Thursday, December 7, 2017

*ಭಾರತದ ಜಾತ್ಯಾತೀತ ಸಂವಿಧಾನಕ್ಕೆ ಕೊಳ್ಳಿ ಇಟ್ಟ ಬಾಬರಿ ಮಸೀದಿ ದ್ವಂಸಕ್ಕೆ ಕಾಲು ಶತಮಾನ ಪೂರ್ತಿಯಾಗುವಾಗ..*

*ಬಾಬರಿಯೊಂದಿಗೆ ಇಬ್ಬರನ್ನು ಕೂಡಾ ಈ ಸಂದರ್ಭದಲ್ಲಿ ನೆನಪಿಸಬೇಕು*

*1, _ಅಬ್ದುಲ್ ನಾಸಿರ್ ಮಹ್'ದನಿ ಉಸ್ತಾದ್_*

*ಬಾಬರಿ ಮಸೀದಿಯನ್ನು ಹೆಚ್ಚು ತಿಳಿದಿರುವುದು, ಕೇಳಿರುವುದೆಲ್ಲವೂ ಮಹ್ದನಿ ಉಸ್ತಾದರ ಮುಖಾಂತರ ಆಗಿರುತ್ತದೆ.*
*ಇಂದು ನಮ್ಮ  ನೆನಪಿನಂಗಳದಲ್ಲಿ ಜ್ವಲಿಸಿ ನಿಲ್ಲುವುದು ಬಾಬರಿ'ಗಾಗಿ ಮಹ್'ದನಿ ಮೊಳಗಿಸಿದ ಶಬ್ದದ ಅಲೆಗಳಾಗಿದೆ.*

*ಉತ್ತರ ಭಾರತದಲ್ಲಿ ಸುರಿದ ಮಳೆಗೆ ಕೇರಳದಲ್ಲಿ ಹಿಡಿದ ಕೊಡೆ ಆಗಿರಲಿಲ್ಲ ಆ ಘರ್ಜನೆ. ಜಾತ್ಯಾತೀತ ಭಾರತದ ಮಹನೀಯ ಪರಂಪರೆಯನ್ನು ಸಂರಕ್ಷಿಸಲಿರುವ ಹೋರಾಟವಾಗಿತ್ತು ಅದು.*

*ಬಾಬರಿ ಮಸೀದಿಯ ಪುನರ್ ನಿರ್ಮಾಣ ಆವಶ್ಯಪಟ್ಟು ಒಂಟಿ ಕಾಲಿನಲ್ಲಿ ಅಯೋಧ್ಯೆಗೆ  ಜಾಥಾ ನಡೆಸಿರುವುದು, ಗಂಡೆದೆಯ ಆ ಹೋರಾಟದ ಒಂದು ಭಾಗವಾಗಿತ್ತು.*
*ಬಾಬರಿಯನ್ನು ಎಂದೂ ನೆನದೂ, ನೆನಪಿಸಿಯೂ, ಸಮರ ಬೀದಿಯಲ್ಲಿ ಹೋರಾಟದ ಜ್ವಲಿಸುವ ಸೂರ್ಯ ಕ್ರಾಂತಿಯಾಗಿತ್ತು ಬಾಬರಿ ವಿಷಯದಲ್ಲಿ ಮಹ್'ದನಿ  ಉಸ್ತಾದ್.*

*2, ಮರ್ಹೂಂ ಖಾಯಿದೆ ಮಿಲ್ಲತ್ತ್ ಸುಲೈಮಾನ್ ಸೆಟ್ಟು ಸಾಹಿಬ್*
===================

*ಅಧಿಕಾರದ ಎಲ್ಲಾ ಸುಖ ಸೌಲಭ್ಯಗಳನ್ನು ಕಿತ್ತೆಸೆದು ಸೆಟ್ಟು ಸಾಹಿಬ್ ಹೊರಗೆ ಬಂದಿರುವುದು ಬಾಬರಿ ಮಸೀದಿಯ ಪರ‌ಹೋರಾಟಕ್ಕಾಗಿತ್ತು.*
*ಬಾಬರಿಯ ರಕ್ತ ಮೆತ್ತಿದ ಕೈ ಕಾಂಗ್ರೆಸ್'ನೊಂದಿಗೆ ಮೈತ್ರಿಯಾಗಿರುವ ಲೀಗ್ ರಾಜಕೀಯದೊಂದಿಗೆ ನಿಲ್ಲಲು ಸೆಟ್ಟು ಸಾಹಿಬ್'ರ ಮನಸಾಕ್ಷಿ ಅದಕ್ಕೆ ಒಪ್ಪಲಿಲ್ಲ. ಅವರ ಹೋರಾಟಕ್ಕೆ ಲೀಗ್ ರಾಜಕೀಯ ಅಡ್ಡಿಯಾಗಿತ್ತು.*
*ಇದರಿಂದಾಗಿದೆ ಸೆಟ್ಟು ಸಾಹಿಬ್'ರು ದುಃಖಿಸಿರುವುದು.*

*ಬಾಬರಿಗಾಗಿ ಕೆಚ್ಚೆದೆಯಿಂದ ಹೋರಾಟ ನಡೆಸಿದವರಾಗಿದ್ದರು ಮಹ್'ದನಿ ಉಸ್ತಾದ್ ಹಾಗೂ ಸೆಟ್ಟು ಸಾಹಿಬರು, ಈ ಇಬ್ಬರು ನೆನಪಿಸಿದಂತೆ ಬಾಬರಿಯನ್ನು ಯಾರೂ ಕೂಡಾ ನೆನಪಿಸಿಲ್ಲ. ಇವರು ಹೋರಾಡಿದ ರೀತಿಯಲ್ಲಿ ಬಾಬರಿಗೆ ಬೇಕಾಗಿ ಯಾರು ಕೂಡಾ ಹೋರಾಟ ನಡೆಸಲಿಲ್ಲ.*

✍ಗಫೂರ್ ಬಾಯಾರ್
🔮🔮🔮🔮🔮🔮🔮🔮🔮

No comments:

Post a Comment