Tuesday, January 16, 2018

*ವರ್ಷಗಳ ಹಿಂದಿನ ಒಂದು ಘಟನೆ*

 ಅರಬ್ ರಾಷ್ಟ್ರಗಳಿಂದ ಧಾರ್ಮಿಕ ಸಂಸ್ಥೆಗಳಿಗೆ ನೀಡುವ ಸಹಾಯದಿಂದ ಕಾಂತಪುರಂ (ಉಸ್ತಾದ್) ಊರಿನಲ್ಲಿ ಛಿದ್ರತೆ  ಬೆಳೆಸುತ್ತಾರೆ ಎಂದು ಅನೇಕ ಜನರು ಸಹಿ ಹಾಕಿದ ಒಂದು ದೂರನ್ನು ಯು.ಎ.ಇ. ಅಂಡರ್ ಸೆಕ್ರೇಟರಿಯವರ ಆಫೀಸ್'ಗೆ ಒಬ್ಬರು ತಲುಪಿಸುತ್ತಾರೆ. ಇದನ್ನು ನೋಡಿ ಸಂಶಯಗೊಂಡ ಅವರು "ಅಲ್ ಇತ್ತಿಹಾದ್" ಪತ್ರದಲ್ಲಿ ಎ.ಪಿ. ಉಸ್ತಾದರ ವಿರುದ್ಧ ಜಾಹಿರಾತು ನೀಡಲು ಮುಂದಾದರು.

ಅನಿರೀಕ್ಷಿತವಾಗಿ ಈ ಜಾಹಿರಾತನ್ನು ಕಂಡ ಎ.ಪಿ. ಉಸ್ತಾದರ ಒಬ್ಬ ಹಿತೈಷಿ ವಿಷಯದ ನಿಜಾಂಶವನ್ನು ಯು.ಎ.ಇ. ಆಡಳಿತಾಧಿಕಾರಿಗಳಿಗೆ  ಮನವರಿಕೆ ಮಾಡಿ ಕೊಟ್ಟರು.

ನಂತರ ಯು.ಎ.ಇ. ಯ ಅಧಿಕಾರಿಗಳು ಕಾಂತಪುರಂ ಉಸ್ತಾದರನ್ನು ಹಾಗೂ ದೂರು ನೀಡಿದವರನ್ನು ತಮ್ಮ ಆಫೀಸ್'ಗೆ ಕರೆಯಿಸಿದರು. ಆದರೆ ಉಸ್ತಾದರ ಮೇಲೆ ಆರೋಪ ಹೊರಿಸಿ  ದೂರು ನೀಡಿದವರು ಕಚೇರಿಗೆ ಬರದೆ ಪಾಲಾಯನಗೈದರು.

 ಇದನ್ನು ತಿಳಿದ ಅಂಡರ್ ಸೆಕ್ರೇಟರಿ ಆ  ಜಾಹಿರಾತನ್ನು ಹಿಂದೆ ಪಡೆದರು. ಆರೋಪವಿರುವ ದಾಖಲೆ ಪತ್ರವನ್ನು ಕಾಂತಪುರಂ ಉಸ್ತಾದರಿಗೆ ಕೊಟ್ಟರು.

ಹೀಗೆಯೇ ನಾನಾ ರೀತಿಯ ಕುತಂತ್ರದಿಂದ ಮುಕ್ತವಾಗಿ ಉಸ್ತಾದರು ಉನ್ನತಿಯಿಂದ ಉನ್ನತಿಗೆ ತಲುಪಿದರು.
🍄🍄🍄🍄🍄🍄🍄🍄🍄

ಮರ್ಕಝ್ 40ನೇ ವಾರ್ಷಿಕ ಸಮ್ಮೇಳನ 2018 ಜನವರಿ 04'5'6'7 ಮರ್ಕಝ್ ನಗರ್, ಕಾರಂದೂರ್, ಕೊಹಿಕೋಡ್

✍ಗಫೂರ್ ಬಾಯಾರ್
🔻🔻🔻🔻🔻🔻🔻🔻🔻

No comments:

Post a Comment