*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*... 1⃣5⃣
📚📚📚📚📚📚📚📚📚📚
3⃣ *ಇಮಾಂ ಮುಸ್ಲಿಂ(ರ.ಅ)* :
*ಮುಸ್ಲಿಮ್ ಬ್ನುಲ್ ಹಜ್ಜಾಜ್(ರ.ಅ) ಹಿಜಿರಾ 204 - 261ರ ಕಾಲಾವಧಿಯಲ್ಲಿ ಜೀವಿಸಿದ್ದ ಜಗದ್ವಿಖ್ಯಾತ ಹದೀಸ್ ವಿದ್ವಾಂಸರಾಗಿದ್ದಾರೆ. ಹದೀಸ್ ಗ್ರಂಥಗಳ ಪೈಕಿ ಸ್ವಹೀಹುಲ್ ಬುಖಾರಿಯ ನಂತರದ ಸ್ಥಾನ ಸ್ವಹೀಹ್ ಮುಸ್ಲಿಮ್ ಗಿದೆ. ಇಮಾಂ ಮುಸ್ಲಿಂ ಬಾಲ್ಯದಲ್ಲಿಯೇ ಸಾವಿರಾರು ಹದೀಸ್ ಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಅನಂತರ ಅವರು ಇಮಾಂ ಬುಖಾರಿ, ಅಹ್ಮದ್ ಬಿನ್ ಹಂಬಲ್, ಇಸ್ಹಾ ಖುಬಿನ್ ರಹಾವಹ್ಯಿ(ರ.ಅ) ಮೊದಲಾದ ಮಹಾ ವಿದ್ವಾಂಸರ ಶಿಷ್ಯತ್ವವನ್ನು ಸ್ವೀಕರಿಸಿದರು. ಅವರು ಹದೀಸ್ ಜ್ಞಾನವನ್ನು ಅರಸಿಕೊಂಡು ಹಿಜಾಝ್, ಇರಾಕ್, ಸಿರಿಯಾ, ಈಜಿಪ್ಟ್ ಮುಂತಾದ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಇಮಾಂ ಮುಸ್ಲಿಂ(ರ.ಅ)ರವರು ಸ್ವಹೀಹುಲ್ ಮುಸ್ಲಿಮ್ನ ಜೊತೆಗೆ ಅಲ್ ಮುಸ್ನದುಲ್ ಕಬೀರ್, ಕಿತಾಬುಲ್ ಅಸ್ ಮಾಱ್ , ಕಿತಾಬುಲ್ ಅಖ್ ರಾನ್, ಕಿತಾಬುಲ್ ಅಫ್ರಾದ್ ಮೊದಲಾದ 25 ಗ್ರಂಥಗಳನ್ನು ರಚಿಸಿದರು. ಇಮಾಮ್ ಮುಸ್ಲಿ(ರ.ಅ)ರಿಗೆ ಹದೀಸ್ ನಂತೆ ಇತಿಹಾಸದಲ್ಲೂ ಅಪಾರ ಜ್ಞಾನವಿತ್ತು*.
*ಸ್ವಹೀಹುಲ್ ಮುಸ್ಲಿಮ್ ನಲ್ಲಿ ಇಮಾಂ ಮುಸ್ಲಿಂ(ರ.ಅ) ಸಂಗ್ರಹಿಸಿದ 3 ಲಕ್ಷ ಹದೀಸ್ ಗ್ರಂಥಗಳ ಪೈಕಿ ಆಯ್ದ ಹದೀಸ್ ಗಳಿವೆ. ಅವರು 15 ವರ್ಷಗಳಲ್ಲಿ ತಮ್ಮ ರಚನೆಯನ್ನು ಪೂರ್ತಿಗೊಳಿಸಿದರು. ಇಮಾಂ ಮುಸ್ಲಿಂ(ರ.ಅ) ಒಂದೆಡೆ ಸುಪ್ರಸಿದ್ಧ ಹದೀಸ್ ವಿದ್ವಾಂಸರಾದ ಅಬೂ ಸುರ್ ಅತುರ್ ರಾಝಿ(ರ.ಅ)ರವರಿಗೆ ತೋರಿಸಿ ದೃಢಪಡಿಸಿದ ನಂತರವೇ ನಾನು ಹದೀಸನ್ನು ಸ್ವಹೀಹ್ ನಲ್ಲಿ ಸೇರಿಸಿದ್ದೇನೆ ಎಂದು ಹೇಳಿದ್ದಾರೆ. ಈ ಕಾರಣದಿಂದ ಕೆಲವರು ಇಮಾಂ ಮುಸ್ಲಿಂ(ರ.ಅ)ರಿಗೆ ಬುಖಾರಿಗಿಂತಲೂ ಮಿಗಿಲಾದ ಸ್ಥಾನವನ್ನು ನೀಡುತ್ತಾರೆ. ಮುಸ್ಲಿಂನಲ್ಲಿ 7225 ಹದೀಸ್ ಗಳಿವೆ. ಪುನರಾವರ್ತನೆಯನ್ನು ಬಿಟ್ಟರೆ 3333 ಹದೀಸ್ ಗಳಾಗುತ್ತವೆ. ಅತೀ ಸುಂದರವಾದ ವಿಧಾನ, ಹದೀಸ್ ಪರಂಪರೆಯ ನ್ಯೂನತೆಗಳಿಂದ ಹೊರತಾದ ಸಂಕ್ಷೇಪ ಇತ್ಯಾದಿ ವೈಶಿಷ್ಟ್ಯತೆಗಳು ಮುಸ್ಲಿಂನ್ನು ಇತರ ಹದೀಸ್ ಗ್ರಂಥಗಳಿಂದ ಬೇರ್ಪಡಿಸುತ್ತದೆ*.
*ಮುಂದುವರಿಯುವುದು*.....
📚📚📚📚📚📚📚📚📚📚
No comments:
Post a Comment