Monday, December 4, 2017

*#ಝಿಯಾರತ್ #ಕೇಂದ್ರ:*
➖➖➖➖➖➖➖➖➖
       ☪3⃣9⃣☪
➖➖➖➖➖➖➖➖➖
*​ತಝವಾ ಮುಹಮ್ಮದ್ ಕುಂಞಿ ಮುಸ್ಲಿಯಾರ್ (ನ:ಮ)​* *​ತಝವಾ, ಕರುನಾಗಪ್ಪಳ್ಳಿ,*​
*​ಕೊಲ್ಲಂ ಜಿಲ್ಲೆ.​*
🔹🔹🔹🔹🔹🔹🔹🔹🔹
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰〰〰
🕌 ವೈಜ್ಞಾನಿಕ ರಂಗದಲ್ಲೂ ಆತ್ಮೀಯ ಲೋಕದಲ್ಲೂ ಅತ್ಯುನ್ನತಿಗೆ ತಲುಪಿದ ಈ ಮಹಾನರ ಜೀವನ ಶೈಲಿ ಉಳಿದವರಿಗಿಂತ ವಿಭಿನ್ನವಾಗಿತ್ತು.

ತಝವಾ ಉಸ್ತಾದ್ (ನ:ಮ)ರವರು ಐಹಿಕ ಪರಿತ್ಯಾಗಿಯಾದ ಮಹಾನ್  ವಿದ್ವಾಂಸ ಮೇಧಾವಿಯಾಗಿದ್ದರು.

 *"ಅಲ್ ಮವಾಹಿಬುಲ್ ಜಲಿಯ್ಯ"* ಎಂಬ ವಿಶ್ವವಿಖ್ಯಾತ ಕಾವ್ಯದ ಸಾಲುಗಳನ್ನು ಹಲವಾರು ವಿದ್ವಾಂಸರು ತಮ್ಮ ಪ್ರಭಾಷಣಗಳಲ್ಲಿ ಆಲಾಪಿಸುತ್ತಾರೆ. ಪ್ರಭಾಷಣಗಾರರ ಪ್ರಭಾಷಣ ವೇದಿಕೆಗಳಲ್ಲಿ ಇಂದಿಗೂ ವ್ಯಾಪಕವಾಗಿ ಚರ್ಚಿಸುವ ಕಾವ್ಯ ರಚನೆಯಾಗಿದೆ ಇದು.

ಆತ್ಮೀಯ ಸಂತೃಪ್ತಿ ಲಭಿಸುವ ರೀತಿಯಲ್ಲಿ ವಿವಿಧ ವಿಷಯಗಳಲ್ಲಿ ಪೋಣಿಸಲ್ಪಟ್ಟ ತಝವಾ ಉಸ್ತಾದ್ (ನ:ಮ)ರವರ ಅಲ್ ಮವಾಹಿಬುಲ್ ಜಲಿಯ್ಯದ ಸಾಲುಗಳನ್ನು ಕೇಳದವರು ಅತೀ ವಿರಳ.

ಅದರ ಒಂದೆರಡು ಸಾಲುಗಳು
ಈ ರೀತಿ ಇದೆ👇😰

*ಕಬರೆನ್ನ್ ಕೇಟ್ಟಾಲ್ ತಲ್'ಕ್ಷಣಂ ಞೆಟ್ಟೇಂಡದಾ..*
*ಕಂಡಾಲ್ ಉಡನ್ ವಾವಿಟ್ಟ್  ನಿ ಕರಯೇಂಡದಾ...*

*ಮೇಡಕ್ಕ್ ಪಗರಮ್ ಮಾಳಮಾ ಸುಬ್'ಹಾನಾ..*
*ರಬ್ಬೀ ಅದಿಲ್ ಕೆಡಕ್ಕೇಂಡದಾ ಅಝ್'ಮಾನಾ..*

_*ಈ ಕಾವ್ಯವು ಎಷ್ಟೊಂದು ಅರ್ಥಪೂರ್ಣ...!*_

*ಕಬ್'ರೆಂದು ಕೇಳಿದರೆ ತಕ್ಷಣ ನೀನು ಬೆಚ್ಚಿ ಬೀಳಬೇಕು..*
*ಅದನ್ನು ಕಂಡ ಕೂಡಲೇ ನೀನು ಪಶ್ಚಾತ್ತಾಪದಿಂದ  ಗಟ್ಟಿಯಾಗಿ ಅಳಬೇಕು..*

*ನಿನ್ನ ಕೋಣೆಗೆ ಬದಲಾಗಿ ಬರಿ ಒಂದು ಗುಂಡಿಯಾಗಿದೆ ಅದು..*
*ಅಂತ್ಯ ದಿನದ ತನಕ ನೀನಲ್ಲಿ ಮಲಗಲೇಬೇಕು...*
🔹🔹🔹🔹🔹🔹🔹

ಜೀವನಾಂತ್ಯದವರೆಗೆ ಆತ್ಮೀಯ ಪರಿಶುದ್ಧತೆಯಿಂದ ಜೀವಿಸಿದ ಮಹಾನುಭಾವರು ತನಗೆ ಬೇಕಾಗಿ ಸ್ವತಃ ಖಬರ್ ತೋಡಿದ್ದರು.

*ಇಸ್ಲಾಮಿನ ಮಾದರಿ ಮಹಿಳೆ ಬೀವಿ ನಫೀಸತುಲ್ ಮಿಸ್ರಿಯ್ಯ (ರ) ರವರು ತನಗಾಗಿ ಖಬರ್ ತೋಡಿ ಅದರಲ್ಲಿ ಕುಳಿತು 2000 ಬಾರಿ ಖುರ್'ಆನ್ ಖತಂ ಪಾರಾಯಣ ಮಾಡಿ ಮುಗಿಸಿದ ಚರಿತ್ರೆಯನ್ನು ಅನುಸ್ಮರಿಸುವ ಆತ್ಮೀಯ ಶೈಲಿಯನ್ನಾಗಿತ್ತು ತಝವಾ ಉಸ್ತಾದ್ (ನ:ಮ)ರವರು ಕೂಡ ಅನುಸರಿಸಿರುವುದು.*

ಪ್ರಸಿದ್ಧ ಆತ್ಮೀಯ ಭಾಷಣಗಾರರೂ ಆದ ಉಸ್ತಾದರ ಜ್ಞಾನಸಿದ್ಧಿಯು ಅಪಾರವಾಗಿತ್ತು.
*ಲಾ ಹೌಲ*ದ ಇಜಾಝತ್  ಪರಂಪರಾಗತವಾಗಿ ಲಭಿಸಿದ ಮಹಾನರು, ಯೋಗ್ಯರಾದವರಿಗೆ ಅದರ ಇಜಾಝತ್ ನೀಡುತ್ತಿದ್ದರು.

*ದಾರಿ:* ಕರುನಾಗಪ್ಪಳ್ಳಿ ನಗರದ ಪುದಿಯಕಾವ್ ಜಂಕ್ಷನ್'ನಿಂದ ಕೆಳಗಡೆ ಸಂಚರಿಸಿದರೆ ತಝವಾ SRP ಮಾರ್ಕೆಟಿನ ಪಕ್ಕದಲ್ಲಿರುವ ಮಸೀದಿಯ ಪಕ್ಕದಲ್ಲೇ ಮಹಾನರು ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಮಖ್ಬರವಿದೆ.

✍ಗಫೂರ್ ಬಾಯಾರ್
⚠⚠⚠⚠⚠⚠⚠

No comments:

Post a Comment