Tuesday, January 16, 2018

*#ತಾಯಿನಾಡಿನ ವಿಮೇೂಚನೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಕ್ರಾಂತಿಕಾರಿ ಸೂಫಿ ಸಂತ ಉಮರ್ ಮುಖ್ತಾರ್ (ರ)​*
🕎🕎🕎🕎🕎🕎🕎🕎🕎
✍ ಗಫೂರ್ ಬಾಯಾರ್
------------------------

_​ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೇೂರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿರಿಸಿ ಹುತಾತ್ಮರಾದ ಪ್ರಮುಖ ಸೂಫಿವರ್ಯ "Lion of the Desert" ಉಮರ್ ಮುಖ್ತಾರ್ (ರ) ಎಂಬ ಮಹಾತ್ಮರ ಬದುಕು ಮತ್ತು ಹೇೂರಾಟ ಮರೆಯಲಾಗದ ಅಧ್ಯಾಯ.​_

👉 ಮುಂದುವರಿದ ಭಾಗ-03

*ಸೆರೆ ಹಿಡಿದರು* ⤵

ಆದರೆ ಇಟಲಿ ಸೇನೆ ಸೆರೆ ಹಿಡಿಯುವ ಕೊನೆ ನಿಮಿಷದವರೆಗೂ ಶತ್ರು ಸೇನೆಯೊಂದಿಗೆ ವೀರಾವೇಶದಿಂದ ಹೇೂರಾಡಿದ ಮಹಾನರು ಶತ್ರು ಸೈನ್ಯದ ತೀವ್ರ ದಾಳಿಗೊಳಗಾಗಿ ಗಾಯಾಳುವಾಗಿ ಸೆರೆಯಾದರು.

      ಲಿಬಿಯ-ಇಟಲಿ ಯುದ್ಧದಲ್ಲಿ ಇಟಾಲಿಯನ್ ಸೇನೆ ನೇತೃತ್ವ ವಹಿಸಿದ್ದ ಕೊನೆಯ ಜನರಲ್ ರುಡೇೂಲ್ಫ್ ಗ್ರೇಸಿಯನ್ ಬಹು ಗೌರವದಿಂದಲೇ ಉಮರ್ ಮುಖ್ತಾರ್ (ರ) ರನ್ನು ಬಂಧಿಸಿ ಕರೆದೊಯ್ದನು.

ಬಂಧಿಸಿದ ನಂತರ ಕೇವಲ ಮೂರು ದಿನಗಳ ವಿಚಾರಗೊಳಪಡಿಸಿದ ಇಟಲಿ ಸೇನೆ ಉಮರ್ ಮುಖ್ತಾರ್ (ರ) ರವರನ್ನು ಸಾರ್ವಜನಿಕವಾಗಿ ನೇಣಿಗೇರಿತು ಇನ್ನಲಿಲ್ಲಾಹ್...

ಉಮರ್ ಮಖ್ತಾರ್(ರ)ರವರ ವಿಚಾರಣೆ ನಿಷ್ಪಕ್ಷಪಾತವೂ ನ್ಯಾಯಸಮ್ಮತವಾದುದಾಗಲಿ ಆಗಿರಲಿಲ್ಲ ಎನ್ನುವುದು ಆಗಿನ ವಿಧ್ವಾಂಸರ ಅಭಿಪ್ರಾಯ. ಅವರನ್ನು ಪೀಡಿಸಿ ವಿಚಾರಣೆಗೊಳಪಡಿಸುವಾಗ ಸೇನಾಧಿಕಾರಿಗಳ ಕಣ್ಣುಗಳನ್ನು ನೇೂಡಿ ಕುರ್ಆನ್ ಪಾರಯಣಗೈಯ್ಯುತ್ತಿದ್ದರೆಂದು ಆ ಮಹಾತ್ಮರನ್ನು ವಿಚಾರಣೆಗೊಳಪಡಿಸಿದ ಸೇನಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.

     1931 ಸೆಪ್ಟೆಂಬರ್ 16ರಂದು ನೇಣಿಗೇರಿಸುವ ಅಂತಿಮ ನಿಮಿಷದಲ್ಲಿ ಕೊನೆಯಾದಾಗಿ ಏನಾದರೂ ಹೇಳಲಿಕ್ಕಿದೆಯೇ ಎಂದು ಕೇಳಿದಾಗ 73 ವರ್ಷ ವಯಸ್ಸಿನ ಆ ಸೂಫಿ ಸಂತರ ಕೊನೆಯ ವಾಕ್ಯ ಇದಾಗಿತ್ತು "ನಾವೆಲ್ಲರೂ ಅಲ್ಲಾಹನಿಂದ, ನಮ್ಮೆಲ್ಲರ ಮರಳುವಿಕೆಯೂ ಅಲ್ಲಾಹನ ಸನ್ನಿಧಿಗೆ ಮಾತ್ರವಾಗಿರುತ್ತದೆ."

    ತಾಯಿನಾಡಿನ್ನು ಆಕ್ರಮಿಸಿದ ಆಕ್ರಮಣಕಾರಿಗಳ ವಿರುದ್ಧ ಯುದ್ಧ ಸಾರಿ ಕೊನೆಯುಸಿರಿನ ತನಕವೂ ವೀರಾವೇಶದಿಂದ ಹೇೂರಾಡಿದ ಆ ಧೀರ ಯೇೂಧ ಒಂದು ವೇಳೆ ಶತ್ರು ಸೇನೆಯೊಂದಿಗೆ ಸಂಧಾನ ಮಾಡಿಕೊಂಡಿದ್ದರೆ  ಲೌಕಿಕವಾದ ಸರ್ವ ಸುಖಾಡಂಬರಗಳೂ ಅವರನ್ನರಸಿ ಬರುತ್ತಿತ್ತು. ಆದರೆ ಅವೆಲ್ಲವನ್ನೂ ಬದಿಗಿಟ್ಟು *ಹುಬ್ಬುಲ್ ವತನಿ ಮಿನಲ್ ಈಮಾನ್* ಎಂಬ ಪ್ರವಾದಿ ﷺ ವಚನಕ್ಕನುಸಾರವಾಗಿ ತಾಯಿನಾಡಿನ ವಿಮೇೂಚನೆಗಾಗಿ ಹೇೂರಾಡಿ ಶಹೀದಾದ ಆ ಧೀರ ಪರಾಕ್ರಮಿಯ ಬದುಕು ಮತ್ತು ಹೇೂರಾಟಗಳು ಲಿಬಿಯ ದೇಶದ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ.

*ಮುಗಿಯಿತು.*
✳✳✳✳✳✳✳✳✳

No comments:

Post a Comment