*ಝಿಯಾರತ್ತ್ ಕೇಂದ್ರ*
*👉🏻5⃣6⃣*
------------------------
*"ಮುಟ್ಟಿಚ್ಚಿರ ಶುಹದಾ" ಮಲಪ್ಪುರಂ, ಕೇರಳ.*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
♻♻♻♻♻♻♻♻♻
ಮುಟ್ಟಿಚ್ಚಿರ ಮಸೀದಿಯು ಮಂಬುರಂ ತಂಙಳ್ (ಖ:ಸಿ)ರವರ ನಿರ್ದೇಶದನುಸಾರ ಹದಿನೆಂಟನೆ ಶತಮಾನದಲ್ಲಿ ನಿರ್ಮಿಸಿದ ಮಸೀದಿಯಾಗಿದೆ.
ಒಂದು ಶುಕ್ರವಾರ ಬ್ರಿಟೀಷ್ ಪಡೆಯ ಕೆಲ ಪುಂಡ ಸೈನಿಕರು ಮುಸ್ಲಿಮರನ್ನು ಕೆರಳಿಸುವ ಸಲುವಾಗಿ ಮುಟ್ಟಿಚ್ಚಿರ ಮಸೀದಿಯಲ್ಲಿ ಜುಮುಆ ನಮಾಝಿಗೆಂದು ಮುಸ್ಲಿಮರು ತೊಳೆದು ಒಣಗಲು ಹಾಕಿದ ವಸ್ತ್ರ ಮತ್ತು ಚಾಪೆಗೆ ಬೂಟು ಕಾಲಿನಿಂದ ತುಳಿದು ಆ ವಸ್ತ್ರಗಳ ಮೇಲೆ ಪಾನ್ ತಿಂದು ಉಗಿದು ಮಲಿನಗೊಳಿಸಿದರು.
ಇದು ಮುಸ್ಲಿಮರನ್ನು ಬಹಳ ದುಃಖಿತರನ್ನಾಗಿಸಿತು. ತಕ್ಷಣ ಈ ಪುಂಡಾಟಿಕೆಯನ್ನು ಪ್ರತಿಭಟಿಸಲು ಕೆಲ ಮುಸ್ಲಿಂ ಯುವಕರು ಹೊರಟರಾದರೂ ಮಂಬುರಂ ತಂಙಳ (ಖ:ಸಿ)ರು ಅವರನ್ನು ತಡೆದು ಸಮಾಧಾನ ಪಡಿಸಿದರು.
ಬ್ರಿಟೀಷರ ಈ ಪುಂಡಾಟಿಕೆಗೆ ಮುಸ್ಲಿಮರು ಕೆರಳಿ ಧಂಗೆಯೇಳದ ಕಾರಣ ಬ್ರಿಟೀಷರ ಊಹೆ ತಲೆ ಕೆಳಗಾಯಿತು. ಅಷ್ಟಕ್ಕೆ ಸುಮ್ಮನಾಗದ ಬ್ರಿಟೀಷರು, ಮುಸ್ಲಿಮರು ಕೋಮು ಗಲಭೆ ಸೃಷ್ಟಿಸಿದರೆಂದು ಕಟ್ಟುಕತೆ ಕಟ್ಟಿ ಮುಸ್ಲಿಮರ ಮೇಲೆ ದೌರ್ಜನ್ಯವೆಸಗಲಾರಂಭಿಸಿದರು. ಆಗಲೂ ಮುಸ್ಲಿಮರು ಬ್ರಿಟೀಷರ ವಿರುದ್ಧ ಧಂಗೆಯೇಳದೆ ಸಂಯಮ ಪಾಲಿಸಿದರು.
ಇದರಿಂದಲೂ ತೃಪ್ತರಾಗದ ಬ್ರಿಟೀಷರು ಮಲಪ್ಪುರಂದಿಂದ ಷೇಕ್ಸ್'ಪಿಯರ್ ಎಂಬ ಹೆಸರಿನ ಸೈನ್ಯ ಮೇಧಾವಿಯನ್ನು ಕರೆ ತಂದು ಅವನ ನೇತೃತ್ವದಲ್ಲಿ ಮುಟ್ಟಿಚ್ಚಿರ ಮಸೀದಿಗೆ ಜಾಥಾ ನಡೆಸಿದರು.
1841 ನವೆಂಬರ್ 13 ರಂದು ಹಿಜರಿ ಶವ್ವಾಲ್ ತಿಂಗಳ 6ರಂದು ಸುನ್ನತ್ತ್ ಉಪವಾಸ ಆಚಯಿಸುತ್ತಾ ಆರಾಧನೆಯಲ್ಲಿ ನಿರತರಾಗಿದ್ದ ಕೆಲವು ಮುಸ್ಲಿಮರೆದುರು ಶೂ ಸಮೇತ ಮಸೀದಿಗೆ ಹತ್ತಿ ಪುಂಡಾಟಿಕೆಯಲ್ಲಿ ತೊಡಗಿದರು.
ಈ ಸಂದರ್ಭದಲ್ಲಿ ಮಸೀದಿಯಲ್ಲಿ ಇದ್ದ *"ಕೈತಕತ್ತ್ ಮರಕಾರೂಟ್ಟಿ ಸಾಹಿಬ್ (ಖ:ಸಿ) ರವರ ನೇತೃತ್ವದಲ್ಲಿ ಹನ್ನೊಂದು ಜನರು ಬ್ರಿಟಿಷರ ಈ ಕುಕೃತ್ಯವನ್ನು ಪ್ರತಿಭಟಿಸಿ ಸೈನಿಕರ ಅತಿಕ್ರಮವನ್ನು ತಡೆಯಲೆತ್ನಿದರು. ಆಗ ಬ್ರಿಟೀಷರು ಗುಂಡಿಕ್ಕಿದಾಗ ಆ ಹನ್ನೊಂದು ಮುಸ್ಲಿಮರೂ ಶಹೀದಾದರು.*
ಮುಟ್ಟಿಚ್ಚಿರ ಮಸೀದಿಯ ಪೂರ್ವ ಭಾಗದಲ್ಲಿ ಆ ಶುಹದಾಗಳನ್ನು ದಫನ್ ಮಾಡಲಾಯಿತು.
ಬ್ರಿಟಿಷ್ ಆಡಳಿತ ಕಾಲದಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಆ ಧೀರ ಶುಹದಾಗಳ ಸ್ಮರಣಾರ್ಥ ಇಲ್ಲಿ ವಾರ್ಷಿಕ ಹರಕೆ (ಆಂಡ್ ನೇರ್ಚೆ) ನಡೆಯುತ್ತದೆ.
ಸರ್ವ ಧರ್ಮ ಸೌಹಾರ್ದತೆಗೆ ಮುಟ್ಟಿಚ್ಚಿರ ಶುಹದಾ ನೇರ್ಚೆಯು ಇಂದಿಗೂ ಹೆಸರು ವಾಸಿಯಾಗಿದೆ.
ಪ್ರಸಿದ್ಧವಾದ ಮೂನ್ನಿಯೂರ್ ಕಳಿಯಾಟ್ಟ ಉತ್ಸವಕ್ಕೆ ಬರುವ ಅಮುಸ್ಲಿಮರು ಮುಟ್ಟಿಚ್ಚಿರ ಮಸೀದಿಯಲ್ಲಿ ಕಾಣಿಕೆ ಸಮರ್ಪಿಸಿದ ನಂತರ ಕಳಿಯಾಟ್ಟಕಾವ್'ಗೆ ಹೋಗುವುದು ಇಲ್ಲಿನ ಸಂಪ್ರದಾಯ.
"ರೊಟ್ಟಿ (ಪತ್ತಿರಿ) ಇಲ್ಲಿನ ನೇರ್ಚೆಯ ಅನ್ನದಾನ. ಹನ್ನೊಂದು ಶುಹದಾಗಳ ಮತ್ತು ಮಂಬುರಂ ತಂಗಳ್ (ಖ:ಸಿ)ರವರ ಸ್ಮರಣಾರ್ಥ 12 "ರೊಟ್ಟಿ" ಒಳಗೊಂಡ ಒಂದು ಪೆಟ್ಟಿಗೆ ರೊಟ್ಟಿಯನ್ನು ವಿಶ್ವಾಸಿಗಳು ತಂದು ಝಿಯಾರತ್ ಮಾಡಿ ಮರಳಿ ಮಸೀದಿಯಿಂದ ಬರಕತ್ತಿಗಾಗಿ ಸೀರಣಿ ರೊಟ್ಟಿ ಕೊಡುವುದು ವಾಡಿಕೆ.
ದಾರಿ; ಮಂಬುರಂ ಮಖಾಮಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ 4 ಕಿಮೀ ಕ್ರಮಿಸಿದರೆ ತಲಪ್ಪಾರ ಎಂಬ ಸ್ಥಳವಿದ್ದು ಅಲ್ಲಿ ಮುಟ್ಟಿಚ್ಚಿರ ಮಸೀದಿ ಇದೆ. ಅದರ ಪಕ್ಕದಲ್ಲೇ ಆ ಧೀರ ಶುಹದಾಗಳ ಮಕ್ಬರವಿದೆ.
✍ಗಫೂರ್ ಬಾಯಾರ್
✳✳✳✳✳✳✳✳✳
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)

No comments:
Post a Comment