🕎🕎🕎🕎🕎🕎🕎🕎🕎
*ಎ. ಪಿ. (ಉಸ್ತಾದ್) ಎಂಬ ಎರಡು ಅಕ್ಷರದ ಆತ್ಮೀಯ ಚೈತನ್ಯದಿಂದಾಗಿದೆ ಸುನ್ನೀ ಆದರ್ಶ ರಂಗದಲ್ಲಿ ಅಂದೂ ಇಂದೂ ಸಾವಿರಾರು ಕಾರ್ಯಕರ್ತರು ಕಾರ್ಯಾಚಿಸುತ್ತಿರುವುದು. ಇದು ಕಾಂತಪುರಂ ಉಸ್ತಾದರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತಿದೆ.*
*ಕಾಂತಪುರಂ ಉಸ್ತಾದರ ಕಾರ್ಯಚಟುವಟಿಕೆ ಇರುವುದು ಕೇರಳದಲ್ಲಿ ಮಾತ್ರವಲ್ಲ, ಹೊರತು ಮಣ್ಣು ಮತ್ತು ಮನುಷ್ಯರು ಇರುವ ಎಲ್ಲಾ ಪ್ರದೇಶಗಳಲ್ಲಿಯೂ ಉಸ್ತಾದರು ಹೋಗಿ, ಅಥವಾ ಸಂದೇಶಗಳನ್ನು ತಲುಪಿಸಿ ಸುನ್ನತ್ ಜಮಾಅತಿಗಾಗಿ ಕಾರ್ಯಾಚಿಸುತ್ತಿದ್ದಾರೆ.*
*ವಿಶ್ವದ ನಾನಾ ಕಡೆಗಳಲ್ಲಿ ಸಂಚರಿಸಿ ಸುನ್ನೀ ಆದರ್ಶ ಸಂದೇಶ ಪ್ರಚಾರ ಮಾಡುತ್ತಾ ಇದ್ದಾರೆ.*
*ಕಾರಂದೂರಿನ ಸುನ್ನೀ ಮರ್ಕಝ್ ಮತ್ತು ದೆಹಲಿಯ ಜಾಮಿಯಾ ನಿಝಾಮುದ್ದೀನ್ ಔಲಿಯಾ ಅರೆಬಿಕ್ ಕಾಲೇಜು ಸಂಯುಕ್ತವಾಗಿ ಆದರ್ಶ ಪ್ರಚಾರದ ಪ್ರಕಾಶ ಗೋಪುರಗಳಾಗಿ ಈಗಾಗಲೇ ಮಾರ್ಪಡಾಗಿರುವುದು ಕಾಂತಪುರಂ ಉಸ್ತಾದರ ನಿರ್ದೇಶನದಿಂದ ಮತ್ತು ಪ್ರಶೋಭಿತ ವ್ಯಕ್ತಿತ್ವದಿಂದಾಗಿದೆ.*
*ಇದರಲ್ಲಿ ಕೆಲವರು ಭಯಪಟ್ಟು, ಅಸೂಯೆ ತೋರಿಸಿ, ಇಲ್ಲ ಸಲ್ಲದ ಆರೋಪ ಮಾಡಿ ಕವಡೆ ಕಾಸಿನ ಪ್ರಯೋಜನವಿಲ್ಲ.*
*ಅಲ್ಲಾಹನು ಉದ್ದೇಶಿಸಿದರೆ ಅವರು ನಿಮ್ಮ ಪಿತ್ನಾಗಳಿಂದಲೂ, ಆರೋಪಗಳಿಂದಲೂ, ಅಸೂಯೆ, ಮತ್ಸರಗಳಿಂದಲೂ ಇನ್ನಷ್ಟು ಹೆಚ್ಚು ಕೀರ್ತಿಗಳಿಸುವರು.*
*ಇನ್'ಷಾ ಅಲ್ಲಾಹ್*
🌹🌹🌹🌹🌹🌹🌹🌹🌹
_ಶೈಕ್ಷಣಿಕ ಜಾಗೃತಿಯ ಅನ್ವೇಷಣೆ_
*ಮರ್ಕಝ್ 40ನೇ ವಾರ್ಷಿಕ ಸಮ್ಮೇಳನ*
ಜನವರಿ 4,5,6,7 (2018.) ಮರ್ಕಝ್ ನಗರಿ, ಕಾರಂದೂರ್ ಕಲ್ಲಿಕೋಟೆ.
➖➖➖➖➖➖➖➖
ಶುಭ ಕೋರುವ
✍ಗಫೂರ್ ಬಾಯಾರ್
🔰🔰🔰🔰🔰🔰🔰🔰🔰

No comments:
Post a Comment