.*🕌ಝಿಯಾರತ್ತ್ ಕೇಂದ್ರ.🕌*
➖➖➖➖➖➖➖➖➖
4⃣1⃣
☪ಭಾಗ 02☪
➖➖➖➖➖➖➖➖➖
*"#ಏರುವಾಡಿ_ಸುಲ್ತಾನುಲ್ #ಶುಹದಾ #ಸಯ್ಯಿದ್ #ಇಬ್ರಾಹಿಂ_ಬಾದುಷ (ರ) ತಮಿಳುನಾಡು".*
🕌🕌🕌🕌🕌🕌🕌🕌🕌
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰
☪ ಮೊದಲಿನ ಹಾಗೆ ಮದೀನದಲ್ಲಿ ದೀನಿ ಪ್ರಬೋದನೆ ಮಾಡುತ್ತಾ ಜೀವಿಸುತ್ತಿದ್ದಾಗ ಗವರ್ನರ್ ಆಗಿದ್ದ ತಂದೆಯವರು ವಫಾತಾದರು. ತಂದೆಯವರ ಕಾಲಾನಂತರ ಆ ಸ್ಥಾನವನ್ನು ಮಹಾನರು ವಹಿಸಬೇಕಾಯಿತು.
ಆದರೆ ನೆಬಿ (ﷺ) ರವರ ದಿವ್ಯ ಸ್ವಪ್ನ ನಿರ್ದೇಶನ ಅನುಸರಿಸಿ ಪುನಃ ಭಾರತಕ್ಕೆ ಮರಳಿ ಆಗಮಿಸಿದರು. ಆ ಕಾಲದಲ್ಲಿ *ಪಾಂಡ್ಯ ರಾಜ ಮತ್ತು ವಿಕ್ರಮ ರಾಜ*ಭಾರತದ ಪೂರ್ವ ಭಾಗದ ಅತ್ಯಂತ ಕ್ರೂರಿಯಾದ ಆಡಳಿತಾಧಿಕಾರಿಗಳಾಗಿದ್ದರು. ಅವರು ಬಲಿಷ್ಠವಾದ ಸೇನಾಬಲದೊಂದಿಗೆ ಹೋರಾಡಲು ಬಂದಾಗ, ಮಹಾನರು ಪ್ರತಿರೋಧಕ್ಕೆ ಬೇಕಾದ ಸೈನಿಕರನ್ನು, ಆಯುಧ ಬಲದ ಸಹಾಯವನ್ನು ತುರ್ಕಿ ದೇಶದ ರಾಜರಾದ *ಮೆಹ್ಮೂದ್ ಬಾದುಷರವರ ಹತ್ತಿರ ಕೇಳಿ ಕೊಂಡರು*
ಹಿಜರಿ ವರ್ಷ 581ರಲ್ಲಿ ಇಬ್ರಾಹಿಂ ಬಾದುಷ (ರ) ಮತ್ತು ಆಮೀರ್ ಅಬ್ಬಾಸಿ (ರ) ಯವರ ನೇತೃತ್ವದಲ್ಲಿ ಎರಡನೇಯ ಭಾರತ ಯಾತ್ರೆ ಕೈಗೊಂಡರು.. ಆ ಸಂಘದಲ್ಲಿ 3 ವೈದ್ಯರು, ಹಲವಾರು ದೀನೀ ಪ್ರಭೋದಕರು, ಮಹಾನರ ಪತ್ನಿ ಮತ್ತು ಮಕ್ಕಳಾದ ಸಯ್ಯಿದ್ ಅಬೂ ತ್ವಾಹಿರ್ (ರ), ಝೈನುಲ್ ಆಬಿದೀನ್ (ರ), ಇದ್ದರು. ಹಾಗೂ ಕೆಲವು ಸಯ್ಯಿದ್ ಕುಟುಂಬಗಳು ತಂಡದಲ್ಲಿ ಒಳಗೊಂಡಿತ್ತು.
ಜಿದ್ದಾ ಬಂದರಿನಿಂದ ಹೊರಟ ಹಡಗು *ಕೇರಳದ ಕಣ್ಣೂರು ಜಿಲ್ಲೆಯ ಕಡಪ್ಪುರಂ ಎಂಬ ಸ್ಥಳಕ್ಕೆ ತಲುಪಿತು.* ಅಂದು ಕಣ್ಣೂರಿನ ರಾಜರು ಮಹಾನರಿಗೆ ದೀನಿ ಪ್ರಬೋದನೆ ಮಾಡಲು ಬೇಕಾದ ಎಲ್ಲಾ ಸಹಾಯಗಳನ್ನು ಮಾಡಿದರು. ಇದರಿಂದ ಕಣ್ಣೂರು ಮತ್ತು ಪರಿಸರ ಪ್ರದೇಶಗಳಲ್ಲಿ ತೌಹೀದ್ ಹರಡಿತು. ಕೊಚ್ಚಿ, ವಿಯಿಂಜಂ, ಆಲಪ್ಪುಝ, ಹೀಗೆ ಮೊದಲಾದ ಸ್ಥಳಗಳಲ್ಲಿ ಇಸ್ಲಾಮನ್ನು ಪಸರಿಸಿದ ಮೇಲೆ ತನ್ನ ದೌತ್ಯ ಸಂಘದೊಂದಿಗೆ ತಮಿಳ್ನಾಡಿನ ಕಾಯಲ್ ಪಟ್ಟಣಕ್ಕೆ ತಲುಪಿದರು.
ಪಾಂಡ್ಯ ಎಂಬ ರಾಜ್ಯವು ತಿರುನೆಲ್'ವೆಲ್ಲಿ, ಮಧುರೈ ಹಾಗು ರಾಮನಾಥಪುರಂ ಎಂಬ ಮೂರು ನಾಡುಗಳನ್ನು ಒಳಗೊಂಡಿತ್ತು.. ಪಾಂಡ್ಯ ರಾಜನ ಮರಣದ ನಂತರ ಮಕ್ಕಳಾದ *ಕುಲಶೇಖರ ಪಾಂಡ್ಯನ್ ತಿರುನೆಲ್'ವೆಲ್ಲಿಯನ್ನು, ತಿರು ಪಾಂಡ್ಯನ್ ಮಧುರೈಯನ್ನು ಹಾಗು ವಿಕ್ರಮ ಪಾಂಡ್ಯನ್ ರಾಮನಾಥಪುರಂವನ್ನು ಹೀಗೆ ಮೂರು ವಿಭಾಗವಾಗಿ ವಿಭಜಿಸಿ ಆಡಳಿತ ನಡೆಸಿದರು.*
ಮಹಾನರು ಮತ್ತು ಸದಸ್ಯರು ಕುಲಶೇಖರ ಪಾಂಡ್ಯನ ಸ್ಥಳವಾದ ತಿರುನೆಲ್'ವೆಲ್ಲಿಗೆ ತಲುಪ ಪವಿತ್ರಿ ಇಸ್ಲಾಮಿಗೆ ಜನರನ್ನು ಆಹ್ವಾನಿಸುತ್ತಿದ್ದರು. ರಾಜನು ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯಗಳನ್ನು ಮಾಡಿದನು.
ದೌತ್ಯ ಮುಗಿಸಿ ಅಲ್ಲಿಂದ ನೇರ ಮಧುರಕ್ಕೆ ಆಗಮಿಸಿದರು. ಆದರೆ ತಿರು ಪಾಂಡ್ಯನ್ ಮಹಾನರನ್ನು ವಿರೋಧಿಸಿ ಅವರ ವಿರುದ್ಧ ತನ್ನ ಸೈನ್ಯವನ್ನು ಕಳುಹಿಸಿ ಯುದ್ಧ ಮಾಡಿದನು. ಈ ಸಂದರ್ಭದಲ್ಲಿ *ಚೊಳನರು*ಮಧುರೈಯನ್ನು ಆಕ್ರಮಿಸಿದರು. ತಿರು ಪಾಂಡ್ಯನ್ ಸೋತು ಓಡಿ ಹೋದನು.
ಬಾದುಷ ತಂಙಳ್ (ರ) ಮತ್ತು ಅನುಯಾಯಿಗಳು ತಮ್ಮ ಸಂಘದೊಂದಿಗೆ ಮಧುರೈಗೆ ತಲುಪಿದರು. ಆ ಸಂದರ್ಭದಲ್ಲಿ ತಿರು ಪಾಂಡ್ಯನ್ ಮತ್ತು ವಿಕ್ರಮ ಪಾಂಡ್ಯನ್ ಇಬ್ಬರು ದೊಡ್ಡ ಯುದ್ಧ ಸನ್ನಾಹದೊಂದಿಗೆ ಮಹಾನರ ವಿರುದ್ಧ ಯುದ್ಧಕ್ಕೆ ತಯಾರಾಗಿ ವೈವಪರ ಎಂಬ ಸ್ಥಳದಲ್ಲಿ ಕಾದು ಕುಳಿತನು.
ಇದನ್ನು ಅರಿತ ಮಹಾನವರು ತನ್ನ ಅಧೀನದಲ್ಲಿರುವ ಸಾಧ್ಯವಾದಷ್ಟು ಸೈನಿಕರನ್ನು ಕರೆದುಕೊಂಡು ವೈವಪರ ಎಂಬಲ್ಲಿಗೆ ಹೊರಟರು. ಮಧುರೈಯ ನೇತೃತ್ವವನ್ನು *ಸಿಕಂದರ್ ಬಾದುಷ (ರ)* ರವರು ವಹಿಸಿದರು.
ವಿಕ್ರಮ ಪಾಂಡ್ಯನ ಮಗ ಇಂದಿರಾ ಪಾಂಡ್ಯನ್, ಸರ್ವ ಸೈನ್ಯಾಧಿಪತಿ ವೀರ ಪಾಂಡ್ಯನ್ ಹಾಗೂ ಸರ್ವ ಆಯುಧಧಾರಿಗಳಾದ ಅನೇಕ ಪಾಂಡ್ಯನ್ ಸೈನಿಕರು ಒಂದು ಭಾಗದಲ್ಲಿ ಸನ್ನದ್ದರಾಗಿ ನಿಂತಿದ್ದರೆ.. ಮತ್ತೊಂದು ತುದಿಯಲ್ಲಿ *ಆಮೀರ್ ಅಬ್ಬಾಸಿ (ರ)* ರವರ ನೇತೃತ್ವದಲ್ಲಿ ಶತ್ರು ಸೈನ್ಯದ ಅರ್ಧದಷ್ಟು ಜನಬಲವೂ ಇಲ್ಲದ ಮುಸ್ಲಿಂ ಸೈನಿಕರು ಯುದ್ಧಕ್ಕೆ ಅಣಿಯಾಗಿದ್ದರು. ಮುಸ್ಲಿಂಗಳ ಈಮಾನಿನ ಶಕ್ತಿಯೊಂದಿಗೆ ಅಂದು ಆ ಯುದ್ಧವು ಮಗದೊಂದು ಬದ್ರ್ ಯುದ್ಧವಾಗಿ ಮಾರ್ಪಟ್ಟಿತು.!!
*ಸಯ್ಯಿದ್ ಖಾದರ್ (ರ)* ರವರು ಕುದುರೆಯ ಮೇಲೇರಿ ಅತೀ ಆವೇಶದಿಂದ ಈ
ಘೋರ ಯುದ್ಧದಲ್ಲಿ ಶತ್ರು ಸೈನಿಕರ ಶಿರಸ್ಸುಗಳನ್ನು ಇರಿದು ಕೊಲ್ಲುತಿರುವ ಸಂದರ್ಭದಲ್ಲಿ ಎದುರಿಸಲು ಸುಂದರ ಪಾಂಡ್ಯನ್ ಓಡಿ ಬಂದನು.
ಆದರೆ ಅವನು ಖಾದರ್ (ರ)ರವರ ಖಡ್ಗಕ್ಕೆ ಬಲಿಯಾದನು.
ದೂರದಿಂದ ಇದೆಲ್ಲವನ್ನು ವೀಕ್ಷಿಸುತ್ತಿದ್ದ ಸುಂದರ ಪಾಂಡ್ಯನ ತಮ್ಮ ಮೆಲ್ಲನೆ ಹಿಂದಿನಿಂದ ಬಂದು ಅಡಗಿ ನಿಂತು *ಸಯ್ಯಿದ್ ಖಾದರ್ (ರ)* ರವರನ್ನು ಹತ್ಯೆ ಮಾಡಿದನು. ಈ ರಂಗವನ್ನು ಪ್ರತ್ಯಕ್ಷವಾಗಿ ಕಂಡ ಶಂಸುದ್ದೀನ್(ರ) ರವರು ಓಡಿ ಬಂದು ಖಾದರ್(ರ)ರವರನ್ನು ಶಹೀದ್ ಮಾಡಿದವನ ಕತ್ತನ್ನು ಕೊಯ್ದು ಕೊಂದರು..
ಎರಡು ಕಡೆಯ ಅತೀ ಶಕ್ತರಾದ ಇಬ್ಬರು ನೇತಾರರು ರಣಾಂಗಣದಲ್ಲಿ ಮೃತ್ಯುವಾದದ್ದನ್ನು ಕಂಡು ಶತ್ರುಗಳ ಅನುಯಾಯಿಗಳು ಹೆದರಿ ಸೋಲೊಪ್ಪಿಕೊಂಡು ಓಡಿ ಹೋದರು.
ಆದರೆ ವಿಕ್ರಮ ಪಾಂಡ್ಯನಿಗೆ ಈ ಸೋಲು ತೀವ್ರವಾದ ಉದ್ವೇಗಕ್ಕೆ ಕಾರಣವಾಯಿತು. ಇದರ ಪ್ರತೀಕಾರವನ್ನು ತೀರಿಸಲು ಅವರು ಮಹಾನರ ಮಗನಾದ *ಅಬೂ ತ್ವಾಹಿರ್ (ರ)* ರವನ್ನು ಗುರಿಯಾಗಿಸಿ ಮುಂದಿನ ಹೋರಾಟಕ್ಕೆ ಸರ್ವ ಸಿದ್ದತೆಯೊಂದಿಗೆ ಸಜ್ಜಾಗಿ ಹೊರಟರು..
ವೈವಪರಕ್ಕೆ....👇
ಮುಂದುವರಿಯುವುದು..
✍ಗಫೂರ್ ಬಾಯಾರ್
🥀🥀🥀🥀🥀🥀🥀🥀🥀

No comments:
Post a Comment