Thursday, January 18, 2018

*ನಿಂತು ಮೂತ್ರಿಸುವವರ ಗಮನಕ್ಕೆ*
==========================

ಇಸ್ಲಾಮೀ ಶಿಷ್ಟಾಚಾರ ಪ್ರಕಾರ ಮೂತ್ರ ವಿಸರ್ಜನೆ ಸಂಧರ್ಭ ಕುಳಿತು ಕೊಳ್ಳುವುದು ಸುನ್ನತ್,ಅಂದರೆ ಪ್ರವಾದಿ ಚರ್ಯೆ.
 ಅನಿವಾರ್ಯ ಇದ್ದರೆ ಮಾತ್ರ ನಿಂತು ಕೊಂಡು ಮೂತ್ರಿಸಬಹುದು.
ಆದರೆ ಇಂದು ಬಹುತೇಕ ಮಂದಿ ಯಾವುದೇ ಕಾರಣವಿಲ್ಲದೇ ನಿಂತು ಕೊಂಡೇ ಮೂತ್ರಿಸುತ್ತಾರೆ.ಅದೊಂದು ಫ್ಯಾಷನ್ ಆಗಿ ಬಿಟ್ಟಿದೆ.
ಮಲಮೂತ್ರ ವಿಸರ್ಜನೆ ವೇಳೆ ಎಡ ಭಾಗಕ್ಕೆ ಸರಿದು ಕುಳಿತು ಕೊಳ್ಳಬೇಕೆಂಬ ಇಸ್ಲಾಮಿನ ಶಿಷ್ಟಾಚಾರ ಗಾಳಿಗೆ ತೂರುವ ಯುವ ಸಮೂಹವೇ ಈ ಬಗ್ಗೆ ಆಧುನಿಕ ಆರೋಗ್ಯ ಇಲಾಖೆ ಏನೆನ್ನುತ್ತದೆ ಎಂಬುದನ್ನು ಓದಿ ನೋಡಿ......

ಕುಳಿತು ಮೂತ್ರಿಸುವುದು ಮನುಷ್ಯನ ಪ್ರಕೃತಿ.ಅಂದರೆ ಪೆಲ್ವಿಕ್,ಹಿಪ್,ಖಂಡಗಳಿಗೆ ಅಧ್ವಾನ ಕಡಿಮೆಯಾಗುವುದು.ಇದು ಮೂತ್ರ ವಿಸರ್ಜನೆಯನ್ನು ಸುಲಭ ಗೊಳಿಸುತ್ತದೆ.
ನಿಂತು ಮೂತ್ರಿಸುವಾಗ ಮೂತ್ರ ಚೀಲದಿಂದ ಪೂರ್ಣವಾಗಿ ಹೊರ ಹೋಗುವುದಿಲ್ಲ.ಇದು ತುಂಬಿ ನಿಂತು ರೋಗಾಣುಗ ಸೃಷ್ಟಿಗೆ ಕಾರಣವಾಗುತ್ತದೆ.ಕಿಡ್ನಿ ಸ್ಟೋನ್ ಗೂ ಹೇತುವಾಗ ಬಹುದು.

ಸ್ವಪ್ನ ಸ್ಖಲನ ಎಂಬುವುದು ಹಲವು ಗಂಡಸರಿಗೂ ಇರುವ ಒಂದು ಸಮಸ್ಯೆ .ಕುಳಿತು ಮೂತ್ರಿಸುವುದೇ ಇದಕ್ಕಿರುವ ಪರಿಹಾರ ಎಂದು ಕಂಡು ಹಿಡಿಯಲಾಗಿದೆ.
ನಿಂತು ಮೂತ್ರಿಸುವುದರಿಂದ ಪೆಲ್ವಿಸ್,ಸ್ಪೈನ್,ಮೊದಲಾದ ಕಡೆಗಳಲ್ಲಿ ಖಂಡಗಳು ಉದ್ಧೀಪನಗೊಳ್ಳುವುದು.ಇದರಿಂದಾಗಿ ಸರಿಯಾದ ರೀತಿಯ ಮೂತ್ರ ವಿಸರ್ಜನೆ ನಡೆಯುವುದಿಲ್ಲ.ಇದು ಪ್ರೊಸ್ಟೇಟ್ ಸಮಸ್ಯಕ್ಕೆ ಕಾರಣ ವಾಗಬಹುದು.

ಪುರುಷರಲ್ಲಿ ಕಂಡು ಬರುವ ಪೆರೋನಿಸ್,ಪ್ರೋಸ್ಟೇಟ್ ಕ್ಯಾನ್ಸರ್ ಮೊದಲಾದ ಹಲವು ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.

ಆಯಾಸ ರಹಿತ ಪೂರ್ಣವಾಗಿ ಮೂತ್ರ ವಿಸರ್ಜಿಸಲು ಮತ್ತು ಆ ಮೂಲಕ ಮೂತ್ರ ರೋಗಗಳಿಂದ ಮುಕ್ತವಾಗಲು ಕುಳಿತು ಮೂತ್ರಿಸುವುದೇ ಉತ್ತಮ ಎಂದಾಗಿದೆ ಈಗಿನ ತಜ್ಞರ ಸಂಶೋಧನೆ.

ಕೃಪೆ: ಆರೋಗ್ಯ ಮಲಯಾಳ

No comments:

Post a Comment