🌹ಬ್ಯೂಟಿ ಟಿಪ್ಸ್ ಇಸ್ಲಾಂ ನಲ್ಲಿ🌹
ಮುಖಕ್ಕೆ ಹೊಳಪು ಸಿಗಲು ನಾವು ಏನು ಮಾಡಬೇಕು.. ಅದು ಅಲ್ಲಾಹುವಿನ ಕೃಪೆಯಾಗಿದೆ ..ಮತ್ತು ನಮ್ಮ ಪರಿಶುದ್ಧಿಯಾದ ವಿಶ್ವಾಸವೂ ಕೂಡಾ.
ಆ ಹೊಳಪು ನಮ್ಮ ಕರ್ಮಗಳ.. ಕಳಂಕವಿಲ್ಲದ ವಿಶ್ವಾಸಗಳ..ಲಕ್ಶ್ಯಗಳ ... ಚಿಂತನೆಗಳ..ಅಲ್ಲಾಹುವಿನ ಸಂತೋಷಕ್ಕೆ ನಾವು ಮಾಡುವ ಎಲ್ಲಾ ಕಾರ್ಯಗಳ ಪ್ರತಿಫಲವಾಗಿದೆ...
ಯಾವುದೆ ಒಂದು ಮಕೆಉಪ್ ಗೆ ಅದನ್ನು ಹೋಲಿಸಲು ಸಾದ್ಯವಿಲ್ಲ..
ನಿಮಗೆ ಒಬ್ಬ ಸುಂದರನೂ\ ಸುಂದರಿಯೊ ಆಗಬೆಕಾದರೆ ಕನ್ನಡಿಯ ಮುಂದೆ ಗಂಟೆಗಟ್ಟಲೆ ನಿಲ್ಲುವುದಕ್ಕೆ ಬದಲು ನೀವು ಸ್ವತಹ ನಿಮ್ಮ ದಿನಚರಿಯನ್ನು ಬದಲಾಯಿಸಲು ಪ್ರಯತ್ನಿಸಿ
ಕೆಳಗೆ ಕೊಟ್ಟರುವಂತಹ ಘಟಕಗಳು ಮುಖಕ್ಕೆ ಹೊಳಪು ಬರಲು ಹಾಗೂ ನೈಜ ಸೌಂದರ್ಯ ಸಿಗಲು ನಾವು ನಮ್ಮ ದೇಹಕ್ಕೆ ಕೊಡಲು ಸಾದ್ಯವಾಗುವ ಸಂಭಾವನೆಯಾಗಿದೆ....
1) ಆದಷ್ಟು ಎಲ್ಲಾ ಸಮಯದಲ್ಲೂ ವುಲೂಹ್ ಇರುವಂತೆ ನೋಡಿ..
2) ನಮ್ಮ ಆಹಾರ ಮಿತವಾಗಿರಬೇಕು.. ನಮ್ಮ ದೇಹದ ಸ್ವಚ್ಛತೆ ಕಡೆ ಗಮನವಿರಲಿ
3) ಅನಾವಶ್ಯಕ ಚಿಂತೆಗಳಿಂದ ದೂರವಿರಿ 4) 5ವಕ್ಥ್ ನಮಾಜ಼್ ಸಮಯಕ್ಕೆ ಸರಿಯಾಗಿ ನಿರ್ವಹಿಸಿ..
5)ಮನಸ್ಸಿನಲ್ಲಿ ಇನ್ನೊಬ್ಬರ ಕುರಿತು ದ್ವೇಷದಿಂದ ನಡೆಯದಿರಿ . ಕ್ಷಮೆ ಕೊಡಲು.. ಔದಾರ್ಯ ತೋರಿಸಲು.. ಪ್ರೀತಿಸಲು..ಇರುವ ಮನಸ್ಸು ನಿಮ್ಮದಾಗಿರಲಿ
6) ಸುಬಹ್ ನಮಾಜ಼್ ಗಿಂತ ಮೊದಲು ಎದ್ದು ತಹಜ್ಜುದ್ ನಮಾಜ಼್ ಮಾಡಲು ಶ್ರಮಿಸಿ..ಅದು ಹೆಚ್ಛಾಗಿ ನಮ್ಮ ಮುಖವನ್ನು ಪ್ರಕಾಶಿಸುವಂತೆ ಮಾಡುವುದು.
7)ಅಸರ್ ನಮಾಜಿನ ಬಳಿಕ ನಿದ್ರೆ ಮಾಡದಿರಿ..
8)ರಾತ್ರಿ ಸಮಯದಲ್ಲಿ ಇಸ್ಲಾಮಿಗೆ ವಿರುದ್ಧವಾಗಿರುವಂತಹ ಪಾರ್ಟಿಗಳು..ಫಿಲ್ಮ್ ಗಳು .. ಮ್ಯೂಸಿಕ್ ಗಳಿಂದ ದೂರವಿರಿ
9)ತಿಂಗಳಿಗೆ ೩ ದಿವಸವಾದರೂ ವ್ರತ ಇರಲಿ
10)ಕ್ಷಮೆ ಯಿಂದಲೂ ..ಕಾರುಣ್ಯದಿಂದಲೂ ಅಲ್ಲಾಹುವನ್ನು ಸ್ಮರಿಸುತ್ತಾ ಇರಿ.
🌹) ಆಕರ್ಷಕವಾದ ತುಟಿಗಳಿಗೆ ಸತ್ಯವನ್ನು ಮಾತ್ರ ಹೇಳಿರಿ
🌹) ಸುಂದರವಾದ ಕಣ್ಣುಗಳಿಗೆ ಒಳೆಯದನ್ನು ಮಾತ್ರ ನೋಡಿ..
🌹) ಆಕರ್ಷಕ ಮೈ ಕಟ್ಟಿಗೆ ನಿಮ್ಮ ಆಹಾರದಲ್ಲಿ ಹಸಿದಿರುವಂತವರಿಗೆ ಶೇರ್ ಮಾಡಿ ತಿನ್ನಿರಿ
🌹)ಸುಂದರವಾದ ಕೂದಲುಗಳಿಗೆ ಹಿಜಾಬ್/ಟೊಪ್ಪಿ ಧರಿಸಿ
ಇವೆಲ್ಲದಕ್ಕೂ ಮಿಗಿಲಾಗಿ ಒಳ್ಳೆಯ ಆಲೋಚನೆ ಹಾಗೂ ಅರಿವುಗಳೊಂದಿಗೆ ನಡೆಯಿರಿ.. ನಮಗೆ ಗೊತ್ತಿಲ್ಲದೆಯೆ ಒಳ್ಳೆಯ ರೀತಿಯ ಸಂತೋಷ ನಮ್ಮ ಜೀವನದಲ್ಲಿ ಬರಬಹುದು.. ಆಕಾಶದಲ್ಲಿ ಪ್ರಕಾಶಿಸುವ ನಕ್ಷತ್ರಗಳ ಹಾಗೆ ನಮ್ಮ ಮುಖವು ಪ್ರಕಾಶಿಸಬಹುದು.. ನಿಮ್ಮ ಸ್ವಭಾವ ವನ್ನು ಗಮನಿಸಿ.. ಅದು ನಿಮ್ಮನ್ನು ಒಳ್ಳೆಯ ಮತ್ತು ಕೆಟ್ಟ ದಾರಿಗೆ ಕೊಂಡುಹೊಗಲು ಹೆೇತುವಾಗಬಹುದು..
No comments:
Post a Comment