*ಯುವಕರಿಗಾಗಿ*
*ಇದನ್ನು ಎಲ್ಲರೂ ತಪ್ಪದೆ ಓದಿ*
⚡⚡⚡⚡⚡⚡⚡
💫💫💫💫💫💫💫
"ಓ" ಯುವಕರೇ ,
ಅಲ್ಲಾಹನನ್ನು ಭಯ ಪಟ್ಟು ಐದು ವಕ್ತ್ ನಮಾಝ್ ಕ್ಲಪ್ತ ಸಮಯಕ್ಕೆ ನಿರ್ವಹಿಸು.
ಎಲ್ಲಿದ್ದರೂ ಅಲ್ಲಾಹನನ್ನು ಭಯಪಡು. ನೀನು ವಿಜಯಹೊಂದವೆ.
ರಾತ್ರಿ ಹೊತ್ತು ಮನೆಗೆ ಬಾರದೆ ತಿರುಗಾಡಬೇಡ. ಯಾಕೆಂದರೆ, ನೀನು ಅದರಿಂದ ಗಂಜಾ ಸೇವನೆಗಾರನಾಗಬಹುದು, ಬೀಡಿ ಸಿಗರೇಟು ಸೇದುವವನಾಗಬಹುದು, ಅಮಲು ಪದಾರ್ಥಗಳು ಸೇವಿಸುವವನಾಗಬಹುದು, ಕೊಲೆ ಮಾಡುವವನಾಗಲೂಬಹುದು.
"ಓ" ಯುವಕರೇ,
ರಾತ್ರಿ ಹೊತ್ತು ಅಂಗಡಿ ಬಾಗಿಲುಗಳಲ್ಲಿ, ಬೀದಿ ಬದಿಗಳಲ್ಲಿ ಇನ್ನಿತರ ಸ್ಥಳಗಳಲ್ಲಿ ನಿಂತು ನಿದ್ರೆಯನ್ನು ಹಾಳು ಮಾಡಬೇಡಿರಿ. ನಿಮ್ಮ ಆರೋಗ್ಯವನ್ನು ನಷ್ಟ ಪಡಿಸದಿರಿ.
ರಾತ್ರಿ ಇಶಾ ನಮಾಝ್ ನಂತರ ವಿತ್ರ್ ಸುನ್ನತ್ ನಮಾಝನ್ನು ರೂಢಿಮಾಡಿರಿ.
ಇಶಾ ನಮಾಝ್ ನಂತರ ಬೇಗನೆ ಮಲಗಿರಿ. ಅರ್ಥ ರಾತ್ರಿ ಎದ್ದು ತಹಜ್ಜುದ್ ನಮಾಝ್ ನಿರ್ವಹಿಸಿ.ಮಾಡಿದ ಪಾಪಕ್ಕೆ ಪಶ್ಚಾತ್ತಾಪ (ತೌಬಾ) ಮಾಡಿರಿ.ಅಲ್ಲಾಹು ಕರುಣಾಮಯಿಯಾಗಿದ್ದಾನೆ.
ಯಾವಾಗಲೂ ಒಳ್ಳೆಯವರ ಗೆಳತನ ಮಾಡಿರಿ, ಕೆಟ್ಟವರ ಸಹವಾಸ ಮಾಡದಿರಿ, ಕೆಟ್ಟವರ ಸಹವಾಸ ಮಾಡಿದರೆ ಮುಂದೆ ನಿನಗೂ ಅದರ ದುಷ್ಪರಿಣಾಮ ಬೀರಬಹುದು. ಸಂಶಯವಿಲ್ಲ.
ಓ ಯುವ ಸಮೂಹವೇ, ಯಾವಾಗಲೂ ಸಜ್ಜನರ, ವಿದ್ವಾಂಸರ, ಆಲಿಮ್ ಗಳ ಜೊತೆಗೆ ಬೆರೆಯಿರಿ. ಇದರಿಂದ ನಿಮ್ಮ ಇಹ ಮತ್ತು ಪರಲೋಕ ಎರಡೂ ವಿಜಯಹೊಂದಲು ಕಾರಣವಾಗುತ್ತದೆ.
ನಿಮ್ಮ ತಂದೆ, ತಾಯಿಯೊಂದಿಗೆ ಸೌಮ್ಯದೊಂದಿಗೆ ವರ್ತಿಸಿರಿ. ಗೆಳೆಯರಿಗಿಂತ ನಿಮ್ಮ ಮಾತ ಪಿತರೊಂದಿಗೆ ಹೆಚ್ಚು ಹೊತ್ತು ಕಳೆಯಿರಿ. ಅವರ ಪ್ರೀತಿಗೆ ಕಾರಣರಾಗಿರಿ. ಇದು ನಿಮಗೆ ಒಳಿತಾಗಿದೆ. ಮಾತಪಿತರ ಕಾಲಿನಡಿಯಲ್ಲಾಗಿದೆ ಸ್ವರ್ಗ.
ಯಾವುದೇ ಕಾರಣಕ್ಕೂ ಅನ್ಯ ಹೆಣ್ಣಿನ ಪ್ರೀತಿ, ಪ್ರೇಮ ಪಾಶಕ್ಕೆ ಸಿಲುಕದಿರಿ.
ನೀವು ಪ್ರವಾದಿ ಮುಹಮ್ಮದ್ (ಸ.ಅ) ಮರನ್ನು ಅತೀಯಾಗಿ ಪ್ರೀತಿಸಿ. ಇದರಿಂದ ದುನ್ಯಾ ಮತ್ತು ಆಕಿರಾ ಎರಡೂ ವಿಜಯಹೊಂದುದು.
ಪಾಶ್ಚಾತ್ಯರ ಅನುಸರಣೆಯುಳ್ಳ ಗಡ್ಡ, ಹೇರ್ ಕಟ್ಟಿಂಗ್, ಕೂದಲಿಗೆ ಇನ್ನಿತರ ಬಣ್ಣ ಹಾಕುವುದನ್ನು ಇಂದೇ ನಿಲ್ಲಿಸಿ. ಇದು ಹರಾಂ ಎಂಬುದು ನೆನಪಿನಲ್ಲಿರಲಿ.
ಟೈಟ್ ಫಿಟ್ ಪ್ಯಾಂಟ್ ಧರಿಸದಿರಿ. ಇದರಿಂದ ಮೂತ್ರ ಮಾಡಲು ತುಂಬಾ ಕಷ್ಟವಾಗುದಲ್ಲದೆ ಮೂತ್ರವೂ ನಿಮ್ಮ ಪ್ಯಾಂಟ್ ಗೆ ಆಗುವುದಲ್ಲದೆ, ನಿಮ್ಮ ನಮಾಝ್ ಅಸಿಂಧುವಾಗುವುದಲ್ಲದೆ ಎಲ್ಲರ ನಮಾಝ್ ಬಾತಿಲ್ ಆಗುತ್ತದೆ. ಜಾಗ್ರತೆ ವಹಿಸಿರಿ.
ಸರಿಯಾಗಿ ಮೂತ್ರ ಮಾಡದೆ, ಸರಿಯಾಗಿ ಶುಚಿಗೊಳಿಸದೆ ಇದ್ದರೆ ನಾಳೆ ಕಬರ್ ನಲ್ಲಿ ಭಯಾನಕ ಶಿಕ್ಷಿಸಲಾಗುವುದು.
ಟೈಟ್ ಫಿಟ್ ಪ್ಯಾಂಟ್ ಧರಿಸಿದರೆ ಭೂಮಿ ನಿಮ್ಮ ಔರತ್ ಕಾಣುತ್ತದೆ. ಪೈಜಾಮ ಧರಿಸಿರಿ, ಭೂಮಿ ನಿಮಗಾಗಿ ಪ್ರಾರ್ಥಿಸುತ್ತದೆ.
ಬೈಕಿನಲ್ಲಿ ಇನ್ನಿತರ ವಾಹನಗಳಲ್ಲಿ ಡ್ರೈವಿಂಗ್ ಮಾಡುವಾಗ ಒರ್ ಟೆಕ್ ಮಾಡದಿರಿ. ಮತ್ತು ಹೈಸ್ಪಿಡಾಗಿ ವಾಹನವನ್ನು ಚಲಾಯಿಸದಿರಿ. ನಿಮ್ಮನ್ನು ಕಾದು ಕುಳಿತಿರುವ ನಿಮ್ಮ ತಂದೆ,ತಾಯಿ, ಮನೆಯವರನ್ನು ನೆನಪಿಸು. ನಿನ್ನ ಪ್ರಾಣವನ್ನು ರಕ್ಷಿಸು.
ವಾಹನ ಚಲಾಯಿಸುವಾಗ ದಯವಿಟ್ಟು ಇಯರ್ ಪೋನ್ ಬಳಸದಿರಿ. ನಿಮ್ಮ ಪ್ರಾಣ ತೆಗೆಯಲು ಅದು ಸಾಕಾಗುತ್ತದೆ.
ವಾಹನಗಳಲ್ಲಿ ಹೋಗುವಾಗ (ಸುಬುಹಾನಲ್ಲಝೀ ಸಹ್ಹರಲನ ಹಾಝಾ ವಮಾ ಕುನ್ನಾ ಲಹುಲ್ ಮುಕುರಿನೀನ್ ವ ಇನ್ನಾ ಇಲಾ ರಬ್ಬಿನಾ ಲಮುನ್ ಕಲಿಬೂನ್) ಹಾಗೂ ಆಯತುಲ್ ಕುರ್ಸಿ, ಇನ್ನಾ ಅನ್ ಝಲ್ನಾ ಸೂರತ್ ಓದಬೇಕು.
"ಓ" ಮುಸ್ಲೀಂ ಯುವಕರೇ,
ಮ್ಯೂಸಿಕ್ ಹಾಡುಗಳನ್ನು ವರ್ಜಿಸಿರಿ. ಅನಿಸ್ಲಾಮಿಕ ಹಾಡುಗಳನ್ನು ವರ್ಜಿಸಿರಿ. (ಅಲ್ಲಾಹನಿಗಾಗಿ) ನೀವು ವಿಜಯಹೊಂದಬಹುದು.
ಅನ್ಯ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡದಿರಿ. ಎಲ್ಲಾ ಹರಾಂ ಗಳಿಂದ ದೂರವಿರಿ. ಅಲ್ಲಾಹನ ಕರುಣೆಯ ನೋಟ ನಿಮ್ಮ ಮೇಲಿರುತ್ತದೆ.
ಅಶ್ಲೀಲಗಳಿಂದ ದೂರವಿರಿ.ಅಲ್ಲಾಹನು ನಿಮ್ಮನ್ನು ನೊಡುತ್ತಾನೆ ಎಂಬ ಗಮನವಿರಲಿ.
ಪ್ರವಾದಿ ಮುಹಮ್ಮದ್ (ಸ.ಅ)ಮರ ಮೇಲೆ ಸ್ವಲಾತ್ ಸಲಾಂ ಅಧಿಕಗೊಳಿಸಿ.
ಯಾವಾಗಲೂ ಮರಣವನ್ನು ಸ್ಮರಿಸು. ನಿಶ್ಚಯವಾಗಿಯೂ ನೀನು ಉತ್ತಮನಾಗುವೆ.
ಯುವತ್ವದ ಬಿಸಿ ರಕ್ತ ಕುದಿಯುವ ಈ ಸಮಯದಲ್ಲಿ ಏಕಾಂತದಲ್ಲಿ ಅಲ್ಲಾಹನನ್ನು ನೆನಸಿ ಕಣ್ಣೀರು ಹಾಕು ಹಾಗಾದರೆ ನಾಳೆ ಮಹಾಶರಾದಲ್ಲಿ ಅರ್ಶ್ ನ ನೆರಳು ಸಿಗುವವನಲ್ಲಾಗುವಿ.
"ಓ" ಯುವ ಸಮೂಹವೇ,
ಮಗ್ರಿಬ್, ಇಶಾ ನಡುವೆ ತಮ್ಮ ಮನೆಗಳಲ್ಲಿ ಸೂರಾ ಯಾಸೀನ್, ಸೂರಾ ಮುಲ್ಕ್, ಸೂರಾ ಅರ್ರಹ್ಮಾನ್, ಸೂರಾ ವಾಕಿಅ ಓದಲು ರೂಢಿ ಮಾಡಿರಿ. ವರ್ಷದಲ್ಲಿ ಒಂದು ಸಲವಾದರೂ ಕುರ್ಆನ್ ಖತಂ ಓದಿರಿ.
ಯುವ ಸಮೂಹವೇ,
ಒಂದು ಪ್ಯಾಂಟ್, ಶರ್ಟ್ ತೆಗೆಯುವಾಗ (ಅಲ್ಲಾಹನ ರಸೂಲ್ ಸ.ಅ ಮರ ಚರ್ಯೆಯಾದ ಟೊಪ್ಪಿಯನ್ನು ತೆಗೆಯಲು ಮರೆಯದಿರಿ.
ನಮಾಝ್ ನಲ್ಲೂ, ಇತರ ಸಮಯದಲ್ಲೂ ತಲೆಗೆ ಟೊಪ್ಪಿ ಹಾಕುದಕ್ಕೆ ಲಜ್ಜೆ ತೋರದಿರಿ.
ಯಾವಗಲೂ ಈಮಾನ್ ಸಲಾಮತ್ತಾಗಲು, ಕಬರ್ ನ ಶಿಕ್ಷೆಯಿಂದ ರಕ್ಷೆ ಹೊಂದಲು, ಭಯಾನಕವಾದ (ಜಹನ್ನಮ್) ನರಕ ಶಿಕ್ಷೆಯಿಂದ ರಕ್ಷೆ ಹೊಂದಲು ದುಅ ಮಾಡಿರಿ.
ಪ್ಯಾಂಟ್ ಧರಿಸುವಾಗ ಮಣಿಗಂಟಿನ ಕೆಳಗೆ ಇಳಿ ಬಿಡಬೇಡ.
ಮಾತ ಪಿತರೊಂದಿಗೆ ದುಅ ಮಾಡಿಸಿ. ಅವರ ದುಅ ಆಶಿರ್ವಾದದೊಂದಿಗೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡು ನಿನಗೆ ವಿಜಯವಿದೆ.
No comments:
Post a Comment