Tuesday, January 16, 2018

ಝಿಯಾರತ್ತ್ ಕೇಂದ್ರ 57 ಪಾಣತ್ತೂರ್ ಶುಹದಾಗಳು.

*ಝಿಯಾರತ್ತ್ ಕೇಂದ್ರ​*
      *➡5⃣7⃣*
------------------------
 *#ಪಾಣತ್ತೂರ್ ಶುಹದಾಗಳು*
*ಕರಿಕೆ, ಕಾಂಞಕಾಡ್*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
♒♒♒♒♒♒♒♒♒

ಕಾಸರಗೋಡು ಜಿಲ್ಲೆಯ ಗುಡ್ಡಗಾಡು ಪ್ರದೇಶವಾದ ಪಾಣತ್ತೂರು ಕಾಂಞಕಾಡ್'ನಿಂದ 50 ಕಿಲೋ ಮೀಟರ್ ಸಂಚರಿಸಿದರೆ ಎಮ್ಮೆಮಾಡು- ಮೈಸೂರು ಮಾರ್ಗವಾಗಿ ಶುಹದಾಗಳು ಅಂತ್ಯ ವಿಶ್ರಮ ಪಡೆಯುತ್ತಿರುವ ಈ ಮಖಾಮಿಗೆ ತಲುಪಬಹುದು.

ಪ್ರತಿ ವರ್ಷವೂ ಅತೀ ವಿಜೃಂಭಣೆಯಿಂದ ಇಲ್ಲಿ ನಡೆಯುವ ಉರೂಸ್ ಹೆಸರುವಾಸಿಯಾಗಿದ್ದು ಶತಮಾನಗಳ ಹಿಂದೆ ದೀನಿಗಾಗಿ ಹೋರಾಡಿ ಹುತಾತ್ಮರಾದ ಶುಹದಾಗಳು ಅಂತ್ಯ ವಿಶ್ರಮಗೊಳ್ಳುತ್ತಿರುವ ಝಿಯಾರತ್ ಕೇಂದ್ರವಾಗಿದೆ ಪಾಣತ್ತೂರ್ ದರ್ಗಾ ಶರೀಫ್.

ಭಾರತದ ವಿವಿಧ ಭಾಗಗಳಲ್ಲಿ ದೀನಿ ಪ್ರಭೋದನೆ ನಡೆಸುತ್ತಾ ಆಗಮಿಸಿದ ಈ ಮಹಾತ್ಮರು ಆಧ್ಯಾತ್ಮಿಕ ಮತ್ತು ಶಾಂತಿಯ ಸಂದೇಶ ವಾಹಕರಾಗಿ ಇಸ್ಲಾಮಿನ ಪ್ರಚಾರದಲ್ಲಿ ತೊಡಗಿದ್ದಾಗ, ಶತ್ರುಗಳ ಉಪಟಳ ಸಹಿಸಲಾರದ ಹಂತ ತಲುಪಿದಾಗ ಕೊನೆಗೆ  ಎದುರಾಳಿಗಳೊಂದಿಗಿನ ಪ್ರತಿರೇೂಧ ಹೋರಾಟದಲ್ಲಿ ಅಲ್ಲಾಹನ ಸಂತೃಪ್ತಿಯಲ್ಲಿ ವಿಶ್ವಾಸ ಅರ್ಪಿಸಿ ಶಹೀದಾದ ಮಹಾತ್ಮರಾಗಿದ್ದಾರೆ.

ನೇರ್ಚೆಗಳಿಗೂ, ದಾನ ಧರ್ಮಗಳಿಗೂ ಬಹಳ ಪುಣ್ಯವೂ, ಫಲಸಿದ್ಧಿಯೂ, ಪ್ರಕಟವಾಗುವ ಪಾಣತ್ತೂರ್ ಮಖಾಂ ಶರೀಫ್'ನಲ್ಲಿ ಝಿಯಾರತ್ತ್ ಮಾಡಿದರೆ ಆತ್ಮಶಾಂತಿಯೊಂದಿಗೆ ಭಾವೀ ಬದುಕಿಗೆ ನೆಮ್ಮದಿ ಮತ್ತು ಐಶ್ವರ್ಯ  ಲಭಿಸುತ್ತದೆನ್ನುತ್ತಾರೆ ಹಿರಿಯರು.

ದಾರಿ: ಕಾಂಞಕಾಡ್, ಕರಿಕೆ, ಪಾಣತ್ತೂರ್

✍ ಗಫೂರ್ ಬಾಯಾರ್
🔖🔖🔖🔖🔖🔖🔖🔖🔖

No comments:

Post a Comment