*ಝಿಯಾರತ್ತ್ ಕೇಂದ್ರ*
🕌 4⃣2⃣🕌
♦ಭಾಗ 01♦
☪☪☪☪☪☪☪☪☪
✍ಗಫೂರ್ ಬಾಯಾರ್
➖➖➖➖➖➖➖➖➖
*#ಹಝ್ರತ್ತ್ #ಮುಜದ್ದಿದ್ #ಅಲ್'ಫಿ ಸಾನಿ ಇಮಾಮ್ ಶೈಖ್ ಅಹ್ಮದ್ ಫಾರೂಖಿ, ಸರ್'ಹಿಂದಿ ರ.ಅ*
*ಸರ್ಹಿಂದ್, ಚಂಡೀಗಡ್. ಪಂಜಾಬ್*
➖➖🕌🕌🕌🕌➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
--------------------------
ಇಸ್ಲಾಂ ಭಾರತದಲ್ಲಿ ಸಂದಿಗ್ದ ಪರಿಸ್ಥಿತಿಯಲ್ಲಿದ್ದಂತಹ ಕಾಲದಲ್ಲಿ ಸತ್ಯ ಧರ್ಮದ ಮಹನೀಯ ದರ್ಶನಗಳಿಗೆ ಪುನರ್ಜೀವನ ನೀಡಿದ ಸಮುದ್ಧಾರಕರಾಗಿದ್ದಾರೆ ಹಝ್ರತ್ತ್ ಮುಜದ್ದಿದ್ ಅಲ್'ಫಿ ಸಾನಿ ಶೈಖ್ ಅಹ್ಮದ್ ಸರ್'ಹಿಂದಿ ರ. ರವರು.
ಪ್ರಸಿದ್ಧರಾದ ಸೂಫೀವರ್ಯರು, ವೈಜ್ಞಾನಿಕ ರಂಗದಲ್ಲಿ ಲೋಕದಾದ್ಯಂತ ಕ್ರಾಂತಿಯನ್ನು ಸೃಷ್ಟಿಸಿದ ಅತ್ಯುತ್ತಮ ಬರಹಗಾರರು, ಅತ್ಯಧಿಕ ಶಿಷ್ಯಂದಿರುಗಳಿರುವ ಮಹಾ ವಿದ್ವಾಂಸರು, ವಿವಿಧ ತ್ವರೀಖತ್ತುಗಳಿಂದ ಅನೇಕ ಜನರಿಗೆ ಆತ್ಮೀಯ ಬೆಳಕನ್ನು ಪಸರಿಸಿದ ಆತ್ಮಜ್ಞಾನಿ ಮುಂತಾದ ಹಲವಾರು ವಿಶೇಷತೆಗಳಿಂದ ಉತ್ತರ ಭಾರತದ ಇಸ್ಲಾಮಿಕ ಚರಿತ್ರೆಯಲ್ಲಿ ಮಹತ್ತರವಾದ ಸ್ಥಾನಗಳಿಂದ ವಿರಾಜಮರಾದ ವ್ಯಕ್ತಿಯಾಗಿದ್ದಾರೆ ಮಹಾನರು.
*"ಎರಡನೇ ಸಹಸ್ರಾಬ್ದದ ಪರಿಷ್ಕರ್ತರಾಗಿದ್ದಾರೆ." ಎಂದಾಗಿದೆ "ಮುಜದ್ದಿದ್ ಅಲ್'ಫಿ ಸಾನಿ" ಎಂಬ ಪದದ ಅರ್ಥ.*
ಪ್ರಮುಖ ಸೂಫೀವರ್ಯರಾದ ಮಖ್'ದೂಮ್ ಶೈಖ್ ಅಬ್ದುಲ್ ಅಹ್ಮದ್ (ರ) ಎಂಬವರ ಮಗನಾಗಿ ಹಿಜರಿ ವರ್ಷ 971ರ
(ಎ.ಡಿ.1564) ಮುಹರಂ 10ಕ್ಕೆ ಪಂಜಾಬಿನ ಸರ್'ಹಿಂದಿ ಎಂಬಲ್ಲಿ ಜನಿಸಿದರು.
ಇಸ್ಲಾಮಿನ ಎರಡನೇ ಖಲೀಫರಾದ ಉಮರ್ ಇಬ್ನು ಖತ್ತಾಬ್ (ರ) ರವರಲ್ಲಿಗೆ ತಲುಪುದಾಗಿದೆ ಮಹಾನರ ಪಿತೃ ಪರಂಪರೆ.
ಸರ್'ಹಿಂದ್ ಎಂಬ ಸ್ಥಳ ಒಂದು ಕಾಲದಲ್ಲಿ ಧಾರಾಳ ಸಿಂಹಗಳು ವಿಹರಿಸುತ್ತಿರುವ ವನ ಪ್ರದೇಶವಾಗಿತ್ತು. *ಶೇರೆ ಹಿಂದ್* (ಸಿಂಹಗಳ ಹಿಂದ್) ಎಂಬ ವಿಶ್ಲೇಷಣೆಯಿಂದ ಸರ್'ಹಿಂದ್ ಆಗಿರುವುದೆಂದು ಹೇಳಲಾಗುತ್ತಿದೆ.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಲಿತಿರುವುದು ತನ್ನ ತಂದೆಯಿಂದಾಗಿತ್ತು. ಆತ್ಮೀಯವೂ, ಬೌಧಿಕವು ಆದ ಜ್ಞಾನಗಳನ್ನು ಕೂಡಾ ತಂದೆಯಿಂದಲೇ ಕರಗತ ಮಾಡಿದರು.
ಆತ್ಮೀಯ ಸರಣಿಯ ಪಿತ್ರಾರ್ಜಿತ ಜ್ಞಾನವನ್ನು ತನ್ನ ಮಗನಿಗೆ ಸನ್ಮಾನಿಸಿ ತಂದೆಯವರು ಇಹಲೋಕ ತ್ಯಜಿಸಿದರು.
*ಹಝ್ರತ್ತ್ ಬಖಿ ಬಿಲ್ಲ (ರ)* ಅವರೊಂದಿಗೆ ಸೇರಿಕೊಳ್ಳುವ ಮೂಲಕವಾಗಿದೆ ಮಹಾನರಿಗೆ ಆತ್ಮೀಯ ಆಕರ್ಷಣೆ ಉಂಟಾಗಿರುವುದು.
ಹಜ್ಜ್ ಯಾತ್ರೆ ಆಗ್ರಹಿಸಿ ಸರ್'ಹಿಂದಿ'ಯಿಂದ ದೆಹಲಿಗೆ ಹೋದ ಸಂದರ್ಭದಲ್ಲಿ ಮೌಲಾನಾ *ಹಸನ್ ಕಾಶ್ಮೀರಿ (ರ)*ಯವರೊಂದಿಗಿರುವ ವಾಸ ಅದಕ್ಕೊಂದು ನಿಮಿತ್ತವಾಗಿತ್ತು. ಹಝ್ರತ್ತ್ ಬಖಿ ಬಿಲ್ಲ (ರ) ರವರ ಕುರಿತು ಕೇಳಿ ತಿಳಿದ ನಂತರ ಅವರನ್ನು ಕಾಣಲು, ಅವರ ಶಿಷ್ಯತ್ವವನ್ನು ಸ್ವೀಕರಿಸಲು ಮಹಾನರಿಗೆ ಅತಿಯಾದ ಆಗ್ರಹ ಮನಸ್ಸಲ್ಲಿ ಉದ್ಭವಿಸಿತು.
ತಡಮಾಡದೆ ಹಝ್ರತ್ತ್ ಬಖಿ ಬಿಲ್ಲ (ರ ) ರವರನ್ನು ಕಂಡು ಮೂರು ತಿಂಗಳವರೆಗೆ ಅವರೊಂದಿಗೆ ಆತ್ಮೀಯ ಶಿಕ್ಷಣದಲ್ಲಿ ಕಳೆದರು.
ಶಿಷ್ಯನ ಆತ್ಮೀಯ ಜ್ಞಾನದಲ್ಲಿ ಆಕರ್ಷಣೆಯಾದ ಅವರು ಆತ್ಮೀಯ ಸರಣಿಯನ್ನು ಅನುಸರಿಸಿಕೊಂಡು ಮುನ್ನಡೆಯಲು ಸಮ್ಮತ ಸೂಚಿಸಿ ಅನುಗ್ರಹಿಸಿದರು.
ದೆಹಲಿಗೆ ಮರಳಿ ತಲುಪಿದ ನಂತರ ಹೆಚ್ಚು ಉತ್ಸಾಹದಿಂದ ಜ್ಞಾನ ಪ್ರಸರಣ, ಪ್ರಭೋದನೆ, ಪ್ರವರ್ತನೆಗಳಲ್ಲಿ ಮುಳುಗಿದರು.
ಜನರನ್ನು ಸನ್ಮಾರ್ಗಕ್ಕೆ ಆಹ್ವಾನಿಸಿದರು. ಜನರ ನಡುವೆ ತನ್ನ ಜ್ಞಾನವನ್ನು ಪಸರಿಸುತ್ತಾ, ಬೋಧಿಸುತ್ತಾ ಜೀವಿಸುತ್ತಿದ್ದಾಗ ಹಝ್ರತ್ತ್ ಬಖಿ ಬಿಲ್ಲ (ರ) ರವರಿಂದ ಒಂದರ ಮೇಲೆ ಒಂದರಂತೆ ಎರಡು ಪತ್ರಗಳು ಲಭಿಸಿತು. ಅದರಲ್ಲಿ ತನ್ನ ಹತ್ತಿರ ತಲುಪಲಿರುವ ನಿರ್ದೇಶನವಾಗಿತ್ತು ಬರೆದಿರುವುದು. ಆ ನಿರ್ದೇಶನದಂತೆ ಗುರುವನ್ನು ಕಂಡು ಅವರ ಆಜ್ಞೆಯನುಸಾರ ಅವರ ಮಗಳನ್ನು ವಿವಾಹವಾದರು. ಗುರು ಮತ್ತು ಶಿಷ್ಯರ ಕೊನೆಯ ಭೇಟಿಯಾಗಿತ್ತು ಅದು. ನಂತರ ಮಹಾನರು ಸ್ವತಃ ಊರಾದ ಸರ್'ಹಿಂದಿಗೆ ಆಗಮಿಸಿದರು.
ಶೈಖ್ ಅಹ್ಮದ್ ಸರ್'ಹಿಂದಿ (ರ) ರವರು ಅಂದು ಈಗಿನ ಪಾಕಿಸ್ತಾನದ ಲಾಹೋರಿನಲ್ಲಿ ಇರುವಾಗ ಹಝ್ರತ್ತ್ ಬಖಿ ಬಿಲ್ಲ (ರ)ರವರಯ ವಫಾತ್ತಾದ ವಿಷಯ ತಿಳಿದು ಮಹಾನರು ದೆಹಲಿ ತಲುಪಿ ಗುರುವಿನ ಖಬರಿನ ಹತ್ತಿರ ಹೋಗಿ ಗುರುವಿಗಾಗಿ ಅಲ್ಲಾಹನ ಬಳಿ ಪ್ರಾರ್ಥಿಸಿದರು.
ಅಲ್ಪ ಸಮಯ ಅಲ್ಲಿ ಉಳಿದು ಅಲ್ಲಿಂದ ಮರಳಿದರು.
ಹಿಜರಿ ವರ್ಷ..⤵
ಮುಂದುವರಿಯುವುದು.
✍ಗಫೂರ್ ಬಾಯಾರ್
♦♦♦♦♦♦♦♦♦


No comments:
Post a Comment