Tuesday, January 16, 2018

*#ಕಣ್ಣಾರೆ_ಕಂಡರೂ_ಪರಾಂಬರಿಸಿ #ನೇೂಡು*
🍄🍄🍄🍄🍄🍄🍄🍄🍄

✍ ಗಫೂರ್ ಬಾಯಾರ್
===================

 ಉಸ್ಮಾನಿಯ್ಯ ಕಾಲಘಟ್ಟದ ಖಲೀಫರಾಗಿದ್ದ *ಸುಲ್ತಾನ್ ಸುಲೈಮಾನುಲ್ ಖಾನೂನಿ (ರ)* ರವರು ಎಂದಿನಂತೆ ತನ್ನ ಶಯನಗೃಹದಲ್ಲಿ ಮಲಗಿದ್ದವರು ಒಂದು ದಿನ ಬೆಳಗಿನ ಜಾವದ ಸಮಯ ಕನಸಿನಲ್ಲೇನೇೂ ಕಂಡವರಂತೆ ಬೆಚ್ಚಿಬಿದ್ದು ತಟ್ಟನೆ ನಿದ್ರೆಯಿಂದ ಎಚ್ಚೆತ್ತರು.

ತಕ್ಷಣ ಕಾವಲು ಭಟನನ್ನು ಕರೆದು ತಮ್ಮ ಕುದುರೆಯನ್ನು ಸಿದ್ದಪಡಿಸುವುದರೊಂದಿಗೆ ಒಂದು ಯಾತ್ರೆಗೆ ಅಣಿಯಾಗಲು ಆಜ್ಞಾಪಿಸಿದರು.
(ಸುಲ್ತಾನರು ಮಾರುವೇಶಧಾರಿಯಾಗಿ ಸಂಚರಿಸುತ್ತಾ ಪ್ರಜೆಗಳ ಯೇೂಗ ಕ್ಷೇಮ ವಿಚಾರಿಸುವುದರೊಂದಿಗೆ ಸಮಸ್ಯೆಗಳೇನಾದರೂ ಇದ್ದರೆ ಅದನ್ನು ನೇರವಾಗಿ ಕಂಡು ಅಗತ್ಯ ಪರಿಹಾರ ಒದಗಿಸಿ ಸಮಸ್ಯೆ ಬಗೆಹರಿಸುವುದು ಖಲೀಫರ ಹವ್ಯಾಸವಾಗಿತ್ತು)

ಬೆಳಗಿನ ಜಾವದ ಸಮಯ ಸುಲ್ತಾನರು ಮಾರುವೇಶದಲ್ಲಿ ಭಟನೊಂದಿಗೆ ಕುದುರೆಯೇರಿ ಹೊರಟರು.

ಹಾಗೆ ಸುಲ್ತಾನರ ಉದ್ದೇಶಿತ ಸ್ಥಳ ತಲುಪುವಾಗ ಬೆಳಕು ಹರಿದಿತ್ತು.

ಆಗ ಅದೋ..,
 ಪಟ್ಟಣವೊಂದರ ಗಲ್ಲಿಯಲ್ಲಿ  ಮೃತದೇಹವೊಂದು ಅನಾಥವಾಗಿ ಬಿದ್ದಿದೆ...!!
ದಾರಿ ಹೇೂಕರನೇಕರು ಕಂಡರೂ ಕಾಣದವರಂತೆ ಮುಂದೆ ಸಾಗುತ್ತಿದ್ದಾರೆ. ಕೆಲವರು ಆ ಮೃತದೇಹವನ್ನು ತುಚ್ಛಭಾವದಿಂದ ಕಂಡು ಅಸಹ್ಯ ಪಡುತ್ತಿದ್ದರು.

ಅದನ್ನು ಕಂಡ ಸುಲ್ತಾನರು ಆಶ್ಚರ್ಯ ಚಕಿತರಾಗಿ ಯಾ ಅಲ್ಲಾಹ್.. ಎಂತಹ ದುರವಸ್ಥೆಯಿದು? ನಡುಬೀದಿಯಲ್ಲಿ ಮೃತನಾಗಿರುವ ವ್ಯಕ್ತಿಯೊಬ್ಬನ ಮೃತದೇಹದ ಅಂತ್ಯ ಕರ್ಮ ನಿರ್ವಹಿಸುವ ಬದಲು ಈ ಜನರೇಕೆ ಹೀಗೆ ತಿರಸ್ಕಾರಭಾವದಿಂದ ವರ್ತಿಸುತ್ತಿದ್ದಾರಲ್ಲ ಎಂದು ಮನದಲ್ಲೇ ಮರುಗುತ್ತಾ..

 ಅಲ್ಲಿದವನೊಬ್ಬನೊಂದಿಗೆ ಸುಲ್ತಾನರು ಕೇಳಿದರು;

"ಇದು ಯಾರ ಮಯ್ಯತ್ತಾಗಿದೆ..?"

ಆಗ ಆತ ಹೇಳಿದ "ಮೃತ ವ್ಯಕ್ತಿಯು ಈ ಊರಿನ ಕುಪ್ರಸಿದ್ಧ ವ್ಯಕ್ತಿಯಾಗಿದ್ದನು
*"ಪ್ರತಿನಿತ್ಯ ಶರಾಬು ಕುಡಿಯುವುದೂ ವೇಶ್ಯಾಲಯಗಳಿಗೆ ಭೇಟಿ ನೀಡುವುದು ಅವನ ನಿತ್ಯ ಕಾಯಕವಾಗಿತ್ತು.."*
ಈತನಿಗೆ ಪತ್ನಿ ಇದ್ದಾಳೆ ಆದರೆ..  ಮಕ್ಕಳಾಗಲೀ ಬಂಧು ಬಳಗವಾಗಲೀ ಇಲ್ಲದ ಹತಭಾಗ್ಯನಾಗಿದ್ದಾನೆ.. ಈತನ ವರ್ತನೆಯಿಂದ ಬೇಸತ್ತ ಕಾರಣದಿಂದಾಗಿದೆ ಯಾರೂ ಕೂಡ ಈ ಮಯ್ಯತ್ತಿನತ್ತ ತಿರುಗಿ ನೋಡುತ್ತಿಲ್ಲ." ಎಂದ

ಈ ವಿಷಯ ಕೇಳಿದಾಗ ಸುಲ್ತಾನರಿಗೆ ಕೇೂಪ ನೆತ್ತಿಗೇರಿತು..

"ಯಾರಾದರೇನಂತೆ ಮುತ್ತು ನಬಿ ﷺ ಯವರ ಸಮುದಾಯದಲ್ಲಿ ಒಳಪಟ್ಟ ಮನುಷ್ಯನಲ್ಲವೇ..?

ಸುಲ್ತಾನ್ ಸುಲೈಮಾನ್ (ರ) ರವರು ತಕ್ಷಣವೇ ಆ ಮಯ್ಯತ್ತನ್ನು ತನ್ನ ಕುದುರೆ ಮೇಲೆ ಹಾಕಿಕೊಂಡು ಮೃತನ ಮನೆಯನ್ನು ಅರಸುತ್ತಾ ಹೊರಟು ಕೊನೆಗೂ ಆತನ ಮನೆ ತಲುಪಿದರು..

ಆ ಮನೆಯಲ್ಲಿ ಮೃತ ವ್ಯಕ್ತಿಯ ಪತ್ನಿ ಒಬ್ಬಳೇ ಇದ್ದಳು.

ಆಕೆಯನ್ನು ಕಂಡಾಗ ಮೃತದೇಹವನ್ನು ತೇೂರಿಸುತ್ತಾ ಈ ವ್ಯಕ್ತಿ ನಿನ್ನ ಪತಿಯೇ? ಎಂದು ಸುಲ್ತಾನರು ಕೇಳಿದಾಗ..

ಹೌದೆನ್ನುತ್ತಾ ಆ ಮಹಿಳೆ ತನ್ನ ಪ್ರಿಯತಮನ ಮೃತದೇಹ ಕಂಡ ಕೂಡಲೆ ಇವರಿಗೇನಾಯಿತು? ಎಂದು ಕೇಳುತ್ತಾ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು...

ಆಗ ನಡೆದ ಸಂಗತಿಯನ್ನು ವಿವರಿಸಿದ ನಂತರ ನಿನ್ನ ಈ ಪತಿ ಸದಾ ಹೆಣ್ಣು ಮತ್ತು ಹೆಂಡಗಳ ದಾಸನಾಗಿದ್ದ ಎನ್ನುತ್ತಾರೆ ಈ ಗ್ರಾಮದ ಜನತೆ ನಿಜವೇ...? ಎಂದು
ಸುಲ್ತಾನರು ಕೇಳಿದರು..

ಆಗ ಆ ಮಹಿಳೆ ನೀಡಿದ ಉತ್ತರ ಕೇಳಿದ ಸುಲ್ತಾನ್ ಸುಲೈಮಾನ್ (ರ) ಮತ್ತು ಅವರ ಕಾವಲು ಭಟ ಇಬ್ಬರೂ ಆಶ್ಚರ್ಯ ಚಕಿತರಾಗಿ ಹೇೂದರು.

ತನ್ನ ಮುಂದಿರುವುದು ಈ ನಾಡನ್ನು ಆಳುತ್ತಿರುವ ಖಲೀಫರಾದ ಸುಲ್ತಾನ್ ಸುಲೈಮಾನ್ ಖಾನೂನಿ (ರ.ಅ) ಎಂದು ತಿಳಿಯದ ಆ ಸ್ತ್ರೀ ವಿವರಿಸಲಾರಂಭಿಸಿದಳು.

ಪ್ರಿಯ ಸಹೇೂದರಾ...
*"ನನ್ನ ಪತಿ ಲೌಕಿಕವಾಗಿ ಪರಿತ್ಯಾಗಿ (زاهد) ಯೂ, ಆರಾಧನೆಗಳನ್ನು ಹೆಚ್ಚಿಸಿದವರೂ  (عابد) ಆಗಿದ್ದರು. ಆದರೆ ನಮಗೆ ಇಲ್ಲಿಯ ತನಕ ಅಲ್ಲಾಹನು ಮಕ್ಕಳನ್ನು ಕರುಣಿಸಲಿಲ್ಲ. ಹಾಗಾಗಿ ಒಂದು ಮಗುವಿಗಾಗಿ ನಾವು ಬಹಳ ಹಂಬಲಿಸುತ್ತಿದ್ದೆವು. ನನ್ನ ಪತಿಯವರು ತಮ್ಮ ಸಂಪಾದನೆಯ ಹಣದಿಂದ ಮದ್ಯದಂಗಡಿಯಿಂದ ಸಾದ್ಯವಾದಷ್ಟು ಶರಾಬುಗಳನ್ನು ಖರೀದಿಸಿ ತಂದು ಆ ಮದ್ಯವನ್ನೆಲ್ಲ ಪಕ್ಕದ ಹೊಳೆಗೆಸೆದು ನಾಶಪಡಿಸಿದ ಬಳಿಕ  "ಅಲ್ ಹಮ್ದುಲಿಲ್ಲಾಹ್".. ಅಲ್ಲಾಹನೇ.. ಮುಸ್ಲಿಂ ಯುವಕರಲ್ಲಿ ಈ ಮದ್ಯದ ಕಾರಣದಿಂದ ಉಂಟಾಗಬಹುದಾಗಿದ್ದ ಪಾಪಗಳನ್ನು ಸ್ವಲ್ಪ ಮಟ್ಟಿಗಾದರೂ ನನ್ನಿಂದ ತಡೆಯಲು ಸಾದ್ಯವಾಯಿತಲ್ಲಾ...!"*
*ಎಂದು ಸಮಾಧಾನ ಪಡುತ್ತಿದ್ದರು.*

ಅಂತೆಯೇ
*ಬೀದಿ ಬದಿಗಳಲ್ಲಿ ವ್ಯಭಿಚಾರವನ್ನೇ ಕಾಯಕವನ್ನಾಗಿಸಿಕೊಂಡ ವೇಶ್ಯೆಯರ ಬಳಿ ತೆರಳಿ ಇಂದು ನೀನು ಯಾರೊಂದಿಗೂ ವ್ಯಭಿಚರಿಸದೆ ನೇರವಾಗಿ ಮನೆಗೆ ಮರಳಬೇಕು ಎಂಬ ನಿಬಂಧನೆಯೊಂದಿಗೆ ಅವರಿಗೆ ಅಂದಿನ ಕೂಲಿ ಕೊಟ್ಟು ಕಳುಹಿಸಿದ ನಂತರ ಹೇಳುತ್ತಿದ್ದರು..*
*ಈ ಮಹಿಳೆಯ ಹಾಗೂ ಇವಳನ್ನು ಸಮೀಪಿಸಬೇಕಿದ್ದವರ ಪಾಪಗಳನ್ನು ಈ ದಿನದ ಮಟ್ಟಿಗೆ ತಡೆಯಲು ನನ್ನಿಂದ ಸಾದ್ಯವಾಯಿತಲ್ಲಾ.*
*"ಅಲ್ ಹಮ್ದುಲಿಲ್ಲಾಹ್"*
ಎಂದು ನಿಟ್ಟುಸಿರು ಬಿಡುತ್ತಿದ್ದರು.
ಎನ್ನುತ್ತಾ..
ಮಾತು ಮುಂದುವರಿಸಿದ ಆಕೆ

ಸಹೇೂದರಾ...

*ನನ್ನವರ ಈ ಕೆಲಸ ಕಾರ್ಯಗಳ ಸತ್ಯಾಸತ್ಯತೆ ನನಗೆ ತಿಳಿದಿದೆಯಾದರೂ ನಾಡಿನ ಜನತೆ ಅಪಾರ್ಥ ಕಲ್ಪಿಸಿರುವ ಸಂಗತಿ ನಾ ಬಲ್ಲೆ ಹಾಗಾಗಿ ನನ್ನವರನ್ನು ಇದರಿಂದ ತಡೆಯಲು ನಾನು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೆ..*
*ಕೊನೆಗೊಮ್ಮೆ ನಾನವರ ಬಳಿ ಹೇಳಿದೆ.*

ಪ್ರಿಯರೇ...
*ತಾವು ಮಾಡುತ್ತಿರುವುದು ಒಳ್ಳೆಯ ಕೆಲಸವಾದರೂ ಜನತೆ ನಿಮ್ಮ ಸೇವೆಗೆ ಅಪಾರ್ಥ ಕಲ್ಪಿಸುತ್ತಿದ್ದಾರೆ..*
*ಈ ಕಾಯಕ ಹೀಗೆಯೇ ಮುಂದುವರೆದರೆ ಕೊನೆಗೆ ನೀವು ಮೃತರಾದಾಗ ನಿಮ್ಮನ್ನು ಸ್ನಾನ ಮಾಡಿಸಲೋ, ನಮಾಝ್ ನಿರ್ವಹಿಸಲೋ, ದಫನ್ ಮಾಡಲೋ ಯಾರೂ ಬರಲಾರರು..*
ಎಂದಾಗ..

ನನ್ನ ಆ ಮಾತುಗಳನ್ನು ಸಂಪೂರ್ಣ ಕೇಳಿದ ನನ್ನ ಪ್ರಿಯ ಪತಿಯವರು ನಗುತ್ತಾ ಹೇಳಿದರು..

" ಓ.. ಪ್ರಿಯೆ.."
*ನನ್ನ ಈ ಕೆಲಸದ ಬಗ್ಗೆ ಯಾರು ಏನೆಂದರೇನು? ಸತ್ಯಾವಸ್ಥೆ ಅಲ್ಲಾಹನಿಗೆ ತಿಳಿದಿದೆಯಲ್ಲ. ಅಷ್ಟಕ್ಕೂ ನಾನು ಈ ಕೆಲಸ ಮಾಡುತ್ತಿರುವುದು ಅಲ್ಲಾಹನ ಸಂತೃಪ್ತಿಗಾಗಿ ಹಾಗಾಗಿ ಸರ್ವಶಕ್ತನಾದ ಅಲ್ಲಾಹನು ಅನುಗ್ರಹದಿಂದ ನನ್ನ ಮಯ್ಯಿತ್ತ್'ನ ಅಂತ್ಯ ಕರ್ಮ ನಿರ್ವಹಿಸುವವರು ಮತ್ತು ಮಯ್ಯತ್ತ್ ನಮಾಝ್'ಗೆ ನೇತೃತ್ವ ನೀಡುವವರು ಈ ರಾಜ್ಯದ ಸುಲ್ತಾನರಾದ ಸುಲೈಮಾನ್ ಖಾನೂನಿ(ರ)ರಾಗಿದ್ದಾರೆ. ಅವರೊಂದಿಗೆ ಅವರ ಮಂತ್ರಿಗಳೂ, ಈ ನಾಡಿನ ಎಲ್ಲಾ ವಿದ್ವಾಂಸರುಗಳೂ, ಮತ್ತು ನಾಡಿನ ಬಹುತೇಕ ಮುಸ್ಲಿಮರು ಪಾಲ್ಗೊಳ್ಳಲಿದ್ದಾರೆ."*

ಈ ವಿಷಯ ಕೇಳಿದ ಸುಲ್ತಾನರು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದರು..

ಪ್ರಿಯ ಸಹೇೂದರೀ...

 *"ವಲ್ಲಾಹಿ..*
*ನಾನು ಸುಲ್ತಾನ್ ಸುಲೈಮಾನ್ ಖಾನೂನಿ (ರ) ಆಗಿದ್ದೇನೆ.*

 *ಅಲ್ಲಾಹನಾಣೆ ಸತ್ಯ..*
*ತುಂಬು ಗೌರವದಿಂದ ನಾನು ಈ ಮಯ್ಯಿತ್ತಿನ ಸ್ನಾನ ಮಾಡಿಸಿ ಅಂತ್ಯ ವಿಧಿ ವಿಧಾನದೊಂದಿಗೆ ದಫನ್ ಮಾಡುವೆನು..!*

ನಂತರ ಸುಲ್ತಾನರು ತನ್ನ ಸೈನಿಕನತ್ತ ತಿರುಗಿ "ಈ ಸಹೇೂದರಿ ಹೇಳಿದ್ದೆಲ್ಲವೂ ಸತ್ಯವಾಗಿರುತ್ತದೆ. ಹಾಗಾಗಿ ನಾಡಿನ ಎಲ್ಲ ಪ್ರಜೆಗಳೂ ಈ ಅಂತ್ಯಕ್ರಿಯೆಯಲ್ಲಿ  ಭಾಗವಹಿಸಲು ಬೇಕಾದ ವ್ಯವಸ್ಥೆ ಮಾಡಿ ಎಂದು ಆಜ್ಞಾಪಿಸಿದರು.."

ಮಾತ್ರವಲ್ಲ, ಉಸ್ಮಾನಿಯ್ಯ ಖಲೀಫರುಗಳನ್ನು ಮಾತ್ರ ದಫನ್ ಮಾಡುವ ಖಬರ್'ಸ್ತಾನ್'ನಲ್ಲಿ ಆ ಮಹಾನರ ಮಯ್ಯತ್ತನ್ನು ದಫನ್ ಮಾಡಲಿಕ್ಕಾಗಿ ರೆಡಿ ಮಾಡಲು ನಿರ್ದೇಶಿಸಿದರು..

ಚರಿತ್ರೆ ಹೇಳುತ್ತದೆ..
_ತುರ್ಕಿಯ ಇತಿಹಾಸದಲ್ಲಿ ಅಂದಿನ ತನಕ ನಡೆದ ಅಂತ್ಯಕ್ರಿಯೆಗಳ ಪೈಕಿ ಅತಿ ದೊಡ್ಡ ಮಯ್ಯತ್ ನಮಾಝ್ ಆ ವ್ಯಕ್ತಿಯದಾಗಿತ್ತು ಅಂತ._

🔰🔰🔰🔰
_ನೀತಿ ಪಾಠ_

*ಕಣ್ಣಾರೆ ಕಂಡರೂ ಪರಾಂಬರಿಸಿ ನೇೂಡು.*

*ಆತ್ಮಜ್ಞಾನಿಗಳ ಬದುಕಿನ ಹಾದಿ ವರ್ಣನಾತೀತವೂ ನಮ್ಮಂಥಹ ಸಾಧಾರಣ ಜನರ ಚಿಂತನೆಗಳಿಗೂ ನಿಲುಕದ ಅಸಾಮಾನ್ಯ ವಿಷಯವೂ ಆಗಿರುತ್ತದೆ.*

✍ ಗಫೂರ್ ಬಾಯಾರ್
⚜⚜⚜⚜⚜⚜⚜⚜⚜

No comments:

Post a Comment