Friday, January 19, 2018

*ನಾಗ🐉 ದೋಷ*

*_ಭಾಗ __2_*

📝 _ಮುಹ್ಯುದ್ದೀನ್ ಕಾಮಿಲ್ ಸಖಾಫಿ,ತೋಕೆ_

*ದಟ್ಟ* ಕಾಡು ,ಹುಲ್ಲು ಗಾವಲು,ಮರಳುಗಾಡುಗಳಲ್ಲಿ ಬಿಲ,ಪೊಟರೆ,ತರಲೆಗಳ ರಾಶಿ,ಸಿಹಿ ನೀರಿನ ಕೊಳ,ಕೆರೆ,ನದಿ ಮುಂತಾದೆಡೆ ವಾಸಿಸುವ ವಿವಿಧ ಪ್ರಭೇದದ ಹಾವುಗಳನ್ನು ಕಾಣಬಹುದಾಗಿದೆ.ಸಿಹಿ ನೀರಿನಲ್ಲಿ ವಾಸಿಸುವ ಹಾವುಗಳೆಲ್ಲವೂ ವಿಷ ರಹಿತ ನಿರುಪದ್ರವಿ ಪ್ರಾಣಿಗಳು.ಸಮುದ್ರ ,ಮಹಾ ಸಾಗರಗಳಲ್ಲಿ ವಾಸಿಸುವ ಹಾವುಗಳು ವಿಷಯುಕ್ತ.

ಹಾವುಗಳ ಬಣ್ಣ ವರ್ಣರಂಜಿತ ಮತ್ತು ವೈವಿಧ್ಯಮಯ.ಮೇಲ್ಭಾಗದಲ್ಲಿ ಕಪ್ಪು,ಕಂದು,ಹಳದಿ ಅಥವಾ ಗೋದಿ ಬಣ್ಣ,ಕೆಳಭಾಗದಲ್ಲಿ ಬಿಳಿ ಇಲ್ಲವೆ ತಿಳಿ ಹಳದಿ ಅಥವಾ ಗೋದಿ ಬಣ್ಣ.ಕೆಲವು ಹಾವುಗಳ ಬಣ್ಣ ಅವು ವಾಸಿಸುವ ಪರಿಸರದ ಬಣ್ಣವನ್ನೇ ಹೋಲುತ್ತದೆ.ಹಸಿರು ಹಾವು ,ಕುಳಿ ಮಂಡಲ ಹಾವುಗಳ ಬಣ್ಣ ಹಸುರು.ಮರಳಿನ ಇಲ್ಲವೆ ಒಣಗಿದ ತರಗೆಲೆಗಳ ಬಣ್ಣದ ಹಾವುಗಳೂ ಇವೆ.

ಹಾವಿನ ಶರೀರದ ಹೊರಭಾಗದಲ್ಲಿ ಕೈ,ಕಾಲುಗಳಂಥ ಯಾವುದೇ ಅಂಗಗಳಿರುವುದಿಲ್ಲ.ಆದ್ದರಿಂದ ಅದು ನೆಲದ ಮೇಲೆ ಉದರ ಅಥವಾ ಕೆಳಭಾಗದಿಂದ ತೆವಳುತ್ತಾ ಮುಂದೆ ಸಾಗುತ್ತದೆ.ಬೆನ್ನುಮೂಳೆ,ಪಕ್ಕೆಲುಬುಗಳು ವಿಭಿನ್ನವಾಗಿ ಮಾರ್ಪಾಡಾಗಿರುವುದರಿಂದ ,ಶರೀರದ ಮುಂದಿನ ಅರ್ಧಭಾಗಗಳನ್ನು ನೆಲದಿಂದ ಮೇಲಕ್ಕೆ ಎತ್ತಬಲ್ಲವು,ದೂರದಿಂದ ನೋಡುವಾಗ ನುಣುಪಾದ ಮಿರಿಮಿರಿ ಮಿಂಚುವ ಶರೀರವಿದ್ದಂತೆ ಕಂಡರೂ ಶರೀರದ  ತುಂಬೆಲ್ಲಾ ಹೊರಚರ್ಮದಿಂದ ಬೆಳೆದ ವಿವಿಧ ಆಕಾರದ ಹೊರಪುಗಳಿರುತ್ತದೆ.ಬೆಳವಣಿಗೆಯಿಲ್ಲದ  ಹೊರ ಚರ್ಮದ ಭಾಗದ  ಹಾವು ಆಗಾಗ್ಗೆ ಕಳಚಿ ಹೊಸ ಚರ್ಮವನ್ನು ಪಡೆಯುತ್ತದೆ.ಇದನ್ನು ಪೊರೆ ಕಳಚುವುದು ಎನ್ನುತ್ತಾರೆ.ವರ್ಷಕ್ಕೆ ಮೂರು ನಾಲ್ಕು ಬಾರಿಯಾದರೂ ಪೊರೆ ಕಳಚುತ್ತದೆ.
ಹಾವಿನ ಕಣ್ಣ ರೆಪ್ಪೆಗಳು  ಒಂದಕ್ಕೊಂದು ಕೂಡಿಕೊಂಡಿರುತ್ತದೆ.ಅವು ಅಲುಗಾಡುವುದಿಲ್ಲ.ಕಣ್ಣಿನ ಹೊರಭಾಗದಲ್ಲಿ ಪಾರದರ್ಶಕ ಟೊಪ್ಪಿಯಂತಿರುವ ವಸ್ತು ಆವರಿಸಿರುತ್ತದೆ.ಇದರಿಂದ ಹಾವು ಸದಾ ಕಣ್ಣು  ತೆರೆದಿರುವಂತೆ ಭಾಸವಾಗುತ್ತದೆ.ಹೀಗಾಗಿ ಹಾವು ನಿದ್ರಿಸುತ್ತಿದೆಯೇ ಎಚ್ಚರದಿಂದಿದೆಯೇ ಎಂದು ತಿಳಿಯುವುದಿಲ್ಲ.ಹಾವುಗಳ ದೃಷ್ಠಿ ಮಂದ.ಮುಂದಿರುವ ವಸ್ತುಗಳನ್ನು ಸರಿಯಾಗಿ ಗುರುತಿಸಲಾರವು.
ಹೊರಕಿವಿಗಳಿಲ್ಲ.ಕೇವಲ ಒಳಕಿವಿ ಮಾತ್ರ ಇರುತ್ತದೆ.ಆದ್ದರಿಂದ ಹಾವುಗಳಿಗೆ ಗಾಳಿಯ ಮೂಲಕ ಪ್ರಸರವಾಗುವ ಯಾವ ಶಬ್ಧವೂ ಕೇಳಿಸಲಾರದು.ಭೂಮಿಯ ಮೇಲುಂಟಾಗುವ ಕಂಪನಗಳನ್ನು ಅವು ಗ್ರಹಿಸಬಲ್ಲವು.

ಹಾವಿನ ಶರೀರವನ್ನು ತಲೆ,ಮುಂಡ ಹಾಗೂ ಬಾಲ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು.ಸಾಮಾನ್ಯವಾಗಿ ತಲೆ  ತ್ರಿಕೋಣಾಕಾರವಾಗಿದ್ದು ಅದರ ಮುಂಬಾಗ ಚೂಪಾಗಿರುತ್ತದೆ.ಹಲವು ಪ್ರಭೇಧಗಳಲ್ಲಿ  ಮುಂಭಾಗ ಅರ್ಧವೃತ್ತಾಕಾರದಲ್ಲಿ ಭಾಗಿರುತ್ತದೆ.ತಲೆಯ ಭಾಗ ಶರೀರದ ಉಳಿದ ಭಾಗಕ್ಕಿಂತ ಸ್ವಲ್ಪ ದಪ್ಪ.ರುಂಡ ಮತ್ತು ಬಾಲದ ಭಾಗಗಳನ್ನು ಪ್ರತ್ಯೇಕವಾಗಿ ಗುರುತಿಸಲು ಸಾದ್ಯವಿಲ್ಲ.ಆದರೆ ಗುದದ್ವಾರದ ಹಿಂಭಾಗವನ್ನು  ಬಾಲವೆಂದು ಹೇಳುತ್ತೇವೆ.ಶರೀರದ ಹಿಂಭಾಗಕ್ಕೆ ಸರಿದಂತೆ ಬಹುತೇಕ ಹಾವುಗಳ ಬಾಲದ ಗಾತ್ರ ಕಡಿಮೆಯಾಗುತ್ತಾ ತುದಿ ಚಿಕ್ಕದಾಗಿರುತ್ತದೆ.ಇಮ್ಮಡಿಗನ ಹಾವಿನ ಬಾಲ ಮೊಂಡು.ಸಾಗರವಾಸೀ ಹಾವುಗಳ ಬಾಲದ ತುದಿ ಮೇಲಿನಿಂದ ಕೆಳಭಾಗಕ್ಕೆ ಚಪ್ಪಟೆಯಾಗಿರುತ್ತದೆ.


*ಮುಂದುವರಿಯುವುದು......*

No comments:

Post a Comment