Wednesday, December 6, 2017

*ಅಂತ್ಯ ದಿನದ ಲಕ್ಷಣಗಳು*
🌄🌄🌄🌄🌄🌄🌄
ಮಹಿಳೆಯರು, ಪುರುಷರು, ವೇದಿಕೆಯ ಮೇಲೆ ಡ್ಯಾನ್ಸ್ ಮಾಡುವುದು, ಹಾಡುವುದು, ಮ್ಯೂಸಿಕ್ ಹಾಡುಗಳು, ಮ್ಯೂಸಿಕ್ ಅಧಿಕಗೊಳ್ಳುವ ಕಾಲ ಬಂದರೆ ಅದು ಅಂತ್ಯ ದಿನದ ಲಕ್ಷಣವಾಗಿದೆ.

ದೊಡ್ಡ, ದೊಡ್ಡ ಕಟ್ಟಡಗಳು, ಬಿಲ್ಡಿಂಗ್ ಗಳು ಅಧಿಕಗೊಳ್ಳುವ ಕಾಲ ಬಂದರೆ ಅದು ಅಂತಿಮ ದಿನದ ಸೂಚನೆಯಾಗಿದೆ. ಇಂದು ನಾವು ನೋಡುತ್ತಾ ಇದ್ದೆವೆ, ಪರ್ವತಗಳನ್ನು, ಗುಡ್ಡೆಗಳನ್ನು ಹಳೇ ಮನೆಗಳನ್ನು ಒಡೆದು ದೊಡ್ಡ ದೊಡ್ಡದಾದ ಫ್ಲಾಟ್ ಗಳು, ಗಗನ ಚುಂಬಿಗಳಂತಹ ದೊಡ್ಡ ದೊಡ್ಡ ಕಟ್ಟಡಗಳು ಕಟ್ಟುವುದು ನಮ್ಮ ಮುಂದೆ ಕಾಣುತ್ತಿದೆ.1400 ವರ್ಷಗಳ ಮುಂಚೆ ನಮ್ಮ ಹಬೀಬ್ ರಸೂಲುಲ್ಲಾಹಿ (ಸ.ಅ) ಹೇಳಿದ್ದು ಎಲ್ಲವೂ ಸತ್ಯವಾಗಿ ಕಾಣುತ್ತಿದೆ.

ತಂದೆ, ತಾಯಿಗೆ ಗೌರವ ಕೊಡದೆ ಇರುವುದು, ಆಲಿಮ್, ತಂಙಳ್ ರನ್ನು ನಿಂದಿಸುವುದು,ತಂದೆ, ತಾಯಿಯನ್ನು ದೂರ ಮಾಡುವುದು, ಗೆಳೆಯರನ್ನು ಹತ್ತಿರಗೊಳಿಸುವುದು,ಅಲ್ಲಾಹನ ಮಸೀದಿಗಳಲ್ಲಿ ಗೌಜಿ, ಗದ್ದಲ ಗಲಾಟೆ ಉಂಟಾಗುವುದು ಹಿರಿಯರಿಗೆ ಗೌರವ ಕೊಡದೆ, ಕಿರಿಯರಿಗೆ ದಯೇತೊರದೆ ಇರುವುದು, ಆಕಸ್ಮಿಕ ಮರಣ ಉಂಟಾಗುವುದು, ಆಲಿಮ್ ಗಳ ಸಜ್ಜನರ ಮರಣ ಸಂಭವಿಸುವುದು, ಇದೆಲ್ಲವೂ ಕಿಯಾಮತ್ ದಿನದ ಕೆಲವೊಂದು (ಸ್ಯಾಂಪಲ್ ಮಾತ್ರ) ಲಕ್ಷಣಗಳು.ಮುಸ್ಲೀಂ ರಾಷ್ಟ್ರಗಳಲ್ಲಿ ಯಹೋದ್ಯರು, ನಸ್ರಾನಿಗಳು ಮುಸ್ಲೀಂ ಸಮೂಹವನ್ನು ದಾಳಿ ಮಾಡಿ ಕೊಳ್ಳುವುದು, (ಮೊನ್ನೆ ತಾನೆ ರೊಹಿಂಗ್ಯಾ ಮುಸಲ್ಮಾನರನ್ನು ಚಿಕ್ಕ,ಚಿಕ್ಕ ಮಕ್ಕಳನ್ನು,ಗರ್ಭಿಣಿ ಸ್ತ್ರೀಯರನ್ನು, ಅತ್ಯಾಚಾರ ಮಾಡಿ ಕೊಂದ್ದಿದ್ದರು, ಹೊಟ್ಟೆ ಸೀಳಿ ಮಗುವನ್ನು ಹೊರ ತೆಗೆದು ಎಸೆದರು. ಚಿಕ್ಕ ಮಕ್ಕಳನ್ನು, ಮಹಿಳೆಯರನ್ನು ವಯಸ್ಕರನ್ನು ಯುವಕರನ್ನು ಬೆಂಕಿಯಲ್ಲಿ ಜೀವಾಂತ ದಹನ ಮಾಡಿದರು. ಫೆಲಸ್ತೀನ್ ಗೆ ಇಸ್ರೇಲ್ ಯಹೋದ್ಯರು ಬಾಂಬ್ ದಾಳಿ ಮಾಡಿ ಕೊಂದರು. ಇದೆಲ್ಲವೂ ಮಹದಿ ಇಮಾಮ್ ಬರುವ ಮುಂಚೆ ನಡೆಯುವ ಕೆಲವೊಂದು ಲಕ್ಷಣವಷ್ಟೆ ಇಲ್ಲಿ ಹೇಳಿದೆ.
ಭೂಕಂಪ, ಸುನಾಮಿ, ಚಂಡಮಾರುತ, ಇದೆಲ್ಲವೂ ಉಂಟಾಗುವ ಕಾಲ ಬಂದರೆ ಅದು ಅಂತ್ಯ ದಿನದ ಲಕ್ಷಣವಾಗಿದೆ. (ಅಲ್ಲಾಹು ಇಂತಹ ವಿಪತ್ತಿನಿಂದ ನಮ್ಮನ್ನು ನಮ್ಮ ತಂದೆ, ತಾಯಿಯನ್ನೂ, ಕುಟುಂಬವನ್ನು, ಸ್ನೇಹಿತರನ್ನೂ, ದುವಾ ವಸಿಯ್ಯತ್ತ್ ಮಾಡಿದವರನ್ನು ಸರ್ವ ಮುಸ್ಲೀಂ ಉಮ್ಮತ್ತನ್ನು ರಕ್ಷಿಸಲಿ) ಆಮೀನ್....
🌒🌒🌒🌒🌒🌒
ಮುಂದುವರೆಯುವುದು..

No comments:

Post a Comment