🌎🌍🌏🌎🌍🌏🌎🌍
*ಲೋಕ ರಾಷ್ಟ್ರಗಳನ್ನು ಸುತ್ತಾಡುವ ಸುಲ್ತಾನುಲ್ ಉಲಮರ ರಹಸ್ಯವೇನು*
🌍🌎🌏🌍🌎🌏🌍🌎
ಅಂದೊಂದು ಕಾಲವಿತ್ತು, ಆ ಕಾಲದಲ್ಲಿ ಭಾರತದಿಂದ ಅತ್ಯಧಿಕ ಬಾರಿ ಮಕ್ಕ ಮತ್ತು ಮದೀನ ಸಂದರ್ಶಿಸುವ ಭಾಗ್ಯಗಳಿಸಿದ ಮಾಹಾ ವ್ಯಕ್ತಿ *ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಕಿ ತಂಙಳಾಗಿದ್ದರು*.ಅವರು ಇಪ್ಪತ್ತೆರಡು ಬಾರಿ ಆ ಪುಣ್ಯ ಸ್ಥಳಗಳನ್ನು ಸಂದರ್ಶಿಸಿದ್ದರು. ಇಪ್ಪತ್ತೆರಡನೇ ಹಜ್ಜ್ ಕರ್ಮದ ನಂತರ ಅವರು ಅಲ್ಲಿ ವಫಾತಾದರು. ಆದ್ದರಿಂದಲೇ ಅವರನ್ನು *ಜನ್ನತುಲ್ ಮುಹಲ್ಲಾದಲ್ಲಿ* ದಫನ್ ಮಾಡಲಾಯಿತು.
ಅವರ ನಂತರ ಅತ್ಯಧಿಕ ಬಾರಿ ಆ ಪುಣ್ಯ ಸ್ಥಳಗಳನ್ನು ಕಾಣಲು ಭಾಗ್ಯಗಳಿಸಿದ ಮಹಾನ್ ವ್ಯಕ್ತಿ *ತಾಜುಲ್ ಉಲಮರಾಗಿದ್ದರು*. ಅವರು *ನಲವತ್ತು ಬಾರಿ* ಆ ಪುಣ್ಯ ಸ್ಥಳಗಳನ್ನು ಸಂದರ್ಶಿಸಿದ್ದರು.
ಆದರೆ... ಇಂದು, ಒಂದು ವರ್ಷದಲ್ಲಿ ಮೂರು ಅಥವಾ ನಾಲ್ಕು ಬಾರಿ ಮಕ್ಕ ಮತ್ತು ಮದೀನ ತಲುಪುವ ಮಹಾನ್ ಭಾರತದಲ್ಲಿದ್ದರೆ ಅವರು *ಶೈಖುನಾ ಸುಲ್ತಾನುಲ್ ಉಲಮರಾಗಿದ್ದಾರೆ*.
ರಬೀವುಲ್ ಅವ್ವಲ್, ರಂಝಾನ್ ತಿಂಗಳಲ್ಲಿ ಮತ್ತು ಹಜ್ ಸಂದರ್ಭಗಳಲ್ಲಿ ಆ ಪುಣ್ಯ ಸ್ಥಳಗಳನ್ನು ಪ್ರತೀ ವರ್ಷವೂ ತಲುಪುವ ಓರ್ವ ಮಹಾನ್ ವ್ಯಕ್ತಿಯಾಗಿದ್ದಾರೆ ಅವರು.
ಭಾರತದಲ್ಲಿರುವ ಸುನ್ನೀ ಮುಸ್ಲಿಂಗಳ ಸನ್ನತ್ ಜಮಾಅತಿನ ವಿಷಯಗಳನ್ನು ಹೇಳಿ *ರೌಳಾ ಶರೀಫಿನ* ಬಳಿ ಕಣ್ಣೀರಿಳಿಸಿ ಸುನ್ನತ್ ಜಮಾಅತಿನ ಕಾರ್ಯ ಚಟುವಟಿಕೆಗಳಿಗಾಗಿ ಆಶಿರ್ವಾದ ಪಡೆಯುವ ಓರ್ವ ಮಹಾನ್ ಇಂದು ಭಾರತ ದೇಶದಲ್ಲಿದ್ದರೆ ಅವರು ಸುಲ್ತಾನುಲ್ ಉಲಮರಾಗಿದ್ದಾರೆ.
🌷🌷🌷🌷🌷🌷🌷🌷
*ನಾಲ್ಕು ಖಲೀಫರ ಮಕ್ಬರಗಳ ಬಳಿ.*
ಮುಸ್ಲಿಂ ಸಮೂಹ ಪ್ರವಾದಿಗಳ ನಂತರ ಅತ್ಯಧಿಕ ಗೌರವಿಸಬೇಕಾದದ್ದು ಮತ್ತು ಅಂಗೀಕರಿಸಬೇಕಾದದ್ಗು ನಾಲ್ಕು ಖಲೀಫರುಗಳಾನ್ನಾಗಿದೆ. *ಅಬೂಬಕ್ಕರ್ ಸಿದ್ದೀಕ್(ರ), ಉಮರ್(ರ), ಉಸ್ಮಾನ್(ರ) ಅಲಿಯ್ಯ್(ರ)*ರಂತಹ ನಾಲ್ಕು ಖಲೀಫರನ್ನು ಒಂದು ವರ್ಷದಲ್ಲಿ ಒಮ್ಮೆಯಾದರೂ ಸಂದರ್ಶಿಸಿ ಭಾರತದ ಸುನ್ನತ್ ಜಮಾಅತಿನ ಕಾರ್ಯಗಳಿಗೆ ಆಶಿರ್ವಾದ ಪಡೆಯಲು ಭಾಗ್ಯ ಸಿಕ್ಕಿದ ಭಾರತದ ಅತ್ಯಂತ ಶ್ರೇಷ್ಠ ವ್ಯಕ್ತಿ ಕೂಡ ಸುಲ್ತಾನುಲ್ ಉಲಮರಾಗಿದ್ದಾರೆ.
🌹🌹🌹🌹🌹🌹🌹🌹
*ನಾಲ್ಕು ಇಮಾಂಗಳ ಬಳಿ.*
ನಾಲ್ಕು ಖುಲಫಾಉರ್ರಾಶಿದ್ಗಳ ನಂತರ ಮುಸ್ಲಿಂ ಸಮೂಹ ಅತ್ಯಧಿಕ ಗೌರವದಿಂದ ಕಾಣುತ್ತಿರುವುದು ನಾಲ್ಕು ಇಮಾಂಗಳನ್ನಾಗಿದೆ. *ಇಮಾಂ ಮಾಲಿಕ್(ರ),ಇಮಾಂ ಅಹ್ಮದುಬ್ನು ಹಂಬಲ್(ರ),ಇಮಾಂ ಶಾಫೀ(ರ),ಮತ್ತು ಇಮಾಂ ಅಬೂಹನೀಫ(ರ)*. ಇವರ ಮಕ್ಬರಗಳ ಬಳಿ ಕೂಡ ಒಂದು ವರ್ಷದಲ್ಲಿ ಒಮ್ಮೆಯಾದರೂ ತಲುಪಿ ಭಾರತದ ಸುನ್ನೀ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗಾಗಿ ಆಶಿರ್ವಾದ ಬೇಡುವ ಭಾರತದ ಏಕೈಕ ಮುಸ್ಲಿಂ ಧೀಮಂತ ನಾಯಕ ಸುಲ್ತಾನುಲ್ ಉಲಮರಾಗಿದ್ದಾರೆ.
🌿🌿🌿🌿🌿🌿🌿🌿
*ನಾಲ್ಕು ಕುತುಬುಗಳ ಮಕ್ಬರಗಳ ಬಳಿ.*
ನಾಲ್ಕು ಇಮಾಂಗಳ ನಂತರ ಮುಸ್ಲಿಂ ಸಮುದಾಯ ಅತ್ಯಂತ ಗೌರವಿಸುತ್ತಿರುವುದು ನಾಲ್ಕು ಕುತುಬುಗಳನ್ನಾಗಿದೆ. ಆ ಕುತುಬುಗಳಾಗಿದ್ದಾರೆ *ಮುಹಿಯದ್ದೀನ್ ಶೈಖ್ (ಖ.ಸಿ), ಅಹ್ಮದುಲ್ ಕಬೀರ್ (ಖ.ಸಿ), ಅಹ್ಮದುಲ್ ಬದವಿ (ಖ.ಸಿ),ಇಬ್ರಾಹೀಮದ್ದಸೂಕಿ (ಖ.ಸಿ)*. ಇವರ ಮಕ್ಬರಗಳ ಬಳಿ ಕೂಡ ಒಂದು ವರ್ಷದಲ್ಲಿ ಒಮ್ಮೆಯಾದರೂ ತಲುಪಿ ಭಾರತದ ಸುನ್ನೀ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗಾಗಿ ಆಶಿರ್ವಾದ ಬೇಡುವ ಭಾರತದ ಏಕೈಕ ಮುಸ್ಲಿಂ ಧೀಮಂತ ನಾಯಕ ಸುಲ್ತಾನುಲ್ ಉಲಮರಾಗಿದ್ದಾರೆ.
🌱🌱🌱🌱🌱🌱🌱🌱
*ದಲಾಯಿಲುಲ್ ಖೈರಾತ್* ರಚಿಸಿದ *ಇಮಾಂ ಸುಲೈಮಾನುಲ್ ಜಝೂಲಿ(ರ)*ರವರ ಮಕ್ಬರವಿರುವುದು ಮೊರೋಕದಲ್ಲಿ. *ಸುಲ್ತಾನುಲ್ ಉಲಮರು* ಮೊರೋಕ ರಾಜನಿಗೆ ಫೋನ್ ಮಾಡಿ *ಸುಲೈಮಾನುಲ್ ಜಝೂಲಿ(ರ)* ರವರ ಮಕ್ಬರ ಸಂದರ್ಶಿಸಲು ಅನುವು ಮಾಡಿಕೊಡಬೇಕೆಂದಾಗ ತಕ್ಷಣವೇ ಅಲ್ಲಿನ ರಾಜ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕೊಟ್ಟರು ಮತ್ತು *ಸುಲ್ತಾನುಲ್ ಉಲಮರು* ಅಲ್ಲಿ ಹೋಗಿ ಝಿಯಾರತ್ ಮಾಡಿ ಬಂದರು.
💐💐💐💐💐💐💐💐
*ಬುಖಾರಿ ಇಮಾಮರ ಸನ್ನಿಧಾನದಲ್ಲಿ.*
ಲೋಕದಲ್ಲಿ ಅತ್ಯಧಿಕ ಬಾರಿ ಎಲ್ಲಾ ಆಲಿಂಗಳ ಬಾಯಿಂದಲೂ, ಮುತಅಲ್ಲಿಂಗಳ ಬಾಯಿಂದಲೂ ಮತ್ತು ಸಾಮಾನ್ಯ ಜನರಿಂದಲೂ ಹೇಳಲಾಗತ್ತಿರುವ ಹೆಸರು *ಇಮಾಂ ಬುಖಾರಿ(ರ) ರವರದ್ದು*. ಕುರ್ಆನಿನ ನಂತರ ಅತ್ಯಧಿಕ ಸ್ಥಾನವಿರುವ ಗ್ರಂಥ ಅವರು ರಚಿಸಿದ *ಸ್ವಹೀಹುಲ್ ಬುಖಾರಿ* ಎಂಬೂದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹ *ಇಮಾಂ ಬುಖಾರಿ(ರ)* ರವರ *ಉಝ್ಬಕಿಸ್ಥನ್*ನಲ್ಲಿರುವ ಮಕ್ಬರ ಸಂದರ್ಶಿಸಿ ಅಲ್ಲಿ ಸೇರಿದ ಅಲ್ಲಿನ ವಿದ್ವಾಂಸರಿಗೆ *ಬುಖಾರಿ ಇಮಾಮರ* ಮಕ್ಬರದ ಬಳಿ *ಸ್ವಹೀಹುಲ್ ಬುಖಾರಿ*ದರ್ಸ್ ನಡೆಸಿ *ಬುಖಾರಿ ಇಮಾಮರ* ಆಶಿರ್ವಾದ ಪಡೆದರು.
🌺🌺🌺🌺🌺🌺🌺🌺
ಇಂತಹ ಹಲವು ಭಾಗ್ಯಗಳು ಒಳಿದು ಬಂದ ಸುಲ್ತಾನುಲ್ ಉಲಮರ ರಹಸ್ಯವೇನಾಗಿರಬಹುದು? ಒಂದೆಡೆ *ಸುಲ್ತಾನುಲ್ ಉಲಮ*ರು ಭಾಷಣದ ಮಧ್ಯೆ ಹೇಳಿದರು *"ನನಗೆ ಅಂದು, ಅಂದಿನ ಅಬುಸ್ಸಆದಾತ್ ಶಾಲಿಯಾತಿ ತಂಙಳ್ ಮತ್ತು ಶಂಸುಲ್ ಉಲಮ ಕುತುಬಿ ಮುಸ್ಲಿಯಾರ್ ದುಆಮಾಡಿದ್ದರು"*
🌙🌙🌙🌙🌙🌙🌙🌙
✍ *ಮುಹಮ್ಮದ್ ಮುನೀರ್. ಎ ಕಬಕ 9048254879 ಮುಹಿಮ್ಮಾತ್ ದಅವ ಕಾಲೇಜ್*
🌎🌍🌏🌎🌍🌎🌍🌏

No comments:
Post a Comment