*ಝಿಯಾರತ್ತ್ ಕೇಂದ್ರ*
➖➖➖➖➖➖➖
🕎🕎3⃣6⃣🕎🕎
➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰
✍ _ಗಫೂರ್ ಬಾಯಾರ್_
💢💢💢💢💢💢💢
*ಪಾಂಡಿತ್ಯ ಲೋಕದ ಪ್ರಶೋಭಿತ ತಾರೆ.*
*ಈ.ಕೆ. ಹಸನ್ ಮುಸ್ಲಿಯಾರ್ (ಖ:ಸಿ). ಪರಂಬಿಲ್, ಕಲ್ಲಿಕೋಟೆ.*
➖➖➖➖➖➖➖
🕌 ಯಮನಿ ಕುಟುಂಬ ಪರಂಪರೆಯ ಮಹಾನ್ ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ) ರವರ ಪುತ್ರರಾದ ಎಝುತ್ತಚ್ಛನ್ ಖಂಡಿ (EK) ಕೊಯಕುಟ್ಟಿ (ಖ:ಸಿ) ರವರ 7 ಮಕ್ಕಳಲ್ಲಿ ಓರ್ವರಾಗಿ 1925'ನೇ ಹಿಜರಿ ವರ್ಷ 1347ರಲ್ಲಿ ಈ.ಕೆ ಹಸನ್ ಮುಸ್ಲಿಯಾರ್ (ಖ.ಸಿ)ರವರ ಜನನವಾಯಿತು.
ಶಂಸುಲ್ ಉಲಮಾ ಈ. ಕೆ. ಅಬೂಬಕ್ಕರ್ ಉಸ್ತಾದ್ (ಖ.ಸಿ)ರವರ ಸಹೋದರರಾದ ಹಸನ್ ಉಸ್ತಾದ್ (ಖ:ಸಿ)ರವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವತಃ ತಂದೆಯವರಿಂದಲೇ ಕಲಿತು ಕೊಂಡರು.
ನಂತರ ಧಾರ್ಮಿಕ ವಿಧ್ಯಾಭ್ಯಾಸಕ್ಕಾಗಿ
ಚೆರುಮುಕ್, ಕೊಟ್ಟುಮಲ, ಇಡಪಳ್ಳಿ, ತಳಿಪ್ಪರಂಬ್, ಪಾರಕಡವ್, ಮೊದಲಾದ ಸ್ಥಳಗಳಿಗೆ ತೆರಳಿ ಅಪಾರವಾದ ಪಾಂಡಿತ್ಯವನ್ನು ಪಡೆದು ನಂತರ ವೆಲ್ಲೂರಿನ ಬಾಕಿಯಾತು ಸ್ವಾಲಿಹಾತ್ ನಲ್ಲಿ ಕಲಿತು ಬಾಖವಿ ಬಿರುದನ್ನು ಪಡೆದರು.
ಉಣ್ಣಿಕುಳಂ ಪಂಚಾಯತ್ತಿನ ಇಯ್ಯಾಡ್, ಉರುಳಿಕುನ್ನ್, ಪುತ್ತುಪಾಡಂ, ತೃಪ್ಪನಚ್ಚಿ ಪಾಲಕ್ಕಾಡ್, ಇರಂಬುಚೋಲ, ಕಾಸರಗೋಡು ಹಾಗು ಜನ್ನತ್ತುಲ್ ಉಲೂಮ್ ಕಾಲೇಜು ಪಾಲಕ್ಕಾಡ್ ಎಂಬಿ ಸ್ಥಳಗಳಲ್ಲಿ ಮದ್ರಸ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ನಿರಂತರವಾದ ಕಾರ್ಯಚಟುವಟಿಕೆಗಳಿಂದ ಕೂಡಿದ ದೀನಿ ಸೇವಕನಾಗಿದ್ದ ಮಹಾನರು ತನ್ನ ಜೀವನ ಕಾಲದಲ್ಲಿ ಒಮ್ಮೆಯೂ
ಹಣದಾಸೆಗೋ, ರಾಜಕೀಯ ಲಾಭಕ್ಕೋ ತನ್ನ ದೀನಿ ವಿಜ್ಞಾನವನ್ನು ಯಾರ ಮುಂದೆಯೂ ಮಂಡಿಯೂರದೆ ಮುನ್ನೇರಿದರು.
ಯಾವ ಅಡೆತಡೆಯು ಇಲ್ಲದೆ ಮದ್ರಸ ಮುನ್ನಡೆಯಬೇಕು ದೀನಿ ಬೆಳೆಯಬೇಕು ಎಂದು ಅತಿಯಾದ ಆಗ್ರಹಿಸುತ್ತಿದರು. ಸಾರ್ವಜನಿಕ ಸಭೆಯಲ್ಲೂ, ವಾದ ಪ್ರತಿವಾದಗಳಲ್ಲಿಯೂ, ಖಂಡನೆಗಳಳಲ್ಲಿಯೂ, ಭಾಗವಹಿಸುತ್ತಿದ್ದರು.
ಸಂಘಟನೆ ಪರವಾದ ಜಾವಬ್ದಾರಿಗಳು, ಪುಸ್ತಕ ರಚನೆಗಳು, ಪ್ರಸಿದ್ಧಿಗಾರನಗಳು, ಎಲ್ಲವೂ ಮಾಡಿ ಮುಗಿಸಬೇಕಾದ ವ್ಯಕ್ತಿಯಾಗಿದ್ದರು ಮಹಾನವರು. ಅವರ ನಿತ್ಯ ಜೀವನದ ಶೈಲಿ ನೋಡಿದರೆ ಎಲ್ಲವನ್ನು ಸಮಯಕ್ಕೆ ಸರಿಯಾಗಿ ಅತೀ ಬೇಗನೆ ಮುಗಿಸಬೇಕೆಂದಾಗಿತ್ತು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಮುಶಾವರ ಸದಸ್ಯರಾದ, ಅವರು 1976ರಲ್ಲಿ ಎಸ್. ವೈ. ಎಸ್. ಕೇರಳ ರಾಜ್ಯಾಧ್ಯಕ್ಷರೂ ಆದ್ದರು.
ಅಹ್ಲುಸುನ್ನತ್ತಿ ವಲ್ ಜಮಾಅತ್ತಿನ ಉನ್ನತಿಗಾಗಿ ಅಹೋರಾತ್ರಿ ದುಡಿದ ಮಹಾನವರು, ನಾವು ಇಂದು ಕಾಣುವ ಮಟ್ಟಕ್ಕೆ ಸುನ್ನಿಸಂ ತಲುಪಲು ಅವರ ಸೇವನೆ ಅತುಲ್ಯವಾಗಿತ್ತು.
ವೆಳ್ಳಿಯಾಂಚೆರಿ ಎಂಬ ಸ್ಥಳಯಲ್ಲಿ ವಹ್ಹಾಬಿ ನಾಯಕ ಅಲವಿ ಮೌಲವಿಯೊಂದಿಗೆ ಖುತುಬ ಪರಿಭಾಷೆ ಮಾಡಬಾರದೆಂದು ಪುರಾವೆ ಮಂಡಿಸಿದಾಗ ಮೌಲವಿ ಸೋಲೊಪ್ಪಿ ಓಡಿ ಹೋದ ಚರಿತ್ರೆಯಿದೆ.
ಚೆರುವಾಡಿ ಎಂಬ ಊರಲ್ಲಿ ನಮಾಜು 3 ವಖ್ತ್ (ಸಮಯ) ಮಾತ್ರವಾಗಿದೆಯೆಂದು ವಾದಿಸಿದ ಚೆಗನ್ನೂರ್ ಮೌಲವಿಗೂ ನೀರು ಕುಡಿಸಿದ್ದರು ಮೇಲಿನ ಈ ಎರಡು ಸಂಭವಗಳು ಪ್ರಶಿದ್ಧವಾಗಿದೆ.
ಎಡತ್ತರ, ಕೂರಿಕುಝಿ, ವಾರಣಾಕರ, ತಾನಾಳ್ಳೂರು, ಕೊಡಿಯತ್ತೂರು, ವಾಯಕಾಡ್, ನಂದಿ, ಕುಟ್ಟಿಚ್ಚಿರ, ಮೊದಲಾದ ಸ್ಥಳಗಳಲ್ಲಿ ನೂತನವಾದಿಗಳನ್ನು ಪ್ರಮಾಣಬದ್ದವಾಗಿ ವಾದಿಸಿ ಹಿಮ್ಮೆಟಿಸಿದರು.
ಖಂಡನೆಗಳು, ಸಂವಾದಗಳು ನಿತ್ಯವಾಗಿತ್ತು. ಒಂದು ಅಂಚೆ ಕಾರ್ಡಿನಿಂದ ತನ್ನನ್ನು ಕರೆದರೆ ಸುನ್ನತ್ತ್ ಜಮಾಅತ್ತಿಗಾಗಿ ನಾನು ಅಲ್ಲಿಗೆ ಓಡಿ ಬರುವೆನು ಎಂದು ಸದಾ ಹೇಳುತ್ತಿದ್ದರು.
ಕಾರ್ಯನಿರತವಾದ ಸಮಯಗಳಲ್ಲಿ ತನ್ನ ಸುನ್ನಾತ್ತಾದ ಆರಾಧನೆಗಳು ನಷ್ಟಹೊಂದಬಹುದೆಂಬ ಭಯದಿಂದ ಅದನ್ನು ಹರಕೆ ಮಾಡುತ್ತಿದ್ದರು.
ಆಗ ಅದನ್ನು ಫರ್ಳ್ ಎಂಬ ರೀತಿಯಲ್ಲಿ ಮಾಡಲಿಕಾಗಿತ್ತು ಅದು.!!
ಅನುಕಾಲಿಕದಲ್ಲಿ ಸ್ಥಿರವಾಗಿ ಬರೆಯುತ್ತಿದರು. ಹಾಗು ಪುಸ್ತಕಗಳನ್ನು ರಚಿಸುತ್ತಿದ್ದರು. ಒಂದು ಸಮಯದಲ್ಲಿ ಅಲ್ ಜಮಾಲ್ ಎಂಬ ಮಾಸಿಕವನ್ನು ಮುನ್ನಡಿಸಿದರು.
ಅಲ್ಲದೆ ಮಾಸಿಕದ ಉಳಿದ ಕೆಲಸನ್ನು ಸ್ವತಃ ಮಾಡುತ್ತಿದ್ದರು. ಹಲವಾರು ಮಸೀದಿ, ಮದ್ರಸ ಸ್ಥಾಪಿಸುವೂದರಲ್ಲಿ ನೇತೃತ್ವ ವಹಿಸಿದರು.
*ಪಾಲಕ್ಕಾಡ್ ಜನ್ನತ್ತುಲ್ ಉಲೂಮ್ ಅರೇಬಿಕ್ ಕಾಲೇಜಿನ ಪ್ರಧಾನ ಶಿಲ್ಪಿಯಾಗಿದ್ದರು. ಮಹಾನವರು ಕಾಸರಗೋಡು ಖಾಝಿಯಾಗಿ ಹೋಗುವಾಗ, ಪಾಂಡಿಕಾಡ್ ಬಾಪು ಉಸ್ತಾದರಿಗೆ ಸ್ಥಾಪನೆಯನ್ನು ಮುನ್ನೆಡೆಸುತ್ತಿದರು. ನಂತರ 1989ರಲ್ಲಿ ಸಮಸ್ತ ವಿಭಜನೆಯ ಸಂಧರ್ಭದಲ್ಲಿ ಕೆಲವು ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಉದ್ಭವಿಸಿದಾಗ, ಪಾಂಡಿಕಾಡ್ ಬಾಪು ಉಸ್ತಾದರು ಮಹಾನವರ ಹೆಸರಿನೊಂದಿಗೆ ಸೇರಿಸಿ ಪಾಲಕ್ಕಾಡಿನ ಕಲ್ಲೆಕಾಡ್ ಎಂಬಲ್ಲಿ ಜಾಮಿಅ ಹಸನಿಯ್ಯ ಎಂಬ ಸ್ಥಾಪನೆಯನ್ನು ಸ್ಥಾಪಿಸಿದರು. ಈಗ ಕೊಂಬಮ್ ಉಸ್ತಾದರು ಅಲ್ಲಿಯ ಪ್ರಧಾನಿಯಾಗಿದ್ದಾರೆ. ಈ ಸ್ಥಾಪನೆಯ ಬಿರುದು ಕೂಡ "ಅಲ್ ಹಸನಿ" ಎಂದಾಗಿದೆ.* #ಬಹುಮಾನ್ಯರಾದ #ಬಾಯಾರ್ #ತಂಙಳರು #ಹಸನಿ_ಬಿರುದಾರಿಯಾಗಿದ್ದಾರೆ.
_ವ್ಯಾಜ ದೂತನ್, ಜಮಾಆತ್ತ್ ನಿಸ್ಕಾರಂ ಪಂಜ ಲಕ್ಷ್ಯಂಙಲ್, ( ಸಂವಾದದಲ್ಲಿ ಖುತುಬ ಪರಿಭಾಷೆ ಹರಾಮಾಗಿದೆ ಎಂದು ವ್ಯಕ್ತವಾದ ಪುರಾವೆಗಳೊಂದಿಗೆ ಸಮರ್ಥಿಸಿರುವುದು)
ಮೊದಲಾದವು ಮಹಾನುಭಾವರು ರಚಿಸಿದ ಕೆಲವು ಗ್ರಂಥಗಳಲ್ಲಿ ಕೆಲವು.
ಮಹಾನವರ ಲೇಖನಗಳನ್ನು ಸಂಗ್ರಹಿಸಿಕೊಂಡು *"ನಿಸ್ಕಾರವುಂ ಹಜ್ಜುಂ ಸುನ್ನಿಗಳ್'ಕ್ ಮಾತ್ರಂ"* ಎಂಬ ಹೆಸರಿನಲ್ಲಿ ಗ್ರಂಥ ಪ್ರಸಿದ್ದಿಕರಿಸಲಾಗಿದೆ.
ಮಹಾನುಭಾವರಿಗೆ 4 ಮಕ್ಕಳಿದ್ದಾರೆ.
3 ಗಂಡು 1 ಹೆಣ್ಣು ಆಗಿದೆ.
ಅವರಲ್ಲಿ ಹಿರಿಯ ಮಗನು ಎ.ಪಿ. ಉಸ್ತಾದವರ ಮಗಳ ಪತಿಯಾಗಿದ್ದಾರೆ.
ಆದರ್ಶ ಧೀರತೆ, ಧೈರ್ಯ, ಬುದ್ಧಿಶಕ್ತಿ, ಸೂಕ್ಷ್ಮತೆ, ನೇತೃತ್ವಗುಣ, ಪ್ರಾಮಾಣಿಕತೆ, ಭಕ್ತಿ, ಸಮಯನಿಷ್ಠೆ, ವಿನಯ, ಮೊದಲಾದ ಗುಣಗಳ ಸಂಗಮವಾಗಿತ್ತು ಮಹಾನುಭಾವರ ಮುಖ ಮುದ್ರೆ.
ರಾತ್ರಿ ಹಗಲೆನ್ನದೆ ಸುನ್ನತ್ತ್ ಜಮಾಅತ್ತಿಗಾಗಿ ಓಡಿ ನಡೆದ ಆ ಮಹಾಮನುಷಿ ತನ್ನ 53ನೇ ವಯಸ್ಸಿನಲ್ಲಿ 1982ನೇ ಆಗಸ್ಟ್ 14 (1402 ಶಹ್'ಬಾನ್ 25 ) ರಂದು ವಫಾತಾದರು. ಅವರ 36 ನೇ ಆಂಡ್ ನೇರ್ಚೆ (ಉರೂಸ್) ಈಗ ನಡೆಯುತ್ತಿದೆ.
(16:07ರಿಂದ-- 20:07:2017 ವರೆಗೆ)
*ಅಲ್ ಫಾತಿಹಾ ✋*
🚘ಕೊಲ್ಲಿಕೋಟೆಯ ಪರಂಬಿಲ್ ಬಜಾರ್ ಮಸ್ಜಿದಿನ ಹತ್ತಿರದಲ್ಲಿರುವ ಪರಂಬಿಲ್ ಕಡವತ್ತ್ ಎಂಬಲ್ಲಿಯಲ್ಲಿರುವ ಖಬರ್'ಸ್ಥಾನದಲ್ಲಿ ತನ್ನ ಕುಟುಂಬದವರೊಂದಿಗೆ ಆಗಿದೆ ಮಹಾನವರ ಅಂತ್ಯ ವಿಶ್ರಮ.
✍ಗಫೂರ್ ಬಾಯಾರ್
➿➿➿➿➿➿➿



No comments:
Post a Comment