Monday, January 15, 2018

*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...

1⃣3⃣

📚📚📚📚📚📚📚📚📚📚

1⃣ *ಇಮಾಂ ಮಾಲಿಕ್ (ರ.ಅ)* :

*ಮಾಲಿಕ್ ಬಿನ್ ಅನಸ್ (ರ.ಅ) ಹಿಜಿರಾ 93 - 179ರ ಕಾಲಾವಧಿಯಲ್ಲಿ ಜೀವಿಸಿದ ಮಹಾತ್ಮರಾಗಿದ್ದಾರೆ. ಇವರು ಇಮಾಂ ಶಾಫಿಈ (ರ.ಅ) ಸೇರಿದಂತೆ ಮಹಾ ವಿದ್ವಾಂಸರ ಗುರುಗಳಾಗಿರುವರು. ಆ ಕಾಲದಲ್ಲಿ ಮದೀನಾದಲ್ಲಿ ಇಮಾಂ ಮಾಲಿಕ್(ರ.ಅ)ರವರಿಗಿಂತ ಮಿಗಿಲಾದ ವಿದ್ವಾಂಸರಿರಲಿಲ್ಲ. ಇಮಾಂ ಶಾಫಿಈ (ರ.ಅ)ರವರು ಮಕ್ಕಾಕ್ಕೆ ತೆರಳಿ ಮಾಲಿಕ್(ರ.ಅ)ರ ಶಿಷ್ಯತ್ವವನ್ನು ಸ್ವೀಕರಿಸಿ ಉಸ್ತಾದರ ಮರಣದ ತನಕ ಅವರಲ್ಲಿ ಶಿಕ್ಷಣವನ್ನು ಪಡೆದಿದ್ದರು*.

        *ಇಮಾಂ ಶಾಫಿಈ (ರ.ಅ) ಹೇಳುತ್ತಾರೆ: ಇಮಾಂ ಮಾಲಿಕ್(ರ.ಅ) ಮತ್ತು ಸುಫ್ಯನ್ ಬಿನ್ ಉಯೈನ (ರ.ಅ) ಇಲ್ಲದಿರುತ್ತಿದ್ದರೆ ಹಿಜಾಝ್ ಪ್ರಾಂತ್ಯದಲ್ಲಿ ಶಿಕ್ಷಣವಿರುತ್ತಿರಲಿಲ್ಲ. ಇಮಾಂ ಮಾಲಿಕ್(ರ.ಅ) ನನ್ನ ಗುರುಗಳಾಗಿದ್ದಾರೆ. ಶಿಕ್ಷಣವನ್ನು ನಾವು ಅವರಿಂದ ಕಲಿತಿರುವೆವು*. (ತಹ್ದೀ ಬುಲ್ ಅಸ್ಮಾ ಇವಲ್ಲುಗಾತ್ : 2/76)

           *ಮುವತ್ತಾ ಇಮಾಂ ಮಾಲಿಕ್(ರ.ಅ) ಅವರಿಂದ ಲೋಕಕ್ಕೆ ಲಭಿಸಿದ ಅಮೂಲ್ಯ ಕೃತಿಯಾಗಿದೆ. ಶಿಸ್ತುಬದ್ಧ ಹಾಗೂ ವೈಜ್ಞಾನಿಕವಾಗಿ ಕ್ರೋಡೀಕರಿಸಲ್ಪಟ್ಟ ಆದಿಕಾಲದ ಹದೀಸ್ ಗ್ರಂಥಗಳ ಪೈಕಿ ಇಂದು ಲಭ್ಯವಿರುವುದು ಮುವತ್ತಾ ಮಾತ್ರ. ಮುವತ್ತಾವು ಸಿಹಾಹುಸ್ಸಿತ್ತಾದಲ್ಲಿ ಒಳಪಡುವುದಿಲ್ಲವಾದರೂ ವಿದ್ವಾಂಸ ಜಗತ್ತು ಈ ಗ್ರಂಥಕ್ಕೆ ಮಹತ್ತರವಾದ ಸ್ಥಾನವನ್ನು ನೀಡಿದೆ. ಇಮಾಂ ಶಾಫಿಈ (ರ.ಅ) ಹೇಳುತ್ತಾರೆ; ಅಲ್ಲಾಹನ ಗ್ರಂಥವನ್ನು ಹೊರತುಪಡಿಸಿದರೆ ಮುವತ್ತಾದಂತಹ ಅತ್ಯಂತ ಸ್ವಹೀಹ್ ಆದ ಬೇರೊಂದು ಗ್ರಂಥ ಲೋಕದಲ್ಲಿಲ್ಲ. ಅವರ ಈ ಮಾತುಗಳಿಂದ ಪ್ರಸ್ತುತ ಗ್ರಂಥದ ಪ್ರಾಮುಖ್ಯತೆ ಸ್ಪಷ್ಟವಾಗುತ್ತದೆ. ಸ್ವಹೀಹುಸ್ಸಿತ್ತಾ ಹಾಗೂ ಮತ್ತಿತರ ಸ್ವಹೀಹ್ ಗಳು ಮುವತ್ತಾದ ಅದೆಷ್ಟೋ ಕಾಲದ ನಂತರ ರಚಿಸಲ್ಪಟ್ಟ ಕೃತಿಗಳಾಗಿವೆ*.

                 *ಮುವತ್ತಾದಲ್ಲಿ ಮೊದಲು ಹತ್ತು ಸಾವಿರ ಹದೀಸ್ ಗಳಿದ್ದವು. ಅನಂತರ ಇಮಾಮರೇ ಅದನ್ನು ಸಂಕ್ಷೇಪಗೊಳಿಸಿದರು. ಇಂದಿನ ಮುವತ್ತಾದಲ್ಲಿ 1714 ಹದೀಸ್ ಗಳಿವೆ. ಮುವತ್ತಾಕ್ಕೆ ಸಮಕಾಲೀನ ಲೋಕವು ಮಹತ್ವದ ಸ್ಥಾನವನ್ನು ನೀಡಿತ್ತು. ಖಲೀಫ ಹಾರೂನ್ ರಶೀದ್(ರ.ಅ) ಮದೀನಾಕ್ಕೆ ತೆರಳಿ ಮಾಲಿಕ್(ರ.ಅ)ರ ಮುಂದೆ ಓರ್ವ ವಿದ್ಯಾರ್ಥಿಯಾಗಿ ಕುಳಿತುಕೊಂಡು ಮುವತ್ತಾ ಕಲಿತಿದ್ದರು*.

               *ಪ್ರವಾದಿﷺರವರಿಗೆ ನಿಕಟವಾದ ಕಾಲದಲ್ಲಿ ರಚಿಸಲ್ಪಟ್ಟ ಗ್ರಂಥ ಎಂಬ ಹೆಗ್ಗಳಿಕೆಯೂ ಮುವತ್ತಾಕ್ಕಿದೆ. ಇಮಾಂ ಮಾಲಿಕ್(ರ.ಅ) ಹಾಗೂ ಪ್ರವಾದಿﷺರವರ ನಡುವೆ ಕೆಲವು ಗುರುವರ್ಯರುಗಳಿದ್ದಾರೆ. ಪ್ರವಾದಿ ಚರ್ಯೆಯ ಪ್ರಚಾರ ಮತ್ತು ಅನುಷ್ಟಾನದಲ್ಲಿ ತುಂಬಾ ಮುತುವರ್ಜಿ ವಹಿಸಿದ ಇಬ್ನ್ ಉಮರ್(ರ.ಅ)ರವರ ಸೇವಕ ಹಾಗೂ ಶಿಷ್ಯರಾದ ನಾಫಿೞ್(ರ.ಅ) ಮಾಲಿಕ್(ರ)ರವರ ಒಬ್ಬ ಗುರುಗಳಾದರೆ,  ಇಬ್ನ್ ಉಮರ್(ರ.ಅ)ರವರ ಶಿಷ್ಯನಾದ ಸ್ವಾಲಿಂ(ರ.ಅ)ರ ಶಿಷ್ಯ ಇಮಾಂ ಝಹ್ರಿ(ರ.ಅ) ಇನ್ನೋರ್ವ ಗುರುಗಳಾಗಿದ್ದಾರೆ. ನಾಫಿೞ್ (ರ.ಅ)ರವರ ಮೂಲಕ ಇಮಾಂ ಮಾಲಿಕ್(ರ.ಅ) ನಿವೇದಿಸಿದ ಹದೀಸ್ ಗಳಿಗೆ ಇಮಾಂ ಬುಖಾರಿ ತುಂಬಾ ಪ್ರಾಮುಖ್ಯತೆ ನೀಡಿದ್ದಾರೆ*.


*ಮುಂದುವರಿಯುವುದು*.....
📚📚📚📚📚📚📚📚📚📚

No comments:

Post a Comment