Monday, December 4, 2017

*ಝಿಯಾರತ್ತ್ ಕೇಂದ್ರ*
➖➖➖➖➖➖➖➖➖
       ☪4⃣0⃣☪
            ಭಾಗ 01
➖➖➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰〰〰
*ಶೈಖುನಾ ತಾಜುಲ್ ಉಲಮಾ ಅಬ್ದುರ್ರಹ್ಮಾನ್ ಕುಂಞಿಕ್ಕೋಯ ತಂಙಲ್ ಅಲ್-ಬುಖಾರಿ (ಖ.ಸಿ) ಉಳ್ಳಾಲ. ಎಟ್ಟಿಕುಳಂ, ಕಣ್ಣೂರು.*
🕎🕎🕎🕎🕎🕎🕎🕎🕎

✍ _ಗಫೂರ್ ಬಾಯಾರ್_
〰〰〰〰〰〰〰〰〰
🕌 ಜಾಗತಿಕ ಜಗತ್ತಿನ ಅಗ್ರಗಣ್ಯ ನೇತಾರರೂ, ಅಹ್ಲುಬೈತ್ ಕುಟುಂಬ ಪರಂಪರೆಯ ಕಣ್ಮಣಿಯೂ, ಅಹ್ಲ್ ಸುನ್ನತಿ ವಲ್ ಜಮಾಅತಿನ ಅನಿಷೇಧ್ಯ ನಾಯಕರೂ, ಪಂಡಿತ ಶಿರೋಮಣಿಯೂ ಆಗಿದ್ದರು *"ಶೈಖುನಾ ತಾಜುಲ್ ಉಲಮಾ"(ಖ.ಸಿ) ಉಳ್ಳಾಲ ತಂಙಳ್* ರವರು. ಅರಿವಿನ ಮಹಾ ಪಾಂಡಿತ್ಯವನ್ನು ಕರಗತ ಮಾಡಿದ ಆಬಿದ್, ಸುನ್ನತ್ ಜಮಾಅತ್ತಿನ ಭದ್ರ ತಳಹದಿ ಸುನ್ನತ್ ಜಮಾಅತ್ತಿನ ವಿವಿಧ ಸ್ಥಾನಗಳನ್ನು ಅಲಂಕರಿಸಿ ತನ್ನ ವ್ಯಕ್ತಿ ಮುದ್ರೆ ಒತ್ತಿದ ಮಹಾ ಪಂಡಿತ ತೇಜಸ್ಸು,  ಜ್ಞಾನಸೂರ್ಯ. ಹಕ್ಕನ್ನು ಯಾರ ಮುಂದೆಯೂ ತೆರೆದು ಹೇಳುವ ಜಾಯಮಾನದವರು.  *ಶೈಖುನಾ"ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರಹ್ಮಾನ್ ಕುಂಞಿಕ್ಕೋಯ ತಂಙಳ್" ಉಳ್ಳಾಲ (ಖ:ಸಿ)* ರವರು.

ಹಿಜರಿ ವರ್ಷ 1341 ರಬಿಉಲ್ ಅವ್ವಲ್ 25'ನೇ ಶುಕ್ರವಾರ ಕಲ್ಲಿಕೋಟೆ ಜಿಲ್ಲೆಯ ಫರುಕಿನ ಹತ್ತಿರ ಕರುವಂತಿರುತ್ತಿ ಎಂಬ ಊರಿನಲ್ಲಿ ಜನಿಸಿದರು.
ತಂದೆ ಸಯ್ಯಿದ್ ಅಬೂಬಕ್ಕರ್ ಚೆರುಕುಂಞಿಕ್ಕೋಯ ತಂಙಲ್ ಅಲ್- ಬುಖಾರಿ (ರ). ತಾಯಿ ವಾಯಕಾಡ್ ಕೊನ್ನಾರ್ ಸಾದಾತ್ತುಗಳಲ್ಲಿ ಪ್ರಮುಖರಾಗಿದ್ದ ಅಹ್ಮದ್ 'ಕುಂಞಿಳ್ಳ' ತಂಙಲ್(ರ), ಬುಖಾರಿಯವರ ಮಗನಾದ ಅಬ್ದುರಹ್ಮಾನ್ (ರ)ರವರ ಮಗಳಾದ ಹಲೀಮಾ ಎಂಬ ಕುಂಞಿಬೀವಿ (ರ.ಅ) ರವರಾಗಿದ್ದಾರೆ.

ಪ್ರಮುಖ ಪಂಡಿತರು ಸೂಫೀವರ್ಯರು ಆದ ಕರುವಂತಿರುತ್ತಿಯ ಪುತ್ತನ್ ವೀಟ್ಟಿಲ್ ಮುಹಮ್ಮದ್ ಮುಸ್ಲಿಯಾರ್ (ಖ:ಸಿ)ರವರಿಂದಾಗಿತ್ತು ಖುರ್'ಆನ್ ಮತ್ತು ಪ್ರಾಥಮಿಕ ಮದ್ರಸಾ ಶಿಕ್ಷಣವನ್ನು ಕಲಿತಿರುವುದು. ಹಾಗೂ ಲೌಕಿಕ ವಿಧ್ಯಾಭ್ಯಾಸವನ್ನು ತನ್ನ ಹುಟ್ಟೂರಾದ ಕರುವನ್ ತಿರುತ್ತಿಯಲ್ಲೇ ಕಲಿತರು. ಚಿಕ್ಕಂದಿನಿಂದಲೇ ಅತೀ ಸೌಮ್ಯ ಸ್ವಭಾವದ ವ್ಯಕ್ತಿತ್ವ ಗುಣವನ್ನು ಮೈಗೂಡಿಸಿಕೊಂಡಿದ್ದರು.ಅಲ್ಲದೇ ಓದಿನಲ್ಲಿ ಬಹಳಾ ಆಸಕ್ತಿಯುಳ್ಳವರಾಗಿದ್ದರು ಎಲ್ಲದರಲ್ಲೂ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಳ್ಳುತ್ತಿದ್ದರು ಹಾಗೂ ಉತ್ತಮ ಗ್ರಹಿಕಾ ಶಕ್ತಿಯನ್ನೂ ಹೊಂದಿದ್ದರು.

ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಉನ್ನತ ವ್ಯಾಸಂಗಕ್ಕಾಗಿ ಪೊನ್ನುಂಕಟ್ಟ ಎಂಬ ಹೆಸರಿನಲ್ಲಿ ಪ್ರಸಿದ್ಧರಾದ ಪೊನ್ನಾನಿ ಕೊಡಂಬಿಯತ್ತ್ ಮುಹಮ್ಮದ್ ಮುಸ್ಲಿಯಾರ್(ಖ:ಸಿ) ಕೊಡಂಬುಯ ಮುಹಮ್ಮದ್ ಮುಸ್ಲಿಯಾರ್(ಖ:ಸಿ) ( ಕೊಡುಂಬುಯ ಬಾವ ಉಸ್ತಾದರ ಪಿತರು ) ಪರವಣ್ಣ ಮುಹ್ಯುದ್ದೀನ್ ಕುಟ್ಟಿ ಮುಸ್ಲಿಯಾರ್ (ಖ:ಸಿ), ಎ. ಪಿ. ಅಬ್ದುರಹ್ಮಾನ್ ಅವರಾನ್ ಮುಸ್ಲಿಯಾರ್(ಖ:ಸಿ), ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್ (ಖ:ಸಿ), ಕಾಡೇರಿ ಅಬ್ದುಲ್ ಕಮಾಲ್ ಮುಸ್ಲಿಯಾರ್ (ಖ:ಸಿ), ತೃಕರಿಪ್ಪುರ್ ತಂಗಯಂ ಬಾಪ್ಪು ಮುಸ್ಲಿಯಾರ್ (ಖ:ಸಿ), ಶಂಸುಲ್ ಉಲಮ ಈ.ಕೆ. ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ), ಶೈಖ್ ಆದಮ್ ಹಝ್ರತ್ತ್ (ಖ:ಸಿ) ಹಾಗು ಶೈಖ್ ಹಸನ್ ಹಝ್ರತ್ತ್ (ಖ:ಸಿ) ಮೊದಲಾದ ಉನ್ನತವಾದ ಪ್ರಗಲ್ಭ ಗುರುಗಳಿಂದ ಉನ್ತತ ವಿಧ್ಯಾಭ್ಯಾಸವನ್ನು ಕಲಿತು ನಂತರ
ವೆಲ್ಲೂರ್ ಬಾಖಿಯಾತ್ತಿನಿಂದ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿ *"ಬಾಖವಿ"* ಬಿರುದನ್ನು ಪಡೆದರು.

ತನ್ನ ಪ್ರಮುಖ ಗುರುವರ್ಯರೂ ಅಂದಿನ ಕಾಸರಗೋಡು ಖಾಝಿಯೂ ಆಗಿದ್ದ ಅವರಾನ್ ಉಸ್ತಾದ್ (ಖ:ಸಿ) ರವರ ನಿರ್ದೇಶದ ಪ್ರಕಾರ, ಹಿಜರಿ ವರ್ಷ 1371'ರಲ್ಲಿ ಉಳ್ಳಾಲಕ್ಕೆ ತೆರಲಿ ದರ್ಸ್ ಆರಂಭಿಸಿದರು. ನಂತರ ಆ ದರ್ಸ್ ದಕ್ಷಿಣ ಭಾರತದ ಪ್ರಮುಖವಾದ *"ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಶರೀಅತ್ ಕಾಲೇಜ್"* ಆಗಿ ಮಾರ್ಪಟ್ಟಿತು. ಅದು ಮಹಾನವರ ವಫಾತ್ತಿನ ವರೆಗೆ ಮುಂದುವರಿಯಿತು.

20:09:1956ರಂದು ಸೇರಿದ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮದ ಮುಶಾವರ ಸಭೆ ಉಳ್ಳಾಲ ತಂಙಳ್ (ಖ:ಸಿ)ರವರನ್ನು *ಸಮಸ್ತ ಮುಶಾವರ ಸದಸ್ಯರಾಗಿ ಆರಿಸಿದರು.*
ತಬ್'ಲಿಗ್ ಹಾಗು ಕಳ್ಳ ತ್ವರಿಕತ್ತ್ ನಂತಹ ಅಧಾರ್ಮಿಕವಾದ ವಿಷಯಗಳನ್ನು ಕಲಿಯಲು ಸಮಸ್ತ ನಿಯೋಗಿಸಿದ ಸಮಿತಿಯ ಸದಸ್ಯರಲ್ಲಿ *ಉಳ್ಳಾಲ ತಂಙಳ್ (ಖ.ಸಿ)* ರವರು ಒಬ್ಬರಾಗಿದ್ದರು.

29-11-1976ಕ್ಕೆ ಸಮಸ್ತ ಉಪಾಧ್ಯಕ್ಷರು, 1989ರಿಂದ ವಫಾತ್ತಿನವರೆಗೆ ಸಮಸ್ತದ ಅಧ್ಯಕ್ಷರಾಗಿಯೂ ಉನ್ನತ ಸ್ಥಾನವನ್ನು ಅಲಂಕರಿಸಿದರು. ಸುದೀರ್ಘಕಾಲದವರೆಗೆ ದೀನಿ ವಿದ್ಯಾಭ್ಯಾಸ ರಂಗದಲ್ಲಿ ಮಾದರಿಯೋಗ್ಯವಾದ ಸೇವೆಗೈದ ಮಹಾನರು, ವಿದ್ಯಾಭ್ಯಾಸ ಬೋರ್ಡಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಸಮಸ್ತದ... ⤵

ಮುಂದುವರಿಯುವುದು..

✍ಗಫೂರ್ ಬಾಯಾರ್.
ಸಹಾಯ: ಆಸೀಫ್ ಅಜಿಲಮೊಗರು.
🕎🕎🕎🕎🕎🕎🕎🕎🕎

No comments:

Post a Comment