Monday, December 4, 2017

*ಝಿಯಾರತ್ತ್ ಕೇಂದ್ರ*
➖➖➖➖➖➖➖➖➖
          4⃣0⃣
        🔹ಭಾಗ 02🔹
➖➖➖➖➖➖➖➖➖
*#ಶೈಖುನಾ_ತಾಜುಲ್ #ಉಲಮಾ ಅಸ್ಸೆಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರೀ ಉಳ್ಳಾಲ ತಂಙಳ್ (ಖ:ಸಿ) ಎಟ್ಟಿಕುಳಂ, ಕಣ್ಣೂರು.*
🕎🕎🕎🕎🕎🕎🕎🕎🕎
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰〰〰

🕌 ಸಮಸ್ತದ ಸ್ಥಾಪಿತ ಮೂಲ ಆಶಯಾದರ್ಶ, ಲಕ್ಷ್ಯಗಳಿಗೆ ವಿರುದ್ಧವಾಗಿ ಸಂಘಟನೆ ಕಾರ್ಯಾಚರಿಸಿದಾಗ ಅದನ್ನು ಹಲವಾರು ಬಾರಿ ಪರಿಹರಿಸಲು ತಾಜುಲ್ ಉಲಮಾ (ಖ.ಸಿ)ರವರು ನಿರಂತರವಾಗಿ ಶ್ರಮಿಸಿದರು. ಫಲ ಕಾಣದಾಗ
ಕೊನೆಗೆ ಗಧ್ಯಂತರವಿಲ್ಲದೆ, ನೈಜ ಸುನ್ನಿ ಆದರ್ಶಕ್ಕಾಗಿ ಮಹಾನವರು ವಿಧ್ವಾಂಸರ ದೌತ್ಯವನ್ನು ನೆರವೇರಿಸಿದರು, ಕೇರಳ ಚರಿತ್ರೆಯಲ್ಲೇ ಹೊಸ ಪರ್ಯಾಯ ಮಾರ್ಗವಾಗಿ ಸಮಸ್ತದ ನಾಯಕತ್ವವನ್ನು ವಹಿಸಿದರು. ಆ ಸಂಧರ್ಭದಲ್ಲಿ ತನ್ನ ಸುತ್ತಮುತ್ತ ಸಹಾಯ ಹಸ್ತಕ್ಕೆ ಯಾರೂ ಇರಲಿಲ್ಲ. ಬದಲಾಗಿ ಎಲ್ಲೆಲ್ಲೂ ಶತ್ರುಗಳಿಂದ ಸುತ್ತುವರಿದ ಪ್ರತೀತಿ. ಅಧಿಕಾರದ ಬಲದಿಂದ ಏನು ಬೇಕಾದರೂ ಮಾಡಲು ಹೇಸದವರು, ಆದರೂ ಇಂತಹಾ ಸನ್ನಿವೇಶದಲ್ಲಿ ದೃತಿಗೆಡದೆ ಸದೈರ್ಯದಿಂದ ಸುನ್ನತ್ತ್ ಜಮಾಅತ್ತಿಗಾಗಿ ಹಗಲಿರುಳು ಶ್ರಮವಹಿಸಿ ಮುನ್ನೇರಿದರು. ಸುನ್ನೀ ಸಮೂಹಕ್ಕೆ ಆತ್ಮಾಭಿಮಾನವನ್ನು ತಂದುಕೊಟ್ಟರು.
ಸಮಸ್ತದ ಸಮ್ಮೇಳನವನ್ನು ಕೂಡ ಸಫಲಗೊಳಿಸಲು ರಾಜಕೀಯ ನಾಯಕರುಗಳ ಅಭಿಪ್ರಾಯವನ್ನು ಕೇಳಬೇಕಾದ ಆ ಕಾಲದಲ್ಲಿ ರಾಜಕೀಯದವರನ್ನು ಕಾಯದೆ ಮುನ್ನೇರಿದರು, ಅವರ ಬಹಿರಂಗವಾದ ವಿರೋಧದ ನಡುವೆಯು ಎರುನಾಕುಳಂ ಎಸ್. ವೈ. ಎಸ್'ನ ಸಮ್ಮೇಳನವೂ ಚರಿತ್ರೆಯಲ್ಲಿ ಐತಿಹಾಸಿಕವಾಗಿ ಮಾರ್ಪಾಡಾಗಿ ವಿಜಯಗಳಿಸಿರುವುದು ತಾಜುಲ್ ಉಲಮಾ ಉಳ್ಳಾಲ ತಂಙಳ್(ಖ:ಸಿ) ರವರ ನೇತೃತ್ವದಲ್ಲಾಗಿತ್ತು.

ತನ್ನ ಪ್ರಿಯ ಗುರು ಕಣ್ಣಿಯತ್ತ್ ಅಹ್ಮದ್ ಉಸ್ತಾದ್ (ಖ:ಸಿ) ಮತ್ತು ಮಡವೂರು  ಸಿ.ಎಂ. ವಲಿಯುಲ್ಲಾಹಿ (ಖ:ಸಿ) ರವರ ಆಶೀರ್ವಾದದೊಂದಿಗೆಯಾಗಿತ್ತು ಮಹಾನವರು ಆ ಸಮ್ಮೇಳನದಲ್ಲಿ ಭಾಗವಹಿಸಿ ನೇತೃತ್ವ ವಹಿಸಿರುವುದು. ಅಂದು ಮಹಾನವರು ಮಾಡಿದ ಭಾಷಣ ಚರಿತ್ರಾ ಪ್ರಸಿದ್ಧವಾಗಿತ್ತು.
*"ವ ಲೌ ಕುಂತ ವಹ್'ದಿ*
(ನಾನು ಏಕನಾದರೂ ಸರಿ) ಅಹ್ಲುಸುನ್ನಕ್ಕೆ ಬೇಕಾಗಿ ಮರಣ ಹೊಂದುವೆನೆಂಬ ಮಾತು ಸುನ್ನೀ ಸಮುದಾಯವು ಒಮ್ಮೆಯೂ ಮರೆಯಲಿಕ್ಕಿಲ್ಲ.  ಆ ಧ್ವನಿಯು ಇಂದಿಗೂ ಪ್ರತಿಯೊಬ್ಬನ ಕಿವಿಯಲ್ಲೂ ಪ್ರತಿಧ್ವನಿಸುತ್ತಿದೆ. ಅಂದು ಹಲವಾರು ವಿವಾದಗಳು ಹೊತ್ತಿ ಹುರಿಯುತ್ತಿರುವ ಸಮಯವಾಗಿತ್ತು. ಆದರೂ ಯಾರಿಗೂ ಭಯಪಡಯದ ಮಹಾನುಭಾವರ ಆತ್ಮಧೈರ್ಯ ಅಪಾರವಾಗಿತ್ತು. ಅದು ನಬಿ ﷺ ರವರ ಹಿಮ್ಮತ್ತನ್ನು ನೆನಪಿಸುವಂತಾಗಿತ್ತು.
ನೇತಾರರಾಗಿ ಖುರ್ಚಿಯಲ್ಲಿ ಕುಳಿತುಕೊಳ್ಳದೆ ಎಲ್ಲಾ ಕಾರ್ಯಗಳಿಗೆ ಸ್ವತಃ ನೇತೃತ್ವ ಕೊಟ್ಟ ಸೂಫಿವರ್ಯರಾಗಿದ್ದರು ಮಹಾನವರು.

ಕೇರಳದಲ್ಲಿಯೂ, ಕರ್ನಾಟಕದಲ್ಲಿಯೂ ಹಲವಾರು ಕಾರ್ಯಕ್ರಮಗಳಿದ್ದರೂ, ಎಲ್ಲಾ *ಸಬ್'ಖ್*ಗೆ ಕೂಡ ತಪ್ಪದೇ ಪಾಲ್ಗೊಳ್ಳುತ್ತಿದ್ದರು.
ಆರಾಧನಾ ಕಾರ್ಯಗಳಲ್ಲಿ ಕರ್ಕಶ ನಿಲುವು ಕೈಗೊಂಡವರಾಗಿದ್ದರು. ಫರ್ಳ್ ನಮಾಝ್ ಅಲ್ಲದೇ
ತಹಜ್ಜುದ್ ನಮಾಝ್, ನಿತ್ಯ ಖುರ್'ಆನ್ ಪಾರಾಯಣ, ಪ್ರಾಯಾದಿಕ್ಯದಲ್ಲೂ ವಿತ್'ರ್ ನಮಾಝ್ ಅದು ಕೂಡ 11 ರಕಅತ್ತ್ ನಿಂತು ನಿರ್ವಹಿಸುತ್ತಿದ್ದರು.
ಕರ್ಮಶಾಸ್ತ್ರದ 10 ಭಾಗವಿರುವ ಅತುಲ್ಯ ಗ್ರಂಥವಾದ *ತುಹ್'ಫತ್ತುಲ್ ಮುಹ್'ತಾಜ್* ನಂತಹ ಗ್ರಂಥಗಳು  ಕಂಠಪಾಠವಾಗಿತ್ತು. ಎಂಬುದು ಮಹಾನವರ ವಿಶೇಷತೆಯಾಗಿದೆ.
ಶಿಷ್ಯರುಗಳು ನೋಡಿ ಓದುತ್ತಿರುವಾಗ ತಪ್ಪು ಸಂಭವಿಸಿದರೆ ತಪ್ಪಿರುದನ್ನು ಸರಿಪಡಿಸುವ ಅವರ ದಿವ್ಯ ಜ್ಞಾನ ಶಕ್ತಿಯೂ ಅಪಾರವಾಗಿತ್ತು.
ಅದರೊಂದಿಗೆ ಅವರ ಖಾಸಗಿ ಜೀವನದಲ್ಲಿ ತ್ವರಿಖತ್ತುಗಳು ಹಲವು ಇತ್ತು.

ವಿಶ್ವದ ಪಂಡಿತರಿಂದೆಲ್ಲ ಸಾಧ್ಯವಾಗುವಷ್ಟು ಅರಿವುಗಳನ್ನು ಗಳಿಸಿದ್ದರು.
ತನ್ನನ್ನು ಸಂದರ್ಶಿಸಲು ಬರುವ ಸಾವಿರಾರು ಜನರ ಕಷ್ಟಗಳನ್ನು ಒಂದು ಮಾತಿನಿಂದ ದೂರೀಕರಿಸಿದ ಅನುಭವಗಳು ಧಾರಾಳ ಇವೆ. ಈಮಾನ್'ನಿಂದ ಹೃದಯ ಪ್ರಕಾಶಗೊಂಡು ಮರಣ ಹೊಂದಲು ಸದಾ ಪ್ರಾರ್ಥಿಸುತ್ತಿದ್ದರು.

ರಾಮನಂತಳಿ'ಯ ಸಯ್ಯಿದ್ ಅಹ್ಮದ್ ಕೋಯ ತಂಙಳ್
ರ (ಖ:ಸಿ)ರವರ ಪುತ್ರಿ ಸಯ್ಯಿದತ್ತ್ ಫಾತಿಮಾ ಕುಂಞಿಬೀವಿ ಯಾಗಿದ್ದಾರೆ ಮಹಾನವರ ಧರ್ಮ ಪತ್ನಿ.
ಹಾಮಿದ್ ಇಂಬಿಚ್ಚಿ ಕೋಯ  ತಂಙಳ್, ಫಝಲ್ ಕೋಯಮ್ಮ ತಂಙಳ್ ಎಂಬವರು ಪುತ್ರರು,
ಬಿಕುಂಞಿ ಬೀವಿ, ಮುತ್ತು ಬೀವಿ, ಕುಂಞಾಟ್ಟ ಬೀವಿ, ಚೆರಿಯ ಬೀವಿ ಹಾಗೂ ರಂಲ ಬೀವಿ ಎಂಬವರು ಪುತ್ರಿಯರು ಆಗಿದ್ದಾರೆ.

2014 ಫೆಬ್ರವರಿ 1 ಶನಿವಾರ 1435 ( ರಬಿಉಲ್ ಆಖಿರ್ 1 )ಕ್ಕೆ ಪಯ್ಯನೂರಿನ ಹತ್ತಿರವಿರುವ ಎಟ್ಟಿಕುಳಂ'ನ ತನ್ನ ಸ್ವ ಗೃಹದಲ್ಲಿ ಮದ್ಯಾಹ್ನ 3:40ಕ್ಕೆ ನಗು ಮುಖದೊಂದಿಗೆ ಖಲಿಮಾ  ಉಚ್ಚರಿಸಿ ಈ ನಶ್ವರ ಲೋಕದಿಂದ ಯಾತ್ರೆಯಾದರು. ಇನ್ನಾಲಿಲ್ಲಾಹ್..

🛣ದಾರಿ. ಕಣ್ಣೂರು ಪಯ್ಯನೂರಿನಿಂದ 13 ಕಿ.ಮೀ.. ದೂರದ ಎಝುಮಲೆ'ಯ ಹತ್ತಿರ ಎಟ್ಟಿಕುಳಂ ತಖ್ವಾ ಮಸ್ಜಿದಿನ ಹತ್ತಿರ ಸಕಲ ಪ್ರೌಡಿಯೊಂದಿಗೆ ಮಹಾನವರು ಅಂತ್ಯ ವಿಶ್ರಾಂತಿಪಡೆಯುತ್ತಾರೆ.

ಮಹಾನವರ ಹಖ್ ಜಾಹ್ ಬರ್ಕತ್ತಿನಿಂದ ನಮ್ಮ ಇಹಪರ ಜೀವನ ನೆಮ್ಮದಿಯಿಂದಾಗಲಿ
ಆಮೀನ್

ಮುಗಿಯಿತು.

✍ಗಫೂರ್ ಬಾಯಾರ್
ಸಹಾಯ: ಆಸೀಫ್ ಅಜಿಮೊಗರು
🕎🕎🕎🕎🕎🕎🕎🕎🕎

No comments:

Post a Comment