*ಝಿಯಾರತ್ತ್ ಕೇಂದ್ರ*
👉🏻 5⃣0⃣
------------------------
*ಪುತ್ತನಂಗಾಡಿ ಶುಹದಾಗಳು*
*ಪೆರಿಂದಲ್'ಮಣ್ಣ್. ಮಲಪ್ಪುರಂ*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌🕌
ಪರಿಶುದ್ಧ ದೀನಿಗಾಗಿ ಹೋರಾಡಿದ 22 ಹುತ್ಮಾತರುಗಳು ಅಂತ್ಯವಿಶ್ರಮಗೊಳ್ಳುತ್ತಿರುವ ಕೇರಳದ ಅತೀ ಪುರಾತನ ಕಾಲದ ಮಸ್ಜಿದಿನಲ್ಲೊಂದಾಗಿದೆ ಪುತ್ತನಂಗಾಡಿ ಜುಮಾ ಮಸ್ಜಿದ್.
ಸುಮಾರು 1000 ವರ್ಷಗಳಷ್ಟು ಹಳೆಯದಾದ ಇಲ್ಲಿಯ ಮಕ್ಬರಗಳು ಮತ್ತು ಮಸ್ಜಿದ್'ಗಳು ಪೌರಾಣಿಕ ಕುರುಹುಗಳು, ಚಾರಿತ್ರಿಕ ಆಸಾರುಗಳು ಇಲ್ಲಿ ಈಗಲೂ ಮಾಯದೆ ನೆಲೆಗೊಂಡಿರುತ್ತದೆ.
ಈ ಪ್ರದೇಶದ ಅಂದಿನ ರಾಜನ ಸೈನ್ಯವು ಮಸೀದಿ ಇಮಾಮರನ್ನು ವಧಿಸಿದರಿಂದ್ದ ಭುಗಿಲೆದ್ದ ಗಲಭೆಯಿಂದ ವೀರ ಮೃತ್ಯುಗೊಂಡ ಶಹೀದುಗಳ ಚರಿತ್ರೆಯಾಗಿದೆ ನಾವು ಇಲ್ಲಿ ನೆನಪಿಸುವುದು.
ಪೌರಾಣಿಕವಾದ ಮುಸ್ಲಿಂ ಪ್ರದೇಶವಾಗಿದೆ ಪುತ್ತನಂಗಾಡಿ. ಪೊನ್ನಾನಿಯಿಂದ ಆಗಮಿಸಿದ ರೈತ ಕುಟುಂಬಗಳು ಮತ್ತು ಇವರೊಂದಿಗೆ ಆಗಮಿಸಿದ ಮಖ್ದೂಮ್ ವಂಶದ ಖಾಝಿ ಜಮಾಲುದ್ದೀನ್ ಇಬ್ನು ಉಸ್ಮಾನ್ ಮಹ್'ಬಾರಿ (ರ) ರವರು ಇಲ್ಲಿ ಇಸ್ಲಾಮಿಕ ಪ್ರಭೋದನೆಯ ಮೂಲಕ ಪ್ರಸಿದ್ದರಾದವರು.
ಒಮ್ಮೆ ಅರಮನೆಯ ರಾಜನ ಪುತ್ರಿಗೆ ಮಾರಕವಾದ ರೋಗ ತಗಲಿದನ್ನು ವಾಸಿ ಮಾಡಿದ ಖಾಝಿಯವರನ್ನು ಅರಮನೆಯಯವರು ದೊಡ್ಡ ಗೌರವ ನೀಡಿ ಅಭಿನಂದಿಸಿದರು.
ಇಲ್ಲಿ ಮೊದಲು ಸಣ್ಣದೊಂದು ಮಸ್ಜಿದ್ ಇತ್ತು. ಮುಸ್ಲಿಂ ಜನಸಂಖ್ಯೆ ಹೆಚ್ಚಾದಾಗ ಮಸ್ಜಿದ್ ಪುನರುತ್ಥಾನ ಮಾಡಿ ಜುಮಾ ಆರಂಭಿಸಲು ಅಲ್ಲಿ ಆಡಳಿತದಲ್ಲಿದ್ದ ರಾಜನ ಅನುಮತಿ ಕೋರಿದರು. ಆದರೆ, ಹಲವರು ತಪ್ಪು ಮಾಹಿತಿ ನೀಡಿದರಿಂದ್ದ ರಾಜನು ಅನುಮತಿ ನೀಡದೆ, ಹೇಳಿದ, "ಈಗ ಇರುವ ಮಸೀದಿಯನ್ನೇ ಸುಟ್ಟು ಬೂದಿ ಮಾಡಲಿಕ್ಕಿದೆ ಎಂದೂ, ನಿಮ್ಮವರ ಅಝಾನ್ ಹಾಗೂ ಉಳಿದ ಆರಾಧನೆ ಕರ್ಮಗಳು ನನಗೆ ಅಸಹ್ಯವಾಗಿದೆ."
ಎಂದೂ ಹೇಳಿದ.
ಅಹಂಕಾರಿಯಾದ ಈ ಪ್ರದೇಶದ ರಾಜನ ಈ ಮಾತು ಅಂದಿನವರೆಗೆ ನೆಲೆಗೊಂಡ ಮತಮೈತ್ರಿಗೆ ಕಳಂಕ ತಂದಾದರೂ, ಖಾಝಿಯವರು ಜನರ ಹತ್ತಿರ ಶಾಂತರಾಗಲು ಕರೆ ನೀಡಿದರು. ಆದರೂ ದುಷ್ಟನಾದ ರಾಜನು ತನ್ನ ಸೈನಿಕರನ್ನು ಬಿಟ್ಟು ಇಮಾಮರು, ಖಾಝಿಯು ಆದ ಜಮಾಲುದ್ದೀನ್ (ರ) ಉಸ್ತಾದರನ್ನು ವಧಿಸಿದರು.
ಇದು ಅಲ್ಲಿ ಬಹುದೊಡ್ಡ ಸಂಘರ್ಷಕ್ಕೆ ಹೇತುವಾಯಿತು. ಮೂರು ಬಾರಿ ಯುದ್ಧ ನಡೆಯಿತು. ಇದರಲ್ಲಿ ಅನೇಕ ಅಮುಸ್ಲಿಮರು ಮಡಿದರು. ಮುಸ್ಲಿಂಮರಲ್ಲಿ 22 ಜನರು ಹುತಾತ್ಮರಾದರು.
14 ಮುಸ್ಲಿಂಗಳ ಮಯ್ಯತ್ತುಗಳು ಸುಮಾರು ದಿವಸಗಳು ಕಳೆದ ನಂತರ ಸಿಕ್ಕಿದಾಗ ಅದನ್ನು ಒಂದು ಕಟ್ಟಡದೊಳಗೆ ದಫನ್ ಮಾಡಲಾಯಿತು.
ಉಳಿದ ಮಯ್ಯಿತ್ತುಗಳು 6 ತಿಂಗಳ ಬಳಿಕ ಯಾವುದೇ ಕೇಡು ಸಂಭವಿಸದೇ ಒಂದು ಬಾವಿಯಿಂದ ಲಭಿಸಿದಾಗ ಅದನ್ನು ಕೂಡ ತೆಗೆದು ಒಂದೇ ಜಾಗದಲ್ಲಿ ಪುನಃ ದಫನ್ ಮಾಡಲಾಯಿತು.
ಆಗಲೇ ಪ್ರದೇಶದ ರಾಜನು ಮತ್ತು ಸಂಗಡಿಗರು ಮಸೀದಿಯನ್ನು ಸುಟ್ಟು ಬೂದಿ ಮಾಡಿದರು.
ಕೆಲವೇ ದಿವಸಗಳ ಒಳಗೆ ಮುಸ್ಲಿಂ ನಾಯಕರಾದ ಪೊಕರ್ ಮುಪ್ಪನ್ (ರ) ಪ್ರದೇಶದ ರಾಜನನ್ನು ಕೊಂದು ಮಸ್ಜಿದ್'ನ ಅಂಗಳದಲ್ಲೆ ಅವನ ಶವವನ್ನು ಹೂತು ಹಾಕಿದರು. ಅದರ ಮೇಲೆ ಕಲ್ಲನ್ನು ಪ್ರತಿಷ್ಠಾಪಿಸಿದರು. ಈ ಕಲ್ಲು ಬೆಳೆದು ದೊಡ್ದಾಗಿ ತೆಲೆ ಎತ್ತಿ ನಿಂತದ್ದನ್ನು ಈಗಲೂ ಕಾಣಬಹುದು. ( ಇಲ್ಲಿ ಈ ಕಲ್ಲಿನ ಬೆಳವಣಿಗೆ ಮಹಾ ಶಿಕ್ಷೆ ಕೂಡ ಆಗಿರಬಹುದು. ಮೇಲ್ಭಾಗದ ಹಾಗೆ ಕೆಳಗಿನ ಭಾಗ ಕೂಡ ಬೆಳಯುತ್ತಿರಬಹುದು.)
ಪೊಕರ್ ಮುಪ್ಪನ್ (ರ) ರವರ ಖಬರ್ ಹಾಗೂ ಶುಹದಾಗಳ ಮಕ್ಬರಗಳು, ಪೊಕರ್ ಮುಪ್ಪನ್ (ರ) ರವರ ನೇತೃತ್ವದಲ್ಲಿ ಕಟ್ಟಿಸಿದ 2 ದೊಡ್ಡ ಮಸ್ಜಿದ್'ಗಳು ಈಗಲೂ ಇಲ್ಲಿ ಕಾಣಬಹುದು.
ಅಲ್ಲದೆ ಮಂಬುರಂ ತಂಗಳರವರ (ರ) ಗುರು ಆದ "ಕಾಲಿಲ್ಲದ ಉಪ್ಪಾಪ" ಎಂಬ ಹೆಸರಿನಲ್ಲಿ ಪ್ರಸಿದ್ದರಾದ ವಲಿಯುಲ್ಲಾಹಿ ಅಬ್ದುಲ್ಲ ಮುಸ್ಲಿಯಾರ್ (ರ), ಜಿಫ್ರಿ ತಂಗಳ್ (ರ), ಹಲವಾರು ಪವಾಡಗಳನ್ನು ಜೀವಿತ ಕಾಲದಲ್ಲಿಯೂ, ವಫಾತ್ತಿನ ನಂತರವೂ ಪ್ರಕಟ ಮಾಡಿದ ವಲಿಯುಲ್ಲಾಹಿ ಅಲಿ ಹಸನ್ ಮೊಲ್ಲಾಕ (ರ), ಸಯ್ಯಿದರುಗಳು ಹಾಗೂ ಹಲವಾರು ಉಸ್ತಾದರುಗಳ ಮಕ್ಬರಗಳು ಇದೆ.
ಖುತುಬುಝಮಾನ್ ಮಂಬುರಂ ತಂಗಳ್ (ರ), ಅಂಬಕುನ್ನು ಬೀರಾನ್ ಔಲಿಯ ಉಪ್ಪಾಪ (ರ), ಶಂಸುಲ್ ಉಲಮಾ (ರ), ಕಣ್ಣ್ಯಾಲ ಮೌಲ (ರ), ಚಾಪ್ಪನಂಗಾಡಿ ಬಾಪ್ಪು ಮುಸ್ಲಿಯಾರ್ (ರ) ಹಾಗೂ ಅರಿಬ್ರ ಅಬೂಬಕ್ಕರ್ ಮುಸ್ಲಿಯಾರ್ (ರ) ಎಂಬ ಮಹಾತ್ಮರುಗಳು ಇಲ್ಲಿಗೆ ಝಿಯಾರತ್ತಿಗೆ ಬರುತ್ತಿದ್ದರು. ಕಣ್ಣ್ಯಾಮಲ ಮೌಲ (ರ) ರವರು ಇಲ್ಲಿ ಓದಿ ಕಲಿತವರಾಗಿದ್ದಾರೆ. ಇವರು ಸಾರ್ವಜನಿಕವಾಗಿ ಎಲ್ಲಿಯೂ ಪ್ರತ್ಯಕ್ಷಪಡಲು ಇಷ್ಟಪಡುತ್ತಿರಲಿಲ್ಲ. ಆದರೂ ಈ ಮಹಾನರು ಇಲ್ಲಿಯ ಉರೂಸಿನಲ್ಲಿ ಭಾಗವಹಿಸುತ್ತಿದ್ದರು.
ಹಳೆಯ ಕಾಲದ ಚರಿತ್ರೆ ಅನುಸ್ಮರಿಸುವ ಹಲವಾರು ಆಸಾರುಗಳು ಈ ಮಸ್ಜಿದ್'ನಲ್ಲಿ ಈಗಲೂ ಸಂರಕ್ಷಿಸಿಡಲಾಗಿದೆ.
ದಾರಿ: ಪೆರಿಂದಲ್'ಮಣ್ಣಿ'ನಿಂದ ಕೊಳತ್ತೂರ್- ವಳಾಂಚೆರಿ ಮಾರ್ಗದಲ್ಲಿ 5 ಕಿ.ಮಿ. ಸಂಚರಿಸಿದರೆ ಪುತ್ತನಂಗಾಡಿ, ಪಳ್ಳಿಪ್ಪಡಿಯಲ್ಲಾಗಿದೆ ಶುಹದಾಗಳ ಮಖಾಂ ನೆಲೆಗೊಳ್ಳುತ್ತಿರುವುದು.
✍ಗಫೂರ್ ಬಾಯಾರ್
🔻🔻🔻🔻🔻🔻🔻🔻🔻
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು




No comments:
Post a Comment