Thursday, January 18, 2018

*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...

1⃣4⃣

📚📚📚📚📚📚📚📚📚📚

2⃣ *ಇಮಾಂ ಬುಖಾರಿ(ರ.ಅ)* :
*ಜಗತ್ವಿಖ್ಯಾತ ಹದೀಸ್ ವಿದ್ವಾಂಸರಾದ ಮುಹಮ್ಮದ್ ಬಿನ್ ಇಸ್ಮಾಯಿಲ್ ಅಲ್ ಬುಖಾರಿ(ರ.ಅ) ಹಿಜಿರಾ 194- 256 ರ ಕಾಲಾವಧಿಯಲ್ಲಿ ಜೀವಿಸಿದ್ದ ಮಹಾತ್ಮರು. ಅವರು ಪವಿತ್ರ ಖುರಾನಿನ ನಂತರ ಅತ್ಯಧಿಕ ಪ್ರಾಮಾಣಿಕ ಗ್ರಂಥವೆಂದು ಲೋಕವು ಅಂಗೀಕರಿಸಿದ  ಸ್ವಹೀಹುಲ್ ಬುಖಾರಿಯ ಕತೃ. ಇಮಾಂ ಬುಖಾರಿ(ರ.ಅ) ಬಾಲ್ಯದಲ್ಲೇ ಖುರಾನ್ ಮತ್ತು ಅನೇಕ ಹದೀಸ್ ಗಳನ್ನು ಕಂಠಪಾಠ ಮಾಡಿಕೊಂಡಿದ್ದರು*.

           *ಅವರು ಇಮಾಂ ಶಾಫಿಈ(ರ.ಅ)ರವರ ಶಿಷ್ಯರಾದ ಇಮಾಂ ಸೞ್ ಫರಾನಿ(ರ.ಅ), ಇಮಾಂ ಅಬೂ ಸೌರ್(ರ.ಅ), ಇಮಾಂ ಕರಾಬಿಸಿ(ರ.ಅ) ಮೊದಲಾದವರಿಂದ ಹದೀಸ್ ಮತ್ತು  ಫಿಕ್ಹ್ ಅನ್ನು ಕಲಿತರು. ಹದೀಸ್ ಗಳನ್ನು ಹುಡುಕಿಕೊಂಡು ಹಲವು ಬಾರಿ ದೂರದ ಪ್ರದೇಶಗಳಿಗೆ ಪ್ರಯಾಣ ಹೊರಟಿದ್ದರು. ಈಜಿಪ್ಟ್, ಸಿರಿಯಾ, ಅಲ್ಜೀರಿಯಾ, ಬಾಗ್ದಾದ್, ಕೂಫಾ, ಹಿಜಾಝ್ ಮೊದಲಾದ ಪ್ರದೇಶಗಳಿಗೆ ತೆರಳಿ ಹದೀಸ್ ಸಂಗ್ರಹಿಸಿದ ಬುಖಾರಿ(ರ.ಅ) ಸ್ವಹೀಹುಲ್ ಬುಖಾರಿಯ ಜೊತೆಗೆ ಅತ್ತಾರಿ ಖುಲ್ಕಬೀರ್, ಅಲ್ ಅದಬುಲ್ ಮುಹಮ್ಮದ್ ಎಂಬ ಗ್ರಂಥಗಳನ್ನೂ ರಚಿಸಿದರು*.

              *ಸ್ವಹೀಹುಲ್ ಬುಖಾರಿ 1800 ವಿದ್ವಾಂಸರಿಂದ ಸಂಗ್ರಹಿಸಿದ 6  ಲಕ್ಷಕ್ಕಿಂತಲೂ ಮಿಕ್ಕಿದ ಹದೀಸ್ ಗಳ ಪೈಕಿ ಆಯ್ಕೆಯಾದ  9082 ಹದೀಸ್ ಗಳ ಸಮಾಹಾರವಾಗಿದೆ. ಪುನರಾವರ್ತನೆಯನ್ನು ಹೊರತುಪಡಿಸಿದರೆ ಅದರಲ್ಲಿ4000 ಹದೀಸ್ ಗಳಿವೆ. ಆ ಕಾಲದಲ್ಲಿ ಸ್ವಹೀಹ್ ಹದೀಸ್ ಗಳನ್ನು ಮಾತ್ರ ಕ್ರೋಢಿಕರಿಸಿದ ಬೇರೊಂದು ಗ್ರಂಥವಿರಲಿಲ್ಲ*.

             *ಗುರುಗಳಾದ ಇಸ್ಹಾಕ್ ಬಿನ್ ರಾಹುಯಹ್(ರ.ಅ) ಒಮ್ಮೆ ತಮ್ಮ ಶಿಷ್ಯರನ್ನುದ್ದೇಶಿಸಿ ಪ್ರವಾದಿﷺರವರ ಸುನ್ನತ್ ನಿಂದ ಸ್ವಹೀಹ್ ಆದುದನ್ನು  ಮಾತ್ರ ಒಂದು ಗ್ರಂಥದಲ್ಲಿ ಕ್ರೋಢೀಕರಿಸಿದರೆ ಚೆನ್ನಾಗಿತ್ತು ಎಂದು ಹೇಳಿದರು. ಇದನ್ನು ಕೇಳಿದ ಇಮಾಂ ಬುಖಾರಿ(ರ.ಅ) ಅದರ ಕುರಿತು ಯೋಚನಾಮಗ್ನರಾದರು. ಒಂದು ರಾತ್ರಿ ಅವರಿಗೆ ತಾನು ಪ್ರವಾದಿﷺರವರ  ಹತ್ತಿರ ನಿಂತು ಕೊಂಡು ನೊಣಗಳನ್ನು ಓಡಿಸುತ್ತಿರುವ ಸ್ವಪ್ನ ದರ್ಶನವಾಯಿತು. ಇದರ ವ್ಯಾಖ್ಯಾನವನ್ನು ಅರಿತುಕೊಂಡ ಇಮಾಂ ಸ್ವಹೀಹ್ ಹದೀಸ್ ಗಳ ಸಂಗ್ರಹದಲ್ಲಿ ನಿರತರಾದರು*.

            *ಹದೀಸ್ ಕ್ರೋಢೀಕರಣದಲ್ಲಿ ಅವರು ತುಂಬಾ ಸೂಕ್ಷ್ಮತೆ ಮತ್ತು ಜಾಗರೂಕತೆಯನ್ನು ಪಾಲಿಸಿದರು. ಸ್ವಹೀಹುಲ್ ಬುಖಾರಿ ವರದಿಗಾರರಾದ ಅಬ್ದುಲ್ಲಾಹಿ ಬ್ನು ಫರಬ್ರಿ(ರ.ಅ) ಹೇಳುತ್ತಾರೆ. ಇಮಾಂ ಬುಖಾರಿ(ರ.ಅ) ಹೀಗೆಂದಿದ್ದರು ; 'ಇಸ್ತಿಖಾರತ್ ನಮಾಝ್ ನಿರ್ವಹಿಸಿ ಪ್ರಬಲತೆಯು ಸ್ಪಷ್ಟಪಡದ ಯಾವ ಹದೀಸನ್ನೂ ನಾನು ಸ್ವಹೀಹುಲ್ ಬುಖಾರಿಯಲ್ಲಿ ಸೇರಿಸಿಲ್ಲ'. 16 ವರ್ಷಗಳ ಕಾಲ ನಿರಂತರ ಪರಿಶ್ರಮದಿಂದ ಸ್ವಹೀಹುಲ್ ಬುಖಾರಿ ರಚಿತವಾಯಿತು. ಇಮಾಂ ಬುಖಾರಿ(ರ.ಅ)ರವರು ಬಸ್ತಾ, ಮಕ್ಕಾ ಹಾಗೂ ತಮ್ಮ ಹುಟ್ಟೂರಾದ ಬಸ್ರಾದಲ್ಲಿ ಕೂತು ಇದರ ರಚನೆಯನ್ನು ಪೂರ್ತಿಗೊಳಿಸಿದರು. ಬರೆಯುವ ಮುನ್ನ ಅವರು  ಪ್ರವಾದಿﷺರವರ ಮಸೀದಿಗೆ ತೆರಳಿ 2 ರಕಾತ್ ಸುನ್ನತ್ ನಮಾಝ್ ನಿರ್ವಹಿಸುತ್ತಿದ್ದರು. ಬುಖಾರಿಯಲ್ಲಿ ಸ್ವಹೀಹ್ ಆದ ಹದೀಸ್ ಗಳಿಲ್ಲ . ಆದರೆ ಬುಖಾರಿಯಲ್ಲಿರುವ ಎಲ್ಲಾ ಹದೀಸ್ ಗಳು ಸ್ವಹೀಹ್ ಆಗಿದೆ*.


*ಮುಂದುವರಿಯುವುದು*.....
📚📚📚📚📚📚📚📚📚📚

No comments:

Post a Comment