Friday, January 19, 2018

*ಅಂಬಲಕ್ಕಡವ್ ಹಮೀದ್ ಫೈಝಿಯ ವಾಯ್ಸ್ ಕ್ಲಿಪ್ ಶೇರ್ ಮಾಡುವ ಮುನ್ನ....*

ಅಬೂಶಝ✍

ಸುನ್ನಿಗಳ ಐಕ್ಯ ಅದೇನು ದೊಡ್ಡ ವಿಷಯ ಅಲ್ಲ, ವಿಶ್ವಾಸ/ಕರ್ಮ ವಿಷಯಗಳಲ್ಲಿ ಅವರ ಮಧ್ಯೆ ಅನೈಕ್ಯತೆಯ ಸಮಸ್ಯೆ ತಲೆದೋರಲೇ ಇಲ್ಲ.
ಮೌಲೀದ್, ರಾತೀಬು, ಕುತುಬಿಯ್ಯತ್ ಹೀಗೆ ಎಲ್ಲದರಲ್ಲೂ ಎ.ಪಿ/ಇ.ಕೆ ಪಂಗಡಕ್ಕೆ ಭಿನ್ನತೆಯೇ ಇಲ್ಲ.
ಅದೇನಿದ್ದರೂ ಸಂಘಟನಾತ್ಮಕ ತರ್ಕ.
ಆದರೆ ಸಳಪಿಗೆ ಮಾತ್ರ ಉರಿಯುತ್ತಿದೆ. ಎಷ್ಟರವರೆಗೆ ಅಂದರೆ ಅವನೀಗ ನಿದ್ದೆಯಲ್ಲೂ ಒದ್ದೆಯಾಗುತ್ತಾನೆ. ಅಷ್ಟೊಂದು ಹೆದರಿಕೆ ಅವನನ್ನು ಆವರಿಸಿದೆ.

ಈಗಲೂ ಟಾಯ್ಲೆಟ್ ಟಾಂಕಿಯ ನೀರಿನಂತೆ ಏಳಕ್ಕೇರದೆ ಮೂರಕ್ಕಿಳಿಯದೆ ಸಂತಾನ ನಾಶ ಅನುಭವಿಸುತ್ತಿರುವ ಸಳಪಿಗೆ ಸುನ್ನಿಗಳು ಐಕ್ಯವಾಗುವುದನ್ನು ಅರಗಿಸಿಕೊಳ್ಳಲು ಸಾದ್ಯವಾಗದೆ ಸಾಮಾಜಿಕ ತಾಣಗಳಲ್ಲಿ ಆಲದ ಮರ ನಷ್ಟ ಹೊಂದಿದ ಬೇತಾಳನಂತೆ ಅತ್ತಿಂದಿತ್ತ ಅಂಡಲೆಯುತ್ತಿದ್ದಾನೆ.

ಪ್ರವಾದಿ ಮುಹಮ್ಮದ್ ಮುಸ್ಥಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾಕ್ಕೆ ಬಂದಾಗ ಅಲ್ಲಿ ವರ್ಷಾನುಗಟ್ಟಲೆ ಯುಧ್ಧ ಸಂಘರ್ಷದಲ್ಲಿ ಏರ್ಪಟ್ಟಿದ್ದ ಔಸ್/ಖಝ್ರಜ್ ಎಂಬ ಒಂದೇ ಆಶಯ ಆದರ್ಶದ ಎರಡು ಪಂಗಡಗಳ ಗ್ರೂಫಿಸಂ ಕಾಳಗವನ್ನು ರಮ್ಯವಾಗಿ ಪರಿಹರಿಸುವ ಮೂಲಕ ಅವರೆಡೆಯಲ್ಲಿ ಐಕ್ಯತೆ ಗಟ್ಟಿಗೊಳಿಸಿದಾಗ ಅದು ಯಹೂದಿಗಳಿಗೆ ನುಂಗಲಾರದ ತುತ್ತಾಗಿತ್ತು!

ಕಾರಣ ಔಸ್/ಖಸ್ರಜ್ ಎಂಬ ಬಲಾಢ್ಯ ಗ್ರೂಪುಗಳು ತಮ್ಮ ಸಂಪತ್ತುಗಳನ್ನೆಲ್ಲಾ ಪರಸ್ಪರ ಯುಧ್ಧ ನಡೆಸುವ ಸಲುವಾಗಿ ವಿನಿಯೋಗಿಸಿ ವಿನಾಶದತ್ತ ಮುಖ ಮಾಡಿ ದಿವಾಳಿಯಾಗಿದ್ದರು!

ಆಗ ಯಹೂದಿಗಳು ಒಳಗಿಂದೊಳಗೆ ಸಂತೋಷಪಟ್ಟಿದ್ದರು.
ಇದೇ ಯಹೂದಿಗಳು ಅವರಿಗೆ ಬಡ್ಡಿಗೆ ಹಣ ನೀಡಿ ಅವರನ್ನು ಮತ್ತಷ್ಟು ಪಾಪರ್ ಸೂಟ್ ಮಾಡಿ ಊರು ಬಿಟ್ಟು ಹೋಗುವಂತೆ ಮಾಡುವ ಪ್ಲಾನ್ ಹಾಕಿದ್ದರು.
ಪರಸ್ಪರ ಯುಧ್ಧ ಮಾಡಿ ಕೊಂದು,ಕೊಲೆ ಮಾಡುವ ಮೂಲಕ ಅವರ ಮೆಜರ್ಟಿ ಕುಂಟಿತವಾಗಿ, ಬಹು ಸಂಖ್ಯಾತ ವರ್ಗವನ್ನು
ಅಲ್ಪಸಂಖ್ಯಾತರನ್ನಾಗಿ ಮಾಡುವ ಹುನ್ನಾರವೂ ಯಹೂದಿಗಳಿಗೆ ಇತ್ತು.

ಹಾಗಾಗಿಯೇ ಯಹೂದಿಗಳು ಔಸ್/ಖಝ್ರಜ್ ಪಂಗಡಗಳು ಪರಸ್ಪರ ಯುಧ್ಧ ಮಾಡುವಂತೆ ಕುಮ್ಮಕ್ಕು ನೀಡುತ್ತಿದ್ದರು. ಅದಕ್ಕಾಗಿ ಆರ್ಥಿಕ ಸಹಾಯ ಕೂಡ ಮಾಡುತ್ತಿದ್ದರು. ಅವರ ಉದ್ದೇಶ ಒಂದೇ ಆ ಎರಡು ಗ್ರೂಪುಗಳು ಗ್ರೂಫಿಸಂ ಹೆಸರಿನಲ್ಲಿ ಬಡಿದಾಡಿ ಸಾಯಬೇಕು. ಕಾರಣ ಅವರು ಒಟ್ಟಾದರೆ ಯಹೂದಿಗಳಿಗೆ ಉಳಿಗಾಲವಿಲ್ಲವೆಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು.
ಆದರೆ ಅಲ್ಲಾಹನ ತೀರ್ಮಾನ ಬೇರೆಯೇ ಇತ್ತು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೂಲಕ, *ಅಲ್ ಅನ್ಸಾರ್* ಎಂಬ ಲೇಬಲಿನಡಿಯಲಿ ಅವರನ್ನು ಒಗ್ಗೂಡಿಸಲಾಯಿತು.

 ಯಹೂದಿಗಳು ಸಮಯ ಸಿಕ್ಕಿದಾಗೆಲ್ಲಾ ಅವರೆಡೆಯಲ್ಲಿ ಪುನಃ ಭಿನ್ನತೆ ಸ್ರೃಷ್ಟಿಸಲಿಕ್ಕಾಗಿ ಹಳೆಯ ಕಾಳಗದ ಕ್ಲಿಪ್ ಗಳನ್ನು ನೆನಪಿಸಿ ಅವರನ್ನು
ಉದ್ರೇಕಗೊಳಿಸುವ ಕುತಂತ್ರ ಉಪಯೋಗಿಸಿದಾಗ ಅದಕ್ಕೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಬ್ರೇಕ್ ಹಾಕಿದರು.
ಯಹೂದಿಗಳ ಕುತಂತ್ರ ಅರಿತ ಔಸ್/ಖಝ್ರಜ್ ಪಂಗಡ ಮತ್ತಷ್ಟು ಒಗ್ಗಟ್ಟು ಪ್ರದರ್ಶಿಸಿದರು. ಪರಿಣಾಮ ಯಹೂದಿಗಳಿಗೆ ಮದೀನಾದಿಂದಲೇ ಗಂಟು ಮೂಟೆ ಕಟ್ಟಬೇಕಾಯಿತು.

*(ಇಲ್ಲಿ ನಮ್ಮ ಸುನ್ನೀ ಕಾರ್ಯಕರ್ತರು ಗಮನಿಸಬೇಕಾದ ಕಾರ್ಯವೊಂದಿದೆ. ಸುನ್ನೀ ಐಕ್ಯಕ್ಕೆ ತೊಡಕಾಗುವ ಬಹು ಹಮೀದ್ ಫೈಝಿ ಅಂಬಲಕ್ಕಡವ್ ರವರ ಒಂದೆರಡು ವಾಯ್ಸ್ ಕ್ಲಿಪ್ ಗಳನ್ನು ಸಳಪಿಗಳು ವ್ಯಾಪಕವಾಗಿ ಪ್ರಚಾರ ಮಾಡುತ್ತಾರೆ. ಅದನ್ನು ನಾವೇಕೆ ಶೇರ್ ಮಾಡಬೇಕು? ಅದು ಹಳೇಯದಾಗಲಿ/ಹೊಸತಾಗಲಿ ಅದನ್ನು ಶೇರ್ ಮಾಡುವ ಅಗತ್ಯ ಇದೆಯಾ? ನಮ್ಮ ನೇತೃತ್ವ ಪ್ರಗಲ್ಭರಾದ ಸಮರ್ಥರಾದ ಸರಿಸಾಟಿಯಿಲ್ಲದ ಘಟಾನುಘಟಿ ನಾಯಕರನ್ನು ಐಕ್ಯ ವಿಷಯ ಚರ್ಚಿಸಲು ನೇಮಿಸಿರುವಾಗ ಅವರನ್ನು ಓವರ್ ಟೇಕ್ ಮಾಡಿ ನಾವೇ ಆ ವಿಷಯ ಚರ್ಚಿಸುವ ಔನತ್ಯವಾದರೂ ಏನು? ಅಂತಹ ಕ್ಲಿಪ್ ಗಳು ನಮ್ಮ ಉಲಮಾಗಳ ಗಮನಕ್ಕೆ ಬರಲಿಲ್ಲ ಎಂಬ ಮೌಡ್ಯಧಾರಣೆ ನಮಗಿದೆಯೇ? ಅವರು ಅದರ ಬೇಕು ಬೇಡಗಳನ್ನು ಚರ್ಚಿಸಿ ಪಕ್ವತೆಯ, ಸುನ್ನತ್ ಜಮಾತಿಗೆ ಇಝ್ಝತ್ ತರುವ ಉತ್ತಮ ತೀರ್ಮಾನ ತರುವರೆಂಬ ಖಚಿತ ಧಾರಣೆ ಇದ್ದೂ ಕೂಡಾ, ಆ ಕ್ಲಿಪ್ ಶೇರ್ ಮಾಡಿ ಸಳಪಿಗಳನ್ನು ತ್ರಪ್ತಿಪಡಿಸಿದ ಪಾಪ ತಲೆ ಮೇಲೆ ಹೊತ್ತೊಯ್ಯುವ ಉಸಾಬರಿ ಬೇಕಾ..!? ಯಾಕೆ ನಾವು ಗಂಭೀರವಾಗಿ ಚಿಂತಿಸುವುದಿಲ್ಲ?)*

ಸಳಪಿಗಳಿಗೆ ನಿದ್ದೆ ಇಲ್ಲವೆಂದು ನಾನು ಸುಮ್ಮನೆ ಹೇಳಿದ್ದಲ್ಲ,

'ಝೀ'ರೋ ಸಳಪಿ ತಿರುಕೇಶ ಹಾಗೂ ಪಾನ ಪಾತ್ರದ ವಿಷಯ ಕೆದಕಿ ಯಹೂದಿಗಳು
ಔಸ್/ಖಝ್ರಜ್ ಗಳ ಮಧ್ಯೆ
ಫಿತ್ನ ಮಾಡಿದಂತೆ ಫಿತ್ನ ಮಾಡಲು ಆರಂಭಿಸಿದ್ದಾನೆ.
ಮತ್ತೊಂದು ಕಡೆಯಿಂದ ಇಬ್ನ್ ಎಂಬ 'ಈಚೆ' ಎಪಿ ಉಸ್ತಾದರ ನ್ನು ಹಾಗೂ ಎಸ್ಸೆಸ್ಸೆಫ್ ನ್ನು ಆರ್ ಎಸ್ ಎಸ್ ನ ಹಟ್ಟಿಯಲ್ಲಿ ಕಟ್ಟಲು ಶ್ರಮಿಸುತ್ತಾ,ಫಿತ್ನ ಮಾಡಲು ಶುರು ಮಾಡಿದ್ದಾನೆ.
ಇದಕ್ಕೆಲ್ಲಾ ಬಿಸಿ ಬಿಸಿ ಉತ್ತರ ನಮ್ಮ ಕಾರ್ಯಕರ್ತರು ಆವಾಗಲೇ ಕೊಟ್ಟು ಸಳಪಿಯ ಅಂಟು ಬಂದ್ ಮಾಡಿದ್ದರು.

ಇದೀಗ ಪುನಃ ಹಳೆಯದ್ದೆನ್ನಲ್ಲಾ ಕೆದಕುತ್ತಾ ಬಂದಿದ್ದಾರೆ

ಇಂದು ಎ.ಪಿ ಉಸ್ತಾದರನ್ನು ಟಾರ್ಗೆಟ್ ಮಾಡಿದ ಸಳಪೀ ನಾಳೆ ಮಂಗಳೂರು ಖಾಝಿ ತಾಖಾ ಉಸ್ತಾದ್
ಆರ್ ಎಸ್ ಎಸ್ ನ ಫಂಕ್ಷನ್ ನಲ್ಲಿ ಭಾಗಿಯಾದ ಫೋಟೋ ಹಾಕುತ್ತಾನೆ. ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದ್, ಪೇಜಾವರ ಶ್ರೀಯವರ ಜೊತೆಗಿರುವ ಫೋಟೋ ಹಾಕಿ ಇಕೆ ಸಮಸ್ತದವರನ್ನು
ಆರ್ ಎಸ್ ಎಸ್ ಮಾಡುತ್ತಾನೆ.
ಬಿಜೆಪಿಯ ನಳಿನ್ ಕುಮಾರ್ ಜತೆ ಬುಜಕ್ಕೆ ಬುಜ ಕೊಟ್ಟು ರೋಡ್ ಶೋ ಮಾಡುವ ಬಹು ಸೆಯ್ಯದ್ ಆತೂರು ತಂಙಳ್ ಫೋಟೋ ಬರುತ್ತದೆ. ಜೊತೆಗೆ ಪ್ರಧಾನ ಮಂತ್ರಿ ಮೋದಿಯ ಕಲರ್ ಫುಲ್ ಫೋಟೋ ಅಚ್ಚು ಹಾಕಿದ ತೇಜಸ್ ಪತ್ರಿಕೆಯ ಪ್ರದರ್ಶನವೂ ಆಗುತ್ತದೆ. ಹೀಗೆ ಫೋಟೋ ಅಳೆದು ನೋಡುವಾಗ ಎಲ್ಲರೂ ಬಿಜೆಪಿ ಮತ್ತು ಆರ್ ಎಸ್ ಎಸ್ ಎಂದೇ ಬಿಂಬಿತವಾಗುತ್ತದೆ.
ಆದರೂ ಎಪಿ ಉಸ್ತಾದ್ ಮಾತ್ರ ಈ ಸಳಪಿಯ ಕಣ್ಣಲ್ಲಿ
*'ಕಾವಿ ಮೌಲಾನಾ'* ಆಗುವುದರ ಲೋಜಿಕ್ ಅರ್ಥವಾಗುವುದೇ ಇಲ್ಲ.

ಅಂದ ಹಾಗೆ ತಿರುಕೇಶದ ವಿಷಯದಲ್ಲಿ 'ಝೀ'ರೋ ಸಳಪಿ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ.

"ತಿರುಕೇಶ ಬರಕತ್ ನ ವಿಷಯ ಆಗಿರುವುದರಿಂದ ಇಷ್ಟವಿರುವವರಿಗೆ ಅದರ ಬರಕತ್ ಪಡೆಯಬಹುದು, ಅದರ ಬರಕತ್ ಪಡೆಯಲೇ ಬೇಕೆಂದು ಯಾವೊಬ್ಬನನ್ನು ನಾವು ನಿರ್ಭಂಧಿಸುವುದಿಲ್ಲ. ನನಗೆ ಅದು ತಿರುಕೇಶವೆಂದು ಪೂರ್ಣ ವಿಶ್ವಾಸ ಇದೆ. ನಾನು ಅದರ ಬರಕತ್ ಪಡೆಯುತ್ತೇನೆ.
ವಿಶ್ವಾಸವಿಟ್ಟವರಿಗಾಗಿ *ಅದರ ಪ್ರದರ್ಶನ ಮತ್ತು ಬರಕತಿನ ನೀರು ಫ್ರೀಯಾಗಿ ವಿತರಣೆ ಮಾಡಲಾಗುತ್ತಿದೆ.*
ಅಲ್ಲದವರಿಗೆ ಅವರ ಪಾಡು. ಯಾರನ್ನು ನಿರ್ಭಂಧಿಸುವಂತಿಲ್ಲ."

👆 ಇದು ಎಪಿ ಉಸ್ತಾದರ ಘೋಷಣೆ.
ಒಟ್ಟಾರೆಯಾಗಿ ಹೇಳಿದರೆ
ಐಕ್ಯ ಚರ್ಚೆಗೆ ತಿರುಕೇಶ ತೊಡಕಾಗಲ್ಲ ಎಂದರ್ಥ.

ಅತೀವ ಕಷ್ಟ ಸಹಿಸಿ ಹೆರಿಗೆಯಾದ ತಾಯಿಗೆ ಇಲ್ಲದ ನೋವು ಮಗುವನ್ನು ನೋಡಲಿಕ್ಕೆ ಬಂದವಳಿಗೆ ಯಾಕೆ?
ಈ ಪ್ರಶ್ನೆ ಸಳಪಿಗಳಲ್ಲಿ ಕೇಳಿ ಪ್ರಯೋಜನವಿಲ್ಲ.
ಸಳಪಿಯ ತಲೆಯಲ್ಲಿರುವ ಮೆದುಳು *'ಝೀ'ರೋ* ತಾನೇ?

-ಅಬೂಶಝ

No comments:

Post a Comment