*ಝಿಯಾರತ್ತ್ ಕೇಂದ್ರ*
➖➖➖➖➖➖➖
4⃣1⃣
♦ಭಾಗ 03♦
➖➖➖➖➖➖➖➖➖
*#ಏರುವಾಡಿ_ಸುಲ್ತಾನುಲ್ #ಶುಹದಾ #ಸಯ್ಯಿದ್ #ಇಬ್ರಾಹಿಂ_ಬಾದುಷ (ರ). #ರಾಮನಾಥಪುರಂ, #ತಮಿಳು #ನಾಡು.*
🕌🕌🕌🕌🕌🕌🕌🕌🕌
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰〰〰
☪ ವೈವಪರ ಎಂಬ ಸ್ಥಳದಲ್ಲಿ ಶತ್ರು ಸೈನ್ಯ ಮತ್ತು ಮುಸ್ಲಿಂ ಸೈನಿಕರ ಮದ್ಯೆ ಸಮರ ಆರಂಭವಾಯಿತು.
ಶತ್ರು ಶೈನಿಕರು ಅಡಗು ತಾಣಗಳ ಸಹಾಯದಿಂದ ಯುದ್ಧದ ತಂತ್ರವನ್ನು ಬದಲಿಸುತ್ತಿದ್ದರು. *ಹಝ್ರತ್ತ್ ಶಂಸುದ್ದೀನ್ (ರ)* ರವರು ಶತ್ರು ಸೇನೆಯ ಅತೀ ವೀರನನ್ನು ಬೀಳಿಸಿದರು. ಇದನ್ನು ನೋಡುತ್ತಿದ್ದ ಜಯಸೂರ್ಯ ಪಾಂಡ್ಯನು ಹಿಂಬದಿಯಿಂದ ಬಿಲ್ಲು ಬಿಟ್ಟ ಕಾರಣ *ಶಂಸುದ್ದೀನ್(ರ)*ರವರು ಶಹೀದ್ ಆದರು. ಆ ಮಹಾನರ ಜನಾಝವನ್ನು ಏರುವಾಡಿಗೆ ಕೊಂಡು ಹೋಗಿ ದಫನ್ ಮಾಡಲಾಯಿತು. *ಅಮೀರ್ ಅಬ್ಬಾಸ್(ರ)*ರವರನ್ನು ಅದೇ ರೀತಿ ವಂಚನಾ ಜಾಲದಿಂದ ಅಡಗಿ ಕುಳಿತು ಬಿಲ್ಲು ಬಿಟ್ಟು ಹತ್ಯೆ ಮಾಡಿದಾಗ ರಣಾಂಗಣದಲ್ಲಿ ಶಹೀದಾದರು...
ಯುದ್ಧ ಮುಂದುವರಿಯುತ್ತಾ 50 ಸಂವತ್ಸರಗಳು ಕಳೆಯಿತು.. ಧೀರ ವೀರ ಮುಸ್ಲಿಂ ಯೋಧರು ಒಂದೊಂದೇ ದಿನಗಳಲ್ಲಿ ಪರಲೋಕಕ್ಕೆ ಯಾತ್ರೆ ಆಗುತ್ತಿದ್ದರು.
*ಅಬೂ ತ್ವಾಹಿರ್ (ರ)* ರವರು ತನ್ನ ಈಮಾನಿನ ಶಕ್ತಿಯಿಂದ ಹಲವರನ್ನು ಬಗ್ಗುಬಡಿದು ಮುನ್ನುಗ್ಗುತ್ತಿದ್ದರು. ವಿಕ್ರಮ ಪಾಂಡ್ಯನ ರಥಕ್ಕೆ ಓಡಿ ಹತ್ತಿ ತನ್ನ ಖಡ್ಗವನ್ನು ಬೀಸಿದಾಗ ವಿಕ್ರಮ ಪಾಂಡ್ಯನ ಬಲಕೈ ಮುರಿದು ಬಿತ್ತಾದರೂ ಅವನು ಹತ್ತಿರವಿದ್ದ ಘೋರ ವನದೊಳಗೆ ಓಡಿ ಹೋಗಿ ಮರೆಯಾದನು.
ಹಿಂಬಾಲಿಸಿಕೊಂಡು *ಅಬೂ ತ್ವಾಹಿರ್ (ರ)* ಓಡಿದರೂ ಅವನನ್ನು ಕಾಣಲು ಸಾಧ್ಯವಾಗಲಿಲ್ಲ. ಈ ಸಂದರ್ಭವನ್ನು ಸದುಯೋಪಯೋಗಪಡಿಸಿದ ಶತ್ರು ಸೈನಿಕರು *ಅಬೂ ತ್ವಾಹಿರ್(ರ)*ರವರ ಮೇಲೆ ಮಾರಕವಾದ ಅಸ್ತ್ರ ಪ್ರಯೋಗಿಸಿದ್ದರಿಂದ *ಅಬೂ ತ್ವಾಹಿರ್(ರ)* ಎಂಬ ಆ ಧೀರ ಯುವಕ ತನ್ನ ಕೊನೆಯ ಶ್ವಾಸದವರೆಗೆ ದೀನಿಗಾಗಿ ಹೋರಾಡಿ ಅಲ್ಲಾಹನ ಸನ್ನಿದಿಗೆ ಪಯಣಿಸಿದರು.
ಇನ್ನಾ ಲಿಲ್ಲಾಹ್.!
ಬಾದುಷ(ರ) ಮತ್ತು ಅನುಯಾಯಿಗಳು ವಿಕ್ರಮ ಪಾಂಡ್ಯನ ಕೋಟೆಯನ್ನು ಸುತ್ತುವರಿದು ಶಕ್ತಿಯಿಂದ ಹೋರಾಟ ನಡೆಸಿದರು. ವಿಕ್ರಮ ಪಾಂಡ್ಯನು ನೆಲಸಮವಾದನು.
ಪೌತ್ರಮಾಣಿಕ್ಯ ಪಟ್ಟಣ(ಈಗಿನ ಏರುವಾಡಿ ಒಳಪಟ್ಟ ಸ್ಥಳ) ಇಸ್ಲಾಮಿಕ ಆಡಳಿತದ ಅಧೀನಕ್ಕೊಳಗಾಯಿತು.ಮಹಾನರು ತನ್ನ ಜನ್ಮಸ್ಥಳದ ಸವಿನೆನಪಿಗಾಗಿ *"ಏರ್'ಬದ್"* ಎಂದು ಪುನರ್ ನಾಮಕರಣ ಮಾಡಿದರು. ನಂತರದ ಕಾಲದಲ್ಲಿ ಅದು *ಏರ್'ವಾಡಿ* ಎಂಬ ಹೆಸರಿಂದ ಪ್ರಸಿದ್ದಿ ಪಡೆಯಿತು.
ಹೀಗೆ ಸಮಾಧಾನವು, ನೀತಿಯುಕ್ತವಾದ 12 ವರ್ಷ ಮುಸ್ಲಿಂಮರ ಆಡಳಿತ ಮುಂದುವರಿಯಿತು.
ಸ್ಥಾನ ಭ್ರಷ್ಟನಾದ ತಿರು ಪಾಂಡ್ಯನು ಮಧುರೈಯ ಭಾಗದಲ್ಲಿ ಅಡಗಿ ಕುಳಿತು ಸುಳ್ಳು ಕತೆಗಳನ್ನು ಸೃಷ್ಟಿಸಿ ಮಹಾನರ ವಿರುದ್ಧ ಪಿತೂರಿ ಮಾಡಲು ಆರಂಭಿಸಿದನು. ವಂಚನೆಯಿಂದ ಮಹಾನರನ್ನು ಬೀಳಿಸಲು ಹಲವರನ್ನು ಜೊತೆ ಸೇರಿಸಿ ಫಲ ಕಾಣದಾಗ, ಮಹಾನರನ್ನು ಅತಿಕ್ರಮಿಸಿ ಆಕ್ರಮಿಸಲು ಯತ್ನಿಸಿದನು. ಇದರಿಂದ ಮಹಾನರು ಸೋಲೊಪ್ಪದೆ ಹೋರಾಡುತ್ತಿರುವಾಗ ತಿರು ಪಾಂಡ್ಯನು, ಆ ದಿವ್ಯ ಜ್ಯೋತಿಯನ್ನು ಇರಿದು ಬೀಳಿಸಿದನು. ಮಹಾನರು ಆ ರಣಭೂಮಿಯಲ್ಲಿ ಶಹೀದಾದರು.. ಇನ್ನಾ ಲಿಲ್ಲಾಹಿ ವಾ ಇನ್ನಾ ಹಿಲಾಹಿ ರಾಜಿಊನ್..
*ಹಲವಾರು ವರ್ಷಗಳ ಕಾಲ ಏರ್'ವಾಡಿ ಎಂಬ ಸ್ಥಳ ಯಾರಿಗೂ ಕಾಣದೆ ತಿಳಿಯದಂತೆ ಕಾಡು ಸುತ್ತುವರಿದಿತ್ತು.*
*18ನೇ ಶತಮಾನದಲ್ಲಿ "ನಲ್ಲ ಇಬ್ರಾಹಿಂ (ರ)" ಎಂಬ ಮಹಾನುಭಾವರು ಸ್ವಪ್ನ ದರ್ಶನದಲ್ಲಿ ಬಾದುಷ(ರ) ತಂಙಳರನ್ನು ಕಂಡರು. ಅವರು ತನ್ನ ಹಾಗೂ ತನ್ನವರ ಮಕ್ಬರಗಳು ನೆಲೆಗೊಳ್ಳುವ ಸ್ಥಳವನ್ನು ತಿಳಿಸಿಕೊಟ್ಟರು.*
*ನಲ್ಲ ಇಬ್ರಾಹಿಂ (ರ) ಎಂಬವರು ತನ್ನ ಕುಟುಂಬ ಸಮೇತ ಏರ್ವಾಡಿಗೆ ಆಗಮಿಸಿ ಅಲ್ಲಿ ಸ್ಥಿರ ವಾಸವಾದರು.*
ಒಮ್ಮೆ ರಾಮನಾಥಪುರಂ ರಾಜ್ಯದ ರಾಜನಿಗೆ ಕುಷ್ಠ ರೋಗವೆಂಬ ಮಾರಕ ಖಾಯಿಲೆ ಪೀಡಿತನಾದಾಗ, ರೋಗ ವಾಸಿಯಾಗಲು ಎಷ್ಟು ಮದ್ದು ಮಾಡಿದರೂ ಫಲ ಕಾಣಲಿಲ್ಲ. ಕೊನೆಯ ಅಸ್ತ್ರವೆಂಬತೆ ಏರ್ವಾಡಿ ಮಖಾಮಿಗೆ ಹೋಗಿ ಅಲ್ಲಿಯ ಮಣ್ಣನ್ನು ನೀರಿನಲ್ಲಿ ಬೆರೆಸಿ ಕುಡಿದರು. ಪವಾಡವೆಂಬಂತೆ ಅವರ ರೋಗ ಗುಣಮುಖವಾಯಿತು. ಅವರ ಪತ್ನಿ ರಾಣಿಗೆ ಮಕ್ಕಳಿರಲಿಲ್ಲ. ಮಕ್ಕಳಿಲ್ಲದ ದುಃಖದಲ್ಲಿರುವಾಗ ಅವರು ಕೂಡ ಏರ್ವಾಡಿ ಮಕ್ಬರ ನೆಲೆಗೊಳ್ಳುವ ಸ್ಥಳದ ಮಣ್ಣನ್ನು ನೀರಿನಲ್ಲಿ ಬೆರೆತು ಕುಡಿದರು. ಫಲಪ್ರದವಾಗಿ ಅವರೂ ಗರ್ಭ ಧರಿಸಿದರು. ಶರವೇಗದಲ್ಲಿ ಈ ಎರಡು ವಾರ್ತೆಗಳು ಪರಿಸರದ ಊರಿನಲ್ಲಿ ಹರಡಿತು. ಜನರು ತಂಡೋಪತಂಡವಾಗಿ ಮಖಾಮಿಗೆ ಬರಲು ಆರಂಭಿಸಿದರು.
♦ಯಾವುದೇ ಕೇಸನ್ನು..
ಮುಂದುವರಿಯುವುದು.
✍ಗಫೂರ್ ಬಾಯಾರ್
🕎🕎🕎🕎🕎🕎🕎🕎🕎

No comments:
Post a Comment