ನಾಫಿಹ್, ಮುಹಮ್ಮದ್ ಸ್ವಾಲಿಹ್, ಮುಹಮ್ಮದ್ ಜಾಮಿಹ್ ಎಂಬವರು ನೇತೃತ್ವ ವಹಿಸಿದರು.
ದುಬೈಯ ಪ್ರಮುಖ ಕಾಫಿ ಶಾಪ್ ಗ್ರೂಪ್ ಆದ ಫಿಲ್ಲಿ ಕೆಫೆಯ ಸಹಯೋಗದೊಂದಿಗೆ RCFI ರೋಹಿಂಗ್ಯನ್ ಮುಸ್ಲಿಮರಿಗೆ ಮರ್ಕಝ್ ಸಹಾಯ ಮಾಡುತ್ತಿರುವುದು.
#imm #immtv #MARKAZ #RCFI
#ROHINGYA
#SAVE ROHINGYA
••••••••••
►VISIT: www.islamicmediamission.com
►LIKE: www.facebook.com/islamicmediamission
✍ ಕನ್ನಡಕ್ಕೆ: ಗಫೂರ್ ಬಾಯಾರ್
Labels:
ಮರ್ಕಝ್ & ಇತರರ
Subscribe to:
Post Comments (Atom)
No comments:
Post a Comment