*#ಕಿತಾಬ್_ಹಿಡಿದಿದ್ದ_ಕೈಗಳಿಗೆ #ಕಾನೂನಿನ_ಪುಸ್ತಕವನ್ನೂ_ಕೊಟ್ಟ #ಹೆಮ್ಮೆಯ_ವಿದ್ಯಾಕೇಂದ್ರ_ಮರ್ಕಝ್*
📚📒📕📗📘📙📚
✍ಗಫೂರ್ ಬಾಯಾರ್
===================
*ಅಲ್ಲಾಹನ ಕಲಾಮಾದ ಕುರ್ಆನ್ ಮತ್ತು ಅವನ ಹಬೀಬರ ﷺ ಸುನ್ನತ್ತಾದ ಹದೀಸನ್ನು ಮನಬಂದಂತೆ ವ್ಯಾಖ್ಯಾನಿಸುತ್ತಾ ಸುನ್ನತ್ ಜಮಾಅತಿನ ಮೇಲೆ ದಾಳಿ ನಡೆಸಲು ಬರುವ ಕಪಟಿಗಳನ್ನು ಕುರ್ಆನ್ ಮತ್ತು ಹದೀಸಿನ ಆಧಾರದಿಂದಲೇ ಹಿಮ್ಮೆಟ್ಟಿಸಿ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ಎತ್ತಿ ಹಿಡಿದ ಪಾರಂಪರ್ಯ ಹೊಂದಿದ ಸುನ್ನತ್ ಜಮಾಅತಿನ ದಿಗ್ಗಜರಾದ ಕಾಂತಾಪುರಂ ಎ.ಪಿ ಉಸ್ತಾದರ ಶಿಷ್ಯರು ಇನ್ನು ಮುಂದೆ.....*
*ಅನಾದಿ ಕಾಲದಿಂದಲೂ ಒಂದೇ ತಾಯಿಯ ಮಕ್ಕಳಂತೆ ಒಂದಾಗಿದ್ದ ಹಿಂದೂ ಮುಸ್ಲಿಮರಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಪರಸ್ಪರ ಭಿನ್ನತೆ ಮೂಡಿಸಿ ಲವ್ ಜಿಹಾದ್ ನಂತಹ ಕಟ್ಟುಕತೆ ಕಟ್ಟಿ ಸಮಾಜವನ್ನು ಒಡೆದು ಆ ಮೂಲಕ ತಮ್ಮ ರಾಜಕೀಯ ಲಾಭ ಪಡೆಯಲೆತ್ನಿಸುತ್ತಿರುವ ಕಪಟ ಸಮಾಜವಿರೇೂಧಿ ಶಕ್ತಿಗಳಿಗೂ ಸಂವಿಧಾನಾತ್ಮಕವಾದ ಕಾನೂನಿನ ಮೂಲಕವೇ ತಿರುಗೇಟು ನೀಡಲು ಮರ್ಕಝೆಂಬ ಹೆಮ್ಮೆಯ ದೀನೀ ಸ್ಥಾಪನೆಯಿಂದ ಬಿರುದು ಪಡೆದ ಸಖಾಫಿಗಳು ಕಾನೂನು ಪದವಿ ಪಡೆದು ಕರಿಕೇೂಟು ಧರಿಸಿ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೇೂರಾಡಲು ಅಣಿಯಾಗಿಯಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.*
*ಇಸ್ಲಾಮ್ ಎಂದರೇನೆಂದು ಕಲಿಯಲು ಕಿತಾಬ್ ಹಿಡಿದ ಕೈಗಳಿಗೆ ಭಾರತದ ಕಾನೂನಿನ ಪುಸ್ತಕವನ್ನೂ ಕೊಟ್ಟು ಕಾನೂನು ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವ ಮರ್ಕಝ್'ನ ಈ ಕ್ರಮ ನಿಜಕ್ಕೂ ಶ್ಲಾಘನೀಯ.*
*ಇದರೊಂದಿಗೆ ಈ ತನಕ ಶರೀಅತ್'ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಸ್ಲಾಮಿಕ್ ವಾದದ ಹೆಸರಿನಲ್ಲಿ ನೂತನವಾದವನ್ನು ಮುಂದಿಟ್ಟು, ಇಸ್ಲಾಮಿನ ತತ್ವ ಸಿದ್ಧಾಂತಗಳ ಆಧಾರದಿಂದ ವಾದ ಮಂಡಿಸುವ ಬದಲು ತಮ್ಮ ಕುಬುದ್ದಿಯಿಂದಲೇ ವಾದಿಸುತ್ತಿದ್ದ "ಕರಿ ಕೋಟು" ಧರಿಸಿದ ವಹ್ಹಾಬಿಗಳಿಗೂ ಇನ್ನು ಕೋರ್ಟು ಕೊಠಡಿಯಲ್ಲಿ ಹಿಂದಿನಂತೆ ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೆ ಪ್ರಯಾಸಪಡಬೇಕಾದೀತು. ಕಾರಣ ಅವರೆದುರು ವಾದ ಮಂಡಿಸಲಿರುವ ಮುಖಗಳು ತಮಾಷೆಗಾಗಿಯೂ ಸುಳ್ಳು ಹೇಳಬಾರದೆಂದು ಕಲಿಸಿದ ಅಲ್ಲಾಹನ ರಸೂಲರ ﷺ ಸುನ್ನತ್ತನ್ನು ಮೈಗೂಡಿಸಿಕೊಂಡವರೂ ಮತ್ತು ನೂತನವಾದಿಗಳಿಗೆ ಸಿಂಹ ಸ್ವಪ್ನರಾದ ಶೈಖುನಾ ಕಾಂತಪುರಂ ಉಸ್ತಾದರ ಆಶೀರ್ವಾದ ಪಡೆದ ಮಕ್ಕಳೂ ಆಗಿದ್ದಾರೆ.*
*"ಮರ್ಕಝ್"ನ ಮಡಿಲಲ್ಲಿ ಬೆಳೆದ ಕಾರಣದಿಂದ ಸುನ್ನತ್ ಜಮಾಅತ್'ನೊಂದಿಗೆ ಆಂತರಿಕ ಭಾಂಧವ್ಯದೊಂದಿಗೆ, ಸಹೇೂದರ ಧರ್ಮದೊಂದಿಗೂ ಭಾವನಾತ್ಮಕ ಸಂಬಂಧವನ್ನು ಮೈಗೂಡಿಸಿಕೊಂಡಿರುವ ಈ ನ್ಯಾಯವಾದಿಗಳು, ಸಂವಿಧಾನಾತ್ಮಕವಾದ ಕಾನೂನಿನೊಂದಿಗೆ ಇಸ್ಲಾಮಿಕ್ ಕಾನೂನಾದ ಶರೀಅತ್ ಎಂದರೇನು?, ಅದರ ವಿಧಿ ವಿಧಾನಗಳೇನು? ಇಸ್ಲಾಂ ಎಂದರೇನು? ಅದು ಜಗತ್ತಿಗೆ ಸಾರಿದ ಸಂದೇಶವೇನು ಎಂದೂ ಸಹ ಸಮಾಜಕ್ಕೆ ವಿವರಿಸಲಿರುವರು.*
*ವಿದ್ಯಾಕೇಂದ್ರವಾಗಿ ವಿಶ್ವದೆಲ್ಲೆಡೆ ಅರಿಯಲ್ಪಡುತ್ತಿರುವ "ಮರ್ಕಝ್"*
*ಮುಸ್ಲಿಂ ಸಮೂಹಕ್ಕೆ ಮತ್ತು ನಾಗರಿಕ ಸಮಾಜಕ್ಕೆ ನೀಡುತ್ತಿರುವ ಅಸಾಮಾನ್ಯ ಸೇವೆಯಿಂದಾಗಿ ಇಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಮುಂದೊಂದು ದಿನ ಮರ್ಕಝ್'ನಲ್ಲಿ ವಿದ್ಯಾರ್ಜನೆಗಾಗಿ ಲೇೂಕವೇ ಕಲ್ಲಿಕೇೂಟೆಯತ್ತ ಮುಖಮಾಡಲಿದೆಯೆಂಬುದನ್ನು ನೆನೆವಾಗ ಹೃದಯ ತುಂಬಿ ಬರುತ್ತದೆ.*
*"ಮರ್ಕಝ್" ಈ ಲೋಕಕ್ಕೆ ಸಮರ್ಪಿಸಿದ "ಸಖಾಫಿಗಳು" ಎಂಬ ವಿದ್ವಾಂಸರು ತಮ್ಮ "ಧಾರ್ಮಿಕ ಮತ್ತು ಐಚ್ಚಿಕ" ತಿಳುವಳಿಕೆಯಿಂದ ಸಮಾಜದ ನಾನಾ ರಂಗಗಳಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ಅವರ ಸಾನಿದ್ಯಗಳಿಂದ ಪುಳಕಿತವಾದ ಸುನ್ನೀ ಸಮೂಹ ಮರ್ಕಝನ್ನು ಹೆಮ್ಮಯಿಂದ ಕೊಂಡಾಡುತ್ತಿದೆ. ಈ ಅಭಿಮಾನಕ್ಕೆ ಭಾಜನರಾದ ಯುವ ಪ್ರತಿಭೆಗಳು ಈಗಾಗಲೇ ಮಸೀದಿ ಮತ್ತು ಮದರಸಗಳಿಗೆ ಸೀಮಿತವಾಗಿರುವವರು" ಎಂಬ ಲೇಬೆಲ್'ನಿಂದ ಹೊರಬಂದ ಸಾವಿರಾರು ಸಂಖ್ಯೆಯ ಸಖಾಫಿಗಳು ಹೆಸರಾಂತ ಭಾಷಣಗಾರರಾಗಿಯೂ, ಲೇಖಕಗಾರರಾಗಿಯೂ, ಚಿಂತಕಗಾರರಾಗಿಯೂ, ಎಂಜಿನಿಯರ್'ಗಳಾಗಿಯೂ, ಸರಕಾರಿ ಉದ್ಯೋಗಸ್ಥರಾಗಿಯೂ ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದಾರೆ.*
*ಇನ್ನು ವಕೀಲರಾಗಿಯೂ ಸೇವೆ ಸಲ್ಲಿಸುವ ಮೂಲಕ ಆ ಸ್ಥಾನವನ್ನೂ ತುಂಬಿ ಸಮಾಜದ ಏಳಿಗೆಗೆ ಶ್ರಮಿಸಲು ಹೊರಟ ಈ ಸಮಯದಲ್ಲಿ ಮರ್ಕಝ್'ನಿಂದ ಕಾನೂನು ಪದವಿ ಪಡೆದು ಮುಖ್ಯವಾಹಿನಿಗೆ ಧುಮುಕಲಿರುವ ಹೊಸ ಮುಖಗಳಿಗೆ ನನ್ನ ಸಲಹೆಯೇನೆಂದರೆ...*
*ಕಾನೂನು ಪಡೆದಾಕ್ಷಣ ನೀವು ಕಪ್ಪು ಕೇೂಟ್ ಧರಿಸಿ ನ್ಯಾಯಾಲಯದಲ್ಲಿ ವಾದಿಸಲೇಬೇಕಿಲ್ಲ. ನಾಗರಿಕ ಕಾನೂನು, (ಸಿವಿಲ್ ಲಾ) ಅಪರಾಧ ಕಾನೂನು, ಅಂತರರಾಷ್ಟ್ರೀಯ ಕಾನೂನು, ಕಾರ್ಮಿಕ ಕಾನೂನು, ತೆರಿಗೆಗೆ ಸಂಬಂಧಿಸಿದ ಕಾನೂನು, ಆಸ್ತಿಯ ಬೌದ್ಧಿಕ ಹಕ್ಕು ಕಾನೂನು (ಪೇಟೆಂಟ್ ಲಾ) ಹೀಗೆ ವಿವಿಧ ವಿಭಾಗಗಳಲ್ಲಿ ವಿಶೇಷ ಪರಿಣತಿ ಪಡೆದು ಸಲಹೆಗಾರರಾಗುವ ಮೂಲಕ ಸೇವೆ ಸಲ್ಲಿಸಬಹುದು.*
*ರೂಬಿ ಜೂಬಿಲಿ ಸಮ್ಮೇಳನದಲ್ಲಿ ಸುನ್ನತ್ ಜಮಾಅತಿನ ಸದಸ್ಯರಾದ ನಮ್ಮೆಲ್ಲರಿಗೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ನಿಮ್ಮನ್ನು ನೇರವಾಗಿ ಅಭಿನಂದಿಸಲು ಸರ್ವಶಕ್ತನಾದ ಅಲ್ಲಾಹನು ತೌಫೀಕ್ ನೀಡಲಿ ಆಮೀನ್.*
✍ಗಫೂರ್ ಬಾಯಾರ್
🌷🌷🌷🌷🌷🌷🌷🌷🌷
*_ಶೈಕ್ಷಣಿಕ ಜಾಗೃತಿಯ ಅಭಿಯಾನ, ರೂಬಿ ಜೂಬಿಲಿ ಸಮ್ಮೇಳನ. ಜನವರಿ 05'06'07' 2018 ಕಾರಂದೂರ್, ಕಲ್ಲಿಕೋಟೆ._*
🌷🌷🌷🌷🌷🌷🌷🌷🌷
No comments:
Post a Comment