*ನಾಗ🐉 ದೋಷ*
*_ಭಾಗ __1_*
📝 _ಮುಹ್ಯುದ್ದೀನ್ ಕಾಮಿಲ್ ಸಖಾಫಿ,ತೋಕೆ_
*ಎರಡು ಮಾತು.*
ಇಂದು ಜನಸಾಮಾನ್ಯರೆಡೆಯಲ್ಲಿ ನಾಗ ಮತ್ತು ಅದರ ದೋಷಗಳ ಬಗ್ಗೆ ವ್ಯಾಪಕವಾದ ಚರ್ಚೆಗಳು ನಡೆಯುತ್ತಿದೆ.ಅದರೊಂದಿಗೆ ಹಲವು ರೀತಿಯ ನಂಬಿಕೆಗಳೂ ಅಂತೆಕಂತೆಗಳೂ ಪ್ರಚಲಿತದಲ್ಲಿದೆ.ಕೆಲವರು ಹಾವನ್ನು ಕಂಡ ತಕ್ಷಣ ಮುಂಗುಸಿಯಂತೆ ಅದರ ಮೇಲೆರಗುವುದಾದರೆ ಇನ್ನು ಕೆಲವರು ಹಾವನ್ನು ಕೊಲ್ಲಬಾರದು,ಕೊಂದರೆ ನಾಶ ಉಂಟಾಗುತ್ತದೆ ಎಂದೆಲ್ಲಾ ನಂಬುವವರಿದ್ದಾರೆ.
ಅದೇ ರೀತಿ ಕೆಲವರು ನಾಗದೋಷ ನಿವಾರಣೆ ಎಂಬ ಹೆಸರಿನಲ್ಲಿ ಮುಸ್ಲಿಮೇತರರ ಆರಾಧನಾಲಯಗಳಿಗೆ ಹೋಗಿ ಪೂಜೆ ಮಾಡುತ್ತಾರೆ.ಇದೆಲ್ಲವುಗಳನ್ನು ಕಂಡಾಗ ಇದರ ಕುರಿತು ಇಸ್ಲಾಮಿನ ನಿಲುವೇನು ,ಹಾವಿನ ಕುರಿತು ಇಸ್ಲಾಮ್ ಏನೆನ್ನುತ್ತದೆ,ಹಾವನ್ನು ಕೊಲ್ಲಬಾರದೇ?ಕೊಂದರೆ ದೋಷ ಉಂಟಾಗುತ್ತದೆಯೇ?ಉಂಟಾದರೆ ಅದಕ್ಕೆ ಪರಿಹಾರವೇನು?ಎಂಬಿತ್ಯಾದಿ ವಿಷಯಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸುವ ಈ ಲೇಖನವನ್ನು ಗಮನವಿಟ್ಟು ಓದಿ ಸತ್ಯವನ್ನು ಗ್ರಹಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.
*بسم الله الرحمن الرحيم*
*الحمد لله رب العالمين والصلاة والسلام علي سيدنا محمد صلي الله عليه وسلم وعلي اله وصحبه اجمعين.*
*ಹಾವು*🐉
ಒಫೀಡಿಯ ಉಪಸರಣಿಗೆ ಸೇರಿರುವ ಪ್ರಾಣಿಗಳ ಗುಂಪು (ಸ್ನೇಕ್).
ಹಲ್ಲಿ,ಆಮೆ,ಉಡ ,ಮೊಸಳೆಗಳೂ ಇದೇ ವರ್ಗಕ್ಕೆ ಸೇರುತ್ತದೆ.'ಉರಗ' ಪರ್ಯಾಯ ನಾಮ.ಇದು ನೆಲದ ಮೇಲೆ ಹರಿದಾಡುತ್ತಾ ,ಹೊರಳುತ್ತಾ ಅಂಕು ಡೊಂಕಾಗಿ ಚಲಿಸುವ ,ಬಿಲವಾಸಿ ಜೀವನಕ್ಕೆ ಮಾರ್ಪಾಡುಗೊಂಡು ವಿಕಾಸವಾಗಿರುವ ಕಶೇರುಕಗಳ ಒಂದು ಗುಂಪು.ಹಾವುಗಳನ್ನು ಸರೀಸೃಪ (ರೆಪ್ಟಿಲಿಯ)ಎಂಬ ವರ್ಗಕ್ಕೆ ಸೇರಿಸಲಾಗಿದೆ.ಹಾವುಗಳಿಗೆ ಕಾಲುಗಳಾಗಲಿ ,ಮೊಳೆಗಳಾಗಲಿ ಇಲ್ಲ.
ಹಾವಿನ ಶರೀರ ಉರುಳೆ ಆಕಾರದಲ್ಲಿದೆ.ಉದ್ದ ಹನ್ನೆರಡು ಸೆಂಟೀ ಮೀಟರ್ ನಿಂದ ಹತ್ತು ಮೀಟರ್ ವರೆಗೂ ಇರುವುದು.ಮಣ್ಣು ಹಾವು,ಇಮ್ಮಡಿಗನ ಹಾವು ಕೇವಲ ಹನ್ನೆರಡರಿಂದ ಹದಿನೈದು ಸೆಂಟೀಮೀಟರ್ ಉದ್ದವಿದ್ದರೆ ನಾಗರ ಹಾವು ನೂರ ಅರವತ್ತರಿಂದ ನೂರ ಎಪ್ಪತ್ತೈದು ಸೆಂಟೀ ಮೀಟರ್ ವರೆಗೂ ಬೆಳೆಯುತ್ತದೆ.
ಹೆಬ್ಬಾವಂತೂ ಆರರಿಂದ ಏಳು ಮೀಟರ್ ಉದ್ದ ಬೆಳೆಯಬಲ್ಲದು.ದಕ್ಷಿಣಾ ಆಫ್ರಿಕಾದಲ್ಲಿ ವಾಸಿಸುವ ಅನಕೊಂಡಾಗಳು ಹತ್ತು ಮೀಟರಿಗಿಂತಲೂ ಹೆಚ್ಚು ಉದ್ದವಿರುತ್ತದೆ.ಧ್ರುವ ಪ್ರದೇಶಗಳನ್ನು ಹೊರತು ಪಡಿಸಿ ಇನ್ನುಳಿದ ಭೂಭಾಗದ ಎಲ್ಲಾ ಪ್ರದೇಶಗಳಲ್ಲೂ ಹಾವುಗಳಿಗೆ.ಆದರೆ ನಿರ್ಧಿಷ್ಟ ಪ್ರಬೇಧಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತದೆ.
ಉಷ್ಣ ವಲಯಗಳಲ್ಲಿ ಹಾವುಗಳ ಸಂಖ್ಯೆ ಹೆಚ್ಚು.ವಿವಿಧ ಜಾತಿಯ ಹಾವುಗಳು ಇಲ್ಲಿ ಕಾಣಸಿಗುತ್ತದೆ.ಸಮಭಾಜಕವೃತ್ತದಿಂದ ದಕ್ಷಿಣ ಅಥವಾ ಉತ್ತರಕ್ಕೆ ದೂರ ಸರಿದಂತೆ ಉರಗ ಪ್ರಬೇಧಗಳ ಸಂಖ್ಯೆ ಕಡಿಮೆಯಾಗುತ್ತದೆ.ಇಡೀ ಭೂಮಂಡಲದ ಮೇಲೆ 2800 ಕ್ಕೂ ಹೆಚ್ಚು ಪ್ರಭೇಧಗಳಿವೆ ಎಂದು ಅಂದಾಜಿಸಲಾಗಿದೆ.ಆದರೂ ನ್ಯೂಜಿಲೆಂಡ್ ಮತ್ತು ಹವಾಯ ದ್ವೀಪಗಳಲ್ಲಿ ಹಾವುಗಳಿಲ್ಲ.
*ಮುಂದುವರಿಯುವುದು......*
No comments:
Post a Comment