_*🕌ಝಿಯಾರತ್ತ್ ಕೇಂದ್ರ🕌*_
➖➖➖➖➖➖➖➖➖
4⃣1⃣
🔹ಭಾಗ 01🔹
➖➖➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰〰〰
✍ _*ಗಫೂರ್ ಬಾಯಾರ್*_
〰〰〰〰〰〰〰〰〰
*ಏರುವಾಡಿ ಸುಲ್ತಾನುಲ್ ಶುಹದಾ ಇಬ್ರಾಹಿಂ ಬಾದುಷ (ರ) ರಾಮನಾಥಪುರಂ, ತಮಿಳುನಾಡು.*
☪☪☪☪☪☪☪☪☪
_*ವರ್ಷಂಪ್ರತೀ ದುಲ್ ಖಅದ್: 10 ರಂದು ಪುಣ್ಯ ಭೂಮಿಯಾದ ತಮಿಳುನಾಡಿನ ಏರುವಾಡಿ ನಗರದಲ್ಲಿ ಧ್ವಜಾರೋಹಣ ನಡೆಯುವಾಗ, ಜನ ಜಂಗುಳಿಯಿಂದ ತುಂಬಿ ತುಳುಕುವಾಗ ಹೆಚ್ಚುಕಮ್ಮಿ ಯಾರಿಗೂ ತಿಳಿದಿರಲು ಸಾದ್ಯವಿಲ್ಲ ಆ ನವೋಸ್ಥಾನ ನಗರಿಯ ಗತಕಾಲದ ಇತಿಹಾಸ ಚರಿತ್ರೆಯ ಕುರಿತು....!!*_
🕌ಹಿಜರಿ ವರ್ಷ 530'ರ ರಮಳಾನ್ 3ರಂದು ಮದೀನದ ಪರಿಸರ ಪ್ರದೇಶವಾದ *"ಯಾರ್'ಬಾದ್"* ಎಂಬ ಸ್ಥಳದಲ್ಲಿ ಮುತ್ತು *"ನಬಿ (ﷺ)"ತಂಙಳ್ ರವರ ಕುಟುಂಬ ಪರಂಪರೆಯಲ್ಲಿ 18'ನೇ ಪೌತ್ರನಾಗಿ ಸಯ್ಯಿದ್ ಅಹ್ಮದ್(ರ) ರವರ ಹಾಗೂ ಸಯ್ಯಿದತ್ ಫಾತಿಮಾ (ರ) ದಂಪತಿಗಳ ಮಗನಾಗಿ ಬಹುಮಾನ್ಯರಾದ ಸಯ್ಯಿದ್ ಸುಲ್ತಾನು ಶಹೀದ್ ಇಬ್ರಾಹಿಂ ಬಾದುಷ ತಂಙಳ್ (ರ) ರವರು ಜನ್ಮ ಪಡೆದರು.*
ಭಕ್ತಿ, ದೀನಿ ಜ್ಞಾನ, ಸತ್ಯಸಂಧತೆ ಹಾಗೂ ನಿಷ್ಠೆಯಿಂದ ತುಂಬಿದ ಒಬ್ಬ ಉತ್ತಮ ಪುರುಷನನ್ನಾಗಿ ಪೋಷಕರು ಮಗನನ್ನು ಬೆಳೆಸಿದರು.
ಮದೀನದಲ್ಲಿ ಅಂದು ಇದ್ದ ಯುವಕರಲ್ಲಿಯೇ ಅತೀ ಹೆಚ್ಚು ಬಹುಮಾನಿಸಲ್ಪಡುವ ಯುವಕರಾಗಿದ್ದರು ಮಹಾನರು..
ಹಿಜರಿ 555ರಲ್ಲಿ ಸಯ್ಯಿದತ್ತ್ ಅಲಿ ಫಾತಿಮಾ (ರ) ರೊಂದಿಗೆ ವಿವಾಹವಾದರು.
ತೌಹೀದ್ ಮಾರ್ಗದಲ್ಲಿ ಜನ ಮನಸ್ಸುಗಳನ್ನು ಅಲ್ಲಾಹನ ಸಾಮೀಪ್ಯಕ್ಕೆ ತಲುಪಿಸಿ, ದೀನಿ ಪ್ರಬೋಧನೆಯೊಂದಿಗೆ ಮದೀನದಲ್ಲಿ ಜೀವಿಸುತ್ತಿರುವಾಗ, ಒಂದು ದಿನ ಪಿತಾಮಹಾನರಾದ, ವಿಶ್ವ ನೇತಾರರು ಆದ ಪುಣ್ಯ *ಹಬೀಬ್ (ﷺ) ರವರು ಕನಸಿನಲ್ಲಿ ದರ್ಶನವಾಗಿ ಹೇಳಿದರು: "ತಮ್ಮ ಪ್ರಬೋದನೆ ದೌತ್ಯ ಬಲು ದೂರದ ಹಿಂದಿ* ಎಂಬಲ್ಲಿಯಾಗಿದೆ. ಆದಷ್ಟು ಬೇಗ ಹೊರಡಬೇಕು. *ಬಹು ದೈವಾರಾಧನೆಯವರ ನಾಡದ ಇಂಡಿಯಕ್ಕೆ ಹೋಗಿ ತೌಹೀದಿನ ಬೆಳಕನ್ನು ಜನರಿಗೆ ತಲುಪಿಸಿರಿ.!!.*
ಆ ಸ್ವಪ್ನ ದರ್ಶನದ ನಂತರ
ಮಹಾನರಾದ ಇಬ್ರಾಹಿಂ ಬಾದುಷ ತಂಙಳ್ (ರ)ರವರು ಸುಮಾರು ಮೂರು ಸಾವಿರಗಳಷ್ಟು ಅನುಯಾಯಿಗಳನ್ನು ಹಾಗು ತನ್ನ ಕುಟುಂಬ ಸದಸ್ಯರನ್ನು ಒಳಗೊಂಡ ದೊಡ್ಡ ಸಂಘದೊಂದಿಗೆ ಇರಾನ್, ಇರಾಖ್, ಬಲೂಚಿಸ್ಥಾನ್ ದಾರಿಯಾಗಿ ಭಾರತಕ್ಕೆ ಆಗಮಿಸಿದರು.
*ಅಫ್ತಾಬ್ ಸಿಂಗ್* ಎಂಬ ದುಷ್ಟ ಏಕಾಧಿಪತಿ ಅಂದು ಸಿಂದ್ ಪ್ರದೇಶವನ್ನು ಆಳುತ್ತಿದ್ದನು.. (ಸಿಂದ್ ಪ್ರದೇಶ ಈಗ ಪಾಕಿಸ್ತಾನದಲ್ಲಿದೆ.)
ಬಾದುಷ (ರ) ರವರು ಚಿಕ್ಕ ಚಿಕ್ಕ ಗುಂಪುಗಳನ್ನು ರೂಪಿಸಿ ಬೇರೆ ಬೇರೆ ಸ್ಥಳಕ್ಕೆ ನಿಯೋಗಿಸಿ
ಅವರೊಂದಿಗೆ ದಅವತ್ತ್ ನಡೆಸುತ್ತಿದ್ದರು. ಸತ್ಯವನ್ನು ಮನಗಂಡು ಧಾರಾಳ ಜನರು ಇಸ್ಲಾಮಿಗೆ ಹರಿದು ಬರುತ್ತಿದ್ದರು. ಆದರೆ ಛತ್ರಾಧಿಪತಿಯಾದ *ಅಫ್ತಾಬ್ ಸಿಂಗ್* ಇದನ್ನು ಸಹಿಸದೆ ಯುದ್ಧಕ್ಕೆ ಆಹ್ವಾನಿಸಿ ಮಹಾನರಿಗೆ ಹಲವು ವಿಘ್ನಗಳನ್ನು ಸೃಷ್ಟಿಸಿ ಕಠಿಣವಾದ ತಿರುಗೇಟು ಕೊಡಲು ತೀರ್ಮಾನಿಸಿದನು.
ಬಳಿಕ ರಾಜನಾದ *ಅಫ್ತಾಬ್ ಸಿಂಗ್* ಮತ್ತು ಸಂಗಡಿಗರು ದೊಡ್ಡದಾದ ಸಕಲ ಸಿದ್ದತೆಯೊಂದಿಗೆ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಆಹ್ವಾನ ಮಾಡಿದನು. ಆ ಯುದ್ಧದಲ್ಲಿ ರಾಜನು ಹತನಾದನು. ನಂತರ ತಮ್ಮನಾದ *ಮೆಫ್ತಾಬ್ ಸಿಂಗ್* ರಾಜನಾದನು. ಅವನು ಕೂಡ ಮಹಾನರೊಂದಿಗೆ ಯುದ್ಧ ಮಾಡಿ ಪರಾಜಿತನಾಗಿ ಕೊಳ್ಳಲ್ಪಟ್ಟನು.
ಸಿಂದ್ ಪ್ರದೇಶವನ್ನು ತನ್ನ ಅಧೀನಗೊಳಪಡಿಸಿದ ಇಬ್ರಾಹಿಂ ಬಾದುಷ (ರ) ರವರು ನಂತರ ಗುಜರಾತಿಗೆ ಪ್ರವೇಶಿಸಿದರು. ಅಲ್ಲಿಯು ವಿವಿಧ ಸಂಘಗಳಾಗಿ ದೀನಿ ಪ್ರಬೋದನೆ ಆರಂಭಿಸಿದರು.
ಅಲ್ಲಿಯೂ ಧಾರಾಳ ಜನರು ಪರಿಶುದ್ಧ ಇಸ್ಲಾಮಿಗೆ ಸೇರ್ಪಡೆಗೊಂಡರು. ಅ ಕಾಲದಲ್ಲಿ ಗುಜರಾತ್ತಿನ ಆಡಳಿತಾಧಿಕಾರಿ *ಘೋಡಾ ಸಿಂಗ್* ಸಹ ಮಹಾನರನ್ನು ವಿರೋಧಿಸಿ ಯುದ್ಧ ಸಾರಿದನು. ಆ ಭೀಕರ ಯುದ್ಧದಲ್ಲಿ ರಾಜನಾದ *ಘೋಡಾ ಸಿಂಗ್* ವಧಿಸಲ್ಪಟ್ಟನು.
ನಂತರ ಅಧಿಕಾರ ವಹಿಸಿದ ರಾಜಕುಮಾರ *ಇಂಪ್ರ್ಯತ್ ಸಿಂಗ್* ಮಹಾನವರ ದೈತ್ಯವನ್ನು ತಿಳಿದು, ಇಸ್ಲಾಮನ್ನು ಕಲಿತು ಇಸ್ಲಾಮ್ ಸ್ವೀಕರಿಸಿ *ಆಲಿ ಜನಾಬ್* ಎಂಬ ಹೆಸರಿನಲ್ಲಿ ಗುಜರಾತ್ತಿನ ಅಮೀರಾಗಿ ನಿಯೋಗಿಸಲ್ಪಟ್ಟರು. ಅತ್ತ ಸಿಂದ್'ನಲ್ಲಿ *ದುಲ್'ಫುಖಾರ್ ಅಲಿ* ಎಂಬುವರನ್ನು ಅಮೀರಾಗಿ ನೇಮಿಸಲಾಯಿತು..
ಬಳಿಕ ಬಾದುಷ ತಂಙಳ್ (ರ)ರವರು ಮದೀನಕ್ಕೆ ಮರಳಿ ಹೋದರು..
ಮೊದಲಿನ ರೀತಿಯಲ್ಲಿ.. 👇
🕌ಮುಂದುವರಿಯುವುದು↩
✍
ಗಫೂರ್ ಬಾಯಾರ್
🥀🥀🥀🥀🥀🥀🥀🥀🥀

No comments:
Post a Comment