*🕌#ಝಿಯಾರತ್ತ್ #ಕೇಂದ್ರ.🕌*
➖➖➖➖➖➖➖➖➖
4⃣1⃣
💠 ಭಾಗ 04 💠
➖➖➖➖➖➖➖➖➖
*#ಏರ್ವಾಡಿ ಸುಲ್ತಾನು ಶ್ಶುಹದಾ ಸಯ್ಯಿದ್ ಇಬ್ರಾಹಿಂ ಬಾದುಷ (ರ), ತಮಿಳುನಾಡು*
🕎🕎🕎🕎🕎🕎🕎🕎🕎
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰〰〰
*ಕೊನೆಯ ಭಾಗ*
🕌 ಎಲ್ಲಾ ವಿಧದ ಸಮಸ್ಯೆಗಳಿಗೆ ಪರಿಹಾರದ *ನ್ಯಾಯಾಲಯ*ವಾಗಿದೆ ಏರುವಾಡಿ ಶುಹಾದಗಳು. ಇಂದು ಆ ಪವಿತ್ರ ಶುಹದಾಗಳ ಸನ್ನಿದಿಯಲ್ಲಿ ಮಾನಸಿಕ, ಶಾರೀರಿಕ ರೋಗಗಳು ಇರುವವರು, ಸಂತಾನಗಳಿಲ್ಲದವರು, ಜಾತಿ ಧರ್ಮ ವ್ಯತ್ಯಾಸವಿಲ್ಲದೆ ಆಗಮಿಸಿ ಅವರ ಉದ್ದೇಶಿತ ಪರಿಹಾರವನ್ನು ಸಾಧಿಸಿದ ನಂತರ ಮರಳುತ್ತಾರೆ.
ಅದಕ್ಕಿಂತಲೂ ಹೆಚ್ಚಾಗಿ ಲಕ್ಷಾಂತರ ಜನರ ಹೃದಯಗಳಲ್ಲಿ ಈಮಾನಿನ ಬೆಳ್ಳಿ ಬೆಳಕಾದ *ತೌಹೀದ್'*ನ ಬೀಜಗಳನ್ನು ಬಿತ್ತಿ ಇಸ್ಲಾಮಿನ ಸುಂದರವಾದ ಆಶಯವನ್ನು ಜನರಿಗೆ ತಲುಪಿಸಿದ ಭಾರತದ *ಮಕ್ಕಾ* ಎಂಬ ಹೆಸರಿನಲ್ಲಿಯೂ, *ಎರಡನೆಯ ಕರ್ಬಲ* ಎಂಬ ಹೆಸರಿನಲ್ಲೂ ಅರಿಯಲ್ಪಡುವ ಏರ್ವಾಡಿ ನಗರ ದಿನನಿತ್ಯ ಸತ್ಯವಿಶ್ವಾಸಿಗಳ ಹೃದಯವನ್ನು ತೃಪ್ತಿಪಡಿಸುವ ಆತ್ಮೀಯ ಪರಿಹಾರ ಕೇಂದ್ರವಾಗಿದೆ..
ಶುಹದಾಗಳಿಗೆ ಅಲ್ಲಾಹನ ಬಳಿ ಉನ್ನತ ಸ್ಥಾನ ಇದೆ ಎಂಬುದನ್ನು ಮರೆಯಬಾರದು.
ಅಲ್ಲಾಹನು ಹೇಳುತ್ತಾನೆ;
*"ಅಲ್ಲಾಹನ ಮಾರ್ಗದಲ್ಲಿ ವಧಿಸಲ್ಪಟವರು ಮರಣ ಹೊಂದಿದವರೆಂದು ಹೇಳಬೇಡಿ. ಹೊರತು ಅವರು ಜೀವಂತವಿರುವವರಾಗಿದ್ದಾರೆ. ಅವರಿಗೆ ರಕ್ಷಕನಾದ ಅಲ್ಲಾಹನಿಂದ ಅನ್ನಾಹಾರ ನೀಡಲಾಗುತ್ತದೆ.*
(ಆಲು ಇಂರಾನ್ 169)
ಪವಿತ್ರ ಖುರ್'ಆನಿನಲ್ಲಿ ಅಲ್ಲಾಹನು ಸಂಶಯಕ್ಕೆ ಆಸ್ಪದವಿಲ್ಲದೆಯೇ ವಿವರಿಸಿರುವಾಗ, ದೀನಿಗಾಗಿ ಹೋರಾಡಿದ ಸಾವಿರಾರು ಹುತಾತ್ಮರು ಅಂತ್ಯ ವಿಶ್ರಮಗೂಂಡ ಏರ್ವಾಡಿಯ ಆ ಮಹಾತ್ಮರಿಗೆ ಅಲ್ಲಾಹನಿಂದ ವಿಶೇಷ ಗೌರವ ಲಭಿಸುವುದರಲ್ಲಿ ಸಂಶಯವಿಲ್ಲ..
ಅಲ್ಲಾಹನ ಪ್ರೀತಿಗಾಗಿ ಹೋರಾಡಿದ ಮಹಾತ್ಮರನ್ನು ಒಮ್ಮೆಯೂ ನಿಂದಿಸಬಾರದು. ಅವಹೇಳನ ಮಾಡಲೇಬಾರದು. ಈಮಾನ್'ಗೆ ಚ್ಯುತಿಯುಂಟುಮಾಡುವ ಪ್ರಸ್ತುತ ಕಾರ್ಯಕ್ಕೆ ಯಾರೂ ಕೂಡಾ ಮುಂದಾಗಬಾರದು. *"ವಂದಿಸದಿದ್ದರೂ ನಿಂದಿಸದಿರು"* ಎಂಬ ಮಾತು ಇಲ್ಲಿ ಸ್ಮರಣೀಯವಾಗಿದೆ.
*ಅಲ್ಲಾಹನು ನಮಗೂ, ನಮ್ಮನ್ನು ಪ್ರೀತಿಸುವವರಿಗೂ ಮಹಾನರಾದ ಸುಲ್ತಾನು'ಶ್ಶಹೀದ್ ಇಬ್ರಾಹಿಂ ಬಾದುಷ (ರ) ರವರ ಹಾಗೂ ಏರ್ವಾಡಿ ಶುಹದಾಗಳ ಬರಕತ್ ನಿಂದ ಸತ್ಯದ ಹಾದಿ ಕರುಣಿಸಲಿ. ಈಮಾನ್, ಯಖೀನ್ ನೀಡಿ ಅನುಗ್ರಹಿಸಲಿ.. ಆಮೀನ್.!!!!*
☪ _*ಏರುವಾಡಿ ಶುಹದಾಗಳು*_
*1.* ಸಯ್ಯಿದ್ ಸುಲ್ತಾನ್ ಇಬ್ರಾಹಿಂ ಬಾದುಷ( ರ.)
*2.* ಸಯ್ಯಿದತ್ತ್ ಫಾತಿಮ (ರ.)
*3.* ಸಯ್ಯಿದ್ ಅಬೂ ತ್ವಾಹಿರ್ (ರ. )
*4.*ಝೈನಬ (ರ)
*5.* ಸಯ್ಯಿದತ್ತ್ ಮರಿಯಂ ಬೀವಿ (ರ.)
*6.* ಫ್ಯಾತಿಮತ್ತ್ ಝುಹ್'ರ (ರ. )
*7.* ದುಲ್'ಖರ್'ನೈನಿ ಸಿಕಂದರ್ (ರ.)
*8.* ಜೈಲಾನಿ ಉಮ್ಮಾ (ರ.)
*9.*ಮೆಹಮೂದ್ ಉಮ್ಮಾ(ರ.)
*10.* ಅಬ್ದುಲ್ ರಝಾಖ್( ರ.)
*11.* Dr. ಜಾಫರ್ ಮುಹಮ್ಮದ್( ರ.)
*12.* ಸಯ್ಯಿದ್ ಶಂಸುದ್ದೀನ್ (ರ.)
*13.* ಸಯ್ಯಿದ್ ಖಮರುದ್ದೀನ್( ರ.)
*14.* ಸಯ್ಯಿದ್ ನೂರುದ್ದೀನ್ (ರ.)
*15.* ಸಯ್ಯಿದ್ ಝೈನುಲ್ ಆಬಿದೀನ್ (ರ.)
*16.* ಸಯ್ಯಿದತ್ತ್ ರಾಫಿಅತ್ತ್ ಬೀವಿ (ರ. )
ಇದೇ ರೀತಿ *ಕಾಟ್ಟಿಲ್ ಪಳ್ಳಿ* ಎಂಬ ಸ್ಥಳದಲ್ಲಿ 17 ಶುಹದಾಗಳ ಮಕ್ಬರಗಳಿವೆ.
*ಸಾರ ಉಮ್ಮಾಳ್* ಎಂಬಲ್ಲಿ ಎಂಟು ಮಂದಿ ಹುತಾತ್ಮರ ಮಕ್ಬರಗಳಿವೆ.
ಏರುವಾಡಿಯಿಂದ 15 ಕಿಮೀ ದೂರದ *ವಾಲಿನೊಕಂ* ಎಂಬ ಜಾಗದಲ್ಲಿ ಮೂರು ಶುಹದಾಗಳ ಮಕ್ಬರಗಳು ಇದೆ.
ಏರುವಾಡಿ ಪರಿಸರದಲ್ಲಿ ಕಾಣ ಸಿಗುವ ಪಳೆಯುಳಿಕೆಗಳು ಅಂದು ನಡೆದ ಯುದ್ಧಗಳ ಗಾಂಭೀರ್ಯತೆಯನ್ನು ಹಾಗೂ ಸಮಯ ದೀರ್ಘಾವಧಿಯನ್ನೂ ಸಾರಿ ಹೇಳುತ್ತಿದೆ. ಸುತ್ತಮುತ್ತಲಿನ ಪ್ರದೇಶಗಳನ್ನು ನೋಡುವಾಗ ಇಲ್ಲಿ ಸಾವಿರಾರು ಶುಹದಾಗಳ ಖಬರ್ ಇರುವಂತೆ ಭಾಸವಾಗುತ್ತದೆ..
ರಾಜರು ದಾನವಾಗಿ ಕೊಟ್ಟ 6666 ಎಕ್ಕರೆ ಸ್ಥಳ ಎಂದು ಹೇಳಲ್ಪಡುವ ಪ್ರಸ್ತುತ ಸ್ಥಳದಲ್ಲಿ *ಶಹೀದ್'*ಗಳಾದ ಔಲಿಯಾಗಳ ಮತ್ತು ಸತ್ಯ ವಿಶ್ವಾಸಿಗಳ ಮಕ್ಬರಗಳಿದೆ. (ಇಂದು ಈ ಸ್ಥಳಗಳಿಂದ ಹಲವಾರು ಎಕ್ಕರೆಯನ್ನು ಜನರು ವಶಪಡಿಸಿರುತ್ತಾರೆ.)
*ಕೊನೆಯದಾಗಿ ಒಂದು ಮಾತು*
👉 ಔಲಿಯಾಗಳನ್ನು, ಶುಹದಾಗಳನ್ನು ಉದ್ದೇಶ ಪೂರ್ವಕವಾಗಿ ನಿಂದನೆ ಮಾಡುವವರು ಇದ್ದಾರೆ. ಮಕ್ಬರದಲ್ಲಿ ಅನಾಚಾರದ ಹೆಸರಲ್ಲಿ, ಹಣ ಲೂಟಿ ಮಾಡುವ ಹೆಸರಲ್ಲಿ ಔಲಿಯಾಗಳನ್ನು ನಿಂದಿಸಕೂಡದು. ಅದ್ಯಾವುದಕ್ಕೂ ಕಾರಣ ಅಲ್ಲಿ ದಫನವಾಗಿರುವ ಮಹಾತ್ಮರುಗಳು ಅಲ್ಲ.
ಈ ಹೆಸರಲ್ಲಿ ಮಹಾತ್ಮರನ್ಮು ನಿಂಧಿಸುವುದು ಮತ್ತು ಅಪಹಾಸ್ಯ ಮಾಡುವುದು ಈಮಾನ್ ಇರುವ ಮನುಷ್ಯನಿಗೆ ಸೂಕ್ತವಲ್ಲ.
*ಅಲ್ಲಾಹನು ನಮ್ಮನ್ನು ನೂತನವಾದಿಗಳ ಶರ್ರಿನಿಂದ ಕಾಪಾಡಲಿ ಆಮೀನ್.*
ದುಲ್'ಖಅದ್ 10ರಂದು ಪಾಂಡ್ಯದೇಶದಲ್ಲಿ (ಏರುವಾಡಿ) ಬಾದುಷ (ರ) ರವರು ಧ್ವಜ ಹಾರಿಸಿದ್ದರು.
ಈಗಲೂ ಇದೇ ದಿವಸ ಉರೂಸಿನ ಧ್ವಜ ಹಾರಿಸಲಾಗುತ್ತದೆ. ಮಹಾತ್ಮರ ವಫಾತ್ ದಿನವಾದ ದುಲ್'ಖಅದ್ 23ಕ್ಕೆ ಬೆಳಿಗ್ಗೆ ವಿಶೇಷ ಪ್ರಾರ್ಥನೆ ನಡೆಸಲಾಗುತ್ತದೆ.
🔰ಮುಗಿಯಿತು.
✍ ಗಫೂರ್ ಬಾಯಾರ್
💠💠💠💠💠💠💠💠💠





No comments:
Post a Comment