Tuesday, January 16, 2018

*#ಹಾ.. #ಹಿ.. #ಹೂ.. #ಹಯ್ಯ್..
#ಎಂಬ_ದಿಕ್ರ್'ನ #ಕುರಿತು..*

✍ಗಫೂರ್ ಬಾಯಾರ್
🍁🍁🍁🍁🍁🍁🍁🍁🍁

ಮಷಾಯಿಖುಗಳು ಅವರ ಶಿಷ್ಯಂದಿರಿಗೂ, ಮುರೀದುಗಳಿಗೂ ಅವರ ಧಾರ್ಮಿಕ ಬೆಳವಣಿಗೆಗೂ, ಉನ್ನತಿಗೂ ಬೇಕಾಗಿ ನಿರ್ದೇಶಿಸಿ ಕೊಡುವ ಪ್ರತ್ಯೇಕ ದಿಕ್ರ್'ಗಳಾಗಿದೆ ಇದು....

🍂 ಇಂತಹ "ದಿಕ್ರ್'ಗಳು" ಹೇಳುವುದಕ್ಕೆ ಸಂಬಂಧಿದಂತೆ ಮಹಾತ್ಮರಾದ 'ಹಾಫಿಳ್ ಇಬ್ನು ಹಜರ್ ಅಸ್'ಕಲಾನಿ (ರ) ರವರ ಹತ್ತಿರ ಕೇಳಿದಾಗ, ಇದು ಅನುವದನೀಯವಾಗಿದೆ ಎಂಬ ಉತ್ತರ ನೀಡಿರುವರು.

🍂ನಮ್ಮ ಊರಿನಲ್ಲಿಯೂ, ನೆರೆಯ ರಾಜ್ಯಗಳಲ್ಲೂ ಕಾಣುವ "ಶಾದುಲಿ/ ಮುಹಿಯಿದ್ದೀನ್/ ರಿಫಾಈ ರಾತೀಬುಗಳಲ್ಲಿ ಇಂತಹ ದಿಕ್ರ್'ಗಳು ಕಾಣಸಿಗುತ್ತದೆ. ✅

🍂ಅದರ ಗುರುಗಳು ಇಂತಹ ದಿಕ್ರ್'ಗಳನ್ನು ಹೇಳಲು ತಮ್ಮ ಮುರೀದುಗಳಿಗೂ ನಿರ್ದೇಶನ ನೀಡುತ್ತಿರುವುದು.
ಅಲ್ಲಾಹನೆಡೆಗೆ ವಿಲೀನವಾದ ಮಹಾತ್ಮರು ಅವರ ಆತ್ಮದಾಹವಿರುವ/ಸತ್ಯಾನ್ವೇಷಕರಾದ ಶಿಷ್ಯಂದಿರ ಆತ್ಮೀಯ ಬೆಳವಣಿಗೆಗೆ ಅನುಕೂಲವಾಗಿ ಒಟ್ಟುಗೂಡಿಸಿದಂತಹ ದಿಕ್ರುಗಳಾಗಿದೆ ಇದು.

🍂ಇದರ ಸಾಮಾನ್ಯ ರೀತಿಯ ಕಲಿಮತ್ತು ತೌಹೀದ್'ನ್ನು‌‌ ಚುಟುಕುಗೊಳಿಸಿದ ಸಣ್ಣ ಶಬ್ದ, ವಚನ, ಹರ್'ಫ್ ಎಂಬುವುದಾಗಿದೆ.

👉🏻 ಆತ್ಮ ಬೆಳವಣಿಗೆಗಿರುವ ಅಧ್ಯಾಪನದ ಒಂದು ರೀತಿಯಾಗಿದ್ದು ಈ ದಿಕ್ರುಗಳ ಮೂಲ ಅರ್ಥ.  ಬಾಹ್ಯವಾಗಿ ತಮಾಷೆಯಾಗಿ ಕಾಣುವ ಇದರ ಒಳಾರ್ಥ ನಿಜಕ್ಕೂ ನಮ್ಮ ಆತ್ಮೀಯ  ಸಂಪತ್ತಾಗಿದೆ.✅

🍁🍁ಸಣ್ಣ ಉದಾಹರಣೆ ಕೆಳಗೆ👇

⭕ಹಾ, ಹೂ, ಹಿ, ಹಯ್ಯ್ ಇದರ ಅರ್ಥವನ್ನು ಕೆಳಗೆ ನೋಡಿ👇

📗ಹಾ: *ತಿಳಿಯಬೇಕು*
📗ಹೂ: *ಅಲ್ಲಾಹು*
📗ಹಿ: *ಹೇಳಬೇಕು*
📗ಹಯ್ಯ್: *ಅವನು ಎಂದೆಂದಿಗೂ ಜೀವನಿರುವವನಾಗಿದ್ದಾನೆ..*

🤔ನೀವೇ ಚಿಂತಿಸಿ.. ಈ ದಿಕ್ರ್'ನಲ್ಲಿ ತಪ್ಪೇನಿದೆ!!?
ಪ್ರತಿಯೊಬ್ಬರೂ ಇಂತಹ ದಿಕ್ರುಗಳ ಒಳಾರ್ಥವನ್ನು  ಮನವರಿಕೆ ಮಾಡಲು ಶ್ರಮಿಸಬೇಕು..

🍂 ಔಲಿಯಾಗಳ ಭಾಷೆಯನ್ನು ತಮಾಷೆ ಮಾಡುವವರು ವಿಷಯವನ್ನು ಕಲಿಯಬೇಕು. ನಂತರ ವಿಮರ್ಶಿಸಲು ಮುಂದಾಗಬೇಕು.

🍂ಅಲ್ಲಾಹನನ್ನು ಸರಿಯಾಗಿ ತಿಳಿಯಲು ನಮಗೆಲ್ಲರಿಗೂ ತೌಫೀಖ್ ನೀಡಲಿ ಆಮೀನ್.

ಅನುವಾದ:
🍁🍁🍁🍁🍁🍁🍁🍁🍁

No comments:

Post a Comment