Monday, December 4, 2017

*ಝಿಯಾರತ್ತ್ ಕೇಂದ್ರ*
   🕌 4⃣3⃣🕌
      🔰ಭಾಗ 01🔰
☪☪☪☪☪☪☪☪☪
✍ ಗಫೂರ್ ಬಾಯಾರ್
➖➖➖➖➖➖➖➖➖
*#ಹಝ್ರತ್ತ್ #ಟಿಪ್ಪು #ಸುಲ್ತಾನ್ (ರ). ಶ್ರೀರಂಗಪಟ್ಟಣ, ಮೈಸೂರು*
➖➖➖🕌🕌🕌🕌➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
-----------------====----=-==--
 ಟಿಪ್ಪು ಸುಲ್ತಾನ್ (ರ) ರವರು ಎ.ಡಿ.1753ರಲ್ಲಿ ಮೈಸೂರಿನಲ್ಲಿ ಜನನ. ತಂದೆ ಹೈದರಾಲಿ (ರ).

ತಂದೆಯವರು *ತಮಿಳು ನಾಡಿನ ಆರ್ಕೊಟ್'ನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಪ್ರಸಿದ್ದರಾದ ಅಧ್ಯಾತ್ಮಿಕ ಗುರು ಟಿಪ್ಪು ಸುಲ್ತಾನ್ ಆಲಿಯ್ಯ್ (ರ) ಎಂಬ ಶೈಖ್'ನ ಶಿಷ್ಯರಾಗಿದ್ದರು. ಆ ಕಾರಣದಿಂದಾಗಿ ತನ್ನ ಮಗನಿಗೆ ಗುರುವಿನ ಹೆಸರನ್ನೆ ನಾಮಕರಣ ಮಾಡದರು.*

ಟಿಪ್ಪು ಸುಲ್ತಾನ್ (ರ)ರವರನ್ನು ಧರ್ಮ ಶಿಕ್ಷಣದಲ್ಲಿ ಬೆಳೆಸಿದರು.
ಐದು ಭಾಷೆಯನ್ನು, ರಾಜಕೀಯವನ್ನು ಹಾಗೂ ಯುದ್ಧ ತಂತ್ರಗಳನ್ನು ಯೌವನಕ್ಕೆ ತಲುಪುವ ಮೊದಲೇ ಟಿಪ್ಪು (ರ)ರವರಿಗೆ ತನ್ನ ತಂದೆ ಕಲಿಸಿದರು.

1782 ಡಿಸಂಬರ್ 12ಕ್ಕೆ ತಂದೆಯವರು ಮರಣ ಗೊಂಡಾಗ ಪಿತರವರ ರಾಜ ಪದವಿ ಮಗನಾದ ಟಿಪ್ಪು ರ.ಅ ಅಲಂಕರಿಸಿದರು.

ಡೆಚ್ಚುಗರು, ಫ್ರಂಚರು ಹಾಗು ಬ್ರಿಟಿಷರು ಇವರು ಮೂರು ವಿದೇಶಿಗರು ಭಾರತದ ವಿವಿಧ ಭಾಗಗಳಲ್ಲಿರುವ ಆಡಳಿತಾಧಿಕಾರಿಯನ್ನು ತಮ್ಮಲ್ಲಿಗೆ ವಶೀಕರಿಸಿ  ಪದಭ್ರಷ್ಟಗೊಳಿಸಿ, ವಿದೇಶದ ಆಡಳಿತವನ್ನು ಭಾರತದ ನೆಲದಲ್ಲಿ ಸ್ಥಾಪಿಸಲು ಎಲ್ಲಾ ತಂತ್ರಗಳನ್ನು, ಯುದ್ದಗಳನ್ನು ನಡೆಸುತ್ತಿರುವ ಸಮಯದಲ್ಲಾಗಿತ್ತು ತಂದೆ ಹೈದರ್ ಆಲಿ (ರ) ಯವರ ಅಕಾಲಿಕ ಮರಣ.
ಈ ಸಂದರ್ಭದಲ್ಲಿ ಕೇರಳದ ಪೊನ್ನಾನಿಯಲ್ಲಿ ಸೈನಿಕ ಶಿಬಿರದಲ್ಲಿದ್ದ ಟಿಪ್ಪು (ರ) ರವರು ತನ್ನ ಊರಿಗೆ ಮರಳಿದಾಗ, ತಂದೆಯವರ ಮರಣ ವಸಿಯ್ಯತ್ತ್ ಕೈ ಸೇರಿತು.

ಅದರಲ್ಲಿ ಹೀಗಿತ್ತು; 👇

*ನಾನು ನನ್ನ ರಾಷ್ಟ್ರವನ್ನು ಇದೋ ನಿನಗೆ ವಹಿಸಿರುತ್ತೇನೆ.... ಔರಂಗಝೇಬ್ (ರ) ರವರ ಮರಣದ ನಂತರ ಭಾರತಕ್ಕೆ ಏಷ್ಯಾದ ರಾಷ್ಟ್ರಗಳ ನಡುವೆ ಸ್ಥಾನ ಇಲ್ಲದಾಗಿದೆ. ವಿದೇಶಿಗಳ ಹೋರಾಟದ ನೃತರಂಗವಾಗಿದ್ದ ಈ ದೇಶವನ್ನು ಸಂರಕ್ಷಿಸಲು ಇನ್ನಿತರ ಧರ್ಮಕ್ಕೆ ಸಾಧ್ಯವಿಲ್ಲ. ಈ ನಾಡನ್ನು ವಿಪತ್ತಿನಿಂದ ರಕ್ಷಿಸಬೇಕಾದ ಕರ್ತವ್ಯ ನಿನಗಿದೆ. ನೀನು ಅತೀ ಮುಖ್ಯವಾಗಿ  ಎದುರಿಸಬೇಕಾಗಿರುವುದು ಪಾಶ್ಚಾತ್ಯರೊಂದಿಗೆಯಾಗಿರುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಈ ನಾಡಿನಲ್ಲಿ ಅವರಿಗೆ ಹೆಚ್ಚು ಶಕ್ತಿ ತುಂಬಿ ಬರುತ್ತಿದೆ...!*

 ಮೈಸೂರು, ಕೋಯಂಪುತ್ತೂರು, ಪಾಲಕ್ಕಾಡ್, ಕೊಡುಂಗಲ್ಲೂರು, ಚೆಟ್ಟುವ, ಪೊನ್ನಾನಿ, ಮಲಬಾರ್, ಹಾಗೂ ಮಂಗಳೂರು ಕೇಂದ್ರೀಕರಿಸಿ ಹಲವಾರು ಹೋರಾಟಗಳನ್ನು ಬ್ರಿಟಿಷರೊಂದಿಗೂ,  ಅವರ ಆಶ್ರಿತರಾದ ಆಡಳಿತಾಧಿಕಾರಿಗಳೊಂದಿಗೂ ಬಹುಮಾನ್ಯರಾದ ಟಿಪ್ಪು (ರ)ರವರು ಯುದ್ಧ ಮಾಡಿದರು.

 1784 ಮಾರ್ಚ್ 12ಕ್ಕೆ ಮಂಗಳೂರಿನಲ್ಲಿ ಬ್ರಿಟಿಷರೊಂದಿಗೆ ಮಾಡಿದ ಯುದ್ಧ ಈ ರಾಜ್ಯಕ್ಕೆ ದೊಡ್ಡ  ವಿಜಯವಾಗಿತ್ತು.

1788 ಎಪ್ರಿಲ್'ನಲ್ಲಿ ಸಣ್ಣ ತುಕಡಿ ಸೇನೆಯೊಂದಿಗೆ ಟಿಪ್ಪು (ರ) ವಯನಾಡ್, ತಾಮರಶ್ಯೇರಿ "ಚುರಂ" ಘಾಟಿ ಮೂಲಕ ಮಲಬಾರ್'ಗೆ ತಲುಪಿದರು. ಕಲ್ಲಿಕೋಟೆ ಸಾಮೂತಿರಿಯವರು, ಟಿಪ್ಪು (ರ) ರವರ ಜೊತೆ ರಾಜಕೀಯ ಮಾತುಕತೆ ನಡೆಸಿದರು.
ಟಿಪ್ಪು (ರ) ಮತ್ತು ಸೈನಿಕರು ತಂಗಿದ ಪಾಳಯವು ಇಂದು ಕಲ್ಲಿಕೋಟೆಯಲ್ಲಿ "ಪಾಳಯಂ" ಎಂಬ ಹೆಸರಿನಲ್ಲಿ ಅರಿಯಲ್ಪಡುತ್ತದೆ.
ಮಲಬಾರಿನಲ್ಲಿ ತನ್ನ ಆಡಳಿತದ ರಾಜಧಾನಿಯನ್ನು ಬೆಪ್ಪೂರ್, ಕಡಲುಂಡಿ, ಚಾಲಿಯಾರ್ ಪುಝ, ಎಂಬ ಸ್ಥಳಗಳ ಮದ್ಯದಲ್ಲಿ *"ಫಾರೂಖಾಬಾದ್"* ಎಂಬ ಹೆಸರಿನಲ್ಲಿ ಸ್ಥಾಪಿಸಿದರು. ಅದುವೇ
ಇಂದಿನ "ಫರೊಖ್" ಎಂಬ ಸ್ಥಳ.
ಅಂದಿನ ಕೋಟೆಗಳು ಈಗಲೂ ಅಲ್ಲಿ ಇದೆ.
ಕೋಟೆಯಿಂದ ನದಿಗೆ ಭೂಗರ್ಭ ದಾರಿಯು ಕೂಡಾ ಇದೆ.

ಟಿಪ್ಪು (ರ)ರವರು 1787ರಲ್ಲಿ ಶೈಖ್ ಜಿಫ್ರಿ ಕುಟ್ಟಿಚಿರ (ರ)ರವರನ್ನು ಸಂದರ್ಶಿಸಿ ಶಿಷ್ಯತ್ವವನ್ನು ಸ್ವೀಕರಿಸಿದರು. ಶೈಖವರಿಗೆ ನೀಡಿದ ಹದ್'ಯ್ಯ ಆಗಿದೆ ಪ್ರಸಿದ್ಧವಾದ ಕಲ್ಲಿಕೋಟೆಯ *ಮಾನಾಂಜಿರ ಕೊಳಂ* (ಕೊಳ)
ಕಲ್ಲಿಕೋಟೆಯಿಂದ ಕೋಯಂಪುತ್ತೂರಿಗಿರುವ ಯಾತ್ರೆ ಮದ್ಯೆ ಇರುವ ಸ್ಥಳಗಳಿಗೆಲ್ಲ ಹಲವಾರು ಸಹಾಯಗಳನ್ನು ಮಾಡಿದ್ದರು.
ಅದರ ಜೊತೆಯಲ್ಲಿ ಕೊಂಡೊಟ್ಟಿ ಎಂಬ ಸ್ಥಳಕ್ಕೆ ಆಗಮಿಸಿದ ಕಳ್ಳ ತ್ವರೀಖತ್ತ್'ನ ಮುಖಂಡ ಮುಹಮ್ಮದ್ ಶಾಹ್'ನಿಗೂ ಒಂದು ಮಾಲಿಖಾನ್ ಲಭಿಸಿತ್ತು. ಟಿಪ್ಪು (ರ) ರವರು ಇವನ ಸತ್ಯಾಂಶ ತಿಳಿಯದೆ ಕೊಟ್ಟಿರುವುದು. ನಂತರ ಟಿಪ್ಪು ಸುಲ್ತಾನ್ (ರ) ರವರ ಗುರುವಾದ ಶೈಖ್ ಜಿಫ್ರಿ (ರ) ರವರು ಈ ವ್ಯಾಜನ ವಿರುದ್ಧ ಗ್ರಂಥ ಬರೆದಿರುತ್ತಾರೆ.

ಮುಂದುವರಿಯುವುದು

✍ ಗಫೂರ್ ಬಾಯಾರ್
◼◼◼◼◼◼◼◼◼




No comments:

Post a Comment